• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ‘ಬಸವ ಜಯಂತಿ’ಯಂದೇ ಲಿಂಗಾಯತ ಬೆಲ್ಟ್​ನಲ್ಲಿ ರಾಹುಲ್ ಮತಬೇಟೆ; ಇಂದು ಕೂಡಲಸಂಗಮಕ್ಕೆ ‘ರಾಗಾ’ ಭೇಟಿ

Karnataka Election 2023: ‘ಬಸವ ಜಯಂತಿ’ಯಂದೇ ಲಿಂಗಾಯತ ಬೆಲ್ಟ್​ನಲ್ಲಿ ರಾಹುಲ್ ಮತಬೇಟೆ; ಇಂದು ಕೂಡಲಸಂಗಮಕ್ಕೆ ‘ರಾಗಾ’ ಭೇಟಿ

ರಾಹುಲ್ ಗಾಂಧಿ ಕರ್ನಾಟಕಕ್ಕೆ ಭೇಟಿ

ರಾಹುಲ್ ಗಾಂಧಿ ಕರ್ನಾಟಕಕ್ಕೆ ಭೇಟಿ

ಲಿಂಗಾಯತ ಮತಬುಟ್ಟಿ ಮೇಲೆ ಕಣ್ಣು ಹಾಕಿರುವ ಟೈಂನಲ್ಲೇ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಬಿಗ್ ಆಪರೇಷನ್ ಮಾಡಿದೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕರ್ನಾಟಕ (Karnataka) ಕುರುಕ್ಷೇತ್ರದಲ್ಲಿ ಲಿಂಗಾಯತ (Lingayat) ಮೀಸಲಾತಿಯನ್ನೇ ದಾಳ ಮಾಡಿಕೊಂಡಿವೆ ರಾಜಕೀಯ ಪಕ್ಷಗಳು. ಇದೀಗ ಲಿಂಗಾಯತ ಮತಬುಟ್ಟಿ ಮೇಲೆ ಕಣ್ಣಿಟ್ಟಿದೆ. ಕಾಂಗ್ರೆಸ್ (Congress)​ ಲಿಂಗಾಯತ ಬೆಲ್ಟ್​ನಲ್ಲಿ ರಾಹುಲ್ ಗಾಂಧಿ (Rahul Gandhi) ಪ್ರವಾಸ, ಮತ್ತೆ ಲಿಂಗಾಯತ ಸಿಎಂ ಒರಸೆ, ಲಿಂಗಾಯತ ಡ್ಯಾಂನಂಥಾ ಅಸ್ತ್ರಗಳೂ ಇದಕ್ಕೆ ಪುಷ್ಠಿ ನೀಡುತ್ತಿದೆ. ಲಿಂಗಾಯತ ಮತಬುಟ್ಟಿ, ಲಿಂಗಾಯತ ಮೀಸಲಾತಿ (Reservation), ಲಿಂಗಾಯತ ಅಸ್ತ್ರಗಳೇ ಈಗ ಕಾಂಗ್ರೆಸ್​ ಹಾಗೂ ಕೇಸರಿ ಪಕ್ಷಗಳ ಚುನಾವಣಾ (Election) ಅಜೆಂಡಾ. ಲಿಂಗಾಯತ ಸಮರ ಜೋರಾಗುತ್ತಿರುವ ಬೆನ್ನಲ್ಲೇ, ಬಸವಣ್ಣನವರ ಕರ್ಮಭೂಮಿ ಕೂಡಲಸಂಗಮದಲ್ಲಿ ಇಂದು ರಾಹುಲ್ ರ್ಯಾಲಿ ಮಾಡುತ್ತಿದ್ದಾರೆ. ಬಸವ ಜಯಂತಿ (Basava Jayanti) ಪ್ರಯುಕ್ತ ಕೂಡಲಸಂಗಮಕ್ಕೆ ರಾಹುಲ್ ಗಾಂಧಿ ಭೇಟಿ ಕೊಡುತ್ತಿದ್ದು, ಲಿಂಗಾಯತ ಮತಗಳನ್ನ ಸೆಳೆಯುವ ಯತ್ನ ಮಾಡಿದ್ದಾರೆ.


ಜೋರಾದ ಲಿಂಗಾಯತ ‘ರಾಗಾ’


ಬೆಳಗ್ಗೆ 11: 40ಕ್ಕೆ ಹೆಲಿಕಾಪ್ಟರ್ ಮೂಲಕ ರಾಹುಲ್ ಆಗಮಿಸಲಿದ್ದಾರೆ. ಸಂಗಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಬಸವಣ್ಣನ ಐಕ್ಯ ಮಂಟಪ ದರ್ಶನ ಮಾಡಲಿದ್ದಾರೆ. ಮಧ್ಯಾಹ್ನ 12:15ರ ಹೊತ್ತಿಗೆ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.


ನಂತರ 1:40ಕ್ಕೆ ದಾಸೋಹ ಭವನದಲ್ಲಿ ಪ್ರಸಾದ ಸೇವೆನೆ ಮಾಡಿ, ಅಲ್ಲಿಂದ ವಿಜಯಪುರಕ್ಕೆ ತೆರಳುತ್ತಾರೆ. ಸಂಜೆ4 ರ ಹೊತ್ತಿಗೆ ವಿಜಯಪುರ ನಗರದಲ್ಲಿ ರೋಡ್ ಶೋ ಇರಲಿದೆ.


ಇದನ್ನೂ ಓದಿ: HD Kumaraswamy: ಮಾಜಿ ಸಿಎಂ ಎಚ್‌ಡಿಕೆಗೆ ಅನಾರೋಗ್ಯ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ


ವಿಜಯಪುರ ನಗರದ ಶಿವಾಜಿ ವೃತ್ತದಿಂದ ಕನಕದಾಸರ ವೃತ್ತದ ವರೆಗೆ 2 ಕಿಲೋ ಮಿಟರ್ ರೋಡ್ ಶೋ ಮಾಡಲಿದ್ದಾರೆ ರಾಹುಲ್. ಶಿವಾಜಿ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ್ದ ಮಾರ್ಗವಾಗಿ ಕನಕದಾಸ ವೃತ್ತಕ್ಕೆ ಹೋಗಿ ಅಲ್ಲಿ ಸಾರ್ವಜನಿಕರನ್ನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ರಾಹುಲ್ ಗಾಂಧಿ.


ರಾತ್ರಿ ವಿಜಯಪುರದಲ್ಲೇ ರಾಹುಲ್​ ವಾಸ್ತವ್ಯ. ಈ ಹಿನ್ನೆಲೆಯಲ್ಲಿ ರಾಹುಲ್​​ ಕಾರ್ಯಕ್ರಮ ನಡೆಯುವ ಕೂಡಲಸಂಗಮದಲ್ಲಿ ಕೈ ಲಿಂಗಾಯತ ನಾಯಕರು ಸಿದ್ಧತೆಗಳ ಪರಿಶೀಲನೆ ಮಾಡಿದರು.


top videos



    ಲಿಂಗಾಯತ ಮತಬುಟ್ಟಿ ಮೇಲೆ ಕಣ್ಣು ಹಾಕಿರುವ ಟೈಂನಲ್ಲೇ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಬಿಗ್ ಆಪರೇಷನ್ ಮಾಡಿದೆ. ಚಿತ್ತಾಪುರ ಮೂಲದ ಲಿಂಗಾಯತ ಸಮುದಾಯದ ನಾಯಕ ವಿಶ್ವನಾಥ್ ಪಾಟೀಲ್ ಕಾಂಗ್ರೆಸ್ ಸೇರಿದ್ದಾರೆ.

    First published: