• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka election 2023: ಕಾಂಗ್ರೆಸ್​ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Karnataka election 2023: ಕಾಂಗ್ರೆಸ್​ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಕಾಂಗ್ರೆಸ್​ ವಸರ್ಸ್ ಬಿಜೆಪಿ

ಕಾಂಗ್ರೆಸ್​ ವಸರ್ಸ್ ಬಿಜೆಪಿ

ಕಾಂಗ್ರೆಸ್ ಕಾರ್ಯಕರ್ತರು ಮತದಾರರ ವೈಯಕ್ತಿಕ ದಾಖಲೆ, ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಕಾಂಗ್ರೆಸ್​ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಬಿಜೆಪಿಯ ಅಶ್ವತ್ಥ್ ನಾರಾಯಣ್ ನಿಯೋಗ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದೆ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಎಲೆಕ್ಷನ್ (Election)​ ಹತ್ತಿರ ಬರುತ್ತಿದೆ. ಮೂರು ಪಕ್ಷಗಳು ಘೋಷಣೆಗಳು, ಗ್ಯಾರಂಟಿಗಳು, ಯೋಜನೆಗಳನ್ನು ಮಾತಲ್ಲೇ ಹೇಳುತ್ತಿದೆ. ಆದರಲ್ಲೂ ಕಾಂಗ್ರೆಸ್ (Congress) ಕೊಡುತ್ತಿರುವ ಗ್ಯಾರಂಟಿಗಳು (Guarantee Program) ರಾಜಕೀಯ ಜಗಳನೂ ಸೃಷ್ಟಿಸುತ್ತಿದೆ. ಕಾಂಗ್ರೆಸ್​ನವರು ಶತಾಯಗತಾಯ ಅಧಿಕಾರಕ್ಕೆ ಬರಬೇಕು ಅಂತ ಮತದಾರರಿಗೆ ಬಗೆಬಗೆಯ ಆಫರ್ ಕೊಡುತ್ತಿದೆ. ಉಚಿತ ಘೋಷಣೆಗಳನ್ನು ಮೊಳಗಿಸುತ್ತಿದೆ. ಗೃಹಜ್ಯೋತಿ (Gruha Jyothi) ಹೆಸರಲ್ಲಿ 200 ಯೂನಿಟ್​ ವಿದ್ಯುತ್​ ಫ್ರೀ, ಗೃಹಲಕ್ಷ್ಮಿ (Gruha Lakshmi) ಹೆಸರಲ್ಲಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ, ಬಡವರಿಗೆ 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ (Anna Bhagya), ರಾಹುಲ್​ಗಾಂಧಿಯನ್ನು ಕರೆಸಿ ಯುವನಿಧಿ (Yuva Nidhi) ಹೆಸರಿನಲ್ಲಿ ನಿರುದ್ಯೋಗ ಭತ್ಯೆ ಘೋಷಿಸಿದ್ದರು. ಕಾಂಗ್ರೆಸ್​ ಗ್ಯಾರಂಟಿ ಘೋಷಣೆಗಳಿಗೆ ಬಿಜೆಪಿಯವರು ವ್ಯಂಗವಾಗಿ ಉತ್ತರಿಸಿದ್ದಾರೆ.


ಕಾಂಗ್ರೆಸ್​ ಘೋಷಣೆ ಬಳಿಕ ಕಣ್ಬಿಟ್ಟ ಬಿಜೆಪಿ ಸರ್ಕಾರ


ಬಿಜೆಪಿಯವರು ಯುವಕರನ್ನ ಸೆಳೆಯಲು ನಾವು ಘೋಷಣೆ ಮಾಡಿಲ್ಲ. ಯೋಜನೆಗಳನ್ನೇ ಜಾರಿ ಮಾಡಿದ್ದೀವಿ ಅಂತ ಸಾಲು ಸಾಲು ಟ್ವೀಟ್​ ಹಾಕಿದ್ದಾರೆ. ಯುವ ಕರುನಾಡಿಗೆ ಬಿಜೆಪಿಯೇ ಬೆಳಕು ಹೆಸರಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ತಂದಿದಿದ್ದೇವೆ. ನಾಲ್ಕು ಹೊಸ ಮೆಡಿಕಲ್​ ಕಾಲೇಜು ಕಟ್ಟಿದ್ದೀವಿ.


ಇದನ್ನೂ ಓದಿ:  Karnataka Elections: ಪೊಲೀಸರ ಭರ್ಜರಿ ಕಾರ್ಯಾಚರಣೆ; ₹24 ಲಕ್ಷ ಹಣ, ಕೆಜಿಗಟ್ಟಲೇ ಚಿನ್ನ, ಲೀಟರ್​ಗಟ್ಟಲೇ ಮದ್ಯ ವಶ


ಐಐಟಿ, ಇಂಜಿನಿಯರಿಂಗ್​ ಕಾಲೇಜು, 10 ಲಕ್ಷ ಕೋಟಿ ರೂಪಾಯಿ ಬಂಡವಾಳ ಸೆಳೆದಿದ್ದೀವಿ, ಬಿಯಾಂಡ್​ ಬೆಂಗಳೂರು ಯೋಜನೆ, ಸ್ವ ಉದ್ಯೋಗಕ್ಕೆ 5 ಲಕ್ಷ ಆರ್ಥಿಕ ನೆರವು, ಹೊಸ ಉದ್ಯೋಗ ನೀತಿ 10 ಸಾವಿರ ಯುವಕರು ಅಗ್ನಿವೀರರಿಗೆ ತರಬೇತಿ ಕೊಟ್ಟಿದ್ದೀವಿ ಅಂತ ಟ್ವೀಟ್​ ಹಾಕಿದೆ. ಇನ್ನೊಂದು ಕಡೆ ಯುವಜನತೆಯೇ ಯೋಗ ಕ್ಷೇಮವೇ ಬಿಜೆಪಿ ಸರ್ಕಾರದ ಆದ್ಯತೆ ಅಂತ ಬಜೆಟ್​ ಘೋಷಣೆಗಳೆನ್ನೆಲ್ಲಾ ಟ್ವಿಟ್ಟರ್​ನಲ್ಲಿ ವೈರಲ್​​ ಮಾಡಿದೆ.


ಗ್ಯಾರಂಟಿ ಘೋಷಣೆಗಳಿಂದ ನಿದ್ದೆ ಬರ್ತಿಲ್ವಾ? ಬಿಜೆಪಿ ಕಾಲೆಳೆದ ಕಾಂಗ್ರೆಸ್​ ಕಲಿಗಳು


ಬಿಜೆಪಿಯ ಟಿಕೆಟ್ ಸಿಗುವ ಭರವಸೆ ಇಲ್ಲದ, ಟಿಕೆಟ್ ಸಿಕ್ಕರೂ ಗೆಲ್ಲುವ ಭರವಸೆ ಇಲ್ಲದ, ಗೆದ್ದರೂ ತಾವೇ ಸಿಎಂ ಹುರಿಯಾಳು ಎಂಬ ಭರವಸೆ ಇಲ್ಲದ ಬೊಮ್ಮಾಯಿ ಅವರು ಕಾಂಗ್ರೆಸ್ ಯೋಜನೆಯ ಭರವಸೆಯನ್ನು ಟೀಕಿಸುವುದು ಹಾಸ್ಯಾಸ್ಪದ. ಬೊಮ್ಮಾಯಿಯವರೇ, ನೀವು ಕೈಲಾಗದವರು ಇರಬಹುದು, ಆದರೆ ಕಾಂಗ್ರೆಸ್‌ಗೆ ಎಲ್ಲವೂ ಸಾಧ್ಯ ಅಂತ ಕಾಂಗ್ರೆಸ್​ ಕಾಲೆಳೆದಿದೆ.
ಚುನಾವಣಾ ಆಯೋಗಕ್ಕೂ ಬಿಜೆಪಿ ದೂರು


ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಮತದಾರರ ಮನೆಗಳಿಗೆ ಹೋಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಮತದಾರರ ವೈಯಕ್ತಿಕ ದಾಖಲೆ, ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಕಾಂಗ್ರೆಸ್​ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಬಿಜೆಪಿಯ ಅಶ್ವತ್ಥ್ ನಾರಾಯಣ್ ನಿಯೋಗ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದೆ.


ಇದನ್ನೂ ಓದಿ: Metro Inauguration: 'ಮುಗಿಯದ ಕಾಮಗಾರಿಗೆ ಉದ್ಘಾಟನೆ ಭಾಗ್ಯ', ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​​ ಕಿಡಿ

top videos


  ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ಮತ್ತು ಕಾಂಗ್ರೆಸ್​ ಗ್ಯಾರಂಟಿ ಜಗಳಕ್ಕೆ ಕಿಡಿಕಾರಿದ್ದು, ವಿಜಯ ಸಂಕಲ್ಪ ಯಾತ್ರೆಗೆ ಅಧಿಕಾರಿಗಳನ್ನು ಬಿಟ್ಟು ಬಿಜೆಪಿ ಜನ ಕರೆಸುತ್ತಿದೆ. ಕಾಂಗ್ರೆಸ್​​ ಪಕ್ಷದ್ದು ನಕಲಿ ಕಾರ್ಡ್. ಆದರೆ ಜೆಡಿಎಸ್​ನ ಪಂಚರತ್ನ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಲ್ಲ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಿಂದ ರಾಜ್ಯದ ಬೊಕ್ಕಸಕ್ಕೆ ದೊಡ್ಡ ನಷ್ಟವಾಗಲಿದೆ ಎಂದು ಹೇಳಿದ್ದಾರೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು