• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • G Parameshwar: ಕಾಂಗ್ರೆಸ್​​​ನಲ್ಲಿ ಭಾರೀ ಬಂಡಾಯ; ಪ್ರಣಾಳಿಕೆ ಸಮಿತಿಗೆ ಪರಮೇಶ್ವರ್ ರಾಜೀನಾಮೆ?

G Parameshwar: ಕಾಂಗ್ರೆಸ್​​​ನಲ್ಲಿ ಭಾರೀ ಬಂಡಾಯ; ಪ್ರಣಾಳಿಕೆ ಸಮಿತಿಗೆ ಪರಮೇಶ್ವರ್ ರಾಜೀನಾಮೆ?

ಡಾ. ಜಿ ಪರಮೇಶ್ವರ್, ಮಾಜಿ ಡಿಸಿಎಂ

ಡಾ. ಜಿ ಪರಮೇಶ್ವರ್, ಮಾಜಿ ಡಿಸಿಎಂ

ತಮ್ಮೊಡನೆ ಚರ್ಚೆ ನಡೆಸದೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಭರವಸೆಗಳನ್ನು ಘೋಷಿಸುತ್ತಿದ್ದಾರೆ ಎಂದು ಡಾ. ಜಿ ಪರಮೇಶ್ವರ ಅಸಮಾಧಾನಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಮ್ಮನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ ಎಂದು ಡಿಕೆ ಶಿವಕುಮಾರ್‌ (DK Shivakumar) ಹಾಗೂ ಸಿದ್ದರಾಮಯ್ಯನವರ (Siddaramaiah) ಮೇಲೆ ಮಾಜಿ ಡಿಸಿಎಂ ಪರಮೇಶ್ವರ್ (G Parameshwar) ಬೇಸರಗೊಂಡಿದ್ದಾರಂತೆ. ಅವರನ್ನು ಸಮಾಧಾನಪಡಿಸಲು ಉಸ್ತುವಾರಿ ರಣದೀಪ್‌ ಸುರ್ಜೇವಾಲಾ (Randeep Surjewala) ಧಾವಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಕಾಂಗ್ರೆಸ್​ ಪ್ರಣಾಳಿಕೆ ಸಮಿತಿಗೆ ಪರಮೇಶ್ವರ್ ರಾಜೀನಾಮೆ ನೀಡಿದ್ದಾರೆ ಎಂದು ಸುವರ್ಣ ನ್ಯೂಸ್ ವರದಿ ಮಾಡಿದೆ. ಇದರೊಂದಿಗೆ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಮುನ್ನವೇ ಕಾಂಗ್ರೆಸ್ ನಲ್ಲಿ ಭಾರೀ ಬಂಡಾಯ ಎದುರಾಗಿದೆ.


ಪರಮೇಶ್ವರ್ ಅಸಮಾಧಾನಕ್ಕೆ ಕಾರಣವಾಯ್ತು ಸಿದ್ದು, ಡಿಕೆಶಿ ನಡೆ!


ತಮ್ಮೊಡನೆ ಚರ್ಚೆ ನಡೆಸದೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಭರವಸೆಗಳನ್ನು ಘೋಷಿಸುತ್ತಿದ್ದಾರೆ.


ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು, ಜೊತೆಗೆ ಜಮೀನು ಇಲ್ಲದವರಿಗೆ ಸರ್ಕಾರದಿಂದ ಭೂಮಿ ನೀಡುವ ಘೋಷಣೆ, ರೈತರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಹಲ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಭರವಸೆಗಳ ಘೋಷಣೆ ಮಾಡಲಾಗುತ್ತಿದೆ.


Karnataka Election 2023 Dr G Parameshwar resigned from congress Manifesto Committee sns
ಸುರ್ಜೇವಾಲಾ ಜೊತೆ ಪರಮೇಶ್ವರ್


ಜಿಲ್ಲಾ ಪ್ರವಾಸದ ವೇಳೆ ತಾವೇ ತೀರ್ಮಾನ ಮಾಡಿ ಉಚಿತ ಘೋಷಣೆಗಳನ್ನು ಮಾಡುತ್ತಿದ್ದಾರೆ ಎಂದು ತಮ್ಮ ಆಪ್ತರ ಬಳಿ ಪರಮೇಶ್ವರ್ ಬೇಸರ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ: HD Kumaraswamy: ಕಾಂಗ್ರೆಸ್ ಯಾಕೆ ಸೋಲೆತ್ತಿನ ಬಾಲ ಹಿಡಿಯೋದು? ಹೆಚ್​​ಡಿಕೆ ಪ್ರಶ್ನೆ


ಪರಮೇಶ್ವರ್ ಮನವೊಲಿಸುವ ಯತ್ನ?


ಇನ್ನು, ಪರಮೇಶ್ವರ್ ಅಸಮಾಧಾನ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಮನವೊಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ಪ್ರಜಾಧ್ವನಿ ಕಾರ್ಯಕ್ರಮದ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೂ ಗೈರಾಗಲು ನಿರ್ಧರಿಸಿದ್ದ ಪರಮೇಶ್ವರ ನಿರ್ಧಾರ ಮಾಡಿದ್ದಾರಂತೆ.


ಇದರಿಂದ ಸಾರ್ವಜನಿಕರಿಗೆ , ಕಾರ್ಯಕರ್ತರಿಗೆ, ತಪ್ಪು ಸಂದೇಶ ರವಾನೆಯಾಗಲಿದೆ. ವಿರೋಧ ಪಕ್ಷಗಳಿಗೆ ರಾಜಕೀಯ ಅಸ್ತ್ರವಾಗಲಿದೆ ನಾಳಿನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಸುರ್ಜೇವಾಲ, ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.


Karnataka Election 2023 Dr G Parameshwar resigned from congress Manifesto Committee sns
ಸುರ್ಜೇವಾಲಾ ಜೊತೆ ಪರಮೇಶ್ವರ್


ಈ ನಡುವೆ ಸುರ್ಜೆವಾಲ ಮನವಿ ಮೇರೆಗೆ ಒಪ್ಪಿಕೊಂಡಿರುವ ಪರಮೇಶ್ವರ್ ಅವರು, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಹುದ್ದೆ ರಾಜೀನಾಮೆ ಹಿಂಪಡೆಯಲು ಮಾತ್ರ ಸಮ್ಮತಿ ಸೂಚಿಸಿವಲ್ಲವಂತೆ.


ಇದನ್ನೂ ಓದಿ: JDS MLA: ಕಾಂಗ್ರೆಸ್‌ ಕದ ತಟ್ಟಿದ ಶಾಸಕ ಶಿವಲಿಂಗೇಗೌಡ! ಜೆಡಿಎಸ್‌ನಲ್ಲಿ ಸೈಲೆಂಟ್‌, ಪಕ್ಷದ ಕಾರ್ಯಕ್ರಮದಿಂದಲೂ ದೂರ!


ರಾಜೀನಾಮೆ ಹಿಂಪಡೆಯಲು ಒಪ್ಪದ ಪರಮೇಶ್ವರ್!


ಇತ್ತ ಪರಮೇಶ್ವರ್ ಅವರ ಮನವೊಲಿಕೆ ಮಾಡಲು ನಿರಂತರವಾಗಿ ಯತ್ನಿಸಿರುವ ಸುರ್ಜೇವಾಲ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ರಿಂದಲೂ ಕರೆ ಮಾಡಿ ಮನವೊಲಿಕೆ ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಇನ್ನು ಕಾಂಗ್ರೆಸ್​ನಿಂದ 100 ಕ್ಷೇತ್ರಗಳ ಟಿಕೆಟ್ ಫೈನಲ್ ಆಗಲಿವೆ ಎನ್ನಲಾಗಿದೆ. ಈ ಸಂಬಂಧ ದೇವನಹಳ್ಳಿ ಬಳಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ನೇತೃತ್ವದಲ್ಲಿ ಚುನಾವಣಾ ಸಮಿತಿ ಸಭೆಯನ್ನು ನಡೆಸಿದೆ.
ತುಮಕೂರಲ್ಲೂ ವ್ಯಾಪಾರ ದಂಗಲ್


ಕರಾವಳಿ (Coastal ) ಮತ್ತು ಮಲೆನಾಡಿನ ದೇವಾಲಯಗಳ (Malenadu) ಜಾತ್ರೆಗಳ ವೇಳೆ ಸದ್ದು ಮಾಡುತ್ತಿರುವ ವ್ಯಾಪಾರ ದಂಗಲ್‌ ಈಗ ತುಮಕೂರಿಗೂ (Tumakuru) ಕಾಲಿಟ್ಟಿದೆ.


ಗುಬ್ಬಿ ಚನ್ನಬಸವೇಶ್ವರ ಸ್ವಾಮಿ ಜಾತ್ರೆ ಮಹೋತ್ಸವ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಅನ್ಯಕೋಮಿನವರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಮನವಿ ಮಾಡಲಾಗಿದೆ. ಗುಬ್ಬಿ (Gubbi) ದೇವಸ್ಥಾನ ಭಾರೀ ಕಾರಣಿಕ ಶಕ್ತಿ ಹೊಂದಿದ್ದು ಮತ್ತು ಎಲ್ಲರ ಶ್ರದ್ಧೆಯ ತಾಣವಾಗಿದೆ. ಇಲ್ಲಿನ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

Published by:Sumanth SN
First published: