ಬೆಂಗಳೂರು: ಬಿಜೆಪಿ ಆಪರೇಷನ್ ಕಮಲಕ್ಕೆ (Operation Lotus) ರೆಡಿಯಾಗಿದೆ. ಮಂತ್ರಿಗಳಾಗಿರೋ ಅಶೋಕ್ (R Ashok), ಅಶ್ವತ್ಥ್ ನಾರಾಯಣ್ (Dr Ashwath Narayan) ಕ್ಷೇತ್ರ ಬದಲಿಸ್ತಾರೆ. ಅಮಿತ್ ಶಾ (Amit Shah) ಒಂಥರಾ ರೌಡಿ ಇದ್ದಂಗೆ, ಜೆಡಿಎಸ್ (JDS) ಮಖಾಡೆ ಮಲಗುತ್ತೆ. ಇದೆಲ್ಲಾ ನಾವ್ ಹೇಳ್ತಿಲ್ಲ. ಬಿಜೆಪಿ ನಾಯಕ ಯೋಗೇಶ್ವರ್ (CP Yogeshwar) ಹೇಳಿದ್ದಾರೆ ಎನ್ನಲಾದ ಆಡಿಯೋದಲ್ಲಿರೋ ಅಂಶಗಳು. ಸಂಚಲನ ಸೃಷ್ಟಿಸಿರೋ ಆಡಿಯೋ ಬಾಂಬ್ ಕಥೆ ಇಂತಿದೆ. ಸಿ.ಪಿ.ಯೋಗೇಶ್ವರ್, ಕುಮಾರಸ್ವಾಮಿ ವಿರುದ್ಧ ಸೋತ್ರೂ ಬಿಜೆಪಿಯಲ್ಲಿ ಎಂಎಲ್ಸಿ ಮಾಡಿದ್ರು. ಮಂತ್ರಿನೂ ಮಾಡಿದ್ರು. ಇದಕ್ಕೆ ಕಾರಣ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರವಹಿಸಿದ್ದು. ಈ ಮಾತನ್ನ ಬಿಜೆಪಿಯವರಿಂದ ಹಿಡಿದು ಕಾಂಗ್ರೆಸ್, ಜೆಡಿಎಸ್ನವರು ಬಹಿರಂಗವಾಗೇ ಹೇಳಿದ್ದುಂಟು. ಈಗ ಇದೇ ಯೋಗೇಶ್ವರ್ ಮಾತಾಡಿರೋ ಆಡಿಯೋ ರಾಜಕೀಯದಲ್ಲಿ ತಲ್ಲಣ ಎಬ್ಬಿಸಿದೆ.
ಯೋಗೇಶ್ವರ್ ಆಡಿಯೋ ಬಾಂಬ್-01
- ಅಮಿತ್ ಶಾ ರೌಡಿ ಥರ ಅಂದಿದ್ದು..
ಅಮಿತ್ ಶಾ ಹೇಳಿದ್ದಾರೆ ಹೊಂದಾಣಿಕೆ ಬೇಡ ಅಂತಾ. ಅಮಿತ್ ಶಾ ಇದನ್ನ ಬಾರಿ ಕೆಟ್ಟದಾಗೇ ಹೇಳಿದರು. ಶಾ ಒಂಥರಾ ರೌಡಿ ಇದ್ದಂಗೆ ಕಣಯ್ಯಾ! ನೋಡೋಕೆ ಕಮ್ಮಿ ಮಾತಾಡಿದ್ರೂ ಕೆಟ್ಟದಾಗೇ ಮಾತಾಡೋದು. ಪಾರ್ಟಿ ವಿರುದ್ಧ ಅಂಡರ್ಸ್ಟ್ಯಾಂಡಿಂಗ್ ಮಾಡ್ಕೊಂಡ್ರೆ ಅವರ ಬುಡ ತೆಗಿಸ್ತಾರೆ. ಒಂದ್ 30 ಜನರನ್ನ ಕೂರಿಸ್ಕೊಂಡ್ ನಮಗೆ ಹೇಳಿದ್ದರು. ನಂಗೆ ಗೊತ್ತು ಯಾಱರ್ ಪಾರ್ಟಿಗೆ ದ್ರೋಹ ಮಾಡ್ತಿದ್ದೀರಾ ಅಂತ ನೀಟಾಗಿ 3 ಗಂಟೆ ಕ್ಲಾಸ್ ತಗೊಂಡಿದ್ದರು.
ಯೋಗೇಶ್ವರ್ ಆಡಿಯೋ ಬಾಂಬ್-02
- ಬಿಜೆಪಿ ಗೆಲ್ಲಲ್ಲ, ಆದ್ರೂ ಅಧಿಕಾರಕ್ಕೆ ಬರ್ತೀವಿ ಅಂದಿದ್ದು
ನನ್ನ ಅಭಿಪ್ರಾಯದಲ್ಲಿ ಬಿಜೆಪಿ ಬರಲ್ಲ. ಜನಾಭಿಪ್ರಾಯದಲ್ಲಿ ಬಿಜೆಪಿ ಸರ್ಕಾರ ಬರಲ್ಲ. ಆದರೂ ಬಿಜೆಪಿ ಸರ್ಕಾರ ಮಾಡೇ ಮಾಡ್ತೀವಿ. ಮಾವಿನಕಾಯಿ ಹಾಗೇ ಹಣ್ಣಾಗಲ್ಲ. ಕೆಮಿಕಲ್ ಹಾಕ್ಬೇಕು ಹಾಕ್ತೀವಿ.
ಯೋಗೇಶ್ವರ್ ಆಡಿಯೋ ಬಾಂಬ್-03
- ಅಶೋಕ್, ಅಶ್ವತ್ಥ ನಾರಾಯಣ ಕ್ಷೇತ್ರ ಬದಲಿಸ್ತಾರೆ ಅಂದಿದ್ದು
ನಾನು ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡ್ತೀನಿ. ಅಶೋಕ್, ಡಿಕೆ ಶಿವಕುಮಾರ್ ವಿರುದ್ಧ ನಿಲ್ಬೇಕು. ಅಶ್ವತ್ಥ್ ನಾರಾಯಣ ನಿಖಿಲ್ ವಿರುದ್ಧ ನಿಲ್ಬೇಕು. ನಾನೇ ಪಟ್ಟಿ ಮಾಡ್ಕೊಂಡ್ ಹೇಳಿಬಿಡ್ತೀನಿ. ಆಗ ಬಿಜೆಪಿ ಬಂದೇ ಬರುತ್ತೆ. ಫೆಬ್ರವರಿಯಲ್ಲಿ ಈ ಕೆಲಸ ಮಾಡ್ತೀನಿ ನೋಡ್ತಿರಿ.
ಯೋಗೇಶ್ವರ್ ಆಡಿಯೋ ಬಾಂಬ್-03
- ಎಲೆಕ್ಷನ್ಗೂ ಮೊದಲೇ ಆಪರೇಷನ್ ಕಮಲ
ಹಳೇ ಮೈಸೂರಲ್ಲಿ ಆಪರೇಷನ್ ಮಾಡ್ತೀವಿ. ಸಂಕ್ರಾಂತಿ ಆದ್ಮೇಲೆ ದೊಡ್ಡ ಡೆವಲಪ್ಮೆಂಟ್ ಆಗುತ್ತೆ. ಮೈಸೂರು ಭಾಗದ ದೊಡ್ಡ ಲೀಡರ್ಸ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರ್ತಾರೆ. ಅವ್ರಿಂದ 4-5 ಕ್ಷೇತ್ರದಲ್ಲಿ ಬಿಜೆಪಿಗೆ ಪ್ಲಸ್ ಆಗುತ್ತೆ. ಮಂಡ್ಯದಲ್ಲೊಬ್ಬರು ಬರ್ತಾರೆ, ಕೋಲಾರದ ದಲಿತ ಲೀಡರ್ ಬರ್ತಾರೆ. ಮುನಿಯಪ್ಪ ಬರೋಕೆ ರೆಡಿ. ನಮ್ಮವರೇ ಇನ್ನೂ ಕ್ಲಾರಿಟಿ ಕೊಟ್ಟಿಲ್ಲ. ನಾಳೆ ನಾಡಿದ್ದು ನಮ್ಮವರು ಕ್ಲಾರಿಟಿ ಕೊಡ್ತಾರೆ. ಈ ಸಲ ಚುನಾವಣೆ ಗೆದ್ಮೇಲೆ ಆಪರೇಷನ್ ಕಮಲ ಮಾಡಲ್ಲ. ಎಲೆಕ್ಷನ್ಗೂ ಮೊದಲೇ ಆಪರೇಷನ್ ಕಮಲ ಮಾಡ್ತೀವಿ.
ಯೋಗೇಶ್ವರ್ ಆಡಿಯೋ ಬಾಂಬ್-04
- HDK ಗೆಲ್ತಾರೆ, JDS ಇರೋ ಸೀಟು ಹೋಗುತ್ತಂತೆ..
ರಾಮನಗರದಲ್ಲಿ 1 ಮೈನಸ್ ಆಗುತ್ತೆ. ಚನ್ನಪಟ್ಟಣ ಹೆಚ್ಡಿಕೆ ಗೆಲ್ತಾರೆ. ಅಲ್ಲಿಗೆ JDS 12 ಸೀಟು ಹೋಯ್ತು, ಉತ್ತರ ಕರ್ನಾಟಕದಲ್ಲಿ 5 ಸೀಟಿತ್ತು. 3 ಸೀಟು ಹೋಯ್ತು ಅಲ್ಲಿಗೆ 15 ಕಡೆ ಸೋಲ್ತಾರೆ. ಮಧುಗಿರಿ ವೀರಭದ್ರಯ್ಯ, ಲಿಂಗೇಶ್, ಚಿಂತಾಮಣಿ ರೆಡ್ಡಿ, ಸಕಲೇಶಪುರ ಕುಮಾರಸ್ವಾಮಿನೂ ಸೋಲ್ತಾರೆ. ಜೆಡಿಎಸ್ 19 ಕಡೆ ಸೋಲುತ್ತೆ ನೋಡ್ತೀರಿ. K.R.ನಗರ ಸಾ.ರಾ.ಮಹೇಶ್ ಈ ಸಲ ಸೋಲ್ತಾನೆ.
ಯೋಗೇಶ್ವರ್ ಆಡಿಯೋ ಬಾಂಬ್-05
- ಸಿದ್ದರಾಮಯ್ಯ ಗೆಲ್ತಾರಂತೆ, ಸಿಎಂ ಆಗೋಕೆ ಬಿಡಲ್ವಂತೆ
ಕಾಂಗ್ರೆಸ್ ಸ್ಟ್ರಾಂಗ್ ಇಲ್ಲ, ಸಿದ್ದರಾಮಯ್ಯಗೆ ಪಟ್ಟ ಕಟ್ಟೋಕೆ ದೊಡ್ಡವ್ರೇ ಸಹಿಸಿಕೊಳ್ಳಲ್ಲ. ಶಿವಕುಮಾರ್ ಸ್ಟೇಟ್ ಕಾಂಪಿಟೇಟರ್. ಕೋಲಾರದಲ್ಲಿ ಸಿದ್ದರಾಮಯ್ಯ ಗೆಲ್ಲಬಹುದು. ಸೋಲ್ತಾರೆ ಅಂತ ಹೇಳೋಕಾಗಲ್ಲ, ವರ್ತೂರು ಪ್ರಕಾಶ್ ಟೈಟ್ ಇದ್ದಾರೆ. ಸಿದ್ದರಾಮಯ್ಯನಂಥವರು ರಾಜಕಾರಣದಲ್ಲಿ ಇರಬೇಕು. ಗೆದ್ಮೇಲೆ ಅವ್ರು ಮುಖ್ಯಮಂತ್ರಿ ಆಗ್ಬೇಕು. MLAಗಳ ಸಪೋರ್ಟ್ ಜಾಸ್ತಿಯಿದೆ, ಅವರಿಗೂ ಕೊನೆ ಚಾನ್ಸ್, ಬಟ್ 120 ಸೀಟು ಗೆಲ್ಲೋದು ಡೌಟು ಎಂದು ಹೇಳಿದ್ದಾರೆ.
ವಾಯ್ಸ್ ಇಷ್ಟೆಲ್ಲಾ ಮಾತಾಡಿದ್ದೀರಲ್ಲಾ ಇದು ನಿಜನಾ ಅಂದ್ರೆ ಆಡಿಯೋ ನಂದಲ್ಲ ಅಂದ್ರು. ಆಮೇಲೆ ವಿಡಿಯೋ ಬಿಟ್ಟು ಆಡಿಯೋ ಹಿಡ್ಕೊಂಡಿದ್ದೀರಾ ಎಂದು ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ: Panchamasali Reservation: ಬಿಜೆಪಿಯಲ್ಲಿ ಯತ್ನಾಳ್ Vs ನಿರಾಣಿ; 'ಪಿಂಪ್ ಸಚಿವ' ಎಂಬ ಯತ್ನಾಳ್ ಹೇಳಿಕೆಗೆ ಸಚಿವ ನಿರಾಣಿ ಕಣ್ಣೀರು
ಯೋಗೇಶ್ವರ್ ಆಡಿಯೋ ಬಗ್ಗೆ ಸಚಿವ ಅಶ್ವತ್ಥ್ ನಾರಾಯಣ್ ಹೇಳಿದ್ದಿಷ್ಟು!
ಚನ್ನಪಟ್ಟಣದ ಕಮಲ ಕಲಿಯ ಆಡಿಯೋ ದೊಡ್ಡ ಸುದ್ದಿಯಾಗ್ತಿದ್ದಂತೆ ಕಾಂಗ್ರೆಸ್ ಕಾಲೆಳೆದಿದೆ. ಜನಾದೇಶದಿಂದ ಬಿಜೆಪಿ ಅಧಿಕಾರಕ್ಕೆ ಬರಲ್ಲ ಅಂತ ಯೋಗೇಶ್ವರ್ ಹೇಳಿದ್ದಾರೆ ಬೊಮ್ಮಾಯಿಯವರೇ ಜನರಿಗಷ್ಟೇ ಅಲ್ಲ, ನಿಮ್ಮದೇ ಪಕ್ಷದ ಶಾಸಕರಿಗೇ ನಂಬಿಕೆ ಕಳೆದುಹೋಗಿದ್ದು ಶೋಚನೀಯವಲ್ಲವೇ ಅಂತ ಒಂದು ಟ್ವೀಟ್ ಅಮಿತ್ ಶಾ ಹೆಸರು ಉಲ್ಲೇಖಿಸಿ ರೌಡಿಗಳನ್ನು ಕರೆದು ರೌಡಿ ಮೋರ್ಚಾ ಕಟ್ಟುತ್ತಿದ್ದೀರಾ? ಬಿಜೆಪಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಕಟೀಲ್ ಯಾಕೆ ಮಾತಾಡ್ತಿಲ್ಲ ಅಂತ ಕಾಲೆಳೆದಿದೆ.
ಯೋಗೇಶ್ವರ್ ಆಡಿಯೋ ಹಲ್ಚಲ್ ಎಬ್ಬಿಸಿದ್ದು ಸಂಕ್ರಾಂತಿ ಬಳಿಕ ರಾಜ್ಯ ರಾಜಕೀಯದಲ್ಲಿ ಜಂಪಿಂಗ್ ರಾಜಕೀಯ ಹೇಗಿರುತ್ತೆ ಕಾದು ನೋಡಬೇಕಿದೆ.