ಬೆಂಗಳೂರು: ಬಿಜೆಪಿಗರು ಸಿ.ಡಿ ಸಂಕಲ್ಪ ಯಾತ್ರೆ (Sankalp Yatra) ಮಾಡಲಿ ಎಂದು ವಾಗ್ದಾಳಿ ನಡೆಸಿದ್ದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಬಿಜೆಪಿ ಎಂಎಲ್ಸಿ ರವಿಕುಮಾರ್ (MLC Ravi Kumar) ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರವಿಕುಮಾರ್, ಕುಮಾರಸ್ವಾಮಿಯವರದ್ದು ತಾಜ್ ವೆಸ್ಟೆಂಡ್ (Taj West End), ತೋಟದ ಮನೆಯಲ್ಲಿ ಏನೇನು ಆಗಿದೆ ಎಂದು ಎಳೆ ಎಳೆಯಾಗಿ ಬೇಕಿದ್ದರೆ ನಾವು ಬಿಚ್ಚಿಡ್ತೀವಿ ಎಂದಿದ್ದಾರೆ. ಅಲ್ಲದೆ ಅವರದ್ದು ಸಿ.ಡಿ ಇದೆಯಾ ಎಂದು ಪ್ರಶ್ನಿಸಿದ್ದಕ್ಕೆ, ಹೌದು ಅವರು ಮುಂದೆ ಮಾತಾಡಲಿ. ನಾವು ಅದಕ್ಕೆ ಸರಿಯಾಗಿ ಉತ್ತರ ಕೊಡ್ತೀವಿ ಎಂದು ರವಿಕುಮಾರ್ ಸವಾಲ್ ಹಾಕಿದ್ದಾರೆ.
ಕುಮಾರಸ್ವಾಮಿ ಏನು ಬಹಳ ಹರಿಶ್ಚಂದ್ರ ಅಲ್ಲ!
ಕುಮಾರಸ್ವಾಮಿ ಅವರ ಬಗ್ಗೆ, ಸಿ.ಡಿ ಮತ್ತೆ ತಾಜ್ವೆಸ್ಟ್ ಎಂಡ್ ಹೋಟೆಲ್ ಮತ್ತು ಅವರ ಮನೆ, ತೋಟದ ಮನೆ. ಈ ಎಲ್ಲಾ ಪ್ರಕರಣಗಳು ನಮಗೂ ಕೂಡ ಗೊತ್ತಿದೆ. ಅವರು ಮಾತನಾಡಲಿ, ಅವರು ಇದೇ ತರ ಮಾತನಾಡುವುದು ಮುಂದುವರಿದರೆ ನಾವು ಕೂಡ ರಾಜಕಾರಣ ಮಾಡಲು ಬಂದಿದ್ದೀವಿ. ನಾವು ಕೂಡ ಈ ಬಗ್ಗೆ ಮಾತನಾಡುತ್ತೇವೆ. ಅವರೇನು ಬಹಳ ಹರಿಶ್ಚಂದ್ರ ಅಲ್ಲ. ನಾವು ಕೂಡ ಮಾತನಾಡುತ್ತೇವೆ ಎಂದು ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯವರು ಎಕ್ಸ್‌ಪರ್ಟ್ ಅಂತ ನಾನು ನಿನ್ನೆನೇ ಹೇಳಿದ್ದಿನಲ್ಲ
ಇನ್ನು, ಕುಮಾರಸ್ವಾಮಿ ಸಿಡಿ ಇದೆ ಎಂದಿದ್ದ ರವಿಕುಮಾರ್‌ಗೆ ತಿರುಗೇಟು ಕೊಟ್ಟಿರುವ ಹೆಚ್ಡಿಕೆ, ಸಿ.ಡಿ ವಿಚಾರದಲ್ಲಿ ಬಿಜೆಪಿಯವರು ಎಕ್ಸ್‌ಪರ್ಟ್ ಅಂತ ನಾನು ನಿನ್ನೆನೇ ಹೇಳಿದ್ದಿನಲ್ಲ. ಅದಕ್ಕೆ ನೀವು ವಿಜಯೋತ್ಸವ ಯಾತ್ರೆ ಬಿಟ್ಟು, ಸಿಡಿ ಯಾತ್ರೆ ಮಾಡಿಲಿ ಅಂತ ಮತ್ತೆ ಲೇವಡಿ ಮಾಡಿದರು. ಯಾವ್ಯಾವ ಸಿ.ಡಿ ಇವೆ, ತೋಟದ ಮನೆಯದ್ದೋ, ತಾಜ್ ವೆಸ್ಟ್ ಎಂಡ್ ಹೋಟಲ್‌ದ್ದೋ ಅದನ್ನ ತೋರಿಸಿಕೊಂಡು ಹೋಗೋಕೆ ಹೇಳಿ ಅಂತ ರವಿಕುಮಾರ್‌ಗೆ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: CM Ibrahim: 13 ಮಂದಿಗೆ ಮಂಚದ ಮೇಲೆ ಮಲಗಿಸಿ ಸರ್ಕಾರ ರಚಿಸಿದ್ದೀರಿ, ನಾಚಿಕೆಯಾಗಲ್ವಾ? - ಸಿಎಂ ಇಬ್ರಾಹಿಂ ಕೆಂಡ
ಪಂಚರತ್ನ ಯಾತ್ರೆ ವೇಳೆ ಹೊಸ ಬಾಂಬ್ ಸಿಡಿಸಿರುವ ಮಾಜಿ ಸಿಎಂ ಹೆಚ್ಡಿಕೆ, ಪ್ರಹ್ಲಾದ್ ಜೋಷಿಯವ್ರೇ ಬಿಜೆಪಿಯ ಮುಂದಿನ ಸಿಎಂ ಅಭ್ಯರ್ಥಿ. ಪ್ರಹ್ಲಾದ್ ಜೋಷಿಯವ್ರನ್ನ ಸಿಎಂ ಮಾಡಲು RSS ಹುನ್ನಾರ ಮಾಡಿದೆ. ಜತೆಗೆ 8 ಜನ ಡಿಸಿಎಂ ಮಾಡಿ, ಒಬ್ಬ ಸಿಎಂ ಮಾಡೋ ಯೋಜನೆ ಅವರಿಗಿದೆ. ಈಗಾಗಲೇ ದೆಹಲಿಯಲ್ಲಿ ಚರ್ಚೆ ಆಗಿದೆ.. ಅದರ ಬಗ್ಗೆ ಸಂಪೂರ್ಣ ಮಾಹಿತಿ ನನಗಿದೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಅಂತ ಎಚ್‌ಡಿಕೆ ಹೇಳಿಕೆಗೆ ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಅಂಥವರು ತಳಬುಡ ಇಲ್ಲದ ಹೇಳಿಕೆ ಕೊಟ್ಟಿದ್ದಾರೆ. ಅವರ ಮಾನಸಿಕ ಸ್ಥಿತಿ ತಪ್ಪಿದಂತೆ ಅನಿಸುತ್ತದೆ ಎಂದಿದ್ದಾರೆ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಗಳು, ಮಹಾಮುತ್ಸದ್ಧಿ ದೇವೇಗೌಡರ ಮಗ. ಆದರೆ ಅಂಥವರು ತಳಬುಡ ಇಲ್ಲದ ಹೇಳಿಕೆ ಕೊಟ್ಟಿದ್ದಾರೆ. ಅವರ ಮಾನಸಿಕ ಸ್ಥಿತಿ ತಪ್ಪಿದಂತೆ ಅನಿಸುತ್ತದೆ. ಅವರ ಪಕ್ಷದಿಂದ ಜನ ಓಡಿ ಹೊರಟಿದ್ದಾರೆ. ಅವರ ನಾಯಕರೇ ಅವರ ವಿರುದ್ಧ ಬಂಡೆದಿದ್ದಾರೆ. ಹೀಗಾಗಿ ಏನ ಮಾಡಬೇಕು, ಏನು ಮಾತನಾಡಬಕು ತಿಳಿಯದಾಗಿದೆ. ಅದರಿಂದಾಗಿ ಈ ರೀತಿ ಹೇಳಿಕೆ ನೀಡಿರುವುದು ಬಹಳ ದುರದೃಷ್ಟಕರ ವಿಚಾರ.
ಮೋದಿ ಸರ್ಕಾರದಲ್ಲಿ ಜಾತಿ, ಪಂಥ ನೋಡದೆ ಯೋಗ್ಯರಿದ್ದವರಿಗೆ ಸಿಎಂ ಮಾಡುತ್ತಾರೆ. ಇದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ. ಈ ರೀತಿಯ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಜಾತಿ ಹೆಸರಿನಿಂದ ರಾಜಕಾರಣ ಮಾಡುವುದು ಗೌಡರ ಕುಟುಂಬಕ್ಕೆ ಗೌರವ ತರುವ ವಿಚಾರ ಅಲ್ಲ. ಕುಮಾರಸ್ವಾಮಿ ಈ ಹೇಳಿಕೆ ಮೂಲಕ ತಮಗೆ ಮಾತ್ರವಲ್ಲ ಗೌಡರ ಕುಟುಂಬಕ್ಕೆ ಕಳಂಕ ತಂದಿದ್ದಾರೆ. ದೇವೇಗೌಡ, ರೇವಣ್ಣ ಕುಟುಂಬದವರು ಎಲ್ಲರೂ ಕುಮಾರಸ್ವಾಮಿ ಹೇಳಿಕೆ ಖಂಡಿಸುತ್ತಾರೆ ಎಂದುಕೊಂಡಿದ್ದೇನೆ. ತಮ್ಮ ವಿಚಾರ ಎಷ್ಟು ಕೆಳಮಟ್ಟದೆಂದು ತೋರಿಸಿದ್ದಾರೆ. ಸಾಮರಸ್ಯ ಕೆಡಿಸುವ ಕೆಲಸ ಕುಮಾರಸ್ವಾಮಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Siddaramaiah: ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ; ಎದುರಾಳಿಗಳಿಗೆ ಮಾಜಿ ಸಿಎಂ ಸಿದ್ದು ವಾರ್ನಿಂಗ್
ಇತ್ತ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಈ ಬಾರಿ ಜೆಡಿಎಸ್‌ಗೆ 20 ಸ್ಥಾನ ಕೂಡ ಸಿಗಲ್ಲ. 8 ಜನ ಡಿಸಿಎಂ ಅಂತ ಅವರ ಮನೆ ನೋಡಿ ಹೇಳಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ