ಕರ್ನಾಟಕ ಫಲಿತಾಂಶ; ಈ ಕ್ಷೇತ್ರಗಳ ಪೈಪೋಟಿಯನ್ನು ನೀವು ನೋಡಲೇಬೇಕು


Updated:May 15, 2018, 7:27 PM IST
ಕರ್ನಾಟಕ ಫಲಿತಾಂಶ; ಈ ಕ್ಷೇತ್ರಗಳ ಪೈಪೋಟಿಯನ್ನು ನೀವು ನೋಡಲೇಬೇಕು
Karnataka Election Result 2018: LIVE

Updated: May 15, 2018, 7:27 PM IST
- ಗಣೇಶ್​ ನಚಿಕೇತ್​, ನ್ಯೂಸ್​18 ಕನ್ನಡ

ಬೆಂಗಳೂರು(ಮೇ.15): ಕರ್ನಾಟಕ ವಿಧಾನಸಭೆ ಫಲಿತಾಂಶ ಪ್ರಕಟಗೊಂಡಿದೆ. ರಾಜ್ಯದ ಜನತೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದೆ, ಅತಂತ್ರ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್​ ಜೆಡಿಎಸ್​ ಸೇರಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಫಲಿತಾಂಶ ಪ್ರಕಟಗೊಂಡ ಕೂಡಲೇ ಕಾಂಗ್ರೆಸ್‍ನ ನಾಯಕರಾದ ಗುಲಾಮ್ ನಬಿ ಆಜಾದ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್ ಸಭೆ ನಡೆಸಿ ಜೆಡಿಎಸ್‍ಗೆ ಬೆಂಬಲ ಘೋಷಿಸಿದರು.

ಅದರ ಬೆನ್ನಲ್ಲೇ ಕಾಂಗ್ರೆಸ್​ಗೆ ಪ್ರತಿಕ್ರಿಯಿಸಿದ ಜೆಡಿಎಸ್‍ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ನಾವು ಕಾಂಗ್ರೆಸ್​ ಜೊತೆಗೂಡಿ ಸರ್ಕಾರ ರಚಿಸಲು ನಿರ್ಧಾರ ಮಾಡಿದ್ದೇವೆ, ಹೀಗಾಗಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಿ ಎಂದು ರಾಜ್ಯಪಾಲರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಈಗಾಗಲೇ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಇದೀಗ ಕರ್ನಾಟಕ ಚುನಾವಣಾ ಪಲಿತಾಂಶ ಅತಂತ್ರ ನಿರ್ಮಾಣವಾಗಿದ್ದು, ಬಿಜೆಪಿ ಪಾಲಿಗೆ 104 ಸೀಟು ಒಲಿದಿದೆ. ಇನ್ನು ಜೆಡಿಎಸ್​ಗೆ 38 ಸೀಟುಗಳು, ಕಾಂಗ್ರೆಸ್​ಗೆ 78 ಸೀಟುಗಳು ಮತ್ತು 2 ಪಕ್ಷೇತರರನ್ನು ಸೇರಿ ಒಟ್ಟು 118 ಸೀಟುಗಳಾಗಿವೆ. ಅಲ್ಲದೇ ಈ ಚುನಾವನೆಯಲ್ಲಿ ಬಿಜೆಪಿ ಕಾಂಗ್ರೆಸ್​ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಸುಮಾರು ಜನ ಕಡಿಮೆ ಮತ್ತು ಬಹಳ ಅಂತರದಿಂದ ಸೋತಿದ್ದರು.

ಭಾರೀ ಅಂತರದಿಂದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ: 

ಕೆ.ಆರ್.ಪುರಂ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್- ಬೈರತಿ ಬಸವರಾಜ್-1,35,149 ಮತಗಳು ಪಡೆದಿದ್ದು, ಬಿಜೆಪಿ- ನಂದೀಶ್ ರೆಡ್ಡಿ ವಿರುದ್ಧ 32,486 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಿಂದ ಕೆ.ಜೆ. ಜಾರ್ಜ್-1,09,000 ಮತಗಳು ಪಡೆಯುವ ಮೂಲಕ ಬಿಜೆಪಿ ಎಂ.ಎನ್.ರೆಡ್ಡಿ ವಿರುದ್ಧ 53,000 ಮತಗಳ ಮೂಲಕ ಗೆದ್ದಿದ್ದಾರೆ. ಇನ್ನು ಕಾಂಗ್ರೆಸ್​ ಎಂ.ಬಿ ಪಾಟೀಲ್​​ ಜೆಡಿಎಸ್​ ವಿಜುಗೌಡ ಪಾಟೀಲ್​​ ವಿರುದ್ಧ 30 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

ರಾಮಲಿಂಗಾರೆಡ್ಡಿ 21,000 ಸಾವಿರ, ಬಂಗಾರಪೇಟೆ ಎಸ್​ಎನ್​ ನಾರಯಣಸ್ವಾಮಿ 20,000 ಸಾವಿರ, ಬಿಜೆಪಿ ಅಶ್ವಥ್​ ನಾರಯಣ- 28,000, ಯತೀಂದ್ರ ಸಿದ್ದರಾಮಯ್ಯ- 58,614, ನೆಲಮಂಗಲ ಜೆಡಿಎಸ್​​ ಶ್ರೀನಿವಾಸ ಮೂರ್ತಿ- 22,830, ಯಲಹಂಕ - ಬಿಜೆಪಿ - ಎಸ್ ಆರ್ ವಿಶ್ವನಾಥ್ 24000, ಬೆಂ ದಕ್ಷಿಣ - ಬಿಜೆಪಿ - ಎಂ ಕೃಷ್ಣಪ್ಪ 28000 ಅಂತರದಲ್ಲಿ ಗೆದ್ದಿದ್ದಾರೆ.
Loading...

ಡಿ.ಕೆ. ಶಿವಕುಮಾರ್ (ಕಾಂಗ್ರೆಸ್), ಕನಕಪುರ – 79,909, ಅಭಯ್ ಪಾಟೀಲ್(ಬಿಜೆಪಿ), ಬೆಳಗಾವಿ ದಕ್ಷಿಣ – 58,692, ಲಕ್ಷ್ಮೀ ಹೆಬ್ಬಾಳ್ಕರ್ (ಕಾಂಗ್ರೆಸ್), ಬೆಳಗಾವಿ ಗ್ರಾಮೀಣ – 51,724, ಸತೀಶ್ ರೆಡ್ಡಿ (ಬಿಜೆಪಿ), ಬೊಮ್ಮನಹಳ್ಳಿ – 47,162, ಹೆಚ್.ಡಿ. ರೇವಣ್ಣ (ಜೆಡಿಎಸ್), ಹೊಳೆನರಸೀಪುರ – 43,832, ಕೆ.ಎಂ. ಶಿವಲಿಂಗೇಗೌಡ(ಜೆಡಿಎಸ್), ಅರಸೀಕೆರೆ – 43689, ಇವ. ಸುನಿಲ್ ಕುಮಾರ್ (ಬಿಜೆಪಿ), ಕಾರ್ಕಳ – 42,566, ಅರವಿಂದ್ ಬೆಲ್ಲದ್ (ಬಿಜೆಪಿ), ಹು-ಧಾ ಪಶ್ಚಿಮ – 40,487, ಎಂ. ಚಂದ್ರಪ್ಪ(ಬಿಜೆಪಿ), ಹೊಳಲ್ಕೆರೆ – 38,940, ರವಿಸುಬ್ರಮಣ್ಯ(ಬಿಜೆಪಿ), ಬಸವನಗುಡಿ – 38,009, ಜಿ.ಟಿ. ದೇವೇಗೌಡ (ಜೆಡಿಎಸ್), ಚಾಮುಂಡೇಶ್ವರಿ – 36,042 ಬಾರಿ ಅಂತರದಲ್ಲಿ ಗೆದ್ದಿದಾರೆ.

ಕಡಿಮೆ ಅಂತರದಲ್ಲಿ ಗೆದ್ದವರು: ಸತೀಶ್​ ಜಾರಕಿಹೊಳಿ- 2500, ಬಿಜೆಪಿ ಸೋಮಣ್ಣ ಗೌಡ ಪಾಟೀಲ್​​- 110, ಬಿಜೆಪಿ ವಿ.ಸೋಮಣ್ಣ -7,072, ಎಂ.ಟಿ.ಬಿ.ನಾಗರಾಜ್ -7,610, ಟಿ.ವೆಂಕಟರಮಣಯ್ಯ- 9,945, ಜೆಡಿಎಸ್ ಅಭ್ಯರ್ಥಿ ಮಹದೇವ್- 7,424, ಯಶವಂತಪುರ ಎಸ್ ಟಿ ಸೋಮಶೇಖರ್- 5,000, ಆನೇಕಲ್ - ಕಾಂಗ್ರೆಸ್ - ಶಿವಣ್ಣ 7,000, ಮಹದೇವಪುರ - ಬಿಜೆಪಿ - ಅರವಿಂದ ಲಿಂಬಾವಳಿ 11,000, ಸಿಎಂ ಸಿದ್ದರಾಮಯ್ಯ-3,000, ಅಂಜಲಿ ಲಿಂಬಾಳ್ಕರ್​​-5,000 ಸಾವಿರ ಅಂತರದಲ್ಲಿ ಗೆದ್ದಿದ್ದಾರೆ.

ಪ್ರಿಯಾಂಕ ಖರ್ಗೆ- 4393, ಬಿಜೆಪಿ ಬಸವನಗೌಡ ಪಾಟೀಲ್​-555, ಕುಂದೋಲ್​ ಚನ್ನಬಸಪ್ಪ-656 ಮತ್ತು ಸಾಗರದಿಂದ ಕೆಲವು ವರ್ಷಗಳ ನಂತರ ಮತ್ತೆ ರಾಜಕೀಯ ಅದೃಷ್ಟ ಪರೀಕ್ಷೆಗಿಳಿದಿದ್ದ ಹರತಾಳು ಹಾಲಪ್ಪ ಕೇವಲ ಮೂರು ಸಾವಿರ ಅಂತರದಲ್ಲಿ ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸಿದ್ದಾರೆ. ಪುತ್ರ ಮೊಹಮ್ಮದ್​ ನಲಪಾಡ್​ ಅಟಾಟೋಪದಿಂದ ಕ್ಷೇತ್ರದಲ್ಲಿ ಹೆಸರು ಕೆಡಿಸಿಕೊಂಡಿದ್ದ ಎನ್​. ಎ. ಹ್ಯಾರಿಸ್​ ಕಡೆಯ ಹಂತದಲ್ಲಿ ಶಾಂತಿನಗರದ ಟಿಕೆಟ್​ ನಿಕ್ಕಿತ್ತು. ನಿರೀಕ್ಷೆಯಂತೆ ಹ್ಯಾರಿಸ್​ 18,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
First published:May 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ