ಬಳ್ಳಾರಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election) ವಿಜಯನಗರ ವಿಧಾನಸಭಾ ಕ್ಷೇತ್ರದಿಂದ (Vijayanagara Assembly Constituency) ಸ್ಪರ್ಧೆ ಮಾಡಲು ನಾಮಪತ್ರ ಸಲ್ಲಿಕೆ ಮಾಡಿರುವ ಆಮ್ ಆದ್ಮಿ ಪಕ್ಷದ (ಎಎಪಿ) 39 ವರ್ಷದ ಅಭ್ಯರ್ಥಿ ಸಲ್ಲಿಸಿದ ಅಫಿಡವಿಟ್ (Affidavit) ಸಖತ್ ವೈರಲ್ ಆಗುತ್ತಿದೆ. ಅಭ್ಯರ್ಥಿ ದಾಸರ ಶಂಕರ್ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ತಮಗೆ ಇಬ್ಬರು ಹೆಂಡತಿಯರು (Wife) ಮತ್ತು ಐದು ಮಕ್ಕಳಿದ್ದಾರೆ (Children) ಎಂದು ಘೋಷಣೆ ಮಾಡಿದ್ದಾರೆ. ಇವರು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದಾಗಲೂ ಇದೇ ರೀತಿ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿದ್ದರು ಎನ್ನಲಾಗಿದೆ.
ಚುನಾವಣಾ ಆಯೋಗಕ್ಕೆ ನೈಜ ಮಾಹಿತಿ ನೀಡಿದ್ದೇನೆ
ನಾನು ಇಬ್ಬರನ್ನು ಮದುವೆಯಾಗಿದ್ದೇನೆ. ನನ್ನ ಇಬ್ಬರು ಪತ್ನಿಯರು ಅವಳಿ-ಜವಳಿ ಸಹೋದರಿಯರು. ಅವರ ಹೆಸರು ಲಾವಣ್ಯ, ಪುಷ್ಪವತಿ. ದಂಪತಿಗಳಿಗೆ ಐವರು ಮಕ್ಕಳಿದ್ದಾರೆ. ನಾವು ಎಲ್ಲರೂ ಒಟ್ಟಿಗೆ ಜೀವನ ಮಾಡ್ತಿದ್ದೇವೆ. ನನ್ನ ನಾಮಪತ್ರವನ್ನು ಚುನಾವಣಾ ಆಯೋಗ ಅಂಗೀಕರಿಸುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಚುನಾವಣಾ ಆಯೋಗಕ್ಕೆ ನೈಜ ಮಾಹಿತಿ ನೀಡಿದ್ದೇನೆ ಎಂದು ಬಳ್ಳಾರಿಯ ಕುರುಗೋಡು ತಾಲೂಕಿನಲ್ಲಿ ತಿಳಿಸಿದ್ದಾರೆ.
ಚುನಾವಣೆ ಬಂದ ಸಂದರ್ಭದಲ್ಲಿ ಸಹಜವಾಗಿಯೇ ನಿಯಮಗಳ ಅನ್ವಯ ಅಭ್ಯರ್ಥಿಗಳು ಆಸ್ತಿಗಳ ವಿವರ ಹಾಗೂ ಕುಟುಂಬದಸ್ಥರ ಆಸ್ತಿಯ ವಿವರ ಬಹಿರಂಗ ಪಡಿಸುತ್ತಾರೆ. ಈ ವೇಳೆ ಹಿಂದಿನ ಚುನಾವಣೆಯಲ್ಲಿ ಅವರ ಆಸ್ತಿ ಎಷ್ಟು ಇತ್ತು, ಈಗ ಎಷ್ಟು ಹೆಚ್ಚಳವಾಗಿದೆ ಎಂದು ತಿಳಿದುಕೊಳ್ಳುವ ಬಗ್ಗೆ ಜನರು ಆಸಕ್ತಿ ಹೊಂದಿರುತ್ತಾರೆ. ಇದೇ ರೀತಿ ಶಂಕರ್ ಅವರು ಇಬ್ಬರು ಹೆಂಡತಿಯ ಇರುವ ವಿಚಾರವನ್ನು ಘೋಷಣೆ ಮಾಡಿರುವುದು ಹಲವರಿಗೆ ಕುತೂಹಲ ಮೂಡಿಸಿದೆ.
ಅವಳಿ-ಜವಳಿ ಸಹೋದರಿಯನ್ನೇ ಮದುವೆಯಾಗಿರುವ ಅಭ್ಯರ್ಥಿ
ಇನ್ನು, ದಾಸರ ಶಂಕರ್ ತಾವು ಎರಡು ಮದುವೆಯಾಗಿರುವ ಬಗ್ಗೆ ಮರೆಮಾಚದೆ ನಿಯಮಗಳ ಅನ್ವಯ ಮಾಹಿತಿ ನೀಡಿದ್ದಾರೆ ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆಫಿಡವಿಟ್ ಅನ್ನು ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.
ಈ ವಿಚಾರವನ್ನು ಹಿಂದೂ ವಿವಾಹ ಕಾಯ್ದೆ ಅಡಿ ಪರಿಶೀಲನೆ ನಡೆಸಲಾಗುತ್ತದೆ. ಅವಳಿ-ಜವಳಿ ಸಹೋದರಿಯನ್ನೇ ಮದುವೆಯಾಗುವುದರ ಹಿಂದೆ ಯಾವುದಾದರೂ ಕಾರಣ ಇದೆಯಾ ಎಂದು ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳೀಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ