• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election Results: ಕೈ ಪಡೆಗೆ ಭರ್ಜರಿ ಬಹುಮತ; ಯಾರ್​ ಆಗ್ತಾರೆ ಮುಂದಿನ ಸಿಎಂ? ಇಲ್ಲಿದೆ ಕಾಂಗ್ರೆಸ್​ ಇನ್​ಸೈಡ್​ ಲೆಕ್ಕಾಚಾರ

Karnataka Election Results: ಕೈ ಪಡೆಗೆ ಭರ್ಜರಿ ಬಹುಮತ; ಯಾರ್​ ಆಗ್ತಾರೆ ಮುಂದಿನ ಸಿಎಂ? ಇಲ್ಲಿದೆ ಕಾಂಗ್ರೆಸ್​ ಇನ್​ಸೈಡ್​ ಲೆಕ್ಕಾಚಾರ

ಸಿದ್ದರಾಮಯ್ಯ/ಡಿಕೆ ಶಿವಕುಮಾರ್

ಸಿದ್ದರಾಮಯ್ಯ/ಡಿಕೆ ಶಿವಕುಮಾರ್

ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದ ಕಾರಣ ಇಂದೇ ಕಾಂಗ್ರೆಸ್ ಪಕ್ಷ ಶಾಸಕಾಂಗ ಸಭೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಎದುರು ಸಿಎಂ ಆಯ್ಕೆ ವಿಚಾರದಲ್ಲಿ ಮೂರು ಪ್ರಮುಖ ಸನ್ನಿವೇಶಗಳು ಎದುರಾಗುವ ನಿರೀಕ್ಷೆ ಇದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections) ಕಾಂಗ್ರೆಸ್ (Congress) ಬಹುಮತ ಪಡೆದುಕೊಂಡಿದೆ. ಇದರೊಂದಿಗೆ ಕಾಂಗ್ರೆಸ್​ ನಾಯಕರು ಹೊಸ ಸರ್ಕಾರದ ರಚನೆಯ ಉತ್ಸಾಹದಲ್ಲಿದ್ದಾರೆ. ಇದರ ನಡುವೆ ಕರ್ನಾಟಕ ಮುಂದಿನ ಮುಖ್ಯಮಂತ್ರಿ (Chief Minister) ಯಾರು ಆಗುತ್ತಾರೆ ಎಂಬ ಕುತೂಹಲವೂ ಹೆಚ್ಚಾಗಿದೆ. ಸದ್ಯ ಕಾಂಗ್ರೆಸ್​ ಪಕ್ಷದ ಸಿಎಂ ರೇಸ್​​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮುಂದಿದ್ದಾರೆ. ಇಬ್ಬರು ನಾಯಕರಿಗೆ ಏನೆಲ್ಲಾ ಪ್ಲಸ್​ ಆಗಲಿದೆ? ಇಬ್ಬರ ನಡುವಿನ ಆಯ್ಕೆಗೆ ಏನೆಲ್ಲಾ ಅಂಶಗಳು ಮುನ್ನೆಲೆಗೆ ಬರುತ್ತವೆ ಎಂಬ ಪ್ರಶ್ನೆಗಳು ಹಲವರನ್ನು ಕಾಡುತ್ತಿದೆ. ಹಾಗಾದರೆ ಸಿದ್ದರಾಮಯ್ಯ ಅವರಿಗೆ ಏನೆಲ್ಲಾ ಪ್ಲಸ್ ಆಗುತ್ತೆ? ಡಿಕೆ ಶಿವಕುಮಾರ್ ಅವರಿಗೆ ಯಾವೆಲ್ಲಾ ಅಂಶಗಳು ಪ್ಲಸ್​ ಆಗುತ್ತೆ ನೋಡೋಣ ಬನ್ನಿ.


ಕಾಂಗ್ರೆಸ್ ಪಕ್ಷದ ಮಾಸ್ ಲೀಡರ್​ ಸಿದ್ದರಾಮಯ್ಯ


ಕರ್ನಾಟದ ರಾಜಕೀಯದಲ್ಲಿ ಮಾಸ್​ ಲೀಡರ್​​ ಎಂದು ಇಬ್ಬರು ನಾಯಕರಿಗೆ ಇ-ಮೇಜ್​ ಇದ್ದು, ಬಿಎಸ್​ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರಿಗೆಈ ಹೆಗ್ಗಳಿಕೆ ಸಲ್ಲುತ್ತದೆ. ಸದ್ಯ ಬಿಎಸ್​​ವೈ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದು, ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ. ಪ್ರತಿಯೊಂದು ಎಕ್ಸಿಟ್​ ಪೋಲ್​ ಹಾಗೂ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಸಿದ್ದರಾಮಯ್ಯ ಅವರನ್ನೇ ಸಿಎಂ ಆಯ್ಕೆ ಮಾಡಲಾಗಿತ್ತು. ಅವರನ್ನು ಸಿಎಂ ಮಾಡಿದರೆ ಜನರ ಅಭಿಪ್ರಾಯದಂತೆ ಸಿಎಂ ಆಯ್ಕೆ ನಡೆಸಲಾಗಿದೆ ಎಂಬ ಅಭಿಪ್ರಾಯ ಹೊರಹೊಮ್ಮುತ್ತದೆ.


ಇದನ್ನೂ ಓದಿ: Karnataka Election Results Winners List: ಯಾವ ಕ್ಷೇತ್ರದಲ್ಲಿ ಯಾರು ಗೆದ್ದಿದ್ದಾರೆ? 224 ಕ್ಷೇತ್ರಗಳಲ್ಲಿ ಗೆದ್ದವರ ವಿವರ ಇಲ್ಲಿದೆ


ಅಲ್ಲದೆ, ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರು, ಹಿಂದುಳಿದ ಜಾತಿಗಳು ಮತ್ತು ದಲಿತರನ್ನು ಒಳಗೊಂಡ ಕಾಂಗ್ರೆಸ್‌ನ ಅಹಿಂದ ಮತಗಳು ಪಕ್ಷ ಕೈ ಹಿಡಿಯುವಂತೆ ಮಾಡಿದ್ದರು. ಇನ್ನು, ಎಲ್ಲಾ ಜಾತಿಗಳ ಬೆಂಬಲವನ್ನು ಪಡೆದುಕೊಂಡಿದ್ದರು.




ಸಂಕಷ್ಟದ ಸಮಯದಲ್ಲಿ ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದ ಡಿಕೆಶಿ


ಇತ್ತ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದ್ದ ಸಮಯದಲ್ಲಿ ಪಕ್ಷದ ಚುಕ್ಕಾಣಿಯನ್ನು ಹಿಡಿದ ಡಿಕೆ ಶಿವಕುಮಾರ್ ಅವರ ಶ್ರಮ ಇಂದಿನ ಗೆಲುವಿನ ಹಿಂದಿದೆ ಅಂತಲೇ ಹೇಳಬಹುದು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮಕಾಡೆ ಮಲಗಿದ್ದ ವೇಳೆ ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದರು, ಲೋಕಸಭಾ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಸಹೋದರ ಹೊರತುಪಡಿಸಿ ಎಲ್ಲಾ ಘಟಾನುಘಟಿ ಅಭ್ಯರ್ಥಿಗಳು ಸೋಲುಂಡಿದ್ದರು. ಆ ಬಳಿಕ ನಡೆದ ಉಪಚುನಾವಣೆಯಲ್ಲೂ ಕಾಂಗ್ರೆಸ್​ ಸೋಲುಂಡಿತ್ತು.


ಇಂತಹ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಪಕ್ಷದ ಜವಾಬ್ದಾರಿ ಲಭ್ಯವಾಗಿತ್ತು. ಇದರ ನಡುವೆ ಅವರ ವಿರುದ್ಧ ನಡೆದ ಐಟಿ, ಇಡಿ ದಾಳಿಗಳ ಬಳಿಕವೂ ಡಿಕೆ ಪಕ್ಷಕ್ಕೆ ನಿಷ್ಠರಾಗಿ ಉಳಿದುಕೊಂಡಿದ್ದರು. ಇದು ಪಕ್ಷದಲ್ಲಿ ಅವರ ಗೌರವನ್ನು ಹೆಚ್ಚಿಸಿತ್ತು.


ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023 LIVE: ಸಿಎಂ ಕುರ್ಚಿ ಯಾರಿಗೆ? ಖರ್ಗೆ ನಿವಾಸದಲ್ಲಿ ಡಿಕೆಶಿ ಬ್ರದರ್ಸ್ ಮೀಟಿಂಗ್


ನಾಳೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ


ಸದ್ಯ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದ ಕಾರಣ ಇಂದೇ ಕಾಂಗ್ರೆಸ್ ಪಕ್ಷ ಶಾಸಕಾಂಗ ಸಭೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಎದುರು ಸಿಎಂ ಆಯ್ಕೆ ವಿಚಾರದಲ್ಲಿ ಮೂರು ಪ್ರಮುಖ ಸನ್ನಿವೇಶಗಳು ಎದುರಾಗುವ ನಿರೀಕ್ಷೆ ಇದೆ. ಶಾಸಕಾಂಗ ಪಕ್ಷದಲ್ಲಿ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಹೈಕಮಾಂಡ್​ ಅಧಿಕಾರ ನೀಡುತ್ತದೆ. ಅಲ್ಲದೆ ಸಿದ್ದರಾಮಯ್ಯ ಅವರ ಹಿರಿತನ ಹಾಗೂ


ಸಿಎಂ ಆಗಿ ಸಿದ್ದರಾಮಯ್ಯ ಆಯ್ಕೆ: ಮುಖ್ಯಮಂತ್ರಿ ಆಯ್ಕೆಗೆ ಶಾಸಕರು ಪಕ್ಷದ ಹೈಕಮಾಂಡ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇದರಂತೆ ಹೈಕಮಾಂಡ್​ ಸಿದ್ದರಾಮ್ಯಯ ಹಿರಿತನ ಹಾಗೂ ಮಾಸ್ ಲೀಡರ್​ ಇಮೇಜ್​​ ಪರಿಗಣಿಸಿ ಸಿಎಂ ಆಗಿ ಆಯ್ಕೆ ಮಾಡುವ ಅವಕಾಶವಿದೆ.


ಕಾಂಗ್ರೆಸ್​ ಸಿಎಂ ಆಯ್ಕೆಯ ಪ್ರಮುಖ ಸಾಧ್ಯತೆಗಳು


ಸಿಎಂ ಆಗಿ ಡಿಕೆ ಶಿವಕುಮಾರ್ ಆಯ್ಕೆ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಮತ್ತು ಪಕ್ಷದ ವೀಕ್ಷಕರು ಹಾಗೂ ಶಾಸಕರು ಡಿಕೆ ಶಿವಕುಮಾರ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.


ಅಧಿಕಾರ ಹಂಚಿಕೆ ಸೂತ್ರ: ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟರೆ, ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ಇಬ್ಬರ ನಡುವೆ ಅಧಿಕಾರ ಹಂಚಿಕೆ ಸೂತ್ರವನ್ನು ಮುಂದಿಡುವ ಸಾಧ್ಯತೆ ಇದೆ.

top videos


    ಈ ಹಿಂದೆಯೇ ಸಿಎಂ ಸ್ಥಾನದ ಫೈಟ್ ಕುರಿತಂತೆ ಸ್ಪಷ್ಟನೆ ನೀಡಿದ್ದ ಸಿದ್ದರಾಮಯ್ಯ ಅವರು, ಪ್ರಜಾಸತ್ತಾತ್ಮಕ ರೀತಿಯಲ್ಲಿ ಸಿಎಂ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದಿದ್ದರು. ಇತ್ತ ಡಿಕೆಶಿ ಕೂಡ ಸ್ಪಷ್ಟನೆ ನೀಡಿ, ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಲು ತ್ಯಾಗಕ್ಕೆ ಸಿದ್ಧ ಎಂದಿದ್ದರು. ಆದರೆ ತಮಗೆ ಯಾವುದೇ ಸಿಎಂ ಸ್ಥಾನ ಬೇಡ ಎಂದು ಖರ್ಗೆ ಸ್ಪಷನೆ ನೀಡಿರುವುದರಿಂದ ಡಿಕೆಶಿ ಅವರಿಗೆ ರೂಡ್​ ಕ್ಲೀಯರ್ ಆಗಿತ್ತು.

    First published: