ವಿಧಾನಸಭಾ ಚುನಾವಣಾ (Assembly Election 2023) ಅಖಾಡ ರಂಗೇರಿದೆ. ನಟ ಸುದೀಪ್ (Sudeep) ಬಿಜೆಪಿ (BJP) ಪರವಾಗಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಸುದೀಪ್ ಬಿಜೆಪಿ ಸ್ಟಾರ್ ಪ್ರಚಾರಕರಾಗಿ ಅಖಾಡಕ್ಕೆ ಇಳಿದಿದ್ದಾರೆ. ಇತ್ತ ಕಾಂಗ್ರೆಸ್ ವರಿಷ್ಠರು ಕೂಡ ರಮ್ಯಾ (Ramya) ಮನವೊಲಿಕೆ ಮಾಡಿ ಕೈ ನಾಯಕರ ಪರ ಪ್ರಚಾರಕ್ಕೆ ಒಪ್ಪಿಸಿದ್ದಾರೆ. ರಮ್ಯಾ ಕಾಂಗ್ರೆಸ್ನ ಸ್ಟಾರ್ ಪ್ರಚಾರಕಿ ಆಗಿದ್ದಾರೆ. ಇದೀಗ ಜೆಡಿಎಸ್ ಪರ ಸ್ಯಾಂಡಲ್‌ವುಡ್ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಅಖಾಡಕ್ಕೆ ಇಳಿದಿದ್ದಾರೆ.
ಯಲಹಂಕ ಜೆಡಿಎಸ್ ಅಭ್ಯರ್ಥಿ ಪರ ಪ್ರೇಮ್ ಪ್ರಚಾರ
ಯಲಹಂಕ ಜೆಡಿಎಸ್ ಅಭ್ಯರ್ಥಿ ಪರ ಸ್ಯಾಂಡಲ್‌ವುಡ್ ಸ್ಟಾರ್ ಪ್ರಚಾರಕ್ಕಿಳಿದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮುನೇಗೌಡ ಪರವಾಗಿ ಮತದಾರರ ಬಳಿ ಲವ್ಲಿ ಸ್ಟಾರ್ ಪ್ರೇಮ್ ಮತಯಾಚನೆ ಮಾಡುತ್ತಿದ್ದಾರೆ. ಇಂದು (ಏಪ್ರಿಲ್ 25) ದಾಸನಪುರ ವಾರ್ಡ್ನ ಹಲವೆಡೆ ಪ್ರಚಾರ ಕಾರ್ಯ ನಡೆಸಿದ್ದಾರೆ.
ಪಕ್ಷದ ಪರ ಅಲ್ಲ ವ್ಯಕ್ತಿಯ ಪರ ಪ್ರಚಾರ
ಯಲಹಂಕದಲ್ಲಿ ಅಬ್ಬರದ ಪ್ರಚಾರ ಮಾಡಿದ ನಟ ಪ್ರೇಮ್, ಮತದಾರರ ಬಳಿ ಡಿಎಸ್ ಅಭ್ಯರ್ಥಿ ಮುನೇಗೌಡ ಅವರಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ಮಾತಾಡಿದ ನಟ ಪ್ರೇಮ್, ನಾನು ವ್ಯಕ್ತಿ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಇದು ಯಾವುದೇ ಪಕ್ಷದ ಪರ ಪ್ರಚಾರವಲ್ಲ ಎಂದು ಹೇಳಿದ್ದಾರೆ. ಮುನೇಗೌಡರು ಚಿತ್ರರಂಗದ ಕುಟುಂಬದವರಾಗಿದ್ದಾರೆ. ಆಗಾಗಿ ನಾನು ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ ಎಂದು ಪ್ರೇಮ್ ಹೇಳಿದ್ದಾರೆ.
ಚುನಾವಣಾ ಪ್ರಚಾರದ ಅಖಾಡಕ್ಕೆ ಧ್ರುವ ಸರ್ಜಾ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಸಿನಿಮಾಗಳ ಶೂಟಿಂಗ್ ಮಧ್ಯೆಯೇ ವಿಧಾನಸಭಾ ಚುನಾವಣೆಯಲ್ಲಿ ಕೂಡಾ ಬ್ಯುಸಿಯಾಗುತ್ತಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದು, ಇದೇ ತಿಂಗಳ 28 ರಿಂದ ಸ್ನೇಹಿತರ ಪರ ಮತಬೇಟೆ ಮಾಡಲಿದ್ದಾರೆ. ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಮತ ಯಾಚಿಸಲಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುಧಾಕರ್ ಪರ ಪ್ರಚಾರ
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್, ಅರಕಲಗೂಡು ಬಿಜೆಪಿ ಅಭ್ಯರ್ಥಿ ಪರ ಹಾಗೂ ತುಮಕೂರು ಬಿಜೆಪಿ ಅಭ್ಯರ್ಥಿ ಪರ ಧ್ರುವ ಸರ್ಜಾ ಅವರು ಪ್ರಚಾರ ಮಾಡಲಿದ್ದಾರೆ. ಈ ಮೂಲಕ ಬಿಜೆಪಿ ಪರ ಪ್ರಚಾರಕ್ಕೆ ಮತ್ತೊಬ್ಬ ಸ್ಟಾರ್ ಬೆಂಬಲ ಸಿಕ್ಕಿದೆ. ಇದಲ್ಲದೆ ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ಪರ ಹಾಗೂ ಶಿಡ್ಲಘಟ್ಟ ಕಾಂಗ್ರೆಸ್ ಅಭ್ಯರ್ಥಿ ಪರ ಧ್ರುವ ಪ್ರಚಾರ ಮಾಡುವ ಸಾಧ್ಯತೆ ಇದೆ. ರಾಮನಗರದಲ್ಲಿ ಪ್ರಚಾರಕ್ಕೆ ಬರುವಂತೆ ಧ್ರುವ ಜೊತೆ ನಿಖಿಲ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಅಖಾಡಕ್ಕಿಳಿಯಲು ಅಭಿಷೇಕ್ ಅಂಬರೀಶ್ ರೆಡಿ
ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಪುತ್ರ , ಜ್ಯೂನಿಯರ್ ರೆಬಲ್ಸ್ಟಾರ್ ಅಭಿಷೇಕ್ ಅಂಬರೀಶ್ ಕೂಡ ಬಿಜೆಪಿ ಪರ ಪ್ರಚಾರಕ್ಕಿಳಿಯಲಿದ್ದಾರೆ. ಹೌದು ಮೇ 1 ರಿಂದ ಅಭಿಷೇಕ್ ಅಂಬರೀಶ್ ಪ್ರಚಾರದ ಕಣಕ್ಕೆ ಇಳಿಯಲಿದ್ದಾರೆ. ಈಗಾಗಲೇ ಪ್ರಚಾರಕ್ಕೆ ದುಮುಖ ಬೇಕಿತ್ತು ಆದರೆ ಕಾರಣಾಂತರಗಳಿಂದ ಮುಂದೂಡಲಾಗಿದೆ. ಜ್ಯೂನಿಯರ್ ರೆಬಲ್ಸ್ಟಾರ್ ಅಭಿಷೇಕ್ ಅಂಬರೀಶ್ ಬೈಕ್ ರ್ಯಾಲಿ ಮೂಲಕ ಕೂತು ಮತಬೇಟೆ ಮಾಡಲಿದ್ದಾರೆ.
ಯೂತ್ ರ್ಯಾಲಿ ಇದಾಗಿರಲಿದ್ದು ಒಂದು ಸಾವಿರ ಬೈಕ್ಗಳನ್ನು ಒಗ್ಗೂಡಿಸಿಕೊಂಡು ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣದ ಕ್ಷೇತ್ರದಲ್ಲಿ ಮತಯಾಚನೆ ಮಾಡಲಿದ್ದಾರೆ. ಮೇ ಒಂದರಿಂದ 8 ದಿನಗಳ ಕಾಲ ಹಳ್ಳಿ ಹಳ್ಳಿಗೂ ತೆರಳಿ ಮತಯಾಚಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ