ಬೆಂಗಳೂರು: ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಅನ್ನೋದು ಪ್ರಧಾನಿ ಮೋದಿ (PM Modi) ಸ್ಲೋಗನ್. ಈ ಸ್ಲೋಗನ್ ಬದಲಾಗುತ್ತೆ. ನಮ್ಮ ಸರ್ಕಾರ ಬರುತ್ತೆ ಅನ್ನೋದು ಕಾಂಗ್ರೆಸ್ ಕಲಿಗಳ (Congress Leaders) ಮಾತು. ನಮ್ಮದೇ ಈ ಸಲ ಕಪ್ ಅಂತ ಕಾಂಗ್ರೆಸ್ ಒತ್ತಿ ಒತ್ತಿ ಹೇಳ್ತಿದೆ. ಬಿಜೆಪಿಯ ಆಪರೇಷನ್ (Operation Lotus) ಬ್ರಹ್ಮಾಸ್ತ್ರದ ಸುಳಿವು ಸಿಗುತ್ತಿದ್ದಂತೆ ಸರ್ಕಾರ ರಚನೆಗೆ ನೀಲನಕ್ಷೆಯನ್ನೂ ಕಾಂಗ್ರೆಸ್ (Congress) ಸಿದ್ಧ ಮಾಡಿಕೊಂಡಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ (Karnataka) ಅಧಿಕಾರ ಹಿಡಿಯಲೇಬೇಕು ಅಂತ ಕಾಂಗ್ರೆಸ್ ನಾನಾ ರಣತಂತ್ರ ಹೆಣೆಯುತ್ತಿದೆ. ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಮನೆಯಲ್ಲಿ ರಾಜ್ಯ ಉಸ್ತುವಾರಿ ರಣ್ದೀಪ್ ಸುರ್ಜೇವಾಲಾ (Randeep Surjewala) ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದರು.
ಸಿದ್ದರಾಮಯ್ಯರ ಎಡಗೈಗೆ ತುಂಬಾ ಇನ್ಫೆಕ್ಷನ್ ಆಗಿದೆ. ಆರೋಗ್ಯ ವಿಚಾರಿಸೋಕೆ ಬಂದಿದ್ದ ಮಂಡ್ಯ, ಮೈಸೂರು ಭಾಗದ ಕಾಂಗ್ರೆಸ್ ಅಭ್ಯರ್ಥಿಗಳು ಸಿದ್ದರಾಮಯ್ಯ ಮನೆಯಲ್ಲೇ ಠಿಕಾಣಿ ಹೂಡಿದರು.
ನಂಜನಗೂಡಿನ ದರ್ಶನ್ ಧ್ರುವ ನಾರಾಯಣ್, ಕೃಷ್ಣರಾಜ ಕ್ಷೇತ್ರದ MK ಸೋಮಶೇಖರ್, ಟಿ ನರಸೀಪುರದ HC ಮಹಾದೇವಪ್ಪ, ಮಂಡ್ಯದ ಚೆಲುವನಾರಾಯಣ ಸ್ವಾಮಿ ಸೇರಿ ಅನೇಕರು ಸಿದ್ದರಾಮಯ್ಯ ಅವರ ನಿವಾಸದಲ್ಲಿ ದೀರ್ಘಕಾಲ ಚರ್ಚೆ ನಡೆಸಿದರು.
ಜಿಲ್ಲಾವಾರು ಪ್ರತ್ಯೇಕ ಮೀಟಿಂಗ್
ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸಭೆ ಬಳಿಕ ಗೆಲ್ಲೋ ಅಭ್ಯರ್ಥಿಗಳು, ಆಪರೇಷನ್ ಕಮಲಕ್ಕೆ ಯಾರ್ ಯಾರು ಸಿಲುಕ್ತಾರೋ ಎಲ್ಲರ ಮಾಹಿತಿ ಸಂಗ್ರಹಿಸಿ ಅಂತ ಸಂದೇಶ ಹೋಗಿದೆ ಎನ್ನಲಾಗಿದೆ. ಜೊತೆಗೆ ಜಿಲ್ಲಾವಾರು ಪ್ರಮುಖ ನಾಯಕರೆಲ್ಲಾ ಒಗ್ಗಟ್ಟಾಗಿರಲು ಸಂದೇಶವನ್ನು ರವಾನಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Election Results 2023: ತಡರಾತ್ರಿ ಬೆಂಗಳೂರಿಗೆ HDK; ಷರತ್ತು ಬದ್ಧ ಮೈತ್ರಿಗೆ ಕುಮಾರಸ್ವಾಮಿ ಹೇಳಿದ್ದೇನು?
ಆಪರೇಷನ್ ಹಸ್ತಕ್ಕೆ ನೀಲನಕ್ಷೆ
ಗೆಲ್ಲುವ ಜೆಡಿಎಸ್ ಅಭ್ಯರ್ಥಿಗಳನ್ನ ಸೆಳೆಯಲು ಕಾಂಗ್ರೆಸ್ ರೆಡಿಯಾಗಿದೆ. ಪ್ರಮುಖವಾಗಿ ಮಂಡ್ಯ, ತುಮಕೂರು, ಕೋಲಾರ ಅಭ್ಯರ್ಥಿಗಳಿಗೆ ಗಾಳ ಹಾಕಿದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ