ಬೆಂಗಳೂರು: 2023ರ ಕರ್ನಾಟಕ ಚುನಾವಣೆ (Karnataka Assembly Election) ಮುಗಿದಿದೆ. ರಾಜ್ಯದ 2600ಕ್ಕೂ ಹೆಚ್ಚು ಆಭ್ಯರ್ಥಿಗಳ (Candidates) ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಬುಧವಾರ ಸಂಜೆ 5 ಗಂಟೆ ವೇಳೆಗೆ ರಾಜ್ಯದಲ್ಲಿ ಶೇ.65 ರಷ್ಟು ಮತದಾನವಾಗಿದೆ. ಈ ಬಾರಿ ಸಾರ್ವಕಾಲಿಕ ದಾಖಲೆಯಾದ 2018ರ (ಶೇ.70) ಮತದಾನವನ್ನು ಈ ಬಾರಿ ಹಿಂದಿಕ್ಕಬಹುದು ಎಂದು ನಿರೀಕ್ಷಿಸಲಾಗಿದೆ. ದಕ್ಷಿಣ ಭಾರತದಲ್ಲಿ ಪ್ರಮುಖ ರಾಜ್ಯವಾಗಿರುವ ಕರ್ನಾಟಕದಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಭರ್ಜರಿ ಪ್ರಚಾರ ಕಾರ್ಯ ಮಾಡಿವೆ. ಅದರಲ್ಲೂ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಅವಿರತವಾಗಿ ಶ್ರಮಿಸಿದ್ದು, ಸ್ವತಃ ಪಿಎಂ ನರೇಂದ್ರ ಮೋದಿ ರಾಜ್ಯದಲ್ಲಿ ಉಳಿದು ಹಲವು ರೋಡ್ ಶೋ ಮಾಡಿ ಮತದಾರರನ್ನು ಸೆಳೆಯಲು ಪ್ರಯತ್ನ ಮಾಡಿದ್ದಾರೆ. ಇದೀಗ ಚುನಾವಣೋತ್ತರ ಸಮೀಕ್ಷೆಗಳು ಬಿಡುಗಡೆಯಾಗಿದ್ದು, ಬಹುಪಾಲು ಸಮೀಕ್ಷೆ ಕಾಂಗ್ರೆಸ್ಗೆ ಬೆಂಬಲ ಸೂಚಿಸಿದೆ. ಎಲ್ಲಾ ಸಮೀಕ್ಷೆಗಳ ವಿವರ ಇಲ್ಲಿವೆ.
ಹಲವು ಚಾನಲ್ಗಳು ಸಹಯೋಗದಲ್ಲಿ ಹಲವು ಏಜೆನ್ಸಿಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆ ಬಿಡುಗಡೆಯಾಗಿದ್ದು, ಟಿವಿ9 PolStrat ಸಮೀಕ್ಷೆಯ ಪ್ರಕಾರ ಆಡಳಿತಾರೂಡ ಬಿಜೆಪಿ ಪಕ್ಷಕ್ಕಿಂತ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನಗಳಿಸಲಿದೆ ಎಂದು ಭವಿಷ್ಯ ನುಡಿದಿದೆ.
ಟಿವಿ9 ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ ಕಾಂಗ್ರೆಸ್ಗೆ 99 ರಿಂದ 109, ಆಡಳಿತ ಪಕ್ಷ ಬಿಜೆಪಿಗೆ 88 ರಿಂದ 98 ಹಾಗೂ ಜೆಡಿಎಸ್ಗೆ 21 ರಿಂದ 26 ಸ್ಥಾನ ಹಾಗೂ ಇತರೆ 4 ಸ್ಥಾನಗಳು ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಒಂದು ವೇಳೆ PolStrat ಸಮೀಕ್ಷೆ ನಿಜವಾದರೆ ಕಾಂಗ್ರೆಸ್ ಪಕ್ಷ 5 ವರ್ಷಗಳ ನಂತರ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಯಿದೆ. ಸಮೀಕ್ಷೆಯಲ್ಲಿ 99ರಿಂದ 109 ಸ್ಥಾನ ಪಡೆದುಕೊಳ್ಳಲಿದೆ ಎಂದು ತಿಳಿಸಲಾಗಿದ್ದು, ಪಕ್ಷೇತರರ ಜೊತೆಗೂಡಿದರೆ ಕಾಂಗ್ರೆಸ್ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಿದೆ.
ಇತರ ಏಜೆನ್ಸಿಗಳ ಸಮೀಕ್ಷೆಯ ವಿವರ ಇಲ್ಲಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ