ಬೆಂಗಳೂರು: ಚುನಾವಣೆ (Election) ಕೆಲಸಕ್ಕೆ 4,100 ಕೆಎಸ್ಆರ್ಟಿಸಿ (KSRTC) ಬಸ್ ಬಳಕೆ ಆಗುತ್ತಿದ್ದು, ಪರಿಣಾಮ ಜನರಿಗೆ ಬಸ್ಗಳ (Bus) ಕೊರತೆ ಎದುರಾಗಿದೆ. ಬೆಂಗಳೂರಿನಿಂದ (Bengaluru) ಊರುಗಳಿಗೆ ಪ್ರಯಾಣಿಸಲು ಬಸ್ ಇಲ್ಲದೇ ಜನ ಒದ್ದಾಟ ನಡೆಸಿದ್ದಾರೆ. ಮೆಜೆಸ್ಟಿಕ್ (Majestic) ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ಸೇರಿದಂತೆ ಬೆಂಗಳೂರು ನಗರದ ಹಲವು ಕಡೆ ಜನರ ಪರದಾಟ ನಡೆಸಿದ್ದಾರೆ. ನಗರದ ಸ್ಯಾಟಲೈಟ್ ಬಸ್ ನಿಲ್ದಾಣ (Satellite Bus Stop ) ಸೇರಿದಂತೆ ಹಲವು ಕಡೆ ಬಸ್ಗಳ ಅವ್ಯವಸ್ಥೆಗೆ ಹಲವರು ಹೈರಾಣರಾಗಿದ್ದರು. ಕೆಲವರಂತೂ ಬೇಕಿದ್ದರೆ ಬಸ್ ಸ್ಟ್ರ್ಯಾಂಡ್ನಲ್ಲೇ ಮಲಗಿ ಬಸ್ ಬಂದಮೇಲೆ ಹೋಗುತ್ತೇವೆ. ಬೆಳಗ್ಗೆ ವೋಟ್ ಹಾಕೇ ಹಾಕುತ್ತೇವೆ ಅಂತ ಅಚಲ ನಿರ್ಧಾರಕ್ಕೆ ಬಂದಿದ್ದರು.
ಚುನಾವಣೆಗೆ ಬಸ್ಗಳನ್ನು ನಿಯೋಜಿಸಿದ್ದರಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಆಗೊಮ್ಮೆ, ಹೀಗೊಮ್ಮೆ ಬರುತ್ತಿದ್ದ ಬಸ್ನಲ್ಲಿ ಸೀಟ್ ಹಿಡಿಯಲು ಜನರು ಮುಗಿಬೀಳುತ್ತಿದ್ದರು. ಚುನಾವಣೆಗೆ ಬಸ್‌ಗಳು ಹೋದರೆ, ಜನಸಾಮಾನ್ಯರು ವೋಟ್ ಮಾಡಲು ಊರಿಗೆ ಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕು ಅಲ್ವಾ ಅಂತಾ ಜನರು ಸಿಟ್ಟಾಗಿದ್ದರು.
ಇನ್ನು, ರಾತ್ರಿಯಾಗುತ್ತಿದ್ದಂತೆ ಮೆಜೆಸ್ಟಿಕ್ ರಸ್ತೆ ಕಂಪ್ಲೀಟ್ ಟ್ರಾಫಿಕ್ ಜಾಮ್ ಆಗಿತ್ತು. ಮತದಾನ ಹಿನ್ನೆಲೆ ಊರಿನತ್ತ ಜನರು ತೆರಳುತ್ತಿದ್ದ ಕಾರಣ ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್, ರಾಜಾಜಿನಗರ, ನವರಂಗ್, ಮಲೇಶ್ವರಂ ರಸ್ತೆಗಳು ಜಾಮ್ ಆಗಿದ್ದವು. ಸಂಜೆಯಾಗುತ್ತಿದ್ದಂತೆ ಹೆಚ್ಚಿನ ಬಸ್ ಸಂಚಾರ ಹಿನ್ನೆಲೆ ರಾತ್ರಿ ವೇಳೆ ಟ್ರಾಫಿಕ್ ಬಿಗಾಡಿಯಿಸಿತ್ತು. ಎಲೆಕ್ಷನ್ ಹಿನ್ನೆಲೆ ರೇಲ್ವೆ, ಬಸ್, ಸಾರಿಗೆ, ಸೇವೆಗಳಿಗೆ ಒಳ್ಳೆಯ ಕಲೆಕ್ಷನ್ ಅಂತ ಜನರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ