• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Results 2023: ಸಿಎಲ್​​ಪಿ ಸಭೆ ಯಾವಾಗ? ಸಿಎಂ ಆಯ್ಕೆ ಕುರಿತಂತೆ ಡಿಕೆ ಶಿವಕುಮಾರ್​ ಫಸ್ಟ್ ರಿಯಾಕ್ಷನ್​​

Karnataka Results 2023: ಸಿಎಲ್​​ಪಿ ಸಭೆ ಯಾವಾಗ? ಸಿಎಂ ಆಯ್ಕೆ ಕುರಿತಂತೆ ಡಿಕೆ ಶಿವಕುಮಾರ್​ ಫಸ್ಟ್ ರಿಯಾಕ್ಷನ್​​

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್ ಮಾತು ಶುರು ಮಾಡುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಜೈಕಾರ ಹಾಕಲು ಮುಂದಾದರು. ಈ ವೇಳೆ ಕಾರ್ಯಕರ್ತರ ವಿರುದ್ಧ ಗರಂ ಆದ ಡಿಕೆಶಿ, ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡಿ ಎಂದು ಖಡಕ್ ಸೂಚನೆ ಕೊಟ್ಟರು. 

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಕರ್ನಾಟಕ ವಿಧಾಸಸಭಾ ಚುನಾವಣೆಯಲ್ಲಿ (Karnataka Assembly Election) ಕಾಂಗ್ರೆಸ್ (Congress) ಭರ್ಜರಿ ಬಹುಮತ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ನಾಯಕರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ರಾಜ್ಯ ಜನತೆ ಧನ್ಯವಾದ ತಿಳಿಸಿದರು. ಈ ವೇಳೆ ಮಾತನಾಡಿ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು, ಇದು ನನ್ನ ಅಥವಾ ಸಿದ್ದರಾಮಯ್ಯ ಅವರ ಗೆಲುವು ಅಲ್ಲ. ಇದು ಕರ್ನಾಟಕ ಜನರ ಗೆಲುವು ಎಂದು ಹೇಳಿದ್ದಾರೆ.


ಕೊಟ್ಟ ಮಾತಿನಂತೆ ಗ್ಯಾರೆಂಟಿ ಜಾರಿ


ಕಾಂಗ್ರೆಸ್​ ಗೆಲುವಿನ ಖುಷಿ ಹಂಚಿಕೊಂಡ ಡಿಕೆ ಶಿವಕುಮಾರ್​ ಅವರು, ಈ ಗೆಲುವು ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ, ಹೆಣ್ಣು ಮಕ್ಕಳ ಕಷ್ಟದ ವಿರುದ್ಧದ ಗೆಲುವು. ಕಾಂಗ್ರೆಸ್ ಗ್ಯಾರಂಟಿಯ ಗೆಲುವು. ನಮ್ಮ ಸರ್ಕಾರ ಬಂದ ಕೂಡಲೇ ಹೆಣ್ಣು ಮಕ್ಕಳ ಮುಖದಲ್ಲಿ, ಬಡವರ ಹೊಟ್ಟೆಗೆ ಅನ್ನ, ಹೆಣ್ಣು ಮಕ್ಕಳಿಗೆ ಉಚಿತ ಸಾರಿಗೆ, ನಿರುದ್ಯೋಗಿಗಳಿಗೆ ಭತ್ಯೆ ಎಲ್ಲವೂ ಜಾರಿ ಮಾಡುತ್ತೇವೆ. ಚಾಮುಂಡೇಶ್ವರಿ ಸನ್ನಿದಿಯಲ್ಲಿ ನಾನು, ಸಿದ್ದರಾಮಯ್ಯ ಮಾತು ಕೊಟ್ಟಿದ್ದೇವೆ. ಅದರಂತೆ ನಾವು ನಮ್ಮ ಗ್ಯಾರಂಟಿಗಳನ್ನ ಈಡೇರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023 LIVE: ಸಿಎಂ ಕುರ್ಚಿ ಯಾರಿಗೆ? ಖರ್ಗೆ ನಿವಾಸದಲ್ಲಿ ಡಿಕೆಶಿ ಬ್ರದರ್ಸ್ ಮೀಟಿಂಗ್


ನಾಳೆ ಕಾಂಗ್ರೆಸ್ ಸಿಎಲ್​ಪಿ ಮೀಟಿಂಗ್​

top videos


  ಇದೇ ವೇಳೆ ಕರ್ನಾಟಕ ವಿಧಾನಸಭಾ ಚುನಾವಣೆಯ ಗೆಲುವನ್ನು ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಅವರಿಗೆ ಅರ್ಪಿಸುತ್ತೇವೆ ಎಂದು ಡಿಕೆಶಿ ತಿಳಿಸಿದರು. ಇದೇ ವೇಳೆ ನಾಳೆ ಸಂಜೆ 5:30ಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಲಿದೆ. ಸಭೆಯಲ್ಲಿ ಗೆದ್ದ ಶಾಸಕರ ಸೇರಿ 250 ಜನರು ಭಾಗಿಯಾಗುತ್ತಾರೆ. ಪ್ರಜಾಪ್ರಭುತ್ವದಲ್ಲಿ, ಪಕ್ಷದ ನಿಯಮಗಳಂತೆ ನಾವು ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಅಲ್ಲಿಯವರೆಗೂ ಯಾರು ಕೂಡ ಹೇಳಿಕೆ ನೀಡಬಾರದು ಎಂದು ಪಕ್ಷದ ನಾಯಕರಿಗೆ ಸೂಚನೆ ನೀಡಿದರು.


  ಇನ್ನು, ಇದಕ್ಕೂ ಮುನ್ನ ಡಿಕೆ ಶಿವಕುಮಾರ್ ಮಾತು ಶುರು ಮಾಡುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಜೈಕಾರ ಹಾಕಲು ಮುಂದಾದರು. ಈ ವೇಳೆ ಕಾರ್ಯಕರ್ತರ ವಿರುದ್ಧ ಗರಂ ಆದ ಡಿಕೆಶಿ, ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡಿ ಎಂದು ಖಡಕ್ ಸೂಚನೆ ಕೊಟ್ಟರು.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು