ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಕೇವಲ ನಾಲ್ಕು ದಿನ ಮಾತ್ರ ಬಾಕಿ ಉಳಿದಿದ್ದು, ಈ ನಡುವೆ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಕೇಂದ್ರ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಜಾಹೀರಾತು (Advertisement) ಮತ್ತು ವಿವಿಧ ಹೇಳಿಕೆ ವಿಚಾರವಾಗಿ ಚುನಾವಣಾ ಆಯೋಗ (Election commission) ನೋಟಿಸ್ ಜಾರಿ ಮಾಡಿದ್ದು, ಮಾದರಿ ಚುನಾವಣಾ ನೀತಿ ಸಂಹಿತೆ ಮತ್ತು ಕಾನೂನು ಚೌಕಟ್ಟಿಗೆ ಅನುಗುಣವಾಗಿ ನೋಟಿಸ್ ಜಾರಿ ಮಾಡಲಾಗಿದೆ. ಅಂದಹಾಗೇ, ಬಿಜೆಪಿ (BJP) ವಿರುದ್ಧ ಭ್ರಷ್ಟಾಚಾರ ಹಾಗೂ 40% ಆರೋಪ ಹೊರಿಸಿ ಜಾಹೀರಾತುಗಳನ್ನು ಕಾಂಗ್ರೆಸ್ (Congress) ಪ್ರಕಟಿಸಿತ್ತು. ಈ ಸಂಬಂಧ ಕಾರಣ ಕೇಳಿ ಚುನಾವಣಾ ಆಯೋಗ ನೋಟಿಸ್ ಜಾಡಿ ಮಾಡಿದೆ.
ನೋಟಿಸ್ನಲ್ಲಿ ಕಾಂಗ್ರೆಸ್ ಆರೋಪ ಮಾಡಿರುವ ಜಾಹೀರಾತಿನ ಸಾಕ್ಷಿ ನೀಡುವಂತೆ ಸೂಚನೆ ನೀಡಲಾಗಿದ್ದು, ಮೇ 7ರ ಸಂಜೆ 7 ಗಂಟೆಯೊಳಗೆ ಸಾರ್ವಜನಿಕವಾಗಿ ಸಲ್ಲಿಕೆ ಮಾಡುವಂತೆ ನೋಟಿಸ್ನಲ್ಲಿ ಸೂಚನೆ ನೀಡಿದೆ. ಅಲ್ಲದೆ, ಸಾಕ್ಷಿ ನೀಡಲು ವಿಫಲವಾದರೆ, ಆರ್ಪಿ ಕಾಯಿದೆ ಮತ್ತು ಐಪಿಸಿ ಅಡಿಯಲ್ಲಿ ಎಂಸಿಸಿ ಮತ್ತು ಸಂಬಂಧಿತ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಮಕೈಗೊಳ್ಳುವ ಬಗ್ಗೆ ಎಚ್ಚರಿಕೆ.
ನಿಗದಿತ ಸಮಯದೊಳಗೆ ನಿಮ್ಮ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದಲ್ಲಿ. ನೀವು ಏನೂ ಹೇಳಲು ಸಾಕ್ಷಿ ಇಲ್ಲ ಎಂದು ಭಾವಿಸಲಾಗುವುದು ಮತ್ತು ಚುನಾವಣಾ ಆಯೋಗವು ಯಾವುದೇ ಹೆಚ್ಚಿನ ಉಲ್ಲೇಖವನ್ನು ಮಾಡಿದೆ. ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ನೋಟಿಸ್ನಲ್ಲಿ ತಿಳಿಸಿದೆ.
ಕನಕಪುರ ರಣಕಣದಲ್ಲಿ ಕಣ್ಣೀರ ರಾಜಕೀಯ
ಕನಕಪುರ ರಣಕಣದಲ್ಲಿ ಕಣ್ಣೀರ ರಾಜಕೀಯ ಜೋರಾಗಿದೆ. ಕಣ್ಣೀರು ಹಾಕುತ್ತಾ ಅಣ್ಣ ಡಿಕೆಶಿ ಪರ ತಮ್ಮ ಡಿಕೆ ಸುರೇಶ್ ಮತ ಕೇಳಿದ್ದಾರೆ. ಗಡ್ಡ ಬಿಟ್ಟ ಕಥೆ ಹೇಳಿ, ಅಣ್ಣನನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಇನ್ನು, ಡಿ.ಕೆ ಶಿವಕುಮಾರ್ ಪತ್ನಿ ಉಷಾ ಕನಕಪುರದಲ್ಲಿ ರೌಂಡ್ಸ್ ಹಾಕಿದ್ದಾರೆ. ಡಿಕೆಶಿ ಹೆಲಿಕಾಪ್ಟರ್ ಅವಘಡ ಆಗ್ತಿದ್ದಂತೆ ವಿಡಿಯೋ ಕಾಲ್ ಮಾಡಿ ಹೆದರಬೇಡ ಎಂದಿದ್ದರು. ಆದದರೆ ಡಿಕೆಶಿ ಸಿಎಂ ಆಗುವುದು ದೇವರಿಗೆ ಬಿಟ್ಟಿದ್ದು ಅಂತ ಉಷಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ