ಯಾರ ಪಾಲಾಗುತ್ತೆ ಕರ್ನಾಟಕ?: ಒಂದಾದ ಕಾಂಗ್ರೆಸ್​- ಜೆಡಿಎಸ್​, 8 ಸ್ಥಾನಗಳ ಅಂತರದಲ್ಲಿ ಬಿಜೆಪಿ: ಎಲ್ಲರ ಚಿತ್ತ ರಾಜ್ಯಪಾಲರತ್ತ


Updated:May 16, 2018, 8:59 AM IST
ಯಾರ ಪಾಲಾಗುತ್ತೆ ಕರ್ನಾಟಕ?: ಒಂದಾದ ಕಾಂಗ್ರೆಸ್​- ಜೆಡಿಎಸ್​, 8 ಸ್ಥಾನಗಳ ಅಂತರದಲ್ಲಿ ಬಿಜೆಪಿ: ಎಲ್ಲರ ಚಿತ್ತ ರಾಜ್ಯಪಾಲರತ್ತ

Updated: May 16, 2018, 8:59 AM IST
ನ್ಯೂಸ್ 18 ಕನ್ನಡ

ಬೆಂಗಳೂರು(ಮೇ.16): ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮೂಲಕ ಸರ್ಕಾರ ರಚಿಸುವುದಾಗಿ ಹೇಳಿಕೊಂಡಿದೆ. ಈ ಬೆಳವಣಿಗೆಗಳ ಬಳಿಕ ಕರ್ನಾಟಕದಲ್ಲಿ ರಚನೆಯಾಗುವ ಸರ್ಕಾರದ ಕುರಿತಾಗಿ ಅನುಮಾನಗಳು ಮತ್ತಷ್ಟು ಹೆಚ್ಚಾಗಿವೆ. ಈ ಎಲ್ಲಾ ಗೊಂದಲಗಳ ನಡುವೆಯೇ ಬಿಜೆಪಿಯು ಬುಧವಾರದಂದು ಬೆಳಗ್ಗೆ 10.30.ಕ್ಕೆ ಪ್ರಾದೇಶಿಕ ಕಚೇರಿಯಲ್ಲಿ ತಮ್ಮ ಶಾಸಕರ ಸಭೆಯನ್ನು ಆಯೋಜಿಸಿದೆ.

ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರ ದೃಷ್ಟಿ ರಾಜ್ಯಪಾಲ ವಜುಬಾಯಿ ವಾಲಾರ ಮೇಲೆ ಕೇಂದ್ರೀಕರಿಸಿದೆ. ಅವರು ಈ ಬಾರಿಯ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಸರ್ಕಾರ ರಚಿಸುವ ಅವಕಾಶ ನೀಡುತ್ತಾರೋ, ಅಥವಾ ಕಾಂಗ್ರೆಸ್​- ಜೆಡಿಎಸ್​ ಮೈತ್ರಿಗೆ ನೀಡುತ್ತಾರೋ ಎಂಬುವುದೇ ಕುತೂಹಲ ಮೂಡಿಸಿದೆ. ಯಾಕೆಂದರೆ ಮೈತ್ರಿ ಮೂಲಕ ಇವರು ಒಟ್ಟು 115 ಸ್ಥಾನಗಳನ್ನು ಗಳಿಸಿದಂತಾಗುತ್ತದೆ.

ಈ ವಿಚಾರವಾಗಿ ಮಾತನಾಡಿದ ಜೆಡಿಎಸ್​ ನಾಯಕ ಕುಮಾರಸ್ವಾಮಿ "ರಾಜ್ಯಪಾಲರು ಈ ಕುರಿತಾಗಿ ಚುನಾವಣಾ ಆಯೋಗದೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ' ಎಂದು ಹೇಳಿದ್ದಾರೆ. ರಾಜ್ಯದ ಒಟ್ಟು 224 ವಿಧಾಸಭಾ ಕ್ಷೇತ್ರಗಳಲ್ಲಿ 222 ಕ್ಷೇತ್ರಗಳಿಗೆ ಮೇ 12 ರಂದು ಮತದಾನ ನಡೆದಿತ್ತು. ನಿನ್ನೆಯಷ್ಟೇ ಚುನಾವಣಾ ಆಯೋಗವು ಮತ ಎಣಿಕೆ ಕಾರ್ಯ ನಡೆಸಿ ಈ 22 ಕ್ಷೇತ್ರಗಳ ಫಲಿತಾಂಶವನ್ನು ಘೋಷಿಸಿದೆ.

ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆಷ್ಟು ಗೆಲುವು?

ಬಿಜೆಪಿಯು 104 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, 78 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. ಇತ್ತ ಜೆಡಿಎಸ್​ 37 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಮೈತ್ರಿ ಮಾಡಿಕೊಂಡಿದ್ದ ಬಿಎಸ್​ಪಿ ಒಂದು ಕ್ಷೇತ್ರವನ್ನು ಗೆದ್ದುಕೊಂಡಿದೆ. ಕೆಪಿಜೆಪಿ ಕೂಡಾ ಒಂದು ಕ್ಷೇತ್ರದಲ್ಲಿ ಗೆಲುವಾಗಿದೆ.

ರಾಜ್ಯಪಾಲರನ್ನು ಭೇಟಿಯಾಗಲು ದೌಡಾಯಿಸಿದ ಪಕ್ಷಗಳು
Loading...

ಫಲಿತಾಂಶ ಫೈನಲ್​ ಆಗುತ್ತಿದ್ದಂತೆಯೇ ಎರಡೂ ಪಕ್ಷಗಳು ಸಮಯ ಹಾಳು ಮಾಡದೆ ರಾಜ್ಯಪಾಲ ವಜುಬಾಯಿ ವಾಲಾರನ್ನು ಭೇಟಿಯಾಗಿ ಸರ್ಕಾರ ರಚಿವ ವಿಶ್ವಾಸ ಮಂಡಿಸಿದ್ದಾರೆ. ಈ ಸಂದರ್ಭದಲ್ಲಿ ರಾಜಭವನದ ಹೊರಗೆ ಎರಡೂ ಪಕ್ಷದ ಬೆಂಬಲಿಗರು ಅತಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪನವರು ರಾಜ್ಯಪಾಲ ವಜುಬಾಯಿ ವಾಲಾರನ್ನು ಭೇಟಿಯಾಗಿ ಸರ್ಕಾರ ರಚಿಸುವ ವಿಶ್ವಾಸ ಮಂಡಿಸಿದ್ದಾರೆ. ಅಲ್ಲದೇ ಕಾಂಗ್ರೆಸ್​- ಜೆಡಿಎಸ್​ ಮೈತ್ರಿಯನ್ನು ಹಿಂದಿನ ಬಾಗಿಲಿನ ಮೂಲಕ ಒಳ ಬಂದು ಸರ್ಕಾರ ರಚಿಸುವ ಪ್ರಯತ್ನವೆಂದು ಹೇಳಿಕೊಂಡಿದ್ದಾರೆ.

 
First published:May 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ