ಬೆಂಗಳೂರು: ಬಿಜೆಪಿಯ ಪ್ರಭಾವಿ ಲಿಂಗಾಯತ ನಾಯಕ ವಿ.ಸೋಮಣ್ಣ (V Somanna), ಲಿಂಗಾಯತ ನಾಯಕ ಅಂತ ಪರಿಗಣಿಸ್ತಿಲ್ಲ. ನನ್ನ ವಯಸ್ಸು, ಅನುಭವಕ್ಕೆ ಬೆಲೆ ಸಿಗುತ್ತಿಲ್ಲ ಅಂತ ಸೋಮಣ್ಣ ಸಿಟ್ಟಾಗಿದ್ದರು. ಬಿಜೆಪಿಯಿಂದ (BJP) ಒಂದು ಕಾಲನ್ನು ಆಚೆನೂ ಇಟ್ಟಿದ್ದಾರೆ. ಸಮಾಧಾನಪಡಿಸುವ ಯತ್ನನೂ ವಿಫಲವಾಗಿದೆ. ಇದರ ನಡುವೆ ಪ್ರಚಾರ ಸಮಿತಿ (Campaign Committee) ಸದಸ್ಯರ ಪಟ್ಟಿಯಲ್ಲಿ ಸೋಮಣ್ಣ ಔಟ್ ಆಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋಮಣ್ಣ ಸಿಟ್ಟು ಹೊರಹಾಕಿದ್ದಾರೆ. ಆದರೆ ಏನೂ ಭಿನ್ನಮತ ಇಲ್ಲ ಅಂತ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ. ಉಳಿದಂತೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸೇರಿದಂತೆ 25 ಮಂದಿಯ ಚುನಾವಣಾ ಪ್ರಚಾರ ಸಮಿತಿಯನ್ನು ಬಿಜೆಪಿ ರಚನೆ ಮಾಡಿದ್ದು, ಬಿಎಸ್ವೈ ಸದಸ್ಯರಾಗಿದ್ದರೆ ಬೊಮ್ಮಾಯಿ ಅಧ್ಯಕ್ಷರಾಗಿದ್ದಾರೆ.
ಬಿಜೆಪಿ ಪ್ರಚಾರ ಸಮಿತಿಯಲ್ಲಿ ಯಾರಿಗೆಲ್ಲಾ ಸ್ಥಾನ?
ಬಿ.ಎಸ್.ಯಡಿಯೂರಪ್ಪ, ನಳಿನ್‌ಕುಮಾರ್ ಕಟೀಲ್, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಶ್ರೀರಾಮುಲು, ಆರ್.ಅಶೋಕ್, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ, ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಪ್ರಭು ಚೌಹಾಣ್, ಸಿ.ಎನ್.ಅಶ್ವತ್ಥ್ ನಾರಾಯಣ್, ಸಿ.ಟಿ.ರವಿ, ವಿ.ಶ್ರೀನಿವಾಸಪ್ರಸಾದ್, ಪಿ.ಸಿ.ಮೋಹನ್, ಅರವಿಂದ ಲಿಂಬಾವಳಿ, ಲಕ್ಷ್ಮಣ್ ಸವದಿ, ರಮೇಶ್ ಜಾರಕಿಹೊಳಿ, ಬಿ.ವೈ.ವಿಜಯೇಂದ್ರ, ಛಲವಾದಿ ನಾರಾಯಣ ಸ್ವಾಮಿ ಅವರು ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ವಿಧಾನಸಭಾ ಚುನಾವಣೆ 2023 ರ ಕರ್ನಾಟಕ ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿ ಮತ್ತು ಚುನಾವಣಾ ನಿರ್ವಹಣಾ ಸಮಿತಿಗೆ ನೇಮಕಗೊಂಡ ಎಲ್ಲರಿಗೂ ಅಭಿನಂದನೆಗಳು. #BJPYeBharavase pic.twitter.com/owAoQiepxG
— BJP Karnataka (@BJP4Karnataka) March 10, 2023
ನನಗೆ ಇವಾಗ 72 ವರ್ಷ, ನನಗೆ ಆಗಬೇಕಿದ್ದು ಏನು ಇಲ್ಲ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ವಿ ಸೋಮಣ್ಣ ಅವರು, ಸೋಮಣ್ಣ ನಿಂತ ನೀರಲ್ಲ ಹರಿಯುವ ನೀರು. ಮನೆ ಮಗನಾಗಿ ಕ್ಷೇತ್ರದ ಜನರು ನೋಡಿದ್ದಾರೆ. ನಾನು ಏನು ಒಂದು ಅಕ್ಷರನೂ ಯಾರ ಬಗ್ಗೆನೂ ಮಾತಾಡಿಲ್ಲ. ರಾಜ್ಯಾಧ್ಯಕ್ಷರು, ಸಿಎಂ ಜೊತೆ ಕೆಲವು ವಿಷಯಗಳ ಬಗ್ಗೆ ಮಾತಾಡಿದ್ದೇನೆ. ಕ್ಷೇತ್ರದ ಜನರು ನನ್ನನ್ನು ಮನೆ ಮಗನಾಗಿ ನೋಡಿಕೊಂಡಿದ್ದಾರೆ.
ನನಗೆ ಇವಾಗ 72 ವರ್ಷ, ನನಗೆ ಆಗಬೇಕಿದ್ದು ಏನು ಇಲ್ಲ. ಆದರೆ ಸೋಮಣ್ಣ ಮಾತ್ರ ಹರಿಯುವ ನೀರು. ಪ್ರಚಾರ ಸಮಿತಿ ಯಲ್ಲಿ ಅವಕಾಶ ನೀಡದ ವಿಚಾರವಾಗಿ ಈ ಬಗ್ಗೆ ನಾನು ಏನು ಮಾತಾಡೋದಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಡದಿದ್ದರೆ ಎಲೆಕ್ಷನ್ಗೆ ನಿಲ್ಲಲ್ಲ
ಇನ್ನು, ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ರಮೇಶ್ ಜಾರಕಿಹೊಳಿ ಅವರು ಇಂದು ಹೊಸ ಬಾಂಬ್ ಹಾಕಿದ್ದಾರೆ. ಬಿಜೆಪಿ ಸರ್ವೆ ವರದಿ ಪ್ರಕಾರ ಅಥಣಿಯಲ್ಲಿ ಮಹೇಶ್ ಕುಮಟಳ್ಳಿ ಸೋಲುತ್ತಾರೆ ಎನ್ನುವ ಮಾತಿದೆ.
ಆದರೆ ಅವರಿಗೆ ಟಿಕೆಟ್ ಕೊಡಲೇಬೇಕು ಎಂದು ರಮೇಶ್ ಜಾರಕಿಹೊಳಿ ಒತ್ತಡ ಹಾಕುತ್ತಿದ್ದಾರೆ. ಅಥಣಿಯಲ್ಲಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಲಿಲ್ಲ ಎಂದರೆ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಇತ್ತ ರಾಯಚೂರಿನಲ್ಲಿ ಮಾತನಾಡಿರುವ ಸಚಿವ ಶ್ರೀರಾಮುಲು ಅವರು, ನಾನು ಉಪ ಮುಖ್ಯಮಂತ್ರಿ ಸ್ಥಾನ ಕೇಳೋ ಪಾಳೆ ಹೋಗಿದೆ, ಈಗ ಪ್ರಮೋಷನ್ ಆಗಿದೆ ಸಿಎಂ ಪಾಳಯ. ಪಕ್ಷ ಅವಕಾಶ ಮಾಡಿಕೊಟ್ಟರೆ ನೋಡೋಣಾ. ಮುಂದೆ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಬಹುದು ಅಂತ ನಗುತ್ತಲೇ ಹೇಳಿದ್ದಾರೆ.
ಇದನ್ನೂ ಓದಿ: Mandya: ಮೋದಿ ಆಗಮಿಸೋದು 10 ದಿನ ಮೊದಲೇ ಮಂಡ್ಯಕ್ಕೆ ಯುಗಾದಿ ಬಂದಂತಾಗಿದೆ! ಬಿಜೆಪಿಗೆ ಬೆಂಬಲ ಘೋಷಿಸಿದ ಬಳಿಕ ಸುಮಲತಾ ಗುಣಗಾನ
ಶ್ರೀರಾಮುಲು ತಮಾಷೆಗೆ ಹೇಳಿದರೋ ಇಲ್ವೋ ಆದರೆ, ಉಪಮುಖ್ಯಮಂತ್ರಿ ಆಸೆಯಲ್ಲಿದ್ದ ಸಚಿವ ಶ್ರೀರಾಮುಲುಗೆ ಬಿಜೆಪಿಯಲ್ಲಿ ನಿರಾಸೆ ಆಗಿತ್ತು. ಈಗ ಡಿಸಿಎಂ ಯೋಚನೆ ಬಿಟ್ಟಿದ್ದೀನಿ. ಪ್ರಮೋಷನ್ ಸಿಗುತ್ತೆ ಅಂತ ಶ್ರೀರಾಮುಲು ಸಿಎಂ ಆಸೆ ಹೊರಹಾಕಿದ್ದಾರೆ.
ಬಿಜೆಪಿ 150 ಸೀಟು ಗೆಲ್ಲುವ ಕನಸು ನನಸಾಗುತ್ತದೋ ಇಲ್ಲವೋ ಅನ್ನೋದು ಮತದಾರರ ಕೈಯಲ್ಲಿದೆ. ಆದರೆ ಪಕ್ಷದೊಳಗಿನ ಸಿಟ್ಟು, ಮುನಿಸು, ಭಿನ್ನಮತಕ್ಕೆ ತೇಪೆ ಹಾಕದಿದರೆ ಟಾರ್ಗೆಟ್ ರೀಚ್ ಆಗೋದು ಕಷ್ಟ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ