• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Elections: ಪೊಲೀಸರ ಭರ್ಜರಿ ಕಾರ್ಯಾಚರಣೆ; ₹24 ಲಕ್ಷ ಹಣ, ಕೆಜಿಗಟ್ಟಲೇ ಚಿನ್ನ, ಲೀಟರ್​ಗಟ್ಟಲೇ ಮದ್ಯ ವಶ

Karnataka Elections: ಪೊಲೀಸರ ಭರ್ಜರಿ ಕಾರ್ಯಾಚರಣೆ; ₹24 ಲಕ್ಷ ಹಣ, ಕೆಜಿಗಟ್ಟಲೇ ಚಿನ್ನ, ಲೀಟರ್​ಗಟ್ಟಲೇ ಮದ್ಯ ವಶ

ಪೊಲೀಸರು ಸೀಜ್​ ಮಾಡಿರುವ ಹಣ ಹಾಗೂ ಚಿನ್ನಾಭರಣ

ಪೊಲೀಸರು ಸೀಜ್​ ಮಾಡಿರುವ ಹಣ ಹಾಗೂ ಚಿನ್ನಾಭರಣ

ಚುನಾವಣೆ ಘೋಷಣೆ ಮುನ್ನವೇ ಗದಗ ಜಿಲ್ಲಾಡಳಿತ ಭರ್ಜರಿ ಚಿನ್ನದ ಬೇಟೆ ಮಾಡಿದ್ದಾರೆ. ಗದಗ ನಗರದ ಹೊರವಲಯದ ಟಾಂಗಾಕೂಟ್ ಚೆಕ್ ಪೋಸ್ಟ್ ನಲ್ಲಿ 4 ಕಿಲೋ ಬಂಗಾರದ ಆಭರಣ ಜಪ್ತಿ ಮಾಡಿದ್ದಾರೆ. ಮುಂಬೈನಿಂದ ಗದಗ ನಗರಕ್ಕೆ ತರುತ್ತಿದ್ದ ಚಿನ್ನಾಭರಣ ಸೀಜ್​ ಮಾಡಿದ್ದು, ಮಾರ್ಚ್ 15 ರಂದು ದಾಖಲೆ ಇಲ್ಲದ ನಾಲ್ಕು ಕೆಜಿ ಸುಮಾರು 1 ಕೋಟಿ 71 ಲಕ್ಷ 65 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಸೀಜ್ ಮಾಡಿದ್ದಾರೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Gadag, India
  • Share this:

ಗದಗ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹತ್ತಿವಾಗುತ್ತಿದ್ದಂತೆ ಪೊಲೀಸರು (Police) ಚೆಕ್​​ ಪೋಸ್ಟ್​​ನಲ್ಲೂ ನಿರ್ಮಿಸಿ ವಾಹನಗಳ ತಪಾಸಣೆ ಶುರು ಮಾಡಿದ್ದು, ಚುನಾವಣಾ ಅಕ್ರಮಗಳಿಗೆ ಬ್ರೇಕ್ ಹಾಕುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇದರ ನಡುವೆ ಇಂದು ರಾಜ್ಯದ ವಿವಿಧ ಚೆಕ್​ ಪೋಸ್ಟ್​​ಗಳಲ್ಲಿ (Police Check Post) ವಾಹನಗಳ ಪರೀಶಲನೆ ವೇಳೆ ಕಂತು ಕಂತು ನೋಟುಗಳು, ಕೆಜಿಗಟ್ಟಲೇ ಚಿನ್ನಾಭರಣ ಹಾಗೂ ಗೋವಾ (Goa) ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಗದಗ ಮುಳಗುಂದ ಚೆಕ್ ಪೋಸ್ಟ್​ನಲ್ಲಿ 24 ಲಕ್ಷ ರೂಪಾಯಿ ಸೀಜ್ ಮಾಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದಾವಣಗೆರೆಯಿಂದ ಗದಗ ಕಡೆಗೆ ಹಣ ತೆಗೆದುಕೊಂಡು ಹೊರಟಿದ್ದ ಪ್ರಯಾಣಿಕರ ಕಾರಲ್ಲಿ 20 ಲಕ್ಷ 50 ಸಾವಿರ ನಗದು ಹಣವನ್ನು ಸೀಜ್ ಮಾಡಿದ್ದಾರೆ. ಬದಾಮಿ ತಾಲೂಕಿನ ಜಾಲಿಹಾಳ ದಿಂದ ಲಕ್ಷ್ಮೇಶ್ವರ ಕಡೆಗೆ ಹೊರಟ್ಟಿದ್ದ ಕಾರಲ್ಲಿ 4 ಲಕ್ಷ ನಗದು ಸೀಜ್​ ಮಾಡಿದ್ದಾರೆ.


ಪೊಲೀದರು ಸೀಜ್ ಮಾಡಿರುವ ಚಿನ್ನಾಭರಣ


ಇದನ್ನೂ ಓದಿ: Metro Inauguration: 'ಮುಗಿಯದ ಕಾಮಗಾರಿಗೆ ಉದ್ಘಾಟನೆ ಭಾಗ್ಯ', ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​​ ಕಿಡಿ


ಗದಗ ತಾಲೂಕಿನ ಮುಳಗುಂದ ಚೆಕ್​​ಪೋಸ್ಟ್​​ನಲ್ಲಿ ಗದಗ ಎಸ್​​ಪಿ ಬಿ.ಎಸ್ ನೇಮಗೌಡ ಅವರ ಮಾರ್ಗದರ್ಶನದಲ್ಲಿ ಹಣ ಸೀಜ್ ಮಾಡಲಾಗಿದೆ. ಆದರೆ ವಾಹನ ಖರೀದಿ, ಆಸ್ತಿ ಖರೀದಿಗೆ ಹಣ ತಗೆದುಕೊಂಡು ಹೊರಟ್ಟಿದ್ದೇವೆ ಎಂದ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮುಳಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಇನ್ನು, ಚುನಾವಣೆ ಘೋಷಣೆ ಮುನ್ನವೇ ಗದಗ ಜಿಲ್ಲಾಡಳಿತ ಭರ್ಜರಿ ಚಿನ್ನದ ಬೇಟೆ ಮಾಡಿದ್ದಾರೆ. ಗದಗ ನಗರದ ಹೊರವಲಯದ ಟಾಂಗಾಕೂಟ್ ಚೆಕ್ ಪೋಸ್ಟ್ ನಲ್ಲಿ 4 ಕಿಲೋ ಬಂಗಾರದ ಆಭರಣ ಜಪ್ತಿ ಮಾಡಿದ್ದಾರೆ. ಮುಂಬೈನಿಂದ ಗದಗ ನಗರಕ್ಕೆ ತರುತ್ತಿದ್ದ ಚಿನ್ನಾಭರಣ ಸೀಜ್​ ಮಾಡಿದ್ದು, ಮಾರ್ಚ್ 15 ರಂದು ದಾಖಲೆ ಇಲ್ಲದ ನಾಲ್ಕು ಕೆಜಿ ಸುಮಾರು 1 ಕೋಟಿ 71 ಲಕ್ಷ 65 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಸೀಜ್ ಮಾಡಿದ್ದಾರೆ.


ಪೊಲೀಸರು ಸೀಜ್​ ಮಾಡಿರುವ ಹಣ


ಮಹಾರಾಷ್ಟ್ರ ಮೂಲದ ವ್ಯಾಪಾರಿಗಳಾದ ಮಹಿಪಾಲ್ ಜೈನ್, ಅಭಿಷೇಕ್ ಜೈನ್ ಎಂಬುವರ ಸಾಗಾಣೆ ಮಾಡುತ್ತಿದ್ದ ಚಿನ್ನ ಸೀಜ್​ ಮಾಡಿದ್ದು, ಡಿಸಿ ವೈಶ್ಯಾಲಿ, ಎಸ್​ಪಿ ಬಿಎಸ್ ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದು, ಚಿನ್ನಾಭರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


ಇದನ್ನೂ ಓದಿ: Koppal: ಅರ್ಧ ಸುಟ್ಟ ಸ್ಥಿತಿಯಲ್ಲಿ ಬಾಣಂತಿ ಶವ ಪತ್ತೆ; ನಿಧಿಗಾಗಿ ಅಮಾವಾಸ್ಯೆಯಂದು ಬಲಿ ಶಂಕೆ?


ಉತ್ತರಕನ್ನಡ ಜಿಲ್ಲೆಯ ಜೋಯಿಡಾ ಬಳಿಕ ಅಶೋಕ ಲೈಲ್ಯಾಂಡ್ ವಾಹನದಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಜೋಯಿಡಾ ತಾಲೂಕಿನ ಅನಮೋಡ ಅಬಕಾರಿ ತನಿಖಾ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.


top videos



    ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ 158.4 ಲೀಟರ್ ಗೋವಾ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಗುಜರಾತ್​ ಜುನಾಗಢ ಮೂಲದ ಆರೋಪಿ ಫಿರೋಜ ಹಾಜಿಭಾಯಿ ಬ್ಲೋಚ ಎಂದು ಗುರುತಿಸಲಾಗಿದೆ. ವಶಕ್ಕೆ ಪಡೆದುಕೊಂಡಿರುವ ಮದ್ಯ ಮೌಲ್ಯ ಸುಮಾರು 5,64,800 ರೂಪಾಯಿ ಎಂದು ಅಬಕಾರಿ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

    First published: