ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆ (Karnataka Assembly Election 2023) ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅಲೆಯಲ್ಲಿ ಜೆಡಿಎಸ್ (JDS) ಮತ್ತು ಬಿಜೆಪಿ (BJP) ಕೊಚ್ಚಿಕೊಂಡು ಹೋಗಿವೆ. ದಕ್ಷಿಣ ಭಾರತದಲ್ಲಿ ಚುನಾವಣೆಯಲ್ಲಿ ಬಹುಮತ ಪಡೆಯುವ ಮೂಲಕ ಸರ್ಕಾರ ರಚನೆ ಮಾಡಬೇಕೆಂದು ಬಿಜೆಪಿ ಕನಸು ಕಂಡಿತ್ತು. ಈ ಹಿನ್ನೆಲೆ ಅತಿ ದೊಡ್ಡಮಟ್ಟದಲ್ಲಿಯೇ ಬಿಜೆಪಿ ಪ್ರಚಾರ ನಡೆಸಿತ್ತು. ಆದ್ರೆ ಅದೆಲ್ಲವೂ ವಿಫಲವಾಗಿದ್ದು, ಕರುನಾಡಿನ ಮತದಾರ ಪ್ರಭು ಕಾಂಗ್ರೆಸ್ಗೆ ಬಹುಮತ ನೀಡಿದ್ದಾರೆ. ಕನಕಪುರದಲ್ಲಿ ಡಿಕೆ ಶಿವಕುಮಾರ್ ಅತಿ ಹೆಚ್ಚು ಮತಗಳಿಂದ ಗೆದ್ದು ಇತಿಹಾಸ ರಚನೆ ಮಾಡಿದ್ದಾರೆ. ಜಯನಗರದ ಬಿಜೆಪಿ ಅಭ್ಯರ್ಥಿ ಸಿಕೆ ರಾಮಮೂರ್ತಿ 16 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಅತಿ ಹೆಚ್ಚು ಮತಗಳಿಂದ ಗೆದ್ದ ಅಭ್ಯರ್ಥಿಗಳು
ಗೆದ್ದ ಅಭ್ಯರ್ಥಿ | ಪರಾಜಿತ ಅಭ್ಯರ್ಥಿ | ಗೆಲುವಿನ ಅಂತರ | ಕ್ಷೇತ್ರ |
ಡಿಕೆ ಶಿವಕುಮಾರ್ (ಕಾಂಗ್ರೆಸ್) | ಬಿ ನಾಗರಾಜ್ (ಜೆಡಿಎಸ್) | 1,22,392 | ಕನಕಪುರ |
ಕೆಜೆ ಜಾರ್ಜ್ (ಕಾಂಗ್ರೆಸ್ ) | ಪದ್ಮನಾಭರೆಡ್ಡಿ (ಬಿಜೆಪಿ) | 55,768 | ಸರ್ವಜ್ಞ ನಗರ |
ರವಿ ಸುಬ್ರಮಣ್ಯ (ಬಿಜೆಪಿ) | ಯುಬಿ ವೆಂಕಟೇಶ್ (ಕಾಂಗ್ರೆಸ್) | 54,978 | ಬಸವನಗುಡಿ |
ಲಕ್ಷ್ಮಿ ಹೆಬ್ಬಾಳ್ಕರ್ (ಕಾಂಗ್ರೆಸ್) | ನಾಗೇಶ್ ಮುನ್ನೋಳ್ಕರ್ (ಬಿಜೆಪಿ) | 55,546 | ಬೆಳಗಾವಿ ಗ್ರಾಮೀಣ |
ಸತೀಶ್ ಜಾರಕಿಹೊಳಿ (ಕಾಂಗ್ರೆಸ್) | ಬಸವರಾಜ್ ಹುಂದ್ರಿ (ಬಿಜೆಪಿ) | 57,046 | ಯಮಕನಮರಡಿ |
ಗಣೇಶ್ ಹುಕ್ಕೇರಿ (ಕಾಂಗ್ರೆಸ್ ) | ರಮೇಶ್ ಕತ್ತಿ (ಬಿಜೆಪಿ) | 77,749 | ಚಿಕ್ಕೋಡಿ-ಸದಲಗಾ |
ಎಸಿ ಶ್ರೀನಿವಾಸ್ (ಕಾಂಗ್ರೆಸ್ ) | ಅಖಂಡ ಶ್ರೀನಿವಾಸ ಮೂರ್ತಿ (ಬಿಎಸ್ಪಿ) | 62,062 | ಪುಲಕೇಶಿ ನಗರ |
ಲಕ್ಷ್ಮಣ ಸವದಿ (ಕಾಂಗ್ರೆಸ್ ) | ಮಹೇಶ್ ಕುಮಟಳ್ಳಿ (ಬಿಜೆಪಿ) | 75,673 | ಅಥಣಿ |
ಆರ್ ಅಶೋಕ್ (ಬಿಜೆಪಿ) | ರಘುನಾಥನಾಯ್ಡು (ಕಾಂಗ್ರೆಸ್) | 55,175 | ಪದ್ಮನಾಭನಗರ |
ಎಆರ್ ಕೃಷ್ಣಮೂರ್ತಿ (ಕಾಂಗ್ರೆಸ್) | ಎನ್ ಮಹೇಶ್ (ಬಜೆಪಿ) | 59,519 | ಕೊಳ್ಳೇಗಾಲ |
ಕಡಿಮೆ ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿಗಳು
ಗೆದ್ದ ಅಭ್ಯರ್ಥಿ | ಪರಾಜಿತ ಅಭ್ಯರ್ಥಿ | ಗೆಲುವಿನ ಅಂತರ | ಕ್ಷೇತ್ರ |
ಸಿಕೆ ರಾಮಮೂರ್ತಿ (ಬಿಜೆಪಿ) | ಸೌಮ್ಯಾ ರೆಡ್ಡಿ | 16 | ಜಯನಗರ |
ದಿನೇಶ್ ಗುಂಡೂರಾವ್ (ಕಾಂಗ್ರೆಸ್) | ಸಪ್ತಗಿರಿಗೌಡ (ಬಿಜೆಪಿ) | 105 | ಗಾಂಧಿ ನಗರ |
ಟಿಡಿ ರಾಜೇಗೌಡ (ಕಾಂಗ್ರೆಸ್) | ಜೀವರಾಜ್ (ಬಿಜೆಪಿ) | 201 | ಶೃಂಗೇರಿ |
ಕೆವೈ ನಂಜೇಗೌಡ (ಕಾಂಗ್ರೆಸ್) | ಕೆಎಸ್ ಮಂಜುನಾಥ್ (ಬಿಜೆಪಿ) | 218 | ಮಾಲೂರು |
ನಯನ ಮೋಟಮ್ಮ (ಕಾಂಗ್ರೆಸ್) | ದೀಪಕ್ (ಬಿಜೆಪಿ) | 772 | ಮೂಡಿಗೆರೆ |
ದವೇಂದ್ರಪ್ಪ (ಕಾಂಗ್ರೆಸ್) | ರಾಮಚಂದ್ರಪ್ಪ (ಬಿಜೆಪಿ) | 874 | ಚಿಂಚೋಳಿ |
ದಿನಕರಶೆಟ್ಟಿ (ಕಾಂಗ್ರೆಸ್) | ಸೂರಜ್ ಸೋನಿ (ಜೆಡಿಎಸ್) | 673 | ಕುಮಟ |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ