ಬೆಂಗಳೂರು: ರಾಜ್ಯದ ಬಹುತೇಕ ಕಡೆ ಮತದಾರರಿಗೆ (Voters) ಭರ್ಜರಿ ಆಮಿಷ ಒಡ್ಡಲಾಗುತ್ತಿದೆ. ಬೆಂಗಳೂರಲ್ಲಿರುವ (Bengaluru) ಕೆ.ಆರ್.ಪೇಟೆ (KR Pete) ಮತದಾರರಿಗೆ ಸಚಿವ ನಾರಾಯಣಗೌಡ (Minister Narayana Gowda) ಭರ್ಜರಿ ಬಾಡೂಟ ಆಯೋಜಿಸಿದ್ದರು. ಅರಮನೆ ಮೈದಾನದ ನಲಪಾಡ್ ಪೆವಿಲಿಯನ್ನಲ್ಲಿ ಅಳಿಯ ಕರಣ್ ವಿಶ್ವನಾಥ್ ಬರ್ತ್ಡೇ ಹೆಸರಲ್ಲಿ ಕೆ.ಸಿ.ನಾರಾಯಣಗೌಡ ಬಾಡೂಟ ಹಾಕಿಸಿದ್ದು, ತಮ್ಮ ಕೆ.ಆರ್.ಪೇಟೆ ಕ್ಷೇತ್ರದ ಮತದಾರನ್ನ ಆಹ್ವಾನಿಸಿದ್ದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುದ್ರೆಮನಿ ಗ್ರಾಮದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಟಿಫನ್ ಬಾಕ್ಸ್‌ಗಳ ಜಪ್ತಿ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತರ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಟಿಫಿನ್ ಬಾಕ್ಸ್‌ಗಳು ಮೇಲೆ ರಮೇಶ್ ಜಾರಕಿಹೊಳಿ ಆಪ್ತ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮನ್ನೋಳ್ಕರ್ ಭಾವಚಿತ್ರ ಇವೆ. ಈ ಬಗ್ಗೆ ಕೇಸ್ ಕೂಡಾ ದಾಖಲಾಗಿದೆ.
ಇದನ್ನೂ ಓದಿ: Tumakuru: ನೇಣಿಗೆ ಕೊರಳೊಡ್ಡಿ ವಿವಾಹಿತ ಮಹಿಳೆ ಸಾವಿಗೆ ಶರಣು; ಗಂಡನ ಕುಟುಂಬದಿಂದ ಕಿರುಕುಳ ಆರೋಪ
ನೆಲಮಂಗಲದ ಭಕ್ತನಪಾಳ್ಯದಲ್ಲಿ ಕುಕ್ಕರ್ ತುಂಬಿದ್ದ ಕಂಟೈನರ್ ಸೀಜ್ ಮಾಡಲಾಗಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನ್.ಶ್ರೀನಿವಾಸ್ ಅವರಿಗೆ ಈ ಕುಕ್ಕರ್ಗಳು ಸೇರಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕುಕ್ಕರ್ ಬಾಕ್ಸ್‌ಮೆಲೆ ಎನ್.ಶ್ರೀನಿವಾಸ್ ಫೋಟೋ ಸಹ ಮುದ್ರಿಸಲಾಗಿದೆ.
ಚಿಕ್ಕಬಳ್ಳಾಪುರದ ಕಡೆ ನೋಡಿದರೆ ಮತದಾರರಿಗೆ ತಿರುಪತಿ ತಿಮ್ಮಪ್ಪನ ವೈಕುಂಠವನ್ನೇ ಧರೆಗೆ ಇಳಿಸಲಾಗಿದೆ. ಚಿಂತಾಮಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಜಿ.ಎನ್.ವೇಣುಗೋಪಾಲ್, ಶ್ರೀನಿವಾಸ ಕಲ್ಯಾಣೋತ್ಸವ ಆಯೋಜನೆ ಮಾಡಿದ್ದಾರೆ. ತಿರುಪತಿ ತಿಮ್ಮಪ್ಪನ ಹೆಸರಲ್ಲಿ ಭರ್ಜರಿ ಮತಬೇಟೆ ಮಾಡಿದ್ದಾರೆ. ಕಾರ್ಯಕ್ರಮದ ಬಳಿಕ ಭಕ್ತಾದಿಗಳಿಗೆ ತಿರುಪತಿಯಲ್ಲಿ ನೀಡುವ ಪುಳಿಯೋಗರೆ, ಪೊಂಗಲ್, ಮೊಸರನ್ನ, ಲಾಡು ವಿತರಣೆ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಮಾಜಿ ಸಚಿವ ಈಶ್ವರಪ್ಪ ಪುತ್ರ ಕಾಂತೇಶ್ ಜನ್ಮದಿನ ಹಿನ್ನೆಲೆಯಲ್ಲಿ ಕೊಳಚೆ ಪ್ರದೇಶದ ಮನೆಗಳಿಗೆ ಉಚಿತವಾಗಿ ಸೊಳ್ಳೆ ಪರದೆ ವಿತರಣೆ ಮಾಡಲಾಗಿದೆ.ಶಿವಮೊಗ್ಗ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗುರುಪುರ ನಂಜುಡೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ವಯಸ್ಸಿನ ಆಧಾರದ ಮೇರೆಗೆ ತಮಗೆ ಟಿಕೆಟ್ ನೀಡಲು ಹೈಕಮಾಂಡ್ ನಿರಾಕರಿಸಿದರೆ ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಮಾಜಿ ಸಚಿವರು ಆಗ್ರಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದಹಾಗೆ ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಹೊಳಲೂರು ಕ್ಷೇತ್ರದ ಜಿಪಂ ಮಾಜಿ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: Baburao Chinchansur: ಬಿಜೆಪಿ ಎಂಎಲ್ಸಿ ಬಾಬುರಾವ್ ಚಿಂಚನಸೂರ್ ರಾಜೀನಾಮೆ! ಮತ್ತೆ ಕಾಂಗ್ರೆಸ್ ಸೇರ್ಪಡೆ?
ಇನ್ನು, ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ರಾಜ್ಯ ಚುನಾವಣಾ ಆಯುಕ್ತರಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ದೂರು ಸಲ್ಲಿಕೆ ಮಾಡಲಾಗಿದೆ. ಗ್ಯಾರಂಟಿ ಯೋಜನೆ ಗಳ ನೆಪದಲ್ಲಿ ಮತದಾರರ ಡಾಟಾ ಸಂಗ್ರಹ ಮಾಡುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಿರ್ದೇಶನ ಮೇರೆಗೆ ಕಾಂಗ್ರೆಸ್ ಘೋಷಣೆ ಮಾಡಿರುವ ಕೆಲವು ಉಚಿತ ಯೋಜನೆ ಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ, ಉಚಿತ ಯೋಜನೆ ಆಮಿಷ ಒಡ್ಡುವ ಕೆಲಸ ಮಾಡುತ್ತಿದ್ದಾರೆ. ಇದೇ ವೇಳೆ ಮತದಾರರ ವೋಟಾರ್ ಐಡಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಕಲೆಕ್ಟ್ ಸೇರಿದಂತೆ ಫೋನ್ ಪೇ, ಗೂಗಲ್ ಪೇ ನಂಬರ್ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಮತದಾರರ ವೈಯುಕ್ತಿಕ ವಿವರ ಸಂಗ್ರಹಿಸಲು ಯಾರಿಗೂ ಅಧಿಕಾರ ಇಲ್ಲ ಅಂತ ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ