• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Election 2023: ಬೊಮ್ಮಾಯಿ ವಿರುದ್ಧ ಅಖಾಡಕ್ಕಿಳಿದ ಎಲೆಕ್ಷನ್ ಕಿಂಗ್- ಸಿಎಂಗೆ ಟಕ್ಕರ್ ಕೊಡಲು ರೆಡಿ

Karnataka Election 2023: ಬೊಮ್ಮಾಯಿ ವಿರುದ್ಧ ಅಖಾಡಕ್ಕಿಳಿದ ಎಲೆಕ್ಷನ್ ಕಿಂಗ್- ಸಿಎಂಗೆ ಟಕ್ಕರ್ ಕೊಡಲು ರೆಡಿ

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

233ನೇ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆ ಅಭ್ಯರ್ಥಿ ಯಾರು ಅನ್ನೋ ಕುತೂಹಲ ಹೆಚ್ಚಾಗಿರಬೇಕಲ್ಲವೇ. ಹಾಗಾದರೆ ಯಾರು ಆ ವ್ಯಕ್ತಿ? ಸಿಎಂಗೆ ಪೈಪೋಟಿ ಕೊಡ್ತಾರಾ? ಅಂತಾ ನೋಡೋಣ ಬನ್ನಿ.

 • Trending Desk
 • 5-MIN READ
 • Last Updated :
 • Karnataka, India
 • Share this:

ಮೇ 10 ರಂದು ನಡೆಯಲಿರುವ ಕರ್ನಾಟಕ ಚುನಾವಣಾ (Karnataka Elections 2023) ರಣರಂಗಕ್ಕೆ ದಿನಗಣನೆ ಶುರುವಾಗಿದೆ. ಹೇಗಾದರೂ ಈ ಭಾರಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ರಾಜ್ಯದ ಪ್ರಬಲ ಮೂರು ಪಕ್ಷಗಳು (Political Parties) ರಣತಂತ್ರ ಹೆಣೆಯುತ್ತಿವೆ. ಅದಕ್ಕಾಗಿಯೇ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿಯೂ ಅಳೆದು ತೂಗಿ, ಆಳ-ಆಗಲ ಲೆಕ್ಕಾಚಾರ ಮಾಡಿ ಪಟ್ಟಿ ಬಿಡುಗಡೆ ಮಾಡಿವೆ.


ಬಿಜೆಪಿ ಕೂಡ ಮತ್ತೆ ಅಧಿಕಾರ ನಡೆಸುವ ಬಯಕೆಯಿಂದ ಪ್ರಬಲ ಅಭ್ಯರ್ಥಿಗಳ ವಿರುದ್ಧ ಮತ್ತಷ್ಟು ಪ್ರಬಲ ವ್ಯಕ್ತಿಗಳನ್ನೇ ಸ್ಪರ್ಧೆಗಿಳಿಸಿದೆ. ಇನ್ನೂ ಬಿಜೆಪಿಯ ಹಾಲಿ ಸಿಎಂ ಬೊಮ್ಮಾಯಿ ವಿರುದ್ಧ ಕೂಡ ಪ್ರಬಲ ವ್ಯಕ್ತಿಗಳೇ ಕಣಕ್ಕಿಳಿಯುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ವಿನಯ್‌ ಕುಲಕರ್ಣಿ ಹೆಸರು ಕೇಳಿ ಬಂದಿದೆಯಾದರೂ ಇನ್ನೂ ಕೂಡ ಫೈನಲ್‌ ಆಗಿಲ್ಲ.


ಬೊಮ್ಮಾಯಿಗೆ ಟಕ್ಕರ್‌ ಕೊಡಲು ರೆಡಿಯಾದ್ರೂ ಚುನಾವಣೆಗಳ ಸರದಾರ


ಆದರೆ ಬೊಮ್ಮಾಯಿ ವಿರುದ್ಧ ಟಫ್‌ ಕೊಡಲು ಶಿಗ್ಗಾಂವ್‌ನಲ್ಲಿ 233 ಚುನಾವಣೆಯಲ್ಲಿ ಸ್ಪರ್ಧಿಸಿರುವ ಲಿಮ್ಕಾ ದಾಖಲೆಯಲ್ಲಿ ಹೆಸರು ಮಾಡಿರುವ ಸ್ವತಂತ್ರ್ಯ ಅಭ್ಯರ್ಥಿ ಒಬ್ಬರೂ ಈ ಬಾರಿ ರಾಜ್ಯದ ಸಿಎಂಗೆ ಟಕ್ಕರ್‌ ಕೊಡಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
233ನೇ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆ ಅಭ್ಯರ್ಥಿ ಯಾರು ಅನ್ನೋ ಕುತೂಹಲ ಹೆಚ್ಚಾಗಿರಬೇಕಲ್ಲವೇ. ಹಾಗಾದರೆ ಯಾರು ಆ ವ್ಯಕ್ತಿ? ಸಿಎಂಗೆ ಪೈಪೋಟಿ ಕೊಡ್ತಾರಾ? ಅಂತಾ ನೋಡೋಣ ಬನ್ನಿ.


ಸಿಎಂ ವಿರುದ್ಧ ಕಣಕ್ಕಿಳಿಯುತ್ತಿದ್ದಾರೆ 233 ಎಲೆಕ್ಷನ್‌ನಲ್ಲಿ ಸ್ಪರ್ಧಿಸಿದ ವ್ಯಕ್ತಿ


ಹೌದು, ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾಂವ್‌ನಿಂದ ಕಣಕ್ಕಿಳಿದಿದ್ದಾರೆ. ಇವರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಕೆ ಪದ್ಮರಾಜನ್ ಸ್ಪರ್ಧಿಸಲಿದ್ದು, ಈತ ಸ್ಪರ್ಧಿಸುತ್ತಿರುವ 234ನೇ ಚುನಾವಣೆ ಇದಾಗಿದೆ.
1988ರಿಂದ ಉಮೇದುವಾರಿಕೆ ಸಲ್ಲಿಸುತ್ತಿರುವ ಪದ್ಮರಾಜನ್‌


ಬೊಮ್ಮಾಯಿ ವಿರುದ್ಧ ಅಖಾಡಕ್ಕಿಳಿದಿರುವ ಪದ್ಮರಾಜನ್‌ ಸೇಲಂನ ಮೆಟ್ಟೂರು ಮೂಲದವರು. ಮೆಟ್ಟೂರಿನಲ್ಲಿ ವಾಹನಗಳ ಫ್ಲಾಟ್ ಟೈರ್ ಸರಿಪಡಿಸುವ ಸ್ವಂತ ವ್ಯವಹಾರವನ್ನು ಹೊಂದಿದ್ದು, ಜೊತೆಗೆ ಪದ್ಮರಾಜನ್ ಅವರು ಹೋಮಿಯೋಪತಿ ವೈದ್ಯ ಎಂದು ಕೂಡ ಹೇಳಿಕೊಳ್ಳುತ್ತಾರೆ. 1988ರಿಂದ ಉಮೇದುವಾರಿಕೆ ಸಲ್ಲಿಸಿ ಚುಣಾವಣೆಗೆ ಸ್ಪರ್ಧಿಸುತ್ತಲೇ ಇದ್ದಾರೆ.ಈ ಬಾರಿ ಎಲೆಕ್ಷನ್‌ನಲ್ಲೂ ಭಾಗಿಯಾಗಿದ್ದು, ಬೆಂಗಳೂರಿನಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.


ಈವರೆಗೂ ಒಂದೇ ಒಂದು ಬಾರಿ ಕೂಡ ಗೆದ್ದಿಲ್ಲ, ಹಾಗಂತ ನಿರಾಶರಾಗಲೇ ಮರಳಿ ಯತ್ನ ಮಾಡುತ್ತಲೇ ಇದ್ದಾರೆ.


ಪದ್ಮರಾಜನ್‌ ಯಾರ್ಯಾರ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ ಗೊತ್ತಾ?


ಪದ್ಮರಾಜನ್‌ ಈವರೆಗೂ ಅದೆಷ್ಟೋ ಗಣ್ಯ ನಾಯಕರ ವಿರುದ್ಧ ಕಣಕ್ಕಿಳಿದಿದ್ದಾರೆ. ಅಸೆಂಬ್ಲಿ, ಲೋಕಸಭೆ, ರಾಜ್ಯಸಭೇ ಹೀಗೆ ಬಹುತೇಕ ಎಲ್ಲಾ ಸಾರ್ವತ್ರಿಕ ಚುನಾವಣೆಗಳಲ್ಲಿ ಈ ವಯ್ಕತಿ ಸ್ಪರ್ಧಿಸಿದ್ದಾರೆ. ಅದರಲ್ಲೂ ಯಾರ ವಿರುದ್ಧ ನಿಂತಿರೋದು ಅಂತಾ ಕೇಳಿದರೆ ನಿಮಗೆ ಇನ್ನೂ ಆಶ್ಚರ್ಯ ಆಗುತ್ತೆ. ಹೌದು, ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಮತ್ತು ತಮಿಳುನಾಡಿನ ಮಾಜಿ ಸಿಎಂಗಳಾದ ಕರುಣಾನಿಧಿ ಮತ್ತು ಜೆ ಜಯಲಲಿತಾ ಸೇರಿದಂತೆ ಉನ್ನತ ನಾಯಕರ ವಿರುದ್ಧ ಸ್ಪರ್ಧಿಸಿದ್ದಾರೆ ಈ ಚುನಾವಣೆಯ ಮೋಹ ಹೊಂದಿರುವ ಪದ್ಮರಾಜನ್‌.


ಇದನ್ನೂ ಓದಿ: Digital Voter ID: ಕೇವಲ ಐದೇ ನಿಮಿಷದಲ್ಲಿ ಡಿಜಿಟಲ್ ವೋಟರ್ ಐಡಿ ಪಡೆಯಲು ಹೀಗೆ ಮಾಡಿ


ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲೂ ದಾಖಲೆ


ಪದ್ಮರಾಜನ್ ಅವರನ್ನು ಭಾರತೀಯ ಪ್ರಜಾಪ್ರಭುತ್ವದಲ್ಲಿ "ಅತ್ಯಂತ ವಿಫಲ ಅಭ್ಯರ್ಥಿ" ಎಂದು ಸಹ ಗುರುತಿಸಲಾಗಿದೆ. ಚುನಾವಣೆಗಳಲ್ಲಿ ನಿಂತು ಸೋಲುತ್ತಿರುವವ ವಿಚಾರವಾಗಿ ಇವರು ಈಗಾಗ್ಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ.


ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಮಾತನಾಡಿದ ಪದ್ಮರಾಜನ್ "ನಾನು ಇಂತಹ ದೈತ್ಯರ ವಿರುದ್ಧ ಎಂದಿಗೂ ಗೆಲ್ಲಲಾಗದ ಸಣ್ಣ ಮನುಷ್ಯ ಅನ್ನೋದು ನನಗೆ ಗೊತ್ತಿದೆ. ಇದು ಜನರ ಪ್ರೀತಿ ಮತ್ತು ಅದರೊಂದಿಗೆ ಬರುವ ಪ್ರಚಾರವನ್ನು ಗಳಿಸುವ ನನ್ನ ಮಾರ್ಗವಾಗಿದೆ" ಹೇಳುತ್ತಾರೆ.


ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಫೇಮಸ್‌ ಆಗಿದ್ದ ವ್ಯಕ್ತಿ


2019 ರ ಲೋಕಸಭೆ ಚುನಾವಣೆಯಲ್ಲಿ ಈಗ ಅನರ್ಹಗೊಂಡಿರುವ ವೈನಾಡ್ ಸಂಸದ ಮತ್ತು ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರು. ಈ ಚುನಾವಣೆ ನನಗೆ ಸಾಕಷ್ಟು ಪ್ರಚಾರ ತಂದು ಕೊಟ್ಟಿತು ಎನ್ನುತ್ತಾರೆ ಪದ್ಮರಾಜನ್. ಈ ಎಲೆಕ್ಷನ್‌ನಲ್ಲಿ ಪದ್ಮರಾಜನ್ ಅವರು ಯಾವುದೇ ಪ್ರಚಾರವಿಲ್ಲದೆ 1,850 ಮತಗಳನ್ನು ಪಡೆದಿದ್ದರು.


ನಾಮಪತ್ರ ಸಲ್ಲಿಕೆಗೆ ಈವರೆಗೆ 1 ಕೋಟಿ ರೂ. ಖರ್ಚು


ನಾಮಪತ್ರ ಸಲ್ಲಿಸಲು ಇಂತಿಷ್ಟು ಠೇವಣಿ ಇಡಬೇಕು. ಈ ಠೇವಣಿಗೆ ಈತ ಖರ್ಚು ಮಾಡಿದ ಹಣ ಕೇಳಿದರೆ ಶಾಕ್‌ ಆಗ್ತೀರಾ. ಏಕೆಂದರೆ ನಾಮಪತ್ರ ಸಲ್ಲಿಸುವಾಗ ಪ್ರತಿ ಚುನಾವಣಾ ಸ್ಪರ್ಧೆಯ ಠೇವಣಿಗೆ ರೂ 5,000 ಮತ್ತು ರೂ 10,000 ಪಾವತಿಸಲು ಇಲ್ಲಿಯವರೆಗೆ ಈತ 1 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾನಂತೆ.


ಆರ್ಥಿಕವಾಗಿ, ಕೌಟುಂಬಿಕವಾಗಿ ಉತ್ತಮ ಹಿನ್ನೆಲೆ ಹೊಂದಿರುವ ಪದ್ಮರಾಜನ್‌ ಅವರಿಗೆ ಪತ್ನಿ ಮತ್ತು ಮಗ ಇದ್ದಾರೆ. ಮಗ MBA ಪದವೀಧರರಾಗಿದ್ದು, ಮೆಟ್ಟೂರಿನಲ್ಲಿಯೇ ಡಿಜಿಟಲ್ ಸೇವಾ ಕೇಂದ್ರದ ಔಟ್ಲೆಟ್ ಅನ್ನು ನಡೆಸುತ್ತಿದ್ದಾರೆ.

top videos
  First published: