ಉಡುಪಿ: ಮತದಾನ ನಮ್ಮ ಹಕ್ಕು. ಪ್ರತಿಯೊಬ್ಬರೂ ಕೂಡ ಮತ ಚಲಾಯಿಸಬೇಕು ಎಂದು ಅಧಿಕಾರಿಗಳು (Karnataka Election 2023) ಮತದಾನ ಜಾಗೃತಿ ಮೂಡಿಸುತ್ತಾರೆ. ಅನೇಕರು ಮತದಾನದ ಮಹತ್ವ ಅರಿತು ವೋಟ್ ಮಾಡೋಕೆ ಬಂದ್ರೆ ಇನ್ನೂ ಕೆಲವರು ಈಗಲೂ ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ ಉಡುಪಿಯಲ್ಲೊಂದು (Udupi) ಯುವತಿ ಮೊದಲ ಮತದಾನದಲ್ಲೇ ಇತರರಿಗೆ ಮಾದರಿಯಾಗಿದ್ದಾರೆ.
ಹೌದು.. ಉಡುಪಿಯ ವಿದ್ಯಾರ್ಥಿನಿ ಸೋನಾಲಿ ಎಂಬಾಕೆ ತನಗೆ ಪರೀಕ್ಷೆ ಇದ್ದರೂ ಕೂಡ ಮತ ಚಲಾಯಿಸೋಕೆ ಬಂದು ಜವಾಬ್ದಾರಿ ಮೆರೆದಿದ್ದಾರೆ. ವಿಶೇಷ ಅಂದ್ರೆ ಸೋನಾಲಿ ಅವರಿಗೆ ಇದು ಮೊದಲ ಮತ. ಮೂಡಬಿದಿರೆಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ಸೋನಾಲಿ ಅವರು ತನ್ನ ಹುಟ್ಟೂರು ಉಡುಪಿಗೆ ಬಂದು ಮತ ಚಲಾಯಿಸಿ ಜವಾಬ್ದಾರಿ ಮೆರೆದಿದ್ದಾರೆ.
ಇದನ್ನೂ ಓದಿ: Ramanagara Elections: ಹಕ್ಕು ಚಲಾಯಿಸಲು ಸಜ್ಜಾದ ರಾಮನಗರ ಜಿಲ್ಲೆಯ ಘಟಾನುಘಟಿ ನಾಯಕರು!
ಮೊದಲ ಮತದ ಮಾತು
ಮೊದಲ ಮತ ಚಲಾಯಿಸಿ ಬಳಿಕ ನ್ಯೂಸ್ 18 ಜೊತೆ ಮಾತನಾಡಿದ ವಿದ್ಯಾರ್ಥಿನಿ ಸೋನಾಲಿ, ನನ್ನ ವೋಟಿಗೆ ತುಂಬ ಬೆಲೆ ಇದೆ. ನನ್ನ ಮತ ನನ್ನ ಧ್ವನಿ ಅನ್ನೋ ಹೆಮ್ಮೆ ಇದೆ. ಹೀಗಾಗಿ ಪರೀಕ್ಷೆ ಇದ್ದರೂ ಸಹ ಮತ ಹಾಕಲು ಬಂದಿದ್ದೇನೆ. ನಾನು ಉಡುಪಿಯವಳಾದರೂ ಮೂಡುಬಿದಿರೆಯಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದೇನೆ. ಹೀಗಾಗಿ ಪರೀಕ್ಷೆ ನಡೆಯುತ್ತಿದ್ದರೂ ಮತ ಹಾಕಲೇ ಬೇಕು ಅಂತ ಬಂದಿದ್ದೇನೆ ಎಂದು ಹೇಳಿದರು.
ಇನ್ನು ರಾಜಕೀಯದ ಮೇಲೆ ಋಣಾತ್ಮಕ ಭಾವನೆ ಇಟ್ಟು ಮತ ಹಾಕಲು ಹಿಂದೇಟು ಹಾಕಬೇಡಿ ಎಂದ ಸೋನಾಲಿ, ನಮ್ಮ ಊರಲ್ಲಿ ನಮ್ಮ ಗ್ರಾಮದಲ್ಲಿ ಯಾರು ಕೆಲಸ ಮಾಡಬೇಕು ಅನ್ನೋದು ನಮಗೆ ಗೊತ್ತಿರಬೇಕು. ಅಂತಹ ಅಭ್ಯರ್ಥಿಗೆ ಮತ ಹಾಕೋದು ನಮ್ಮ ಜವಾಬ್ದಾರಿ. ತಪ್ಪದೆ ಮತ ಹಾಕೋದು ನಮ್ಮ ದೇಶದ ಅಭಿವೃದ್ದಿಗೆ ಪೂರಕ ಎಂದು ಹೇಳಿದರು.
ಇದನ್ನೂ ಓದಿ: ಕರ್ನಾಟಕ ಚುನಾವಣೆ 2023: ಮಧುವಣಗಿತ್ತಿಯಂತೆ ಶೃಂಗಾರಗೊಂಡು ಮತದಾರರನ್ನು ಆಕರ್ಷಿಸಿದ ಮತಗಟ್ಟೆ!
ಹುಬ್ಬಳ್ಳಿಯಲ್ಲಿ ಮತ ಚಲಾಯಿಸಲು ಬಂದ ಬೆಕ್ಕು!
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಜನರು ಮಾತ್ರ ಮತದಾನ ಮಾಡೋಕೆ ಬಂದಿಲ್ಲ. ಜನರ ಜೊತೆ ಬೆಕ್ಕು ಕೂಡ ಮತದಾನಕ್ಕೆ ಬಂದ ಅಪರೂಪದ ಸನ್ನಿವೇಶ ನಡೆದಿದೆ.
ಹೌದು.. ಮತ ಚಲಾಯಿಸಲೆಂದು ಸರತಿ ಸಾಲಿನಲ್ಲಿ ನಿಂತವರಿಗೆ ಕುಳಿತುಕೊಳ್ಳಲು ಚೆಯರ್ ವ್ಯವಸ್ಥೆ ಮಾಡಲಾಗಿತ್ತು. ಇದರ ಚೆಯರ್‌ನಲ್ಲಿ ಎಲ್ಲರೂ ಕುಳಿತಿದ್ದರು. ಈ ವೇಳೆ ಅಲ್ಲೇ ಇದ್ದ ಬೆಕ್ಕು ಸಾಲಿನಲ್ಲಿ ಹಾಕಿದ್ದ ಖಾಲಿ ಕುರ್ಚಿಯಲ್ಲಿ ಕುಳಿತಿದೆ. ಜನರನ್ನು ಅದನ್ನು ಎಬ್ಬಿಸಲು ಪ್ರಯತ್ನ ಮಾಡಿದರೂ ಕೂಡ ಅದು ಅಲ್ಲಿಂದ ಕದಲಲಿಲ್ಲ. ಅಲ್ಲೇ ಇದ್ದ ಪತ್ರಕರ್ತರು ಕುರ್ಚಿಯಲ್ಲಿ ಜನರ ಜೊತೆ ಕುಳಿತಿದ್ದ ಬೆಕ್ಕಿನ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.
ಅಂದಹಾಗೆ ಈ ದೃಶ್ಯ ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಹಾಕಲಾಗಿದ್ದ ಮತಗಟ್ಟೆ ಸಂಖ್ಯೆ 188 ರ ಬಳಿ ಬಂದ ಬೆಕ್ಕು ತಾನು ಕೂಡ ಮತ ಚಲಾಯಿಸುತ್ತೇನೆ ಅನ್ನೋ ಹಾಗೆ ಚೆಯರ್‌ನಲ್ಲಿ ಕುಳಿತು ಫೋಸ್ ನೀಡಿದೆ. ಆರಂಭದಲ್ಲಿ ಆ ಬೆಕ್ಕನ್ನು ಎಬ್ಬಿಸಲು ಅಲ್ಲಿದ್ದ ಮತದಾರರು ಪ್ರಯತ್ನಪಟ್ಟರೂ ಕೂಡ ಅದು ಕದಲದಿದ್ದಕ್ಕೆ ಅದರ ಪಾಡಿಗೆ ಅದನ್ನು ಬಿಟ್ಟರು. ಆ ಬಳಿಕ ಬೆಕ್ಕು ತನ್ನಷ್ಟಕ್ಕೆ ತಾನು ಕುಳಿತು ಆಟವಾಡ್ತಾ ಇತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ