• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Congress Ticket: ಯುಗಾದಿಯಂದು ಕಾಂಗ್ರೆಸ್​ ಮೊದಲ ಪಟ್ಟಿ ಬಿಡುಗಡೆ; ಹಬ್ಬದ ದಿನ ಯಾರಿಗೆ ಸಿಹಿ ಯಾರಿಗೆ ಕಹಿ?

Congress Ticket: ಯುಗಾದಿಯಂದು ಕಾಂಗ್ರೆಸ್​ ಮೊದಲ ಪಟ್ಟಿ ಬಿಡುಗಡೆ; ಹಬ್ಬದ ದಿನ ಯಾರಿಗೆ ಸಿಹಿ ಯಾರಿಗೆ ಕಹಿ?

ಕಾಂಗ್ರೆಸ್ ನಾಯಕರ ಸಭೆ

ಕಾಂಗ್ರೆಸ್ ನಾಯಕರ ಸಭೆ

ಟಿಕೆಟ್​ ಘೋಷಣೆಗೂ ಮುನ್ನ ಡಿಕೆ ಶಿವಕುಮಾರ್​​, ಆದಿಚುಂಚನಗಿರಿಯಲ್ಲಿ ಅಮಾವಾಸ್ಯೆ ಪೂಜೆ ನೆರವೇರಿಸಿದ್ದರು. ಕಾಲಭೈರವನಿಗೆ ವಿಶೇಷ ಪೂಜೆ ಸಲ್ಲಿಸಿ ಮೊದಲ ಪಟ್ಟಿ ರಿಲೀಸ್ ಮಾಡುವುದಾಗಿ ಘೋಷಿಸಿದ್ದರು.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕಾಂಗ್ರೆಸ್​ನಲ್ಲಿ (Congress) ಯಾರಿಗೆ ಬೇವು ಯಾರಿಗೆ ಬೆಲ್ಲ? (Bevu Bella) ಸಿದ್ದರಾಮಯ್ಯ ಕ್ಷೇತ್ರ (Siddaramaiah) ಯಾವುದು? ಅನ್ನೋದಕ್ಕೆಲ್ಲಾ ಯುಗಾದಿ ಹಬ್ಬದಂದೇ (Ugadi Festival) ಉತ್ತರ ಸಿಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಏಕೆಂದರೆ ಹಬ್ಬದ ದಿನದಂದೇ ಕಾಂಗ್ರೆಸ್​​ ಮೊದಲ ಪಟ್ಟಿ ರಿಲೀಸ್​​ ಆಗುತ್ತಿದೆ. ಮೊದಲ ಪಟ್ಟಿ ಯಾವಾಗ ರಿಲೀಸ್ ಮಾಡುತ್ತೀರಿ ಅಂದಿದ್ದಕ್ಕೆ ಡಿ.ಕೆ ಶಿವಕುಮಾರ್ (DK Shivakumar)​ ಕೊಟ್ಟ ಉತ್ತರ ಹಬ್ಬ. ನಾಳೆಯೇ ಯುಗಾದಿ ಹಬ್ಬ. ಆದ್ದರಿಂದ ಹಬ್ಬದಂದೇ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಗಳ ಪಾಲಿಗೆ ಬೇವು-ಬೆಲ್ಲ ಅನ್ನೋದು ಫೈನಲ್​ ಆಗಲಿದೆ. ಹೆಚ್ಚೂಕಮ್ಮಿ ಬೆಳಗ್ಗೆ 10 ಗಂಟೆ ನಂತರ ಕಾಂಗ್ರೆಸ್​​ ಮೊದಲ ಪಟ್ಟಿ ರಿಲೀಸ್​ ಮಾಡುವುದಾಗಿ ಕೆಪಿಸಿಸಿ (KPCC) ಅಧ್ಯಕ್ಷರು ಹೇಳಿದ್ದಾರೆ.


ಅಡೆತಡೆ ಅಡ್ಡಿ ಆತಂಕ ಬರದಂತೆ ಕಾಲಭೈರವನಿಗೆ ಅಮಾವಾಸ್ಯೆ ವಿಶೇಷ ಪೂಜೆ


ಟಿಕೆಟ್​ ಘೋಷಣೆಗೂ ಮುನ್ನ ಡಿಕೆ ಶಿವಕುಮಾರ್​​, ಆದಿಚುಂಚನಗಿರಿಯಲ್ಲಿ ಅಮಾವಾಸ್ಯೆ ಪೂಜೆ ನೆರವೇರಿಸಿದ್ದರು. ಕಾಲಭೈರವನಿಗೆ ವಿಶೇಷ ಪೂಜೆ ಸಲ್ಲಿಸಿ ಮೊದಲ ಪಟ್ಟಿ ರಿಲೀಸ್ ಮಾಡುವುದಾಗಿ ಘೋಷಿಸಿದ್ದರು.


ಇದನ್ನೂ ಓದಿ: Metro Inauguration: 'ಮುಗಿಯದ ಕಾಮಗಾರಿಗೆ ಉದ್ಘಾಟನೆ ಭಾಗ್ಯ', ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​​ ಕಿಡಿ


ಟಿಕೆಟ್​​ ಘೋಷಣೆ ಮಾಡಿದ ಮೇಲೆ ಪಕ್ಷದಲ್ಲಿ ದೊಡ್ಡ ಕೋಲಾಹಲ ಏಳಲಿದೆ ಎಂಬ ಚರ್ಚೆಯೂ ಜೋರಾಗಿದೆ. ಏಕೆಂದರೆ ಕಾಂಗ್ರೆಸ್​ ಟಿಕೆಟ್​​ ಸಿಗದವರು ರೆಬೆಲ್​ ಆಗಬಹುದು. ವಲಸೆ ಕಾಂಗ್ರೆಸ್ಸಿಗರಿಗೆ ಟಿಕೆಟ್​​ ಕೊಟ್ಟರೆ ಮೂಲ ಕಾರ್ಯಕರ್ತರು, ಮುಖಂಡರಿಗೆ ಸಿಟ್ಟು ಬರಬಹುದು.



ಟಿಕೆಟ್​ ಸಿಗದವರು ಪಕ್ಷಾಂತರ ಮಾಡಬಹುದು. ಟಿಕೆಟ್​ ಆಕಾಂಕ್ಷಿಗಳ ಮನವೊಲಿಕೆಯೇ ತಲೆನೋವುವಾಗಿದ್ದು, ಡಿಕೆ ಶಿವಕುಮಾರ್​​ಗೆ ಪಕ್ಷ ಸಂಘಟನೆ ಪಾರ್ಟ್​​-2 ಕೆಲಸ ಆರಂಭವಾಗಲಿದೆ.


ಟಿಕೆಟ್​ ಸಿಗದವರಿಂದ ಮಧ್ಯಾಹ್ನ ವೇಳೆಗೆ ರೆಬೆಲ್​ ರಾಜಕೀಯ!


ಕಾಂಗ್ರೆಸ್​ ಮೂಲಗಳ ಪ್ರಕಾರ ಹಾಲಿ ನಾಲ್ಕೈದು ಶಾಸಕರನ್ನ ಹೊರತುಪಡಿಸಿ ಎಲ್ಲರಿಗೂ ಟಿಕೆಟ್​ ಫೈನಲ್​ ಆಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಕನಿಷ್ಠ 130 ರಿಂದ 180 ಕ್ಷೇತ್ರಗಳಿಗೆ ಟಿಕೆಟ್​ ಘೋಷಿಸುವ ಸಾಧ್ಯತೆಯಿದೆ.


top videos



    ಮೊದಲ ಹಂತದ ಟಿಕೆಟ್​ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್​ ಒಳಗೆ ಬಂಡಾಯ ಶುರುವಾಗುವುದು ಖಚಿತ ಎನ್ನಲಾಗಿದೆ. ಹಲವು ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಗಳು ಬಿಜೆಪಿ ಮತ್ತು ಜೆಡಿಎಸ್​​ ಕಡೆ ಮುಖ ಮಾಡುವುದು ಅಷ್ಟೇ ಗ್ಯಾರಂಟಿ. ಆದ್ದರಿಂದ ಹಬ್ಬದ ದಿನವೇ ಕಾಂಗ್ರೆಸ್​ ಒಳಜಗಳ ತಾರಕಕ್ಕೇರುವ ಸಾಧ್ಯತೆ ಇದೆ.

    First published: