ಬೆಂಗಳೂರು: ಸಾರ್ವತ್ರಿಕ ವಿಧಾನಸಭೆ ಚುನಾವಣೆ (Assembly Election) ಹಿನ್ನಲೆ ಬೆಂಗಳೂರಿನಲ್ಲಿ (Bengaluru) ಮೂರು ದಿನಗಳ ಕಾಲ 144 ಸೆಕ್ಷನ್ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ (Pratap Reddy) ಆದೇಶ ಹೊರಡಿಸಿದ್ದಾರೆ. ಕಮಿಷನರೇಟ್ (Commissionerate) ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಶಾಂತಿಯುತ ಮತದಾನದ (Voting) ಸಲುವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೇ 8ರ ಸಂಜೆ 6 ಗಂಟೆಯಿಂದ ಮೇ 11ರ ಸಂಜೆ ಆರು ಗಂಟೆಯವರೆಗೆ ನಿಷೇಧಾಜ್ಞೆ (Prohibition) ಜಾರಿಯಲ್ಲಿರುತ್ತದೆ.
ನಿಷೇದಾಜ್ಞೆ ಜಾರಿ ಮಾಡಿರುವ ಸಮಯದಲ್ಲಿ ಈ ಚಟುವಟಿಕೆಗಳಿಗೆ ನಿಷೇಧ
- ನಿಷೇಧಾಜ್ಞೆ ಸಮಯದಲ್ಲಿ ಐದು ಜನರಿಗೆ ಮೇಲ್ಪಟ್ಟು ಗುಂಪು ಸೇರುವಂತಿಲ್ಲ.
- ಮತದಾನ ಕೇಂದ್ರದಲ್ಲಿ ಮತದಾರರು ಹೊರತುಪಡಿಸಿ ಉಳಿದವರು ಸೇರುವಂತಿಲ್ಲ.
- ಯಾವುದೇ ಸಂಘಟನೆಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಪಂಗಡಗಳು ಮೆರವಣಿಗೆ ನಡೆಸುವಂತಿಲ್ಲ.
ಇದನ್ನೂ ಓದಿ: Bengaluru Traffic: ಮತಗಟ್ಟೆ ಎದುರು ಟ್ರಾಫಿಕ್ ತಪ್ಪಿಸಲು ಹೀಗೆ ಮಾಡಿ
- ಶಸ್ತ್ರ, ಕುಡುಗೋಲು, ಸೇರಿದಂತೆ ಮಾರಾಕಾಸ್ತ್ರಗಳನ್ನ ಒಯ್ಯುವಂತಿಲ್ಲ.
- ಯಾವುದೇ ವಿನಾಶಕಾರಿ ವಸ್ತು ಮತ್ತು ಸ್ಫೋಟಕ ವಸ್ತುಗಳನ್ನ ಒಯ್ಯುವಂತಿಲ್ಲ.
- ಪ್ರಚೋದನಕಾರಿ ಭಾಷಣ ಮಾಡುವುದು ನಿಷೇಧ ವಿಧಿಸಲಾಗಿದೆ.
- ಮನೆ ಮೆನೆಗೆ ತೆರಳಿ ಪ್ರಚಾರ ನಡೆಸಲು 10 ಜನರಿಗೆ ವಿನಾಯಿತಿಗೊಳಿಸಿ ಆದೇಶ ನೀಡಲಾಗಿದೆ.
- ಕಲ್ಲು ಅಥವಾ ಎಸೆಯುವ ವಸ್ತು ಅಥವಾ ವಸ್ತುಗಳನ್ನು ಎಸೆಯುವ ಅಥವಾ ಚಲಿಸುವ ಅಸ್ತ್ರಗಳನ್ನು ಸಂಗ್ರಹಿಸುವುದನ್ನು, ತಯಾರಿಸುವುದನ್ನು ನಿಷೇಧಿಸಿದೆ
- ಯಾವುದೇ ವ್ಯಕ್ತಿ ನಿಷೇಧಿತ ವಸ್ತುಗಳನ್ನು ಹೊಂದಿದ್ದಲ್ಲಿ ಪೊಲೀಸರು ಮುಟ್ಟುಗೋಲು ಹಾಕಿಕೊಳ್ಳಬಹುದು
- ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಕಾನೂನು ಬಾಹಿರವಾಗಿ ಗುಂಪು ಗುಂಪಾಗಿ ನಿಲ್ಲುವುದು, ಓಡಾವುದನ್ನು ನಿಷೇಧಿಸಿದೆ.
- ಬ್ಯಾನರ್ ಅಥವಾ ಫ್ಲೆಕ್ಸ್ಗಳನ್ನು ಅಂಟಿಸುವುದನ್ನು ನಿಷೇಧಿಸಿದೆ
- ಈ ಅವಧಿಯಲ್ಲಿ ಶವಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆ ನಡೆಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದವರಿಗೆ ಹಾಗೂ ಕಾರ್ಯಾಚರಣೆ ಅಧಿಕಾರಿಗಳಿಗೆ ಅನ್ವಹಿಸತಕ್ಕದಲ್ಲ.