ಮಂಡ್ಯ: ಜೆಡಿಎಸ್ (JDS) ಟಿಕೆಟ್ ಘೋಷಣೆ ಬೆನ್ನಲ್ಲೇ ಮಂಡ್ಯ (Mandya) ಜೆಡಿಎಸ್ನಲ್ಲಿ ಬಂಡಾಯ ಉಂಟಾಗಿದ್ದು, ಶಮನವಾಗುವ ಯಾವುದೇ ಲಕ್ಷಣಗಳು ಬರುತ್ತಿಲ್ಲ. ಈ ನಡುವೆ ಜೆಡಿಎಸ್ ಘಟಕಕ್ಕೆ ಶಾಕ್ ಮೇಲೆ ಶಾಕ್ ಎದುರಾಗಿದ್ದು, ಚುನಾವಣೆ (Election) ಸಮಯದಲ್ಲಿ ಹಲವು ಜೆಡಿಎಸ್ ಮುಖಂಡರು ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದರೊಂದಿಗೆ ಮಂಡ್ಯ ಜೆಡಿಎಸ್ ಭದ್ರಕೋಟೆ ಛಿದ್ರವಾಗುತ್ತಿದೆಯಾ ಎಂಬ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಇಂದು ಕೈ ನಾಯಕ ಚಲುವರಾಯಸ್ವಾಮಿ (Chaluvaraya Swamy) ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಅವರೊಂದಿಗೆ ಮದ್ದೂರಿನ ಕೊಪ್ಪಾ ಭಾಗದ ಹಲವು ಜೆಡಿಎಸ್ ಮುಖಂಡರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಮಂಡ್ಯದ ಕಾಂಗ್ರೆಸ್ ಕಚೇರಿಯಲ್ಲಿ ತೆನೆ ಇಳಿಸಿ ಹಲವರು ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಶಾಲು ಹಾಕುವ ಮೂಲಕ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕೆಎಂಎಫ್ ಮಾಜಿ ಅಧ್ಯಕ್ಷ ತಮ್ಮಯ್ಯ, ಒಕ್ಕಲಿಗರ ಸಂಘದ ನಿರ್ದೇಕ ಮೂಡ್ಯ ಚಂದ್ರು, ಮಾಜಿ ತಾ.ಪಂ ಅಧ್ಯಕ್ಷರಾದ ಜಯಲಕ್ಷ್ಮಿ ಜಯರಾಂ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: Haveri Viral News: ಡ್ರೈವರ್ ಜೀವ ಉಳಿಸಿದ ಚುನಾವಣಾಧಿಕಾರಿ! ವಿಡಿಯೋ ಇಲ್ಲಿದೆ
ಮಂಡ್ಯ ಜೆಡಿಎಸ್ ಟಿಕೆಟ್ ಕೈ ತಪ್ಪಿದ್ದ ಬೆನ್ನಲ್ಲೇ ಶಾಸಕ ಎಂ ಶ್ರೀನಿವಾಸ್, ತಮ್ಮ ಸ್ಥಾನಕ್ಕೆ ಹಾಗೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಜೆಡಿಎಸ್ ಮೂರನೇ ಪಟ್ಟಿಯಲ್ಲಿ ಮನ್ಮುಲ್ ಅಧ್ಯಕ್ಷ ಬಿಆರ್ ರಾಮಚಂದ್ರು ಅವರಿಗೆ ಘೋಷಣೆ ಮಾಡಲಾಗಿತ್ತು. ಮೊದಲು ನನಗೆ ಟಿಕೆಟ್ ನೀಡಿ ಆ ಬಳಿಕ ಬೇರೆಯವರಿಗೆ ಟಿಕೆಟ್ ನೀಡಲಾಗಿದೆ. ಪಕ್ಷ ಹಣಕ್ಕೆ ಮಂಡ್ಯ ಟಿಕೆಟ್ ಮಾರಿಕೊಂಡಿದ್ದಾರೆ ಎಂದು ಶ್ರೀನಿವಾಸ್ ಆರೋಪ ಮಾಡಿದ್ದರು.
ರಂಗೇರಿದ ಕೆಆರ್ ಪೇಟೆ ರಾಜಕೀಯ ಅಖಾಡ
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಣಿಸಲು ಸಚಿವ ನಾರಾಯಣಗೌಡ ರಣತಂತ್ರ ನಡೆಸಿದ್ದು, ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ವಿರೋಧಿ ಮುಖಂಡರಿಗೆ ಗಾಳ ಹಾಕಿದ್ದಾರೆ.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಾಹುಲಿ ದಿನೇಶ್ ಮತ್ತು ಜೆಡಿಎಸ್ ಮುಖಂಡ ಬಸ್ ಸಂತೋಷ್ ಗೆ ಗಾಳ ಹಾಕಿದ್ದು, ಬಸ್ ಸಂತೋಷ್ ಹಾಗೂ ರಾಜಾಹುಲಿ ದಿನೇಶ್ ಮನೆಗೆ ಸಚಿವ ನಾರಾಯಣ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಸಚಿವ ನಾರಾಯಣಗೌಡ ಮಾತುಕತೆ ಬಳಿಕ ರಾಜಾ ಹುಲಿ ದಿನೇಶ್ ರಿಂದ ಬಿಜೆಪಿ ಗೆ ಬೆಂಬಲ ನೀಡುವ ಬಗ್ಗೆ ಇನ್ನೇರಡು ದಿನದಲ್ಲಿ ನಿರ್ಧಾರ ತಿಳಿಸುವುದಾಗಿ ಬಸ್ ಸಂತೋಷ್ ಹೇಳಿದ್ದಾರೆ. ಎಚ್.ಟಿ.ಮಂಜು ವಿರೋಧಿಗಳ ಪಕ್ಷ ಸೇರ್ಪಡೆ ಮಾಡಿಸಿ ಸಚಿವರು ಜೆಡಿಎಸ್ ಗೆ ಟಕ್ಕರ್ ಕೊಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ