ಬೆಂಗಳೂರು: ಇಂದು ಬೆಳಗ್ಗೆ ಏಳು ಗಂಟೆಯಿಂದ ರಾಜ್ಯಾದ್ಯಂತ ಮತದಾನ ಪ್ರಕ್ರಿಯೆ (Voting) ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಟ್ವೀಟ್ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಮೃದ್ಧಗೊಳಿಸಿ ಎಂದು ಕರೆ ನೀಡಿದ್ದಾರೆ. ಕರ್ನಾಟಕದ (Karnataka Election) ಜನರನ್ನು ಅದರಲ್ಲೂ ಯುವ ಮತ್ತು ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಹಾಕುವಂತೆ ಹಾಗೂ ಪ್ರಜಾಪ್ರಭುತ್ವದ ಹಬ್ಬವನ್ನು ಸಮೃದ್ಧಗೊಳಿಸುವಂತೆ ಒತ್ತಾಯಿಸುವೆ ಎಂದು ಟ್ವೀಟ್ ಮಾಡಿದ್ದಾರೆ.
ಇವಿಎಂ ದೋಷ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಡಕನಹಳ್ಳಿ ಗ್ರಾಮದಲ್ಲಿ ಮತಗಟ್ಟೆಯ ಇವಿಎಂನಲ್ಲಿ ದೋಷ ಕಂಡು ಬಂದಿದ್ದು, ಮತಗಟ್ಟೆ ಸಂಖ್ಯೆ 1 ರಲ್ಲಿ ಇವಿಎಂ ತಾಂತ್ರಿಕ ದೋಷ ಎದುರಾಗಿದೆ. ಸೀರಿಯಲ್ ನಂಬರ್ ಎರಡಕ್ಕೆ ಒತ್ತಿದ್ದರೇ ಮೂರಕ್ಕೆ ಹೋಗುತ್ತಿದ್ದು, ಬ್ಯಾಲದ ರಂಗಪ್ಪ ಎಂಬ ಮತದಾರರ ಮತ ದೋಷ ಕಂಡು ಬಂದಿದೆ.
80ರ ಹರೆಯದಲ್ಲೂ ಮತದಾನ
80ರ ಹರೆಯದಲ್ಲೂ ಬಂದು ಉತ್ಸಾಹದಿಂದ ವೃದ್ಧರೊಬ್ಬರು ಮತದಾನ ಮಾಡಿದ್ದು, ವಾಕಿಂಗ್ ಸ್ಟಿಕ್ ಹಿಡಿದುಕೊಂಡು ಬಂದು ಲಕ್ಷ್ಮೀನಾರಾಯಣ್ ಎಂಬ ಹಿರಿಯ ನಾಗರಿಕರು ಮತದಾನ ಮಾಡಿದ್ದಾರೆ.
ದೇಶದ ಪ್ರಗತಿಗೆ ನಾವು ಮತದಾನ ಮಾಡಬೇಕು, ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡಲು ಮತದಾನ ಮಾಡಬೇಕು. ಹೆಚ್ಚು ಹೆಚ್ಚು ಯುವಕರು ಮತದಾನದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.
ರಜೆ ಇದೆ ಅಂತ ಮತದಾನ ಮಾಡದೇ ಪ್ರವಾಸಿ ತಾಣಕ್ಕೆ ಹೋಗುವುದು ಅಪರಾಧ. ಕಡ್ಡಾಯವಾಗಿ ಮತದಾನ ಮಾಡಿ ಅಂತ ಯುವಕರಿಗೆ ಸಂದೇಶ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ