• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕರ್ನಾಟಕ ವಿಧಾನಸಭಾ ಚುನಾವಣೆ 2023: ₹147 ಕೋಟಿ ಕ್ಯಾಶ್​​, ₹375 ಕೋಟಿ ಮೌಲ್ಯದ ವಸ್ತುಗಳು ಜಪ್ತಿ! ಯಾವ ಜಿಲ್ಲೆಯಲ್ಲಿ ಏನೆಲ್ಲಾ ಸಿಕ್ಕಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ ವಿಧಾನಸಭಾ ಚುನಾವಣೆ 2023: ₹147 ಕೋಟಿ ಕ್ಯಾಶ್​​, ₹375 ಕೋಟಿ ಮೌಲ್ಯದ ವಸ್ತುಗಳು ಜಪ್ತಿ! ಯಾವ ಜಿಲ್ಲೆಯಲ್ಲಿ ಏನೆಲ್ಲಾ ಸಿಕ್ಕಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸೀಜ್ ಮಾಡಿರುವ ನಗದು ಹಣ

ಸೀಜ್ ಮಾಡಿರುವ ನಗದು ಹಣ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,82,00,000 ರೂಪಾಯಿ ನಗದು ಹಣ, 27,66,000 ರೂಪಾಯಿ ಮದ್ಯ ಸೀಜ್ ಮಾಡಲಾಗಿದೆ. ನೀತಿಸಂಹಿತೆ ಉಲ್ಲಂಘನೆ ಅಡಿ 66 ಕೇಸ್​ ದಾಖಲು ಮಾಡಲಾಗಿದೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Assembly Elections) ಹಿನ್ನಲೆಯಲ್ಲಿ ಅಪಾರ ಪ್ರಮಾಣದ ಉಚಿತ ಉಡುಗೊರೆ (Free Gift), ಹಣ, ಚಿನ್ನಾಭರಣ (Gold Jewelry) ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು (Police), ಆದಾಯ ತೆರಿಗೆ ಹಾಗೂ ವಿಶೇಷ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗಿದ್ದು, ಮಾರ್ಚ್​​ 29 ರಿಂದ ಏಪ್ರಿಲ್ 8 ವರೆಗೆ ಅಧಿಕಾರಿಗಳು (Officers) ಬರೋಬ್ಬರಿ 147 ಕೋಟಿ ರೂಪಾಯಿ ನಗದು ಸೇರಿ 375 ಕೋಟಿ ಮೌಲ್ಯದ ವಸ್ತುಗಳು ಜಪ್ತಿ ಮಾಡಿದ್ದಾರೆ. ಇದೇ ವೇಳೆ ಅಪಾರ ಪ್ರಮಾಣದ ನಗದು (Money), ಡ್ರಗ್ಸ್​, ಚಿನ್ನ, ಬೆಳ್ಳಿ ಹಾಗೂ ಉಚಿತ ಉಡುಗೊರೆಗಳ ಸೀಜ್ ಮಾಡಲಾಗಿದೆ. 


ಐಟಿ ಅಧಿಕಾರಿಗಳಿಂದ 42 ಕೋಟಿ ರೂಪಾಯಿ ನಗದು ಸೀಜ್


ಅಕ್ರಮವಾಗಿ ಸಂಗ್ರಹಣೆ ಮಾಡಿದ್ದ ಸುಮಾರು 100ಕ್ಕೂ ಹೆಚ್ಚು ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣ ನಗದು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಮಾರ್ಚ್ 29 ರಿಂದ ಬರೋಬ್ಬರಿ 42 ಕೋಟಿ ರೂಪಾಯಿ ನಗದು ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆಯಲಾಗಿದೆ. ವಿಜಿಲೆನ್ಸ್​ ಹಾಗೂ ಚೆಕ್​ ಪೋಸ್ಟ್​ಗಳಲ್ಲಿ ಬರೋಬ್ಬರಿ 105 ಕೋಟಿ ರೂಪಾಯಿ ಹಣ ಸೀಜ್ ಮಾಡಲಾಗಿದೆ. ಒಟ್ಟಾರೆ 147 ಕೋಟಿ ರೂಪಾಯಿ ನಗದು ಜಪ್ತಿ ಮಾಡಲಾಗಿದೆ.




96.59 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿಆಭರಣ ವಶಕ್ಕೆ


ಇನ್ನು, ಸೀರೆ, ಕುಕ್ಕರ್​​ಗಳು ಸೇರಿ 24.21 ಕೋಟಿ ರೂಪಾಯಿ ಮೌಲ್ಯದ ಹಲವು ಬಗೆಯ ವಸ್ತುಗಳು ಸೀಜ್ ಮಾಡಲಾಗಿದೆ. 83.33 ಕೋಟಿ ರೂಪಾಯಿ ಮೌಲ್ಯದ 81.39 ಕೋಟಿ ಲೀಟರ್​ ಮದ್ಯ, 23 ಕೋಟಿ ರೂಪಾಯಿ ಮೌಲ್ಯದ ಡ್ರಗ್ ಸೀಜ್ ಮಾಡಿದ್ದಾರೆ. ಉಳಿದಂತೆ 96.59 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಆಭರಣಗಳು ವಶಕ್ಕೆ ಪಡೆದುಕೊಳ್ಳಲಾಗಿದೆ.


ಚುನಾವಣೆ ಘೋಷಣೆ ಆದ ದಿನದಿಂದಲೂ ತ್ವರಿತ ಕಾರ್ಯಾರಣೆ ನಡೆಸಿರುವ ಅಧಿಕಾರಿಗಳು ರಾಜ್ಯಾದ್ಯಂತ 2,896 ಎಫ್​ಐಆರ್​ ಗಳನ್ನ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮತದಾನದ ದಿನವೂ ಹದ್ದಿನ ಕಣ್ಣಿಟ್ಟು ವಿಶೇಷ ತಂಡಗಳು ಕಾರ್ಯಾಚರಣೆ ಮುಂದುವರೆಸಿದೆ. ಸೀಜ್ ಮಾಡಿರುವ ಹಣ, ವಸ್ತುಗಳ ವಿವರವನ್ನು ಚುನಾವಣಾ ಅಧಿಕಾರಿಗಳು ಅಧಿಕೃತವಾಗಿ ಬಿಡುಗಡೆ ಮಾಡಿ.


ಇದನ್ನೂ ಓದಿ: 2023 ಕರ್ನಾಟಕ ಚುನಾವಣೆ: ತಾಯಿ ನಿಧನರಾದರೂ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಕಾನ್ಸ್​​ಸ್ಟೇಬಲ್​​!


ಜಿಲ್ಲಾವಾರು ವಿವರ ಇಂತಿದೆ:


ಯಾದಗಿರಿ ಜಿಲ್ಲೆಯಲ್ಲಿ 77.94 ಲಕ್ಷ ರೂಪಾಯಿ ನಗದು, 8 ಲಕ್ಷ ಮೌಲ್ಯ ಮದ್ಯ ಸೀಜ್ ಮಾಡಲಾಗಿದೆ. ಈ ಸಂಬಂಧ ನೀತಿಸಂಹಿತೆ ಉಲ್ಲಂಘನೆ ಅಡಿ 39 ಪ್ರಕರಣ ದಾಖಲಾಗಿದೆ.


ಶಿವಮೊಗ್ಗ ಜಿಲ್ಲೆಯಲ್ಲಿ 13,78,72,229 ಕೋಟಿ ರೂಪಾಯಿ ನಗದು, 95,884.27 ಲೀಟರ್ ಮದ್ಯ, 9 ಕೆಜಿ, 577ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ನೀತಿಸಂಹಿತೆ ಉಲ್ಲಂಘನೆ ಅಡಿ 8 ಪ್ರಕರಣ ದಾಖಲು ಮಾಡಲಾಗಿದೆ.


ತುಮಕೂರು ಜಿಲ್ಲೆಯಲ್ಲಿ 1.89 ಕೋಟಿ ರೂಪಾಯಿ ನಗದು, 2.94 ಕೋಟಿ ರೂಪಾಯಿ ಮೌಲ್ಯದ 90,468 ಲೀಟರ್ ಮದ್ಯ, 250 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ನೀತಿಸಂಹಿತೆ ಉಲ್ಲಂಘನೆ ಅಡಿ 66 ಪ್ರಕರಣ ದಾಖಲು ಮಾಡಲಾಗಿದೆ.




ಬಾಗಲಕೋಟೆ ಜಿಲ್ಲೆಯಲ್ಲಿ 10,61,00,000 ಕೋಟಿ ರೂಪಾಯಿ ನಗದು, 29,535 ಲೀಟರ್ ಮದ್ಯ, 46,38,000 ಮೌಲ್ಯದ ಚಿನ್ನ ಮತ್ತು ಬೆಳ್ಳಿ, 1,47,00,000 ಕೋಟಿ ರೂಪಾಯಿ ಮೌಲ್ಯ ಗಿಫ್ಟ್ ಐಟಮ್ಸ್ ಜಪ್ತಿ ಮಾಡಲಾಗಿದೆ. ನೀತಿಸಂಹಿತೆ ಉಲ್ಲಂಘನೆ ಅಡಿ 72 ಕೇಸ್‍ ದಾಖಲಾಗಿದೆ.


ಬೀದರ್ ಜಿಲ್ಲೆಯಲ್ಲಿ 9,82,00,000 ರೂಪಾಯಿ ಕೋಟಿ ಜಪ್ತಿ, 72,440 ಲೀಟರ್ ಜಪ್ತಿ, ಒಂದು ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಕಾಯಿನ್ಸ್ ಜಪ್ತಿ ಮಾಡಲಾಗಿದೆ. ನೀತಿಸಂಹಿತೆ ಉಲ್ಲಂಘನೆ ಅಡಿ 31 ಕೇಸ್ ದಾಖಲು ಮಾಡಲಾಗಿದೆ.


ರಾಮನಗರ ಜಿಲ್ಲೆಯಲ್ಲಿ 2.59 ಕೋಟಿ ರೂಪಾಯಿ ನಗದು, 38450 ಲೀಟರ್ ಮದ್ಯ, 4.50 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ. ನೀತಿಸಂಹಿತೆ ಉಲ್ಲಂಘನೆ ಅಡಿ 55 ಕೇಸ್ ದಾಖಲು ಮಾಡಲಾಗಿದೆ.


ಮೈಸೂರು ಜಿಲ್ಲೆಯಲ್ಲಿ 2,88,06,934 ಕೋಟಿ ರೂಪಾಯಿ ನಗದು, 8,83,72,000 ರೂಪಾಯಿ ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ. ರಾಯಚೂರು ಜಿಲ್ಲೆಯಲ್ಲಿ 27 ಲಕ್ಷ ರೂಪಾಯಿ ಹಣ, 1820 ಲೀಟರ್ ಮದ್ಯ, 1.8 ಕೆ.ಜಿ , 22 ಕೆ.ಜಿ ಬೆಳ್ಳಿ ಜಪ್ತಿ ಮಾಡಲಾಗಿದೆ. ನೀತಿಸಂಹಿತೆ ಉಲ್ಲಂಘನೆ ಅಡಿ 28 ಪ್ರಕರಣ ದಾಖಲಾಗಿದೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,82,00,000 ರೂಪಾಯಿ ನಗದು ಹಣ, 27,66,000 ರೂಪಾಯಿ ಮದ್ಯ ಸೀಜ್ ಮಾಡಲಾಗಿದೆ. ನೀತಿಸಂಹಿತೆ ಉಲ್ಲಂಘನೆ ಅಡಿ 66 ಕೇಸ್​ ದಾಖಲು ಮಾಡಲಾಗಿದೆ.


ಉಡುಪಿ ಜಿಲ್ಲೆಯಲ್ಲಿ 2,14,91,030 ರೂಪಾಯಿ ಹಣ, 42,312 ಲೀಟರ್ ಮದ್ಯ ಹಾಗೂ ನೀತಿಸಂಹಿತೆ ಉಲ್ಲಂಘನೆ ಅಡಿ 741 ಪ್ರಕರಣ ದಾಖಲು ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ 1,70,93,985 ರೂಪಾಯಿ ನಗದು, 2,11,13,395 ರೂಪಾಯಿ ಮೌಲ್ಯದ 83,935.802 ಲೀಟರ್ ಮದ್ಯ, 1,44,000 ರೂಪಾಯಿ ಮೌಲ್ಯದ 5.24 ಕೆಜಿ ಮಾದಕ ವಸ್ತುಗಳ ವಶಕ್ಕೆ ಪಡೆದುಕೊಳ್ಳಲಾಗಿದೆ. ನೀತಿಸಂಹಿತೆ ಉಲ್ಲಂಘನೆ ಅಡಿ 35 ಪ್ರಕರಣ ದಾಖಲು ಮಾಡಲಾಗಿದೆ.


ಕೊಡಗು ಜಿಲ್ಲೆಯಲ್ಲಿ 0.2746 ಕೋಟಿ ರೂಪಾಯಿ ಹಣ, 0.8156 ಕೋಟಿ ರೂಪಾಯಿ ಮದ್ಯ ಜಪ್ತಿ ಮಾಡಲಾಗಿದೆ. ನೀತಿಸಂಹಿತೆ ಉಲ್ಲಂಘನೆ ಅಡಿ 12 ಪ್ರಕರಣ ದಾಖಲು ಮಾಡಲಾಗಿದೆ. ಹಾಸನ ಜಿಲ್ಲೆಯಲ್ಲಿ 1,87,29,430 ರೂಪಾಯಿ ನಗದು, 29,964 ಲೀಟರ್ ಮದ್ಯ, ನೀತಿಸಂಹಿತೆ ಉಲ್ಲಂಘನೆ ಅಡಿ 1,433 ಪ್ರಕರಣ ದಾಖಲು ಮಾಡಲಾಗಿದೆ. ಹಾವೇರಿ ಜಿಲ್ಲೆಯ 76,15,364 ರೂಪಾಯಿ ನಗದು ಹಣ, 2,04,92,980 ಮೊತ್ತದ 79,491.25 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. 6,93,81,492 ರೂಪಾಯಿ ಮೊತ್ತದ 86 ಕೆ.ಜಿ. ಬೆಲೆಬಾಳುವ ಚಿನ್ನಾಭರಣ ಜಪ್ತಿ ಮಾಡಲಾಗಿದೆ.


ಧಾರವಾಡ ಜಿಲ್ಲೆಯಲ್ಲಿ 1,58,75,000 ರೂಪಾಯಿ ನಗದು ಹಣ, 1,42,87,000 ಕೋಟಿ ಮೌಲ್ಯದ ಮದ್ಯ, 81,69,864 ರೂಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿದೆ. 5,63,48,000 ಸಾವಿರ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ನೀತಿಸಂಹಿತೆ ಉಲ್ಲಂಘನೆ ಅಡಿ 58 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಗದಗ ಜಿಲ್ಲೆಯ 2,37,72,000 ರೂಪಾಯಿ ನಗದು ಹಣ, 43,666,225 ಲೀಟರ್ ಮದ್ಯ, 8.49 ಕೆ.ಜಿ ಡ್ರಗ್ಸ್, 1,67,55,148 ರೂಪಾಯಿ ಮೌಲ್ಯದ ಚಿನ್ನಾಭರಣ, ಇತರೆ ಸಾಮಗ್ರಿಗಳ ಜಪ್ತಿ ಮಾಡಲಾಗಿದೆ.

First published: