Karnataka Election 2023:  ನಮೋ ಮೆಗಾ ರೋಡ್​​ಶೋ; ಸೋನಿಯಾ ಚುನಾವಣಾ ಕಹಳೆ

Karnataka Assembly Election 2023: ಪ್ರಧಾನಿ ಮೋದಿ ರೋಡ್​ಶೋ ಸೇರಿದಂತೆ ರಾಜ್ಯದಲ್ಲಿ ರಾಜಕೀಯ ವಿದ್ಯಮಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಜಧಾನಿ ಬೆಂಗಳೂರಿನಲ್ಲಿ ಮೆಗಾ ರೋಡ್​ಶೋ (Roadshow) ನಡೆಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಬ್ರಿಗೇಡ್ ಮಿಲೆನೀಯಮ್​ನಿಂದ ರೋಡ್ ಆರಂಭಗೊಳ್ಳಲಿದೆ. ರೋಡ್ ಶೋ ಪ್ರಯುಕ್ತ ರಸ್ತೆಯ ಎರಡು ಬದಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇತ್ತ ಚುನಾವಣೆ ಘೋಷಣೆಯಾದ ಬಳಿಕ ರಾಜ್ಯಕ್ಕೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಇಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.

ಮತ್ತಷ್ಟು ಓದು ...
06 May 2023 19:04 (IST)

Karnataka Election 2023 Live: ಮರ್ಯಾದ ಪುರುಷೋತ್ತಮ ಶ್ರೀರಾಮನ ಅಯೋಧ್ಯೆಯಿಂದ ಬಂದಿದ್ದೇನೆ

06 May 2023 19:03 (IST)

Karnataka Election 2023 Live: ಎಂಎಲ್​​ಎ ಆದ್ರೆ ದುಡ್ಡು ಮಾಡ್ಬೋದು ಎಂಬುದು ಭ್ರಮೆ

ಚುನಾವಣೆಯಲ್ಲಿ ಗೆದ್ದು ಶಾಸಕರಾದರೆ ದುಡ್ಡು ಮಾಡಬಹುದು ಅಂತ ಭ್ರಮೆ ಕೆಲವರಿಗೆ ಇದೆ, ಆದರೆ ನಾನು ದುಡ್ಡು ಮಾಡಲು ಬಂದಿಲ್ಲ. ನಾನು 5 ವರ್ಷ ಮುಳಬಾಗಿಲು ಶಾಸಕನಾಗಿದ್ದೆ, ಜನರ ದುಡ್ಡು ತಿಂದರೆ ಕುಷ್ಟರೋಗ ಬರುತ್ತೆ ಎಂದು ಶಾಪ ಹಾಕಿದ್ದೆ. ಕೋಲಾರದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನನ್ನ ಗುರಿ ಎಂದು ಹೇಳಿದರು. ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದರು ಪ್ರಚಾರದಲ್ಲಿ ಭಾಗಿಯಾಗಿದ್ದರು.

06 May 2023 18:23 (IST)

Karnataka Election 2023 Live: ಪ್ರಧಾನಿ ಮೋದಿ ಅಬ್ಬರದ ಭಾಷಣ

06 May 2023 17:15 (IST)

Karnataka Election 2023 Live: ಶೆಟ್ಟರ್ ಪರ ಶಿವಣ್ಣ ಭರ್ಜರಿ ಪ್ರಚಾರ

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಟ ಶಿವರಾಜ್​ಕುಮಾರ್ ಹಾಗೂ ಪತ್ನಿ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಶಿವಣ್ಣ ಭರ್ಜರಿ ರೋಡ್ ಶೋ ನಡೆಸಿದ್ದು, ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದಿಂದ ಬೃಹತ್ ರೋಡ್ ಶೋ ನಡೆಸಿ ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

06 May 2023 16:40 (IST)

Karnataka Election 2023 Live: ದೊಡ್ಡಬಳ್ಳಾಪುರದಲ್ಲಿ ಸುದೀಪ್​ ಭರ್ಜರಿ ರೋಡ್ ಶೋ

ದೊಡ್ಡಬಳ್ಳಾಪುರದಲ್ಲಿ ನಟ ಸುದೀಪ್ ಭರ್ಜರಿ ರೋಡ್ ಶೋ ನಡೆಸ್ತಿದ್ದಾರೆ. ಯುವ ಅಭ್ಯರ್ಥಿ ಧೀರಜ್ ಮುನಿರಾಜು ಪರ ಮತಬೇಟೆ ನಡೆಸ್ತಿದ್ದಾರೆ. ಮುತ್ಯಾಲಮ್ಮ ದೇವಾಲಯದಿಂದ ರೋಡ್ ಶೋ ಆರಂಭವಾಗಿದ್ದು, ಸಚಿವ ಸುಧಾಕರ್ ಹಾಗೂ ಛಲವಾದಿ ನಾರಾಯಣಸ್ವಾಮಿ ಸಾಥ್ ನೀಡಿದ್ದಾರೆ. ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿದ್ದು, ಸುದೀಪ್​ರನ್ನ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

06 May 2023 15:58 (IST)

Karnataka Election 2023 Live: ಡಾ ಕೆ ಸುಧಾಕರ್ ಪರ ನಟಿ ಅನು ಪೂವಮ್ಮ ಪ್ರಚಾರ

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಪರ ಸ್ಟಾರ್ ಪ್ರಚಾರ ಮುಂದುವರದಿದೆ. ಡಾ.ಸುಧಾಕರ್ ಪರ ನಟಿ ಅನು ಪೂವಮ್ಮ ಪ್ರಚಾರ ಮಾಡಿದ್ದಾರೆ. ನಂದಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭೈರನಾಯಕನಹಳ್ಳಿ, ಮೊಡಕುಹೊಸಳ್ಳಿ, ಚಿಕ್ಕಸಾಗರಹಳ್ಳಿ ಹಾಗೂ ಈರೇನಹಳ್ಳಿ ಗ್ರಾಮದಲ್ಲಿ ನಟಿ ಅನು ಪೂವಮ್ಮ ಪ್ರಚಾರ ನಡೆಸಿದರು.

06 May 2023 15:33 (IST)

Karnataka Election 2023 Live: ರಾಜ್ಯದ ಚುನಾವಣೆ ಬೇರೆ ಅಥಣಿ ಚುನಾವಣೆ ಬೇರೆ; ಅಮಿತ್​ ಶಾ

ರಾಜ್ಯದ ಚುನಾವಣೆ ಬೇರೆ ಅಥಣಿ ಚುನಾವಣೆ ಬೇರೆ, ಡಬಲ್ ಇಂಜಿನ್ ಸರ್ಕಾರದ ಸಲುವಾಗಿ ಬಿಜೆಪಿಗೆ ಮತ ಹಾಕಿ.- ಅಥಣಿಯಲ್ಲಿ ಪಕ್ಷಕ್ಕೆ ದ್ರೋಹ ಮಾಡಿದ ಸವದಿ ಸೋಲಿಸಲು ಮತ ಹಾಕಿ. ಲಕ್ಷ್ಮಣ ಸವದಿಯನ್ನ ಕಳೆದ ಚುನಾವಣೆಯಲ್ಲಿ ಸೋಲಿಸಿದ್ದು ಮಹೇಶ್ ಕುಮಟಳ್ಳಿ, ಆದರೂ ಸಹ ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಮಾಡಿದ್ದೆವು. ಸೋತಾಗ ನಾನೇ ಸವದಿ ಜತೆಗೆ ಮಾತಾಡಿದೆ ಅವರೇ ಎಂಎಲ್‌ಸಿ ಮಾಡಿ ಅಂತಾ ಹೇಳಿದ್ದರು. ನಾವು ಎಂಎಲ್‌ಸಿ ಮಾಡಿದ್ವಿ, ಮಂತ್ರಿ ಮಾಡಿದ್ವಿ. ಎಂಎಲ್‌ಸಿ ಅವಧಿ ಇದ್ದರೂ ಯಾಕೆ ಪಕ್ಷ ಬಿಟ್ಟು ಹೋಗಿದ್ದೀರಿ ಅಂತ ನೀವು ಪ್ರಶ್ನೆ ಮಾಡಬೇಕು ಎಂದು ಅಮಿತ್ ಶಾ ಹೇಳಿದ್ದಾರೆ.

06 May 2023 14:48 (IST)

Karnataka Election 2023 Live: ಡಿಕೆ ಸುರೇಶ್ ಕಣ್ಣೀರು

06 May 2023 14:27 (IST)

Karnataka Election 2023 Live: ಕುಸಿದ KRPPಸಮಾವೇಶದ ಪೆಂಡಾಲ್

ಗಂಗಾವತಿಯಲ್ಲಿ ಆಯೋಜನೆ ಮಾಡಲಾಗಿದ್ದ KRPPಸಮಾವೇಶದ ಪೆಂಡಾಲ್ ಕುಸಿದು ಬಿದ್ದಿದೆ. ಜನಾರ್ದನ ರೆಡ್ಡಿ ಭಾಷಣ ಮಾಡುತ್ತಿದ್ದ ವೇಳೆ ವೇದಿಕೆಯ ಕೊನೆ ಭಾಗದಲ್ಲಿಯ ಪೆಂಡಾಲ್ ಕುಸಿದಿದೆ. ವಾಯುಪುತ್ರ ಒಳ್ಳೆಯ ಗಾಳಿ ತೆಗೆದುಕೊಂಡು ಬಂದು ಆಶೀರ್ವಾದ ಮಾಡಿ ಹೋಗಿದ್ದಾನೆ ಎಂದು ಜನಾರ್ದನ ರೆಡ್ಡಿ ಹೇಳಿದರು.

06 May 2023 14:19 (IST)

Karnataka Election 2023 Live: ಬಿಜೆಪಿ ವಿರುದ್ಧ ಜನಾರ್ದನ ರೆಡ್ಡಿ ಅಸಮಾಧಾನ

12 ವರ್ಷಗಳ ರಾಜಕೀಯ ವನವಾಸದಿಂದ ವಾಪಾಸ್ ಬಂದಿದ್ದೇನೆ. ರಾಜಕೀಯ ಎಂದರೆ ಮೋಸ, ವಂಚನೆ ಮಾಡಿ ತುಳಿದು ಬೆಳೆಯುವುದು. ನಾನು ರಾಜಕೀಯ ಬಿಟ್ಟು ಮನೆಯಲ್ಲಿ ಸುಮ್ಮನೆ ಇದ್ದೆ. ನಾನು ಬೆಳೆಸಿದ ಬಿಜೆಪಿ ನಾಯಕರು ನನಗೆ ಮೋಸ ಮಾಡಿದ್ದಾರೆ. ನಾನು ಬಳ್ಳಾರಿಯಲ್ಲಿ ಇದ್ದರೆ ನನ್ನನ್ನು ಓಡಾಡಿಸಬೇಕಾಗುತ್ತದೆ ಎಂದು ಹೇಳಿ ನನ್ನನ್ನು ಹೊರಗಡೆ ಹಾಕಿದರು ಎಂದು ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಿದರು.

06 May 2023 14:00 (IST)

Karnataka Election 2023 Live: ಖರ್ಗೆ ಒಬ್ಬ ಅಪ್ರಬುದ್ದ ರಾಜಕಾರಣಿ: ಯತ್ನಾಳ್

ಖರ್ಗೆ ಒಬ್ಬ ಅಪ್ರಬುದ್ದ ರಾಜಕಾರಣಿ, ಅವರ ಕುರಿತು ನಾನು ಮಾತನಾಡಲ್ಲ ಎಂದು ಖರ್ಗೆ ಹತ್ಯೆ ಕುರಿತ ಆಡೀಯೊ ವಿಚಾರವಾಗಿ ಬೀದರ್‌ನಲ್ಲಿ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯೆ ನೀಡಿದ್ದಾರೆ. ಆ ಒಂದು ಕ್ಷೇತ್ರದ ಬಗ್ಗೆ ನಾನು‌ ಮಾತನಾಡಲ್ಲ. ಅದರಲ್ಲೂ ಖರ್ಗೆ ಕುರಿತು ನಾನು ಮಾತನಾಡುದಿಲ್ಲ. ಪ್ರಬುದ್ದ ರಾಜಕಾರಣಿ ಕುರಿತು ಮಾತನಾಡಬಹುದು, ಅಪ್ರಬುದ್ದರ ಕುರಿತು ನಾನು ಮಾತನಾಡಲ್ಲ‌ ಎಂದು ಹೇಳಿದರು.

06 May 2023 13:55 (IST)

Karnataka Election 2023 Live: ಎರಡೂವರೆ ಗಂಟೆ ರೋಡ್​ಶೋ

ಇವತ್ತು ರೋಡ್ ಶೋ ನಡೆಸಿದ 13 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಇನ್ನು ಜಯನಗರ, ಚಾಮರಾಜಪೇಟೆ, ವಿಜಯನಗರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. 13 ಕ್ಷೇತ್ರಗಳಲ್ಲಿ ಎರಡೂವರೆ ಗಂಟೆ ರೋಡ್ ಶೋ ನಡೆಸಿದ್ದಾರೆ.

 

06 May 2023 13:35 (IST)

Karnataka Election 2023 Live: ಆಸೆ ಇದೆ, ದುರಾಸೆ ಇಲ್ಲ ಎಂದ ಆರಗ

ಕೋಣಂದೂರಿನಲ್ಲಿ ಅತೀ ದೊಡ್ಡ ರೋಡ್ ಶೋ ನಡೆಸಿದ್ದೇವೆ. ಬಹಳ ಉತ್ಸಾಹದಲ್ಲಿ ಕಾರ್ಯಕರ್ತರು ಹಾಗೂ ಜನರು ಇದ್ದಾರೆ. ನನ್ನನ್ನು ಗೆಲ್ಲಿಸಬೇಕು ಎಂಬ ಹಂಬಲ ಎಲ್ಲರಿಗಿದೆ. ಆಸೆ ಇದೆ, ದುರಾಸೆ ಇಲ್ಲ. ಎಲ್ಲರಿಗೂ ಇರೋ ಹಾಗೇ ನನಗೂ ಇದೆ. ಪಕ್ಷದ ತೀರ್ಮಾನಕ್ಕ ಬದ್ಧ ಆಗಿರುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಹೇಳಿದ್ದಾರೆ.

06 May 2023 13:13 (IST)

Karnataka Election 2023 Live: 15ಕೋಟಿಗೂ ಅಧಿಕ ಹಣ ವಶಕ್ಕೆ

06 May 2023 12:41 (IST)

Karnataka Election 2023 Live: PFI ಬ್ಯಾನ್ ಮಾಡಿದ್ದು ನಾವು: ಸಿಎಂ ಯೋಗಿ

PFIಯನ್ನು ನಾವು ಬ್ಯಾನ್ ಮಾಡಿದ್ದೇವೆ. ಹನುಮಾನ್ ಪೂಜಿಸುವ ಬಜರಂಗದಳ ಬ್ಯಾನ್ ಮಾಡುವ ಮಾತು ಕಾಂಗ್ರೆಸ್ ಆಡುತ್ತಿದೆ. ಆದರೆ ಈ ಮಾತುಗಳನ್ನು ಇಂದು ಸಮಾಜ ಸ್ವೀಕಾರ ಮಾಡುವುದಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

06 May 2023 12:08 (IST)

Karnataka Election 2023 Live: ಯಾದಗಿರಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತಬೇಟೆ

ಯಾದಗಿರಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ವೆಂಕಟರೆಡ್ಡಿ ಮುದ್ನಾಳ ಪರವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಮೂಲಕ ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.

06 May 2023 11:51 (IST)

Karnataka Election 2023 Live: ದೊಡ್ಡಬಳ್ಳಾಪುರದಲ್ಲಿ ನಟ ಸುದೀಪ್ ರೋಡ್ ಶೋ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೀರಜ್ ಮುನಿರಾಜು ಪರ ನಟ ಸುದೀಪ್ ಪ್ರಚಾರ ನಡೆಸುತ್ತಿದ್ದಾರೆ. ನಟ ಸುದೀಪ್ ರೋಡ್ ಶೋಗೆ ಸಚಿವ ಸುಧಾಕರ್, ಛಲವಾದಿ ನಾರಾಯಣಸ್ವಾಮಿ ಸಾಥ್ ನೀಡಿದ್ದಾರೆ.

 

06 May 2023 11:29 (IST)

Karnataka Election 2023 Live: ಎಂಬಿ ಪಾಟೀಲ್ ಪರ ರಮ್ಯಾ ಪ್ರಚಾರ

ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂಬಿ ಪಾಟೀಲ್ ಪರ ನಟಿ ರಮ್ಯಾ ಪ್ರಚಾರ ನಡೆಸುತ್ತಿದ್ದಾರೆ. ನಟಿ ರಮ್ಯಾ ಅವರಿಗೆ ಹೂ ಮಳೆಗೆರೆದು ಕಾರ್ಯಕರ್ತರು ಸ್ವಾಗತ ಕೋರಿದರು.

06 May 2023 11:08 (IST)

Karnataka Election 2023 Live: ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರಣಕಹಳೆ

ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಆರಂಭವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಸಂಖ್ಯೆಯಲ್ಲಿರುವ ಅಭಿಮಾನಿಗಳು ಪುಷ್ಪ ಮಳೆ ಸುರಿಸುತ್ತಾ ಸ್ವಾಗತ ಕೋರುತ್ತಿದ್ದಾರೆ.

06 May 2023 10:30 (IST)

karnataka Election 2023 Live: ಖರ್ಗೆ ಹತ್ಯೆಗೆ ಸಂಚು

ಕಾಂಗ್ರೆಸ್  ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಹತ್ಯೆಯ ಸಂಚಿಗೆ ಸಂಬಂಧಿಸಿದ ಎನ್ನಲಾದ ಆಡಿಯೋ ಲೀಕ್ ಆಗಿದೆ. ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್, ಕಾರ್ಯಕರ್ತ ರವಿ ಎಂಬಾತನ ಜೊತೆ ಮಾತನಾಡಿರುವ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.