• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Polls 2023: ದಾಖಲೆ ಬರೆದ ಮದ್ಯ ಮಾರಾಟ; ಒಂದು ವಾರದಲ್ಲಿ ಸರ್ಕಾರದ ಬೊಕ್ಕಸಕ್ಕೆ ಬಂದ ಆದಾಯ ಎಷ್ಟು?

Karnataka Polls 2023: ದಾಖಲೆ ಬರೆದ ಮದ್ಯ ಮಾರಾಟ; ಒಂದು ವಾರದಲ್ಲಿ ಸರ್ಕಾರದ ಬೊಕ್ಕಸಕ್ಕೆ ಬಂದ ಆದಾಯ ಎಷ್ಟು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೇ 13ರಂದು ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆ ಮೇ 12ರ ಮಧ್ಯರಾತ್ರಿಯಿಂದ ಮೇ 13ರ ಮಧ್ಯರಾತ್ರಿಯವರೆಗೂ ಮದ್ಯ ಮಾರಾಟ ಬಂದ್ ಆಗಲಿದೆ.

  • Share this:

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆ ನಿನ್ನೆಯಿಂದಲೇ ರಾಜ್ಯದಲ್ಲಿ ಮಾರಾಟ (Liquor Sale) ನಿಷೇಧಿಸಲಾಗಿದೆ. ಮೇ 10ರ ಮಧ್ಯರಾತ್ರಿ 12ರ ನಂತರ ಮದ್ಯ ಮಾರಾಟ ಆರಂಭಗೊಳ್ಳಲಿದೆ. ಈ ಹಿನ್ನೆಲೆ ಮದ್ಯ ಪ್ರಿಯರು ಎರಡು ದಿನಕ್ಕೆ ಬೇಕಾಗುವ ಆಲ್ಕೋಹಾಲ್ (Liquor Purchasing) ಸಂಗ್ರಹಿಸಿಟ್ಟುಕೊಂಡಿದ್ದಾರೆ. ಮದ್ಯ ಮಾರಾಟ ಬಂದ್ ಸುದ್ದಿಗಳು ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಗುಂಡೈಕ್ಳು ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡಿದ್ದಾರೆ. ಇನ್ನು ರಾಜ್ಯದಲ್ಲಿ ಚುನಾವಣೆ (Election) ಘೋಷಣೆಯಾದಗಿನಿಂದ ಮದ್ಯ ಮಾರಾಟ ಹೆಚ್ಚಳವಾಗಿತ್ತು. ಕಳೆದ ಒಂದು ವಾರದಲ್ಲಿ ಅಬಕಾರಿ ಇಲಾಖೆ ಬೊಕ್ಕಸಕ್ಕೆ ಸಾವಿರಕ್ಕೂ ಅಧಿಕ ಕೋಟಿ ಅದಾಯ ಹರಿದು ಬಂದಿದೆ.


ಮೂರು ದಿನ ಡ್ರೈ ಡೇ ಹಿನ್ನೆಲೆ ಮದ್ಯವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಒಂದೇ ವಾರದಲ್ಲಿ 1,200 ಕೋಟಿ ರೂಪಾಯಿ ಆದಾಯ ಸರ್ಕಾರದ ಬೊಕ್ಕಸಕ್ಕೆ ಸೇರ್ಪಡೆಯಾಗಿದೆ. ಚುನಾವಣೆ ಘೋಷಣೆ ಬಳಿಕ ನೂರು ಕೋಟಿಗೂ ಅಧಿಕ ಮೌಲ್ಯದ ಮದ್ಯ ಮಾರಾಟವಾದ ದಿನಗಳ ವಿವರ ಈ ಕೆಳಗಿನಂತಿದೆ.


ಭರ್ಜರಿ ಎಣ್ಣೆ ಸೇಲ್

ದಿನಮಾರಾಟ
ಏಪ್ರಿಲ್ 27₹106.94 ಕೋಟಿ
ಏಪ್ರಿಲ್ 28₹121.5 ಕೋಟಿ
ಏಪ್ರಿಲ್ 29₹157.9 ಕೋಟಿ
ಮೇ 2₹197.07 ಕೋಟಿ
ಮೇ 3₹182.04 ಕೋಟಿ
ಮೇ 4₹113.2 ಕೋಟಿ
ಮೇ 5₹130.92 ಕೋಟಿ

ಮಳೆಯ ಅಲರ್ಟ್ 


ಕರ್ನಾಟಕದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಮುಂದಿನ ಐದು ದಿನಗಳಲ್ಲಿ ಕರ್ನಾಟಕದ ರಾಜಧಾನಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಮತದಾನದ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.



ಇದನ್ನೂ ಓದಿ: Bus Falls From Bridge: ಅಯ್ಯೋ ಇದೆಂಥಾ ದುರಂತ! ಸೇತುವೆಯಿಂದ ಬಸ್ ಬಿದ್ದು 15 ಸಾವು, 25 ಮಂದಿ ಗಂಭೀರ


ಮೇ 13ರಂದು ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆ ಮೇ 12ರ ಮಧ್ಯರಾತ್ರಿಯಿಂದ ಮೇ 13ರ ಮಧ್ಯರಾತ್ರಿಯವರೆಗೂ ಮದ್ಯ ಮಾರಾಟ ಬಂದ್ ಆಗಲಿದೆ.

top videos
    First published: