• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Nikhil Kumaraswamy: ಸಿನಿಮಾಗಳಲ್ಲಿ ಲಾಂಗು-ಮಚ್ಚು ಹಿಡಿದಿಲ್ಲ, ಮುಂದೆಯೂ ಹಿಡಿಯೋದಿಲ್ಲ! ನಿಖಿಲ್​​ ಕುಮಾರಸ್ವಾಮಿ ಶಪಥ

Nikhil Kumaraswamy: ಸಿನಿಮಾಗಳಲ್ಲಿ ಲಾಂಗು-ಮಚ್ಚು ಹಿಡಿದಿಲ್ಲ, ಮುಂದೆಯೂ ಹಿಡಿಯೋದಿಲ್ಲ! ನಿಖಿಲ್​​ ಕುಮಾರಸ್ವಾಮಿ ಶಪಥ

ನಿಖಿಲ್​ ಕುಮಾರಸ್ವಾಮಿ

ನಿಖಿಲ್​ ಕುಮಾರಸ್ವಾಮಿ

ನಾನು ಇದುವರೆಗೆ ನಟಿಸಿದ ಸಿನಿಮಾಗಳಲ್ಲಿ ಲಾಂಗು ಮಚ್ಚು ಹಿಡಿದಿಲ್ಲ, ಮುಂದೆಯೂ ಹಿಡಿಯುವುದಿಲ್ಲ. ರಾಜ್​​ಕುಮಾರ್, ವಿಷ್ಣು ದಾದಾ ಅವರು ನಮಗೆ ಆದರ್ಶವಾಗಿದ್ದಾರೆ ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದ್ದಾರೆ.

 • News18 Kannada
 • 3-MIN READ
 • Last Updated :
 • Chamarajanagar, India
 • Share this:

ಚಾಮರಾಜನಗರ: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಕೆಲ ದಿನಗಳು ಬಾಕಿ ಇರುವಂತೆ ರಾಜ್ಯದ ಪ್ರಮುಖ ಮೂರು ಪಕ್ಷಗಳು ಪ್ರಚಾರವನ್ನು ತೀವ್ರಗೊಳಿಸಿವೆ. ಈ ನಡುವೆ ರಾಜಕೀಯ (Politics) ನಾಯಕರ ನಡುವಿನ ವಾಕ್​ ಸಮರವೂ ಜೋರಾಗಿದೆ. ಈ ನಡುವೆ ಚಿತ್ರರಂಗದ (Cinema Industry) ಕುರಿತು ಹಗುರವಾಗಿ ಮಾತನಾಡಿದ್ದ ಕೆಲ ನಾಯಕರಿಗೆ ನಟ, ಜೆಡಿಎಸ್​ ಯುವ ಘಟಕ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ (Nikhil Kumaraswamy ) ವಿಶೇಷ ಮನವಿ ಮಾಡಿದ್ದಾರೆ. ಈ ಕುರಿತಂತೆ ಕೊಳ್ಳೇಗಾಲದಲ್ಲಿ ಜೆಡಿಎಸ್ ಕಚೇರಿ (JDS) ಉದ್ಘಾಟಿಸಿ ಮಾತನಾಡಿದ ನಿಖಿಲ್​​ ಕುಮಾರಸ್ವಾಮಿ, ಚಿತ್ರರಂಗದ ಕುರಿತು ಯಾರೋ ಹಗುರವಾಗಿ ಮಾತಾಡಿದ್ದಾರೆ. ಸಿನಿಮಾವನ್ನ ಶೋಕಿ ಅಂತ ಕರೆದಿದ್ದಾರೆ. ಚಿತ್ರರಂಗ ಶೋಕಿಯ ಕ್ಷೇತ್ರವಲ್ಲ, ಅದು ನನ್ನ ಪ್ಯಾಷನ್ (Passion) ಎಂದಿದ್ದಾರೆ.


ಇದೇ ವೇಳೆ ಒಂದು ಸಿನಿಮಾ ಮಾಡಲು ಸಾಕಷ್ಟು ದಿನ ಕಷ್ಟಪಡುತ್ತೇವೆ. ನಾನು ಇದುವರೆಗೆ ನಟಿಸಿದ ಸಿನಿಮಾಗಳಲ್ಲಿ ಲಾಂಗು ಮಚ್ಚು ಹಿಡಿದಿಲ್ಲ, ಮುಂದೆಯೂ ಹಿಡಿಯುವುದಿಲ್ಲ. ರಾಜ್​​ಕುಮಾರ್, ವಿಷ್ಣು ದಾದಾ ಅವರು ನಮಗೆ ಆದರ್ಶವಾಗಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Traffic Fines Discount: ಟ್ರಾಫಿಕ್ ಫೈನ್ ಕ್ಲೀಯರ್ ಮಾಡುವ ನೆಪದಲ್ಲಿ ಪಂಗನಾಮ; ತಮ್ಮ ಕೈಯಿಂದಲೇ ಹಣ ತುಂಬಿದ ಪೊಲೀಸರು!


ಅಲ್ಲದೆ, ತಾವು ಸಿನಿಮಾಗಳನ್ನು ಮಾಡಬೇಕು ಎಂದು ಹೇಗೆ ಸ್ಪೂರ್ತಿ ಬಂತು ಎಂದು ವಿವರಿಸಿರುವ ನಿಖಿಲ್​, ನನ್ನನ್ನು ಬಹಳ ಜನ ಚಿತ್ರರಂಗದಿಂದಲೇ ಗುರುತಿಸುತ್ತಾರೆ. ಆದರೆ ಬಹಳ ಜನ ಸಿನಿಮಾ ಬಗ್ಗೆ ತಪ್ಪು ಭಾವನೆ ಹೊಂದಿದ್ದಾರೆ. ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಕಲಾವಿದರು ಮಾತ್ರವಲ್ಲದೆ ನೂರಾರು ತಂತ್ರಜ್ಞಾನರು ಒಂದು ಸಿನಿಮಾ ಹಿಂದೆ 200ಕ್ಕೂ ಹೆಚ್ಚು ದಿನ ಕೆಲಸ ಮಾಡುತ್ತಾರೆ. ನೀವು ಎರಡೂವರೆ ಗಂಟೆ ಅಷ್ಟೇ ನೋಡ್ತೀರಿ.


ನನಗೆ ಸಿನಿಮಾ ಕನಸು ಬಂದಿದ್ದು, ಕುಮಾರಸ್ವಾಮಿ ಅವರಿಂದ. ಅವರು ಮೈಸೂರಿನಲ್ಲಿ ಕಚೇರಿಯನ್ನು ಹೊಂದಿದ್ದರು. ನಮ್ಮ ತಂದೆ ರಾಜಕಾರಣಕ್ಕೆ ಬರುವ ಮುನ್ನ ಸಿನಿಮಾ ಕ್ಷೇತ್ರದಲ್ಲಿ ಸಿನಿಮಾ ವಿತರಣೆ ಮಾಡುವ ಕಾರ್ಯ ಮಾಡುತ್ತಿದ್ದರು. ಬಾಲ್ಯದಿಂದಲೇ ನಾನು ಅವರನ್ನು ನೋಡುತ್ತಾ ಬಂದೆ. ಅದೇ ನನಗೆ ಸಿನಿಮಾ ಕ್ಷೇತ್ರಕ್ಕೆ ಬರಲು ಕಾರಣವಾಯ್ತು.


ರಾಜಕುಮಾರ್ ಅವರ ಸಿನಿಮಾ ನೋಡಿಕೊಂಡು ಆದರ್ಶಗಳನ್ನು ಮುಂದಿಟ್ಟುಕೊಂಡು ಬಂದಿದ್ದೇವೆ. ನಾವು ಸಾರ್ವಜನಿಕರ ಜೀವನದಲ್ಲಿ ಇರುವ ಸಂದರ್ಭದಲ್ಲಿ ತಪ್ಪು ಸಂದೇಶ ಕೊಡಬಾರದು ಎಂದುಕೊಂಡಿದ್ದೀನಿ. ಮುಂದಿನ ದಿನಗಳಲ್ಲೂ ಕೌಟುಂಬಿಕ ಸಿನಿಮಾಗಳನ್ನೇ ಮಾಡುತ್ತೀನಿ. ಒಂದು ಸಣ್ಣ ಸಂದೇಶವನ್ನು ನನ್ನ ಸಿನಿಮಾದಲ್ಲಿ ನೋಡುತ್ತೀನಿ. ಆದ್ದರಿಂದ ದಯವಿಟ್ಟು ಯಾರು ಸಿನಿಮಾ ರಂಗದ ಬಗ್ಗೆ ಲಘು ಮಾತನಾಡಬೇಡಿ ಎಂದು ಮನವಿ ಮಾಡಿದರು.


ಇದನ್ನೂ ಓದಿ: Bengaluru: ಹೆಂಡತಿಯನ್ನು ಕೊಂದು ಕೋಲ್ಕತ್ತಾಗೆ ಪತಿ ಎಸ್ಕೇಪ್​​; ಸಿನಿಮೀಯ ರೀತಿಯಲ್ಲಿ ಆರೋಪಿ ಅರೆಸ್ಟ್​


ಅಲ್ಲದೆ, ರಾಜಕಾರಣದಲ್ಲಿ ಇನ್ನೂ ಯುವಕ ಹೇಳಿಕೆ ಎಂಬ ಚಲುವರಾಯಸ್ವಾಮಿ ಹೇಳಿಕೆ ಪ್ರತಿಕ್ರಿಯೆ ನೀಡಿ, ಅವರ ಮುಂದೆ ನಾನು ಇನ್ನೂ ಹುಡುಗನೇ. ಅವರಷ್ಟು ಅನುಭವವಿಲ್ಲ ನನಗೆ ಇಲ್ಲ, ಈ ಸಲ ಜನರು ತೀರ್ಮಾನಿಸುತ್ತಾರೆ.


123 ಗುರಿ ಸಾಧಿಸಲು ಕುಮಾರಸ್ವಾಮಿ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ಕಾಲದಲ್ಲಿ ಅಭಿವೃದ್ಧಿ ಏನ್ ಆಗಿದೆ ಅಂತ ನೋಡಿದ್ದಾರೆ.


ಕುಮಾರಸ್ವಾಮಿ 34 ತಿಂಗಳ ಅವಧಿಯಲ್ಲಿ ಏನ್ ಅಭಿವೃದ್ಧಿ ಮಾಡಿದ್ದಾರೆ ಅಂತಲೂ ನೋಡಿದ್ದಾರೆ. ನಾವು ಏನು ಮಾಡಿದ್ದೇವೆ ಅಂತ ಜನತೆಗೆ ಗೊತ್ತಿದೆ. ಈ ಬಾರಿ ಕನ್ನಡಿಗರು ನಮ್ಮ ಕೈ ಹಿಡಿಯುತ್ತಾರೆಂಬ ಆತ್ಮವಿಶ್ವಾಸವಿದೆ ಎಂದು ಹೇಳಿದ್ದಾರೆ.

Published by:Sumanth SN
First published: