ಬೆಂಗಳೂರು: ಅರಕಲಗೂಡು (Arakalagudu) ವಿಧಾನಸಭೆ ಕ್ಷೇತ್ರದ ಜೆಡಿಎಸ್ (JDS) ಶಾಸಕ ಎ.ಟಿ ರಾಮಸ್ವಾಮಿ (AT Ramaswamy) ಅವರು ಶಾಸಕ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ ವಿಧಾನಸೌಧಕ್ಕೆ (Vidhana Soudha) ಆಗಮಿಸಿದ್ದ ಶಾಸಕರು, ವಿಧಾನಸೌಧದ ಮೆಟ್ಟಿಲಿಗೆ ನಮಸ್ಕಾರ ಮಾಡಿ ತೆರಳಿದರು. ಆ ಬಳಿಕ ಸರ್ಕಾರದ ಕಾರ್ಯದರ್ಶಿ ವಿಶಾಲಾಕ್ಷಿ (MK Vishalakshi) ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದರು. ಇದರೊಂದಿಗೆ ಚುನಾವಣೆಯ ಸಮಯದಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಇದು ಕೇವಲ ಟ್ರೈಲರ್ ಮಾತ್ರನಾ ಮುಂದಿನ ದಿನಗಳಲ್ಲಿ ಪಕ್ಷಾಂತರ ಪರ್ವ ಸಿನಿಮಾ (Cinema) ಜೋರಾಗುತ್ತಾ ಎಂಬ ಪ್ರಶ್ನೆ ಎದುರಾಗಿದೆ. ಏಕೆಂದರೆ ಇಂದು ಒಂದೇ ದಿನ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ. ಎ.ಟಿ ರಾಮಸ್ವಾಮಿ ಅವರಿಗೂ ಮುನ್ನ ಕೂಡ್ಲಿಗಿಯ ಬಿಜೆಪಿ (BJP) ಶಾಸಕ ಎನ್.ವೈ ಗೋಪಾಲಕೃಷ್ಣ (N.Y Gopalakrishna) ಅವರು ಶಿರಸಿಯಲ್ಲಿ ಸ್ಪೀಕರ್ ಅವರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಇದರೊಂದಿಗೆ ಬಿಜೆಪಿಗೆ ಪಕ್ಷಕ್ಕೆ ಅವರು ಗುಡ್ಬೈ ಹೇಳಿದ್ದಾರೆ.
ಒಂದೇ ದಿನ ಇಬ್ಬರು ಶಾಸಕರ ರಾಜೀನಾಮೆ
ಎ.ಟಿ ರಾಮಸ್ವಾಮಿ ಮತ್ತು ಎನ್.ವೈ ಗೋಪಾಲಕೃಷ್ಣ ಅವರು ರಾಜೀನಾಮೆ ನೀಡಿರುವುದರಿಂದ ಇಬ್ಬರು ಪಕ್ಷಾಂತರ ಪರ್ವಕ್ಕೆ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಪಕ್ಷದಿಂದ ದೂರವಾಗಿರುವ ಎ.ಟಿ ರಾಮಸ್ವಾಮಿ ಅವರು ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇತ್ತ ಎನ್.ವೈ ಗೋಪಾಲಕೃಷ್ಣ ಅವರು ಬಿಜೆಪಿಗೆ ಗುಡ್ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಅವರು ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧೆ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Karnataka Elections: ಜನಾರ್ದನ ರೆಡ್ಡಿ ಕಟ್ಟಿ ಹಾಕಲು ಮೂರೂ ಪಕ್ಷಗಳಿಂದ ರಣತಂತ್ರ? ಏನಾಗುತ್ತೆ ಗಣಿಧಣಿ ರಾಜಕೀಯ ಭವಿಷ್ಯ!
ನಾನು ಬಲಿಪಶು ಆಗಿದ್ದೇನೆ ಎಂದ್ರು ರಾಮಸ್ವಾಮಿ
ಇನ್ನು, ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಎ.ಟಿ ರಾಮಸ್ವಾಮಿ ಅವರು, ಜೆಡಿಎಸ್ ಪಕ್ಷವನ್ನು ನಾನು ಸ್ವತಃ ಬಿಡಲಿಲ್ಲ, ಅವರೇ ನನ್ನನ್ನು ಹೊರ ಹಾಕಿದ್ದಾರೆ. ನಾನು ಎಂದೂ ಪಕ್ಷವನ್ನು ಬಿಡುತ್ತೇನೆ ಎಂದು ಹೇಳಿಲ್ಲ. ಎಲ್ಲಾ ಪಕ್ಷದಲ್ಲಿಯೂ ಸಹ ಕೆಲವು ಲೋಪಗಳು ಇರುತ್ತೆ.
ಕಾಂಗ್ರೆಸ್ ಟಿಕೆಟ್ ಫೈನಲ್, ಬಿಜೆಪಿ ಸೇರುತ್ತಾರಾ ರಾಮಸ್ವಾಮಿ?
ಆದರೆ, ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಶಾಸಕರಾಗಿದ್ದ ಎ.ಟಿ ರಾಮಸ್ವಾಮಿ ಅವರು ಬಿಜೆಪಿ ಸೇರುವುದು ಫೈನಲ್ ಆಗಿದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಜೆಡಿಎಸ್ನಿಂದ ಹೊರ ಬಂದಿದ್ದ ರಾಮಸ್ವಾಮಿ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಮೊದಲು ಕೇಳಿ ಬಂದಿತ್ತು. ಆದರೆ ಕಾಂಗ್ರೆಸ್ನಲ್ಲಿ ಅರಕಲಗೂಡು ಕ್ಷೇತ್ರದ ಟಿಕೆಟ್ ಕೃಷ್ಣೇಗೌಡರಿಗೆ ಫೈನಲ್ ಆಗಿದೆಯಂತೆ. ಆದ್ದರಿಂದ ಬಿಜೆಪಿ ಸೇರಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ