• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • CT Ravi: ಗೆದ್ದಾಗ ಅಮಲಿನಲ್ಲಿ ಮಾತಾಡ್ತಿದ್ದಾರೆ, ಆ ಅಮಲು ಎಷ್ಟು ದಿನ ಇರುತ್ತೆ ನೋಡೋಣ! ಕಾಂಗ್ರೆಸ್​​ ನಾಯಕನಿಗೆ ಸಿಟಿ ರವಿ ತಿರುಗೇಟು

CT Ravi: ಗೆದ್ದಾಗ ಅಮಲಿನಲ್ಲಿ ಮಾತಾಡ್ತಿದ್ದಾರೆ, ಆ ಅಮಲು ಎಷ್ಟು ದಿನ ಇರುತ್ತೆ ನೋಡೋಣ! ಕಾಂಗ್ರೆಸ್​​ ನಾಯಕನಿಗೆ ಸಿಟಿ ರವಿ ತಿರುಗೇಟು

ಸಿ.ಟಿ ರವಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

ಸಿ.ಟಿ ರವಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

ನನಗೆ ಸಿದ್ಧಾಂತ ಪಕ್ಷ ಮುಖ್ಯ, ವೈಯುಕ್ತಿಕ ಹಿತಾಸಕ್ತಿ ಇಲ್ಲ. ನಿರಂತರವಾಗಿ ಗೆದ್ದವರು ಮಾತ್ರ ನಾಯಕರು ಅಲ್ಲ ಎಂದು ಸಿಟಿ ರವಿ ಅಭಿಪ್ರಾಯಪಟ್ಟಿದ್ದಾರೆ.

  • Share this:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟವಾದ ಬಳಿಕ ಮೊದಲ ಬಾರಿಗೆ ಬೆಂಗಳೂರಿನ (Bengaluru) ಬಿಜೆಪಿ ಕೇಂದ್ರ ಕಚೇರಿಗೆ ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಆಗಮಿಸಿದ್ದರು. ಮಲ್ಲೇಶ್ವರಂನಲ್ಲಿ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಕಟೀಲ್​, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಭೇಟಿ ನೀಡಿ ತಮ್ಮ ಕ್ಷೇತ್ರದ ಸೋಲಿಗೆ ಹಾಗೂ ಜಿಲ್ಲೆಯ ಸೋಲಿಗೆ ಕಾರಣ ನೀಡಿದರು. ಆ ಬಳಿಕ ಮಾತನಾಡಿದ ಸಿ.ಟಿ ರವಿ ಅವರು, ರಾಷ್ಟ್ರೀಯ ಜವಾಬ್ದಾರಿ ಸಿಕ್ಕ‌ಮೇಲೆ ನಾನು ಕ್ಷೇತ್ರದ ಕಡೆ ಜಾಸ್ತಿ ಓಡಾಟ ಕಡಿಮೆ ಆಯ್ತು, ಪರಿಸ್ಥಿತಿಯ ಪಿತೂರಿಯೂ ಆಗಿರಬಹುದು. ಆದರೆ ನಾನು ಯಾರ ಮೇಲೂ ಬೊಟ್ಟು ಮಾಡೋದಿಲ್ಲ. ನಿರಂತರವಾಗಿ ಗೆಲ್ಲುವುದೊಂದೆ ನಾಯಕನ ಲಕ್ಷಣ ಅಲ್ಲ.‌ ಹೊಂದಾಣಿಕೆ ಮಾಡಿಕೊಂಡು ರಾಜಕೀಯ ಮಾಡಿಕೊಳ್ಳಲು ನನಗೆ ಬರಲ್ಲ ಎಂದರು.


ಶಾಸಕ ತಮ್ಮಯ್ಯ ಹೆಸರು ಪ್ರಸ್ತಾಪ ಮಾಡದೆ ಪರೋಕ್ಷ ಟಾಂಗ್


ನನಗೆ ಸಿದ್ಧಾಂತ ಪಕ್ಷ ಮುಖ್ಯ, ವೈಯುಕ್ತಿಕ ಹಿತಾಸಕ್ತಿ ಇಲ್ಲ. ನಿರಂತರವಾಗಿ ಗೆದ್ದವರು ಮಾತ್ರ ನಾಯಕರು ಅಲ್ಲ, ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿ ಹಾಕಿಸಿಕೊಂಡವರು ಇದ್ದಾರೆ. ನಾನು ಸೋಲನ್ನು ವಿನಮ್ರವಾಗಿ ತೆಗೆದುಕೊಂಡಿದ್ದೇನೆ. ಗೆದ್ದವನು ಈಗ ಏನೋ ಮಾತಾಡಬಹುದು. ಅವರಿಗೆ ಗೆದ್ದ ಅಮಲು ಇದೆ, ಆದರೆ ಆ ಅಮಲು ಸದಾ ಇರಲು ಸಾಧ್ಯವಿಲ್ಲ. ಅಮಲು ಇಳಿಲೇಬೇಕು ಎಂದರು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು. ಕಾಂಗ್ರೆಸ್ ಶಾಸಕ ತಮ್ಮಯ್ಯ ಹೆಸರು ಪ್ರಸ್ತಾಪ ಮಾಡದೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.


top videos



    ನಮ್ಮ ಕಾರ್ಯಕರ್ತರು ಕೂಡ ಸ್ವಲ್ಪ ಲೈಟಾಗಿ ತಗೊಂಡರು, ರವಿಯಣ್ಣ ಹೇಗೆ ಸೋಲುತ್ತಾನೆ ಅಂತ ಲೈಟಾಗಿ ತಗೊಂಡರು. ಎಲ್ಲಾರೂ ಒಂದಾಗಿ ಕೆಲಸ ಮಾಡಿದ್ದರು. ನಾನು ಪಾರ್ಟಿಗಾಗಿ ಹೇಳಿದ್ದು, ಆದರೆ ಅದು ಜಾತಿಗೆ ತಿರುಗಿತು. ನಾನು ಪಕ್ಷವನ್ನು ಸಮರ್ಥಿಸಿಕೊಂಡು ಮಾತಾಡಿದ್ದು ಜಾತಿಗೆ ತಿರುಗಿತು, ಸೋಲಿಗೆ ಕಾರಣ ಅನೇಕ ಇದೆ. ಎಲ್ಲವನ್ನು ಪಕ್ಷದ ಒಳಗೆ ಮಾತನಾಡುತ್ತೇವೆ ಎಂದರು.

    First published: