ಬೆಂಗಳೂರು(ಮೇ.10): ಕರ್ನಾಟಕ ವಿಧಾನಸಭಾ ಚುನಾವಣೆ 2023 ಚುನಾವಣೆ ಮುಕ್ತಾಯಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಸದ್ಯ ಎಲ್ಲರೂ ಎಕ್ಸಿಟ್ ಪೋಲ್ಗಾಗಿ ಕಾಯುತ್ತಿದ್ದಾರೆ. ಹಲವಾರು ಏಜೆನ್ಸಿಗಳು ತಮ್ಮ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಬಿಡುಗಡೆ ಮಾಡಿವೆ.
ಕರ್ನಾಟಕದ 224 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಈಗಾಗಲೇ ಬಂದಿರುವ ಚುನಾವಣಾ ಪೂರ್ವ ಸಮೀಕ್ಷೆಗಳ ಅನ್ವಯ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾ ನೇರಾ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಿದ್ದರೂ ಜೆಡಿಎಸ್ ಕಿಂಗ್ ಮೇಕರ್ ಆಗುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಹಾಗಾದ್ರೆ ಎಕ್ಸಿಟ್ ಪೋಲ್ಗಳಲ್ಲಿ ಬಂದ ಫಲಿತಾಂಶವೇನು? ಇಲ್ಲಿದೆ ವಿವರ.
ಮತಗಟ್ಟೆ ಸಮೀಕ್ಷೆ:
* TV9 PolStrat: ಟಿವಿ9 ಮತಗಟ್ಟೆ ಸಮೀಕ್ಷೆ ಅನ್ವಯ ಅತಂತ್ರ ಫಲಿತಾಂಶ
ಬಿಜೆಪಿ | 99-109 |
ಕಾಂಗ್ರೆಸ್ | 88-98 |
ಜೆಡಿಎಸ್ | 21-26 |
ಇತರರು | 0-4 |
*
Republic P-MARQ: ಕಾಂಗ್ರೆಸ್ಗೆ ಬಹುಮತ ಸಿಗುವ ಸಾಧ್ಯತೆ
ಕಾಂಗ್ರೆಸ್ | 85-100 |
ಬಿಜೆಪಿ | 94-108 |
ಜೆಡಿಎಸ್ | 24-32 |
ಇತರರು | 2-6 |
*
Jan Ki Baat: ಬಿಜೆಪಿಗೆ ಬಹುಮತ ಸಿಗುವ ಸಾಧ್ಯತೆ
ಬಿಜೆಪಿ | 94-117 |
ಕಾಂಗ್ರೆಸ್ | 91-106 |
ಜೆಡಿಎಸ್ | 14-24 |
ಇತರರು | 0-2 |
* News Nation-CGS: ಬಿಜೆಪಿಗೆ ಬಹುಮತ ಗಳಿಸುವ ಭವಿಷ್ಯ ನುಡಿದ ಸಮೀಕ್ಷೆ
ಬಿಜೆಪಿ | 114 |
ಕಾಂಗ್ರೆಸ್ | 86 |
ಜೆಡಿಎಸ್ | 21 |
ಇತರರು | 3 |
* Zee News-Matrize Opinion Poll: ಕಾಂಗ್ರೆಸ್ ಬಹುಮತ ಸಾಧಿಸುವ ಸಾಧ್ಯತೆ.
ಬಿಜೆಪಿ | 79-94 |
ಕಾಂಗ್ರೆಸ್ | 103-118 |
ಜೆಡಿಎಸ್ | 25-33 |
ಇತರರು | 2-5 |
* ETG-Times Now: ಕಾಂಗ್ರೆಸ್ ಬಹುಮತ ಸಾಧಿಸುವ ಸಾಧ್ಯತೆ.
ಬಿಜೆಪಿ | 78-92 |
ಕಾಂಗ್ರೆಸ್ | 106-120 |
ಜೆಡಿಎಸ್ | 20-26 |
ಇತರರು | 2-4 |