• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Congress Candidates List 2023: ಅಖಂಡ 'ಕೈ'ಗೆ ಸಿಗದ ಟಿಕೆಟ್! ಕಾಂಗ್ರೆಸ್ 5ನೇ ಪಟ್ಟಿಯಲ್ಲಿ ಶಿಗ್ಗಾಂವಿ ಅಭ್ಯರ್ಥಿ ಚೇಂಜ್​

Congress Candidates List 2023: ಅಖಂಡ 'ಕೈ'ಗೆ ಸಿಗದ ಟಿಕೆಟ್! ಕಾಂಗ್ರೆಸ್ 5ನೇ ಪಟ್ಟಿಯಲ್ಲಿ ಶಿಗ್ಗಾಂವಿ ಅಭ್ಯರ್ಥಿ ಚೇಂಜ್​

ಕಾಂಗ್ರೆಸ್ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ

ಕಾಂಗ್ರೆಸ್ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ

2023ರ ವಿಧಾನಸಭೆ ಚುನಾವಣೆಗೆ (Karnataka Assembly Election) ಕಾಂಗ್ರೆಸ್​ ಪಕ್ಷ (Congress Candidate List)ಬುಧವಾರ 5ನೇ ಪಟ್ಟಿ ಬಿಡುಗಡೆ ಮಾಡಿದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ (Karnataka Assembly Election) ಕಾಂಗ್ರೆಸ್​ ಪಕ್ಷ (Congress Candidate List)ಬುಧವಾರ 5ನೇ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಪುಲಕೇಶನಗರ (Pulakeshinagar) ಸೇರಿದಂತೆ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಮಂಗಳವಾರ 4ನೇ ಪಟ್ಟಿಯಲ್ಲಿ 7 ಮಂದಿಗೆ ಟಿಕೆಟ್ ಘೋಷಣೆ ಮಾಡಿ 8 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿತ್ತು. ಇದೀಗ ಮತ್ತೆ 3 ಕ್ಷೇತ್ರಗಳನ್ನು ಘೋಷಣೆ ಮಾಡಿದ್ದು, ಐದು ಕ್ಷೇತ್ರಗಳ ಅಭ್ಯರ್ಥಿಗಳ ಲಿಸ್ಟ್​ ಬಾಕಿ ಉಳಿಸಿಕೊಂಡಿದೆ. ಪುಲಕೇಶಿನಗರ, ಕೆಆರ್ ಪುರಂ, ಮುಳಬಾಗಿಲು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರೆ, ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧಿಸುವ ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿಯನ್ನ ಬದಲಾವಣೆ ಮಾಡಿದೆ.


ನಾಲ್ಕು ಕ್ಷೇತ್ರಗಳಿಗೆ ಟಿಕೆಟ್​ ಘೋಷಣೆ


ಪುಲಕೇಶಿನಗರ- ಎ.ಸಿ ಶ್ರೀನಿವಾಸ್


ಮುಳಬಾಗಿಲು- ಡಾ. ಬಿಸಿ ಮುದ್ದು ಗಂಗಾಧರ


ಕೆ ಆರ್ ಪುರಂ-ಡಿಕೆ ಮೋಹನ್


ಶಿಗ್ಗಾಂವಿ- ಅಭ್ಯರ್ಥಿ ಬದಲಾವಣೆ, ಮೊಹಮ್ಮದ್ ಯೂಸಫ್ ಸವಣೂರ್ ಬದಲಿಗೆ ಯಾಸಿರ್ ಅಹಮದ್ ಖಾನ್ ಪಠಾಣ್​ಗೆ ಟಿಕೆಟ್


ಇದನ್ನೂ ಓದಿ: Congress Candidate List: ಶೆಟ್ಟರ್ 'ಕೈ'ಗೆ ಸಿಕ್ತು ಟಿಕೆಟ್! ಕಾಂಗ್ರೆಸ್ ನಾಲ್ಕನೇ ಪಟ್ಟಿಯಲ್ಲಿ 7 ಮಂದಿ ಹೆಸರು ಘೋಷಣೆ


ಬಾಕಿ ಉಳಿದ 5 ಕ್ಷೇತ್ರಗಳು


ಎಂಟು ಕ್ಷೇತ್ರಗಳ ಪೈಕಿ ಕೇವಲ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು, ಇನ್ನೂ ಐದು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿಲ್ಲ. ನಾಮಪತ್ರ ಸಲ್ಲಿಕೆ ಮಾಡಲು ಗುರುವಾರವೇ ಕೊನೆಯ ದಿನವಾಗಿದೆ. ಹೀಗಿದ್ದರೂ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿಲ್ಲದಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.


ಬಾಕಿ ಉಳಿದ ಕ್ಷೇತ್ರಗಳು ಇಲ್ಲಿವೆ


ಶಿಡ್ಲಘಟ್ಟ


ಸರ್​ ಸಿವಿ ರಾಮನ್ ನಗರ


ರಾಯಚೂರು ನಗರ


ಅರಕಲಗೂಡು


ಮಂಗಳೂರು ಉತ್ತರ


5 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು


ಇನ್ನು ಬಾಕಿ ಉಳಿದಿರುವ 5 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಾಂಗ್ರೆಸ್ ನಾಯಕರಿಗೆ ಕಗ್ಗಂಟಾಗಿದೆ. ಇನ್ನೂ ಕೆಲವು ಕ್ಷೇತ್ರಗಳಲ್ಲಿ ಭಾರೀ ಪೈಪೋಟಿ ಇರುವ ಕಾರಣ ಯಾರನ್ನು ಫೈನಲ್ ಮಾಡಿಲ್ಲ. ಅರಕಲಗೂಡಿನಲ್ಲಿ ಎಂ.ಟಿ.ಕೃಷ್ಣೇಗೌಡ ಮತ್ತು ಶ್ರೀಧರ ಗೌಡ ನಡುವೆ ಭಾರೀ ಪೈಪೋಟಿ ಇದೆ. ಎಂ.ಟಿ.ಕೃಷ್ಣೇಗೌಡ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೂಲಕ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದು, ಟಿಕೆಟ್‌ ಖಚಿತ ಎಂದು ನಂಬಿಕೊಂಡು ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದ್ದರೆ, ಶ್ರೀಧರಗೌಡ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಣದಲ್ಲಿ ಗುರುತಿಸಿಕೊಂಡಿದ್ದು, ಚುನಾವಣೆಗೆ ಸಿದ್ಧತೆ ಮಾಡಿ ಕೊಂಡಿದ್ದಾರೆ. ಹಾಗಾಗಿ ಟಿಕೆಟ್​ ಘೋಷಣೆ ಕಾಂಗ್ರೆಸ್​ ಕಗ್ಗಂಟಾಗಿದೆ.


ಇನ್ನು ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕೂಡ ಇಬ್ಬರು ಲೀಡರ್​ಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಮೊಹಿದ್ದೀನ್ ಬಾವ v/s ಇನಾಯತ್ ಅಲಿ ಇಬ್ಬರಲ್ಲಿ ಸ್ಪರ್ಧೆ ಇರುವುದರಿಂದ ಈ ಕ್ಷೇತ್ರ ಟಿಕೆಟ್​ಅನ್ನು ಕಾಯ್ದಿರಿಸಲಾಗಿದೆ. ಶಿಡ್ಲಘಟ್ಟದಲ್ಲಿ ಸೂಕ್ತ ಅಭ್ಯರ್ಥಿಯೇ ಇಲ್ಲ ಎನ್ನಲಾಗುತ್ತಿದೆ. ಶಿಡ್ಲಘಟ್ಟದ ಹಾಲಿ ಶಾಸಕ ವಿ.ಮುನಿಯಪ್ಪ ವಯಸ್ಸಿನ ಕಾರಣಕ್ಕೆ ತಾವು ಸಕ್ರಿಯ ರಾಜಕಾರಣದಿಂದ ದೂರು ಉಳಿದಿರುವುದರಿಂದ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್​ ಕಗ್ಗಂಟಾಗಿ ಉಳಿದಿದೆ.

top videos
    First published: