• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka-Yogi Adityanath: ಮಂಡ್ಯ, ವಿಜಯಪುರದಲ್ಲಿ ಯುಪಿ ಸಿಎಂ ಯೋಗಿ ಅಬ್ಬರ! ಕರ್ನಾಟಕದಲ್ಲಿ ವರ್ಕ್​​ ಆಗುತ್ತಾ ‘ಬುಲ್ಡೋಜರ್​ ಬಾಬ’ ಪ್ರಚಾರ?

Karnataka-Yogi Adityanath: ಮಂಡ್ಯ, ವಿಜಯಪುರದಲ್ಲಿ ಯುಪಿ ಸಿಎಂ ಯೋಗಿ ಅಬ್ಬರ! ಕರ್ನಾಟಕದಲ್ಲಿ ವರ್ಕ್​​ ಆಗುತ್ತಾ ‘ಬುಲ್ಡೋಜರ್​ ಬಾಬ’ ಪ್ರಚಾರ?

ಸಿಎಂ ಯೋಗಿ ಆದಿತ್ಯನಾಥ್ ಭರ್ಜರಿ ಪ್ರಚಾರ

ಸಿಎಂ ಯೋಗಿ ಆದಿತ್ಯನಾಥ್ ಭರ್ಜರಿ ಪ್ರಚಾರ

ಕಾಂಗ್ರೆಸ್ ನಾಯಕರು, ಜಾತಿ ಧರ್ಮದ‌ ಆಧಾರದ‌‌ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ನಾವು ಮೋದಿ ಅವರ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಆಡಳಿತ ಮಾಡುತ್ತಿದ್ದೇವೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

  • News18 Kannada
  • 5-MIN READ
  • Last Updated :
  • Mandya, India
  • Share this:

ಬೆಂಗಳೂರು: ಒಕ್ಕಲಿಗರ (Vokkaliga ) ಕೋಟೆ ಮಂಡ್ಯದಲ್ಲಿ (Mandya) ಬಿಜೆಪಿಗೆ ದಶಕಗಳ ಕಾಲ ಬರ ಆವರಿಸಿತ್ತು, ಈ ಬರ ನೀಗಿಕೊಳ್ಳಲು ಅಂತಾನೆ ಬಿಜೆಪಿ (BJP) ಹೊಲ ಹದ ಮಾಡುತ್ತಿದೆ. ಪ್ರಧಾನಿ ಮೋದಿ (PM Modi), ಅಮಿತ್ ಶಾ (Amit Shah) ಬಂದು ಹೋಗಿದ್ದು ಇದೇ ಕಾರಣಕ್ಕೆ. ಅದರ ಮುಂದುವರಿದ ತಂತ್ರವೇ ಇವತ್ತಿನ ಬುಲ್ಡೋಜರ್​ ಬಾಬಾ ಸಿಎಂ ಯೋಗಿ ಆದಿತ್ಯನಾಥ್ (Yogi Adityanath)​ ಭರ್ಜರಿ ಪ್ರಚಾರ. ಹೌದು, ಇಂದು ಬೆಳಗ್ಗೆ 11 ಗಂಟೆಗೆ ಬರಬೇಕಿದ್ದ ಉತ್ತರ ಪ್ರದೇಶ (Uttar Pradesh) ಸಿಎಂ ಯೋಗಿ ಬಂದಿದ್ದು, ಸುಮಾರು 12 ಗಂಟೆ. ಆದರೂ ಜನರ ಉತ್ಸಾಹ ಕಮ್ಮಿ ಆಗಿರಲಿಲ್ಲ. ಬಿಸಿಲಿನ ಮಧ್ಯೆನೂ ಯೋಗಿಯನ್ನು ಜನ ಕಣ್ತುಂಬಿಕೊಂಡು, ಹೂಮಳೆ ಸುರಿಸಿದರು. ಜನರಿಗೆ ಕೈಮುಗಿದು ಯೋಗಿ ಮತಬೇಟೆ ಮಾಡಿದರು. ರೋಡ್​ಶೋ ಬಳಿಕ ಮಂಡ್ಯದಲ್ಲಿ ಯೋಗಿ ಅಬ್ಬರದ ಭಾಷಣ ಮಾಡಿದರು.


ಮುಂಬರುವ ಜನವರಿ ವೇಳೆಗೆ ಶ್ರೀರಾಮ ಮಂದಿರ ಸಿದ್ಧ


ಮಂಡ್ಯದಲ್ಲಿ ನಡೆದಿದ್ದ ಕುಂಭಮೇಳದ ಸಮಯದಲ್ಲಿ ನಾನು ಭಾಗಿ ಆಗಬೇಕಿತ್ತು. ಆದರೆ ತೀವ್ರ ಅತಿವೃಷ್ಠಿಯಿಂದ ಬರಲು ಸಾಧ್ಯವಾಗಲಿಲ್ಲ. ಪ್ರಪಂಚದ ಯಾವುದೇ ಮೂಲೆಗೆ ಹೋದರು ಭಾರತೀಯರನ್ನು ಗೌರವದಿಂದ ಕಾಣುತ್ತಾರೆ. ವಿಶ್ವದ ಅತಿ ಶಕ್ತಿಯುತ ದೇಶಗಳ ಪೈಕಿ ಭಾರತ 5 ನೇ ಸ್ಥಾನದಲ್ಲಿದೆ.




ಇದನ್ನೂ ಓದಿ: Karnataka Elections 2023: ಡಿಕೆ ಶಿವಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟ ಶೋಭಾ ಕರಂದ್ಲಾಜೆ


ಮುಂಬರುವ ಜನವರಿಯಲ್ಲಿ ಶ್ರೀರಾಮ ಮಂದಿರ ಸಿದ್ದವಾಗಲಿದೆ. ಅಯೋಧ್ಯೆಯಲ್ಲಿ ಕರ್ನಾಟಕದವರಿಗಾಗಿ ಗೆಸ್ಟ್ ಹೌಸ್ ನಿರ್ಮಾಣ ಮಾಡಲಿದ್ದೇವೆ. ನಿಮಗೆಲ್ಲರಿಗೂ ಅಯೋಧ್ಯೆಗೆ ಆಮಂತ್ರಣ ಮಾಡಲಿಕ್ಕೆ ಹಾಗೂ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನ ಗೆಲ್ಲಿಸೋಕೆ ಬಂದಿದ್ದೇನೆ ಎಂದು ಯೋಗಿ ಹೇಳಿದರು.


ಕಿತ್ತೂರು ಕರ್ನಾಟಕದಲ್ಲೂ ಅಬ್ಬರಿಸಿದ ಯೋಗಿ


ಮಂಡ್ಯದಲ್ಲಿ ಅಬ್ಬರಿಸಿದ ಬುಲ್ಡೋಜರ್​ ಬಾಬಾ ಸೀದಾ ಬಂದಿದ್ದು ಬಸವನಬಾಗೇವಾಡಿ ಮತ್ತು ಇಂಡಿಗೆ. ವಿಜಯಪುರ ಹೇಳಿ-ಕೇಳಿ ಜಾತಿ-ಧರ್ಮ ಅನ್ನೋ ಡಬಲ್ ಫ್ಯಾಕ್ಟರ್ ಇಟ್ಕೊಂಡು ಕದನಕ್ಕೆ ಮುಖ ಮಾಡಿರುವ ಜಿಲ್ಲೆ. ಬಸವಣ್ಣನವರ ಅಸ್ಮಿತೆ ಜೊತೆ ಹಿಂದುತ್ವದ ಅಬ್ಬರ ನಡೆಯುತ್ತಿರುವ ನೆಲದಲ್ಲಿ, ಯೋಗಿ ಬಸವಣ್ಣರ ದೇವಸ್ಥಾನಕ್ಕೆ ಹೋಗಿ, ಆಮೇಲೆ ಮತದೇಗುಲದ ಮುಂದೆ ನಿಂತರು. ನಿಮ್ಮ ಓಟ್ ಸುರಕ್ಷತೆಗಾಗಿ, ಅಭಿವೃದ್ಧಿಗಾಗಿ ಅಂತ ಬಿಜೆಪಿ ಪರ ಮತಯಾಚನೆ ಮಾಡಿದರು.



ಕಾಂಗ್ರೆಸ್ ನಾಯಕರು, ಜಾತಿ ಧರ್ಮದ‌ ಆಧಾರದ‌‌ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ನಾವು ಮೋದಿ ಅವರ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಆಡಳಿತ ಮಾಡುತ್ತಿದ್ದೇವೆ. ಮುಂದಿನ ವರ್ಷ ರಾಮ ಮಂದಿರ ಉದ್ಘಾಟನಾ ಆಗಲಿದೆ. ನೀವೆಲ್ಲಾ ಬರಬೇಕು ಎಂದು ಯೋಗಿ ಹೇಳಿದ್ದಾರೆ.


ಉಳಿದಂತೆ ಕಿತ್ತೂರು ಕರ್ನಾಟಕದಲ್ಲೂ ಅಬ್ಬರಿಸಿದ ಯೋಗಿ ಮತಬೇಟೆ ಮುಗಿಸಿ ಯುಪಿಗೆ ವಾಪಸ್​ ಆಗಿದ್ದಾರೆ. ಮತ್ತೆ 3 ದಿನ ರಾಜ್ಯಕ್ಕೆ ಬರೋದಾಗಿ ಭರವಸೆ ಕೊಟ್ಟಿರುವುದು ಬಿಜೆಪಿಗೆ ಆನೆಬಲ ಬಂದಂತಾಗಿದೆ. ಆದರೆ ಇದು ವರ್ಕ್​​ಔಟ್​ ಆಗುತ್ತಾ ಅನ್ನೋದು ಮೇ 10 ಮತದಾನದ ವೇಲೆ ಗೊತ್ತಾಗುತ್ತೆ.

top videos
    First published: