ಬೆಂಗಳೂರು: ಇಂದು ನಿಮ್ಮ ದಿನ. ನಿಮ್ಮ ಹಕ್ಕು ಚಲಾಯಿಸುವ ದಿನ. ನೀವು ಮತ ಹಾಕಿದರಷ್ಟೇ ಈ ದೇಶದ ನಿಜವಾದ ನಾಗರೀಕನಾಗಲು ಸಾಧ್ಯ. ಹಾಗಾಗಿ ಮಿಸ್ ಮಾಡ್ದೇ ವೋಟ್ ಮಾಡಿ. ಪ್ರಜಾಪ್ರಭುತ್ವ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಲು ಅಂತಾನೇ ಚುನಾವಣಾ ಆಯೋಗ ಹಗಲಿರುಳು ಕೆಲಸ ಮಾಡಿದೆ.
ಯಾರೋ ದುಡ್ಡು, ಕೊಟ್ಟರು ಯಾರೋ ಸೀರೆ ಕೊಟ್ಟರು, ಗಿಫ್ಟ್ ಕೊಟ್ಟರು ಅಥವಾ ಅವರು ಆ ಭರವಸೆ ಕೊಟ್ಟರು, ಇವರು ಈ ಭರವಸೆಕೊಟ್ಟರು ಅಂತ ನಿಮ್ಮನ್ನ ನೀವು ಮಾರಾಟ ಮಾಡಿಕೊಳ್ಳಬೇಡಿ.
ಅವನು ನಮ್ಮ ಜಾತಿ, ಇವನು ನಮ್ಮ ಕುಲ ಅನ್ನೋದನ್ನ ಬಿಟ್ಟು ಮತದಾನ ಮಾಡಬೇಕಿದೆ. ಇವನು ಇಷ್ಟು ವರ್ಷ ಏನು ಮಾಡಿದ ಅನ್ನೋದನ್ನೂ ಚಿಂತೆ ಮಾಡಿ ಬೇಕಿದೆ. ಇರೋರಲ್ಲಿ ಯಾರು ಉತ್ತಮರು ಅಂಥವರಿಗೆ ವೋಟ್ ಮಾಡಿ ಬೇಕಿದೆ.
ನೀವು ಹಾಕುವ ಒಂದು ವೋಟು ರಾಜ್ಯದ, ದೇಶದ ಭವಿಷ್ಯ ಬದಲಿಸಬಹುದು. ಈ ವರ್ಷನೂ ಯಾಮಾರಿದರೆ ಮುಂದಿನ 5 ವರ್ಷ ಬಾಯ್ ಬಾಯ್ ಬಿಡಿದುಕೊಂಡರೂ ಯಾವುದೇ ಪ್ರಯೋಜನ ಇರಲ್ಲ. ಹಾಗಾಗಿ ಸೂಕ್ತ ಅಭ್ಯರ್ಥಿಗೆ ಮತಹಾಕಿ.
ಯಾರಿಗೆ ಮತ ಹಾಕಿದ್ದೀರಾ ಅಂತಾನೂ ವಿವಿಪ್ಯಾಟ್ಗಳಲ್ಲಿ ಚೆಕ್ ಮಾಡುವ ಅವಕಾಶ ಇದ್ದು, ಈ ಅವಕಾಶವನ್ನು ನೀವು ಬಳಕೆ ಮಾಡಿಕೊಳ್ಳಬಹುದು.
2013ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇಕಡಾ 70.23ರಷ್ಟು ಮತದಾನವಾಗಿತ್ತು, 2018ರಲ್ಲಿ ಶೇಕಡಾ 72.13ರಷ್ಟು ಮತದಾನವಾಗಿತ್ತು. ಇದು 1952ರ ನಂತರ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಮಾಣದ್ದಾಗಿತ್ತು.
ಈ ಸಲ ಎಲ್ಲಾ ದಾಖಲೆ ಮೀರಿಸುವ ಮತದಾನ ಮಾಡುವ ಸಂಕಲ್ಪ ಮಾಡೋಣಾ, ನೆನಪಿಡಿ ಇಂದು ಪ್ರಜಾಪ್ರಭುತ್ವದ ಹಬ್ಬ. ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸೋಣ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ