ಬೆಂಗಳೂರು: ಕರುನಾಡಲ್ಲಿ ಕಮಲ ಅರಳಿಸೋಕೆ ಮೋದಿ (PM Modi) ರಣಕಹಳೆ ಮೊಳಗಿಸಿಯಾಗಿದೆ. ಮುಂದುವರೆದ ಭಾಗವಾಗಿ ತಿಂಗಳಾಂತ್ಯಕ್ಕೆ ಶುರುಮಾಡಿ ಬ್ಯಾಕ್ ಟು ಬ್ಯಾಕ್ ರೋಡ್ ಶೋ (Road Show) ಪ್ಲಾನ್ ಮಾಡಿರುವ ಮೋದಿ ಅದಕ್ಕೆ ಪೂರ್ವಭಾವಿಯಾಗಿ ಅಖಾಡ ಹದಗೊಳಿಸಲು ಕಾರ್ಯಕರ್ತರಲ್ಲಿ ಜೋಶ್ ತುಂಬೋಕೆ ಇವತ್ತು ವರ್ಚುವಲ್ ಸಂವಾದ ನಡೆಸಿದರು. ಸಂವಾದದ ಜೊತೆಜೊತೆಯೇ ಪ್ರತಿಪಕ್ಷಕ್ಕೆ ಸಮರಸಂದೇಶವನ್ನೂ ಸಾರಿದ್ದರು. ಇದರ ನಡುವೆಯೇ ಕರ್ನಾಟಕವನ್ನ (Karnataka) ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಪ್ರಧಾನಿ ಮೋದಿ 5ನೇ ಬಾರಿ ಕರ್ನಾಟಕಕ್ಕೆ ಬರುತ್ತಿದ್ದು, ಈ ಕುರಿತ ಮಾಹಿತಿ ಲಭ್ಯವಾಗಿದೆ. ಜನವರಿಯಲ್ಲಿ 3 ಬಾರಿ, ಫೆಬ್ರವರಿ 6ರಂದು ಬೆಂಗಳೂರು (Bengaluru) ಹಾಗೂ ತುಮಕೂರಿಗೆ (Tumakuru) ಬಂದಿದ್ದರು. ಇದೀಗ 5ನೇ ಬಾರಿ ಇದೇ 29 ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಒಟ್ಟು 6 ದಿನ 20ಕ್ಕೂ ಹೆಚ್ಚು ರೋಡ್ ಶೋ, ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ಚುನಾವಣೆಗೆ ದಿನಗಣನೆ ಶುರುವಾಗಿರುವ ಹೊತ್ತಲ್ಲಿ ಮೋದಿ ಪ್ರಚಾರ ರಾಜ್ಯ ಬಿಜೆಪಿಗೆ (BJP) ಬೂಸ್ಟರ್ ಆಗುವ ದೊಡ್ಡ ಲೆಕ್ಕಾಚಾರವಿದೆ.
ನಮೋ ಪ್ರಚಾರ, BJP ಗೆಲುವಿನ ಲೆಕ್ಕಾಚಾರ!
ಏಪ್ರಿಲ್ 29ರಂದು ಪ್ರಧಾನಿ ಮೋದಿ ಕರ್ನಾಟಕಕ್ಕೆ ಆಗಮಿಸಲಿದ್ದು, ಹುಮ್ನಾಬಾದ್, ವಿಜಯಪುರ, ಕುಡಚಿ, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಆ ಬಳಿಕ ಏಪ್ರಿಲ್ 30ರಂದು ಕೋಲಾರ, ಚನ್ನಪಟ್ಟಣ, ಬೇಲೂರು, ಮೈಸೂರಿನಲ್ಲಿ ನಡೆಯುಲಿರುವ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ಮೇ 2ರಂದು ಚಿತ್ರದುರ್ಗ, ವಿಜಯನಗರ, ಸಿಂಧನೂರು, ಕಲಬುರಗಿಯಲ್ಲಿ ಮೋದಿ ಅವರ ಬೃಹತ್ ರೋಡ್ ಶೋ ಹಾಗೂ ಸಮಾವೇಶಗಳು ನಡೆಯಲಿದೆ.
ಇದನ್ನೂ ಓದಿ: Congress Guarantee: ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರಯಾಣ! ಕಾಂಗ್ರೆಸ್ 5ನೇ ಗ್ಯಾರಂಟಿ ಘೋಷಿಸಿದ ರಾಹುಲ್ ಗಾಂಧಿ
ಉಳಿದಂತೆ ಚುನಾವಣೆಗೆ ಬೆರಳೆಣಿಕೆಯಷ್ಟು ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಅಂದರೆ, ಮೇ 3ರಂದು ಮೂಡುಬಿದಿರೆ, ಕಾರವಾರ, ಕಿತ್ತೂರು ಹಾಗೂ ಮೇ 6ರಂದು ಚಿತ್ತಾಪುರ, ನಂಜನಗೂಡು, ತುಮಕೂರು ಗ್ರಾ. ಬೆಂಗಳೂರು ದಕ್ಷಿಣ ಸೇರಿದಂತೆ ಮೇ 7ರಂದು ಬಾದಾಮಿ, ಹಾವೇರಿ, ಶಿವಮೊಗ್ಗ ಗ್ರಾಮಾಂತರ, ಬೆಂಗಳೂರು ಕೇಂದ್ರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ