• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Elections: ಮತದಾನಕ್ಕೆ ಬಳಕೆಯಾಗಲಿದೆ ಪ್ರಖ್ಯಾತ ಮೈಸೂರು ಶಾಯಿ; ಕರ್ನಾಟಕ ಚುನಾವಣೆಗೆ 1.50 ಲಕ್ಷ ಬಾಟಲಿ ಇಂಕ್ ಪೂರೈಕೆ

Karnataka Elections: ಮತದಾನಕ್ಕೆ ಬಳಕೆಯಾಗಲಿದೆ ಪ್ರಖ್ಯಾತ ಮೈಸೂರು ಶಾಯಿ; ಕರ್ನಾಟಕ ಚುನಾವಣೆಗೆ 1.50 ಲಕ್ಷ ಬಾಟಲಿ ಇಂಕ್ ಪೂರೈಕೆ

ಮೈಸೂರು ಶಾಯಿ

ಮೈಸೂರು ಶಾಯಿ

ಪ್ರಖ್ಯಾತ ಮೈಸೂರು ಶಾಯಿಯನ್ನು ದೇಶದ ಎಲ್ಲಾ ರಾಜ್ಯಗಳ ಚುನಾವಣೆಗಳಿಗೆ ಬಳಕೆ ಮಾಡಲಾಗುತ್ತದೆ. ಇದು ಅಳಿಸಲಾಗದ ಶಾಯಿ ಆಗಿದ್ದು, ನಾಳೆ ನಡೆಯುವ ಮತದಾನಕ್ಕೂ ಲಕ್ಷ ಬಾಟಲಿ ಇಂಕ್ ಬಳಕೆ ಮಾಡಲಾಗುತ್ತಿದೆ.

  • Share this:

ಬೆಂಗಳೂರು: ನಾಳೆ ನಡೆಯುವ ವಿಧಾನಸಭಾ ಚುನಾವಣೆಯ (Assembly Election) ಮತದಾನದ ವೇಳೆ ಹಕ್ಕು ಚಲಾಯಿಸುವ ಪ್ರತಿಯೊಬ್ಬ ಮತದಾರರಿಗೂ ಕೇಂದ್ರ ಚುನಾವಣಾ ಆಯೋಗದ (Election Commission) ನಿರ್ದೇಶನದಂತೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯ (Ink) ಗುರುತು ಹಾಕಲಾಗುತ್ತದೆ. ನಾಳಿನ ಮತದಾನಕ್ಕೆ ಪ್ರಖ್ಯಾತ ಮೈಸೂರು (Mysuru) ಶಾಯಿ ಬಳಕೆಯಾಗಲಿದೆ. ನಾಳೆ ನಡೆಯುವ ಮತದಾನಕ್ಕೆ 1.50 ಲಕ್ಷ ಬಾಟಲ್ (Bottle) ಶಾಯಿ ಬಳಕೆಯಾಗುತ್ತಿದೆ. ಒಂದು ಬಾಟಲಿಯಿಂದ 750 ಮತದಾರರ (Voters) ಬೆರಳಿಗೆ ಶಾಯಿ ಹಾಕಬಹುದಾಗಿದೆ.


ಪ್ರತಿ ಬಟಲ್​ 10 ಎಂಎಲ್​​ ಪ್ರಮಾಣವನ್ನು ಹೊಂದಿರುತ್ತೆ


ಈ ಕುರಿತಂತೆ ಮೈಸೂರು ಪೈಟಿಂಗ್ಸ್ & ವಾರ್ನಿಷ್ ಲಿ. ಸಂಸ್ಥೆಯ ಜಿಎಂ ಹರಕುಮಾರ್ ನ್ಯೂಸ್​ 18 ಕನ್ನಡಕ್ಕೆ ಮಾಹಿತಿ ನೀಡಿದ್ದು, 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ನಮ್ಮ ಸಂಸ್ಥೆ ಚುನಾವಣಾ ಆಯೋಗಕ್ಕೆ 1.50 ಲಕ್ಷ ಬಾಲಟ್ ಶಾಯಿಯನ್ನು ಕಳುಹಿಸಲಾಗಿದೆ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಚುನಾವಣೆ 2023: ₹147 ಕೋಟಿ ಕ್ಯಾಶ್​​, ₹375 ಕೋಟಿ ಮೌಲ್ಯದ ವಸ್ತುಗಳು ಜಪ್ತಿ! ಯಾವ ಜಿಲ್ಲೆಯಲ್ಲಿ ಏನೆಲ್ಲಾ ಸಿಕ್ಕಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ


ಪ್ರತಿ ಬಟಲ್​ 10 ಎಂಎಲ್​​ ಪ್ರಮಾಣವನ್ನು ಹೊಂದಿದ್ದು, ಮೇ 10ರಂದು ಮತದಾನ ನಡೆಯಲಿದ್ದು, ಈ ಚುನಾವಣೆಯಲ್ಲಿ ನಮ್ಮ ಸಂಸ್ಥೆಯ ವಿಶೇಷ ಉತ್ಪನ್ನ ಬಳಕೆ ಆಗುತ್ತಿದೆ. ಇದರ ಜೀವಿತ ಅವಧಿ ಆರು ತಿಂಗಳು ಇರಲಿದ್ದು, ಪ್ರತಿ 10 ಎಂಎಲ್​ ಬಟಲ್​ನಿಂದ ಸುಮಾರು 700 ರಿಂದ 800 ಮಂದಿಗೆ ಗುರುತು ಮಾಡಬಹುದು ಎಂದು ತಿಳಿಸಿದ್ದಾರೆ.




ಪ್ರಖ್ಯಾತ ಮೈಸೂರು ಶಾಯಿಯನ್ನು ದೇಶದ ಎಲ್ಲಾ ರಾಜ್ಯಗಳ ಚುನಾವಣೆಗಳಿಗೆ ಬಳಕೆ ಮಾಡಲಾಗುತ್ತದೆ. ಇದು ಅಳಿಸಲಾಗದ ಶಾಯಿ ಆಗಿದ್ದು, ನಾಳೆ ನಡೆಯುವ ಮತದಾನಕ್ಕೂ ಲಕ್ಷ ಬಾಟಲಿ ಇಂಕ್ ಬಳಕೆ ಮಾಡಲಾಗುತ್ತಿದೆ. ಒಂದು ತಿಂಗಳ ಹಿಂದೆಯೇ ಚುನಾವಣಾ ಆಯೋಗಕ್ಕೆ ಅಳಿಸಲಾಗದ ಶಾಯಿ ಪೂರೈಸಿಕೆ ಮಾಡಲಾಗಿದೆ. ಕಳೆದ ತಿಂಗಳಲ್ಲೇ ಚುನಾವಣೆಗೆ ಬಳಕೆಯಾಗುವ ಅಷ್ಟು ಶಾಯಿಗಳನ್ನು ಸಂಸ್ಥೆ ತಯಾರಿಸಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

First published: