• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Polls Result 2023: ಕೌಂಟಿಂಗ್ ಯಾವಾಗ ಆರಂಭ? ಎಲ್ಲೆಲ್ಲಿ ಸಿಗುತ್ತೆ ಚುನಾವಣಾ ಫಲಿತಾಂಶದ ಲೈವ್‌ ಅಪ್‌ಡೇಟ್ಸ್‌

Karnataka Polls Result 2023: ಕೌಂಟಿಂಗ್ ಯಾವಾಗ ಆರಂಭ? ಎಲ್ಲೆಲ್ಲಿ ಸಿಗುತ್ತೆ ಚುನಾವಣಾ ಫಲಿತಾಂಶದ ಲೈವ್‌ ಅಪ್‌ಡೇಟ್ಸ್‌

ವಿಧಾನಸಭಾ ಚುನಾವಣಾ ಫಲಿತಾಂಶ

ವಿಧಾನಸಭಾ ಚುನಾವಣಾ ಫಲಿತಾಂಶ

ಎಲೆಕ್ಷನ್‌ ರಿಸಲ್ಟ್ ಸೇರಿದಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಗಳ ಕುರಿತ ಕ್ಷಣ ಕ್ಷಣದ ಲೈವ್‌ ಮಾಹಿತಿಯನ್ನು ನ್ಯೂಸ್‌ 18 ಕನ್ನಡ ಡಿಜಿಟಲ್‌ ರಾಜ್ಯದ ಓದುಗರಿಗೆ ನೀಡಲಿದ್ದು, ಪೂರ್ಣ ವಿವರಗಳಿಗಾಗಿ ನಮ್ಮ ವೆಬ್‌ಸೈಟ್‌ ಫಾಲೋ ಮಾಡಿ.

  • News18 Kannada
  • 3-MIN READ
  • Last Updated :
  • Karnataka, India
  • Share this:

ಬೆಂಗಳೂರು: ಭಾರೀ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election Results)  ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಸಾವಿರಾರು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಈಗಾಗಲೇ ಎಲ್ಲಾ ಹಂತದ ಸಿದ್ಧತೆಯನ್ನು ಚುನಾವಣಾ ಆಯೋಗ (Election Commission) ಮಾಡಿಕೊಂಡಿದೆ. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಎಲ್ಲಾ 224 ಕ್ಷೇತ್ರಗಳ ಚುನಾವಣಾ ಫಲಿತಾಂಶದ ಚಿತ್ರಣವೂ ಹೊರ ಬೀಳಲಿದ್ದು, ಎಲೆಕ್ಷನ್‌ ರಿಸಲ್ಟ್ ಸೇರಿದಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಗಳ ಕುರಿತ ಕ್ಷಣ ಕ್ಷಣದ ಲೈವ್‌ ಮಾಹಿತಿಯನ್ನು ನ್ಯೂಸ್‌ 18 ಕನ್ನಡ ಡಿಜಿಟಲ್‌ ರಾಜ್ಯದ ಓದುಗರಿಗೆ ನೀಡಲಿದೆ.


ಮತ ಯಂತ್ರಗಳು ಭದ್ರ


ಮೇ 10ರಂದು ನಡೆದ ಮತದಾನದ ದಿನ ರಾಜ್ಯದ 37,777 ಪ್ರದೇಶದಲ್ಲಿ ಹಾಕಲಾಗಿದ್ದ 58,545 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ರಾಜ್ಯದ 224 ಕ್ಷೇತ್ರಗಳ ಮತ ಯಂತ್ರಗಳನ್ನು ಚುನಾವಣಾ ಸಿಬ್ಬಂದಿ ಭದ್ರವಾಗಿ ಇಟ್ಟಿದ್ದು, ಸ್ಟ್ರಾಂಗ್‌ ರೂಂಗಳಲ್ಲಿ ಮೂರನೇ ಹಂತದ ಭದ್ರತೆಯನ್ನು ಮಂತ ಯಂತ್ರಗಳಿಗೆ ಒದಗಿಸಲಾಗಿದೆ. 224 ಕ್ಷೇತ್ರಗಳ ಮತ ಎಣಿಕೆ ಕಾರ್ಯ 36 ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆಯಲಿದ್ದು, ಸಾವಿರಾರು ಸಿಬ್ಬಂದಿ ಚುನಾವಣಾ ಎಣಿಕೆ ವೇಳೆ ಕಾರ್ಯ ನಿರ್ವಹಿಸಲಿದ್ದಾರೆ.


ಈ ಲಿಂಕ್ ಓಪನ್ ಮಾಡಿ ಲೈವ್ ರಿಸಲ್ಟ್ ಪಡೆಯಿರಿ: Karnataka Election Results 2023 Live: ಕರ್ನಾಟಕ ಚುನಾವಣಾ ಫಲಿತಾಂಶ, ಸ್ಟ್ರಾಂಗ್ ರೂಂನಲ್ಲಿ ನಾಯಕರ ಭವಿಷ್ಯ ಭದ್ರ - ಮತಗಣನೆಗೆ ಕೌಂಟ್ಡೌನ್ ಆರಂಭ


ಎಷ್ಟು ಅಭ್ಯರ್ಥಿಗಳು ಕಣದಲ್ಲಿ?


ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2615 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಆ ಪೈಕಿ 2430 ಮಂದಿ ಪುರುಷ ಅಭ್ಯರ್ಥಿಗಳಾದ್ರೆ, 184 ಮಂದಿ ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಜೊತೆಗೆ ಓರ್ವ ಲೈಂಗಿಕ ಅಲ್ಪಸಂಖ್ಯಾತ (ಟ್ರಾನ್ಸ್‌ಜೆಂಡರ್‌) ಸಮುದಾಯದ ಅಭ್ಯರ್ಥಿ ಇದ್ದಾರೆ. ಅಭ್ಯರ್ಥಿಗಳ ಪೈಕಿ ಬಿಜೆಪಿಯಿಂದ 224, ಕಾಂಗ್ರೆಸ್​ನಿಂದ 223, ಜೆಡಿಎಸ್​ನಿಂದ 209 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಇನ್ನು 918 ಮಂದಿ ಪಕ್ಷೇತರ ಅಭ್ಯರ್ಥಿಗಳಾದ್ರೆ, ಎಎಪಿ 209, ಸಿಪಿಐಎಂ 4, ಬಿಎಸ್​ಪಿ 133 ಹಾಗೂ ಎನ್​​ಸಿಪಿ ಇಬ್ಬರು ಅಭ್ಯರ್ಥಿಗಳನ್ನು ಕದನಕ್ಕೆ ಇಳಿಸಿದೆ.


ಖಾಕಿ ಸರ್ಪಗಾವಲು


ಇನ್ನು ರಾಜ್ಯಾದ್ಯಂತ ನಡೆಯುತ್ತಿರುವ ಚುನಾವಣಾ ಫಲಿತಾಂಶ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ದೃಷ್ಟಿಯಿಂದ ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಭಾರೀ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಪ್ರತಿಯೊಂದು ಮತ ಎಣಿಕೆ ಕೇಂದ್ರಗಳಲ್ಲೂ ಅಸಂಖ್ಯ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ನಿನ್ನೆ ರಾತ್ರಿ 10ರಿಂದ ಇಂದು ರಾತ್ರಿ 12ರ ತನಕ ಮದ್ಯ ಮಾರಾಟವನ್ನು ನಿಷೇಧಿಲಾಗಿದ್ದು, ಮುಖ್ಯವಾಗಿ ಮತ ಎಣಿಕೆ ಕೇಂದ್ರದ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಹಾಕಲಾಗಿದ್ದು, ಮತ ಎಣಿಕೆ ಕೇಂದ್ರದ ಬಳಿ 5ಕ್ಕಿಂತ ಹೆಚ್ಚು ಜನ ಸೇರೋದು, ವಿಜಯೋತ್ಸವ, ಮೆರವಣಿಗೆ ಇನ್ನಿತರ ಸಮಾರಂಭಗಳನ್ನು ನಿಷೇಧಿಸಲಾಗಿದೆ.


ಇದನ್ನೂ ಓದಿ: Karnataka Assembly Election: ವೋಟ್ ಕೌಂಟಿಂಗ್‌ಗೆ ಕೌಂಟ್​ಡೌನ್; ಮತ ಎಣಿಕೆಗೆ ತಯಾರಿ ಹೇಗಿದೆ ನೋಡಿ


ಮತದಾನ ಆಗಿದ್ದು ಎಷ್ಟು?


ಬುಧವಾರ (ಮೇ 10) ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಗೆ ಈ ಬಾರಿ ದಾಖಲೆಯ ಮತದಾನ ಆಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿ 73.19% ಮತದಾನ ಆಗಿದ್ದು, ಇದು ಸಾರ್ವಕಾಲಿಕ ದಾಖಲೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಇರುವ 5.30 ಕೋಟಿ ಮತದಾರರಲ್ಲಿ 3.88 ಕೋಟಿ ಮತದಾರರು ಈ ಭಾರಿ ತಮ್ಮ ಹಕ್ಕು ಚಲಾಯಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 85.56% ಮತದಾನವಾಗಿ ರಾಜ್ಯದಲ್ಲೇ ಅತೀ ಹೆಚ್ಚು ಮತದಾನ ನಡೆದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇತ್ತ ಬೆಂಗಳೂರು ದಕ್ಷಿಣದಲ್ಲಿ 52.33% ಮತದಾನವಾಗಿ ಅತೀ ಕಡಿಮೆ ಹಕ್ಕು ಚಲಾಯಿಸಿದ ಜಿಲ್ಲೆಗೆ ಗುರಿಯಾಗಿದೆ.

top videos


    ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲೂ ಕೂಡ ಎಲೆಕ್ಷನ್‌ ರಿಸಲ್ಟ್ ಕುರಿತ ಎಲ್ಲಾ ಮಾಹಿತಿಗಳು ಇಂದೇ ಲಭ್ಯವಾಗಲಿದೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು