ನೇರ ಪ್ರಸಾರ

(Live)ಕರ್ನಾಟಕ ಚುನಾವಣೆ 2018: ಮುಂದುವರೆದ ರೆಸಾರ್ಟ್​ ರಾಜಕಾರಣ: ಬೇರೆ ರಾಜ್ಯದತ್ತ ಪ್ರಯಾಣ ಬೆಳೆಸಿದ ‘ಕೈ’ ತೆನೆ ಪಡೆ

kannada.news18.com | May 18, 2018, 12:03 AM IST
facebook Twitter google Linkedin
Last Updated May 17, 2018
auto-refresh

ಮುಖ್ಯಾಂಶ

11:38 pm (IST)

ಬಸ್​ ಬದಲಿಸಿದ ತೆನೆ ನಾಯಕರು

ಸಿದ್ದಗಂಗಾ ಬಸ್​ನಿಂದ ಎಸ್​ಆರ್​ಎಸ್​ ಬಸ್​ಗೆ ಶಿಫ್ಟ್​

ಕೋನರೆಡ್ಡಿ, ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಪಯಣ

 ಹೈದರಾಬಾದ್ ಕಡೆ ಹೋಗುವ ಸಾಧ್ಯತೆ


11:18 pm (IST)

ಕೊಚ್ಚಿ ಪ್ಲಾನ್​ ಕ್ಯಾನ್ಸಲ್​ ಮಾಡಿದ ಕಾಂಗ್ರೆಸ್​ ಪಡೆ

ಕೊಚ್ಚಿಗೆ ತೆರಳ ಬೇಕಿದ್ದ ಕಾಂಗ್ರೆಸ್​ ನಾಯಕರು

ಕ್ಲಿಯರೆನ್ಸ್​ ಕೊಡದೆ, ಎಸಿಟಿಯಿಂದ ಅಡ್ಡಿ

​ಈ ಹಿನ್ನಲೆಯಲ್ಲಿ ದಿಢೀರ್​ ಪ್ಲಾನ್​ ಕ್ಯಾನ್ಸಲ್​

ಕೊಚ್ಚಿ ಬದಲಿಗೆ ಪಾಂಡಿಚೇರಿಯತ್ತ ಪಯಣ

​ ಎರಡು ಬಸ್​ಗಳಲ್ಲಿ ಪಾಂಡಿಚೇರಿಗೆ ಪಯಣ

ಪಾಂಡಿಚೇರಿಯಲ್ಲಿ ಕಾಂಗ್ರೆಸ್​ ಆಡಳಿತ ಪ್ರದೇಶ


11:13 pm (IST)

ಮಲ್ಲಿಕಾರ್ಜುಖರ್ಗೆ ನೇತೃತ್ವದಲ್ಲಿ ನಾಳೆ ರಾಜಭವನ ಚಲೋ

ರಾಜ್ಯಪಾಲರ ನಡೆಯನ್ನು ಖಂಡಿಸಿ ಬೃಹತ್​​ ಕಾಲ್ನಡಿಗೆ 

ಗುಂಡೂರಾವ್​, ಗುಲಾಮ್​ ನಬಿ ಆಜಾದ್​, ಕಾರ್ಯಕರ್ತರು ಭಾಗಿ

ಕೆಪಿಸಿಸಿ ಕಚೇರಿಂದ ರಾಜಭವನ ಚಲೋ ಶುರು

ನಾಳೆ ಬೆಳಿಗ್ಗೆ 11 ಗಂಟೆಗೆ ಶುರುವಾಗಲಿರುವ ಕಾಲ್ನಡಿಗೆ


8:50 pm (IST)

ಶಾಂಗ್ರಿಲಾ ಹೊಟೇಲ್ ಗೆ ಕುಮಾರಸ್ವಾಮಿ ಪುತ್ರ ನಿಖಿಲ್ ಆಗಮನ 

ಜೆಡಿಎಸ್ ಶಾಸಕರನ್ನ ಭೇಟಿಮಾಡಿ ಮಾತುಕತೆ ನಡೆಸಿದ ನಿಖಿಲ್

ಜೆಡಿಎಸ್ ಶಾಸಕರ ಜೊತೆಯಲ್ಲಿ ಕೇರಳಕ್ಕೂ ತೆರಳಲಿರುವ ನಿಖಿಲ್

ಕುಮಾರಸ್ವಾಮಿ ಸೂಚನೆ ಮೇರೆಗೆ ಶಾಸಕರ ಜೊತೆ ಕೊಚ್ಚಿನ್ ಗೆ ತೆರಳುತ್ತಿರುವ ನಿಖಿಲ್

ಈಗಾಗಲೇ ಹೊಟೆಲ್ ಗೆ ಆಗಮಿಸಿ ಶಾಸಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ


8:33 pm (IST)

ರಾಜ್ಯಪಾಲರಿಂದ ನೂತನ ಅಡ್ವೊಕೇಟ್​ ಜನರ ನೇಮಕ

ಪ್ರಭುಲಿಂಗ ಕೆ ನವಡಗಿ, ನೂತನ ಅಡ್ವೊಕೇಟ್​ ಜನರಲ್​

ಹಾಲಿ ಅಡ್ವೊಕೇಟ್​ ಜನರಲ್​ ಮಧುಸೂದನ್​ ನಾಯ್ಕ್​ ಬದಲಿಗೆ ನವಡಗಿ

ರವಿವರ್ಮಕುಮಾರ್​ರಿಂದ ತೆರವಾದ ಸ್ಥಾನಕ್ಕೆ ಮಧುಸೂದನ್​ ನಾಯ್ಕ್​ರನ್ನು ಕಾಂಗ್ರೆಸ್​ ನೇಮಿಸಿತ್ತು

ಪ್ರಮಾಣ ವಚನ ಸ್ವೀಕರಿಸುತ್ತಲೇ ಮುಂದುವರೆದ ವರ್ಗಾವಣೆಗಳು


8:27 pm (IST)

ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ವಿ.ಪಿ.‌ಇಕ್ಕೇರಿ ನೇಮಕ.

ಈ ಹಿಂದೆ ಶಿವಮೊಗ್ಗ ಜಿಲ್ಲಾಧಿಕಾರಿ ಆಗಿದ್ದ ವಿ.ಪಿ.ಇಕ್ಕೇರಿ


8:19 pm (IST)

ಶಾಮನೂರು ಶಿವಶಂಕರಪ್ಪ ನಿವಾಸದಲ್ಲಿ ಕಾಂಗ್ರೆಸ್ ಶಾಸಕರ ಸಭೆ

ರಾಜಶೇಖರ್ ಪಾಟೀಲ್ , ರಹೀಂಖಾನ್, ಈಶ್ವರ್ ಖಂಡ್ರೆ ಸೇರಿ ಇತರೆ ಶಾಸಕರು ಭಾಗಿ


8:07 pm (IST)

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

 ಬಿಜೆಪಿಯವರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ

ಇದು ಪ್ರಜಾಪ್ರಭುತ್ವದ ವಿರುದ್ಧವಾದ ಕೆಲಸ

ಯಾವ ಶಾಸಕರೂ ಬಿಜೆಪಿಯ ಆಮಿಷಕಕ್ಕೇ ಒಳಗಾಗ ಬಾರದು

 

 


7:49 pm (IST)

ಡಿ ಕೆ ಶಿವಕುಮಾರ್ ಹೇಳಿಕೆ 

ಬಿಜೆಪಿಯವರಿಗೆ ಪುರ್ಣ ಬಹುಮತ​ ಕೂಡ ಇಲ್ಲ. ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ಅಧಿಕಾರ ದುರುಪಯೋಗ ಮಾಡಿ ಕೊಳ್ತಿದೆ.

ನಾವು ವಿಮಾನ ನಿಲ್ದಾಣಕ್ಕೆ ಹೋಗುವುದನ್ನು ತಡೆಯಬೇಕು ಅನ್ನೋ ಸಂಚುಗಳು ನಡೆಯುತ್ತಿವೆ
.

ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದರೆ ನಿಲ್ದಾಣದ ಅಧಿಕಾರಿಗಳ ಪರವಾನಿಗೆ ಬೇಕು

ಎಲ್ಲದರ ಬಗ್ಗೆ ನಾವು ಈಗ ಸಭೆಯಲ್ಲಿ​ ಚರ್ಚೆ ಮಾಡ್ತೇವೆ. ಬಳಿಕ ತೀರ್ಮಾನ ಕೈಗೊಳ್ತೇವೆ

ಜೆಡಿಎಸ್ ಸದಸ್ಯರು ಕೊಚ್ಚಿಗೆ ಹೋಗ್ತಿದ್ದಾರೆ ಅನ್ನೋ ವಿಚಾರ

ಇಬ್ಬರು ಸರ್ಕಾರ ಮಾಡುತ್ತೇವೆ ಅಂತಾ ಹೊರಟಾಗ ಇಬ್ಬರು ಒಂದೇ ಕಡೆ ಹೋದ್ರೆ ಒಳ್ಳೆಯದಲ್ಲವೇ ? 

ಆ ಬಗ್ಗೆ ಚರ್ಚೆ ಮಾಡ್ತೇವೆ


7:46 pm (IST)

ಬಹುಮತ ಸಾಬೀತು ಪಡಿಸುವವರೆಗೂ ಲಿಂಗಾಯತ ಶಾಸಕರ ಜವಾಬ್ದಾರಿ ಶ್ಯಾಮನೂರು ಶಿವಶಂಕರಪ್ಪ‌ ಹೆಗಲಿಗೆ

ಶಾಸಕ ಶ್ಯಾಮನೂರು ಶಿವಶಂಕರಪ್ಪರಿಗೆ ನೀಡಿದ ಕಾಂಗ್ರೆಸ್ ನಾಯಕರು

​ಅಶೋಕ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ನಿರ್ಧಾರ

ಇದಕ್ಕೆ ಶ್ಯಾಮನೂರು ಶಿವಶಂಕರಪ್ಪರಿಂದ ಒಪ್ಪಿಗೆ 

 


7:44 pm (IST)

ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭ

ಶಾಸಕಾಂಗ ಪಕ್ಷದ ನಾಯಕನನ್ನಾಗಿ ಜಿ ಪರಮೇಶ್ವರ್ ಆಯ್ಕೆ

ಒಮ್ಮತದಿಂದ ಪರಮೇಶ್ವರ್ ಆಯ್ಕೆ ಮಾಡಿದ ಶಾಸಕಾಂಗ ಸಭೆ

ಜೊತೆಗೆ ಶಾಸಕರನ್ನ ಕರೆದುಕೊಂಡು ಯಾವ ರೆಸಾರ್ಟ್ಗೆ ಹೋಗಬೇಕು ಎನ್ನುವುದರ ಬಗ್ಗೆ ಚರ್ಚೆ


7:42 pm (IST)

ಬಿಜೆಪಿಯಲ್ಲಿ ಸಿದ್ದವಾಯ್ತಾ  113 ಶಾಸಕರ ಪಟ್ಟಿ ?

ಸಂಪೂರ್ಣ ಬಹುಮತ ತೋರಿಸಲು ಬಿಜೆಪಿಯಲ್ಲಿ ವೇದಿಕೆ ಸಜ್ಜು.

ಲಿಂಗಾಯತ ಕಾಂಗ್ರೆಸ್ ಶಾಸಕರು ಬಿಜೆಪಿ ತೆಕ್ಕೆಗೆ!

ಹದ್ದಿನ ಕಣ್ಣಿನ ನಡುವೆಯೂ ಬಿಜೆಪಿ ತೆಕ್ಕೆಗೆ ಜಾರಿದ ಶಾಸಕರು.

ಈ ಶಾಸಕರು‌ ಈಗಾಗಲೇ ಬಿಜೆಪಿಗೆ ಬೆಂಬಲ ಸೂಚಿಸಿ ಸಹಿ ಕೂಡ ಹಾಕಿದ್ದಾರೆ ಎಂಬ ವದಂತಿ. ?

ರಾಜಶೇಖರ ‌ಪಾಟೀಲ್ - ಹುಮನಾಬಾದ್.

ಪ್ರತಾಪ್ ಗೌಡ ಪಾಟೀಲ್ - ಮಸ್ಕಿ

ವೆಂಕಟರಾವ್ ನಾಡಗೌಡ - ಸಿಂಧನೂರು

ಬಿ. ನಾರಾಯಣರಾವ್ - ಬಸವಕಲ್ಯಾಣ.

ಮಹಾಂತೇಶ ಕೌಜಲಗಿ - ಬೈಲಹೊಂಗಲ

ಅಮರೇಗೌಡ ಬಯ್ಯಾಪುರ - ಕುಷ್ಟಗಿ.

ಡಿ.ಎಸ್.ಹೊಲಗೇರಿ - ಲಿಂಗಸಗೂರು.

ಎಚ್. ನಾಗೇಶ್ - ಮುಳಬಾಗಿಲು ( ಪಕ್ಷೇತರ )

ಆರ್. ಶಂಕರ್ - ರಾಣೆಬೆನ್ನೂರು (ಪಕ್ಷೇತರ)

ಉಳಿದಂತೆ ಬಹಳ ಬಿಜೆಪಿಯ 104 ಶಾಸಕರು.


7:37 pm (IST)

7:28 pm (IST)

ಯಡಿಯೂರಪ್ಪ ತುಂಬಾ ಅರ್ಜೆಂಟಿನಲ್ಲಿದ್ದಾರೆ

ಬಹುಮತ ಇಲ್ಲದಿದ್ದರೆ ಸರ್ಕಾರ ರಚನೆ ಸಾಧ್ಯವಿಲ್ಲ

ಅಧಿಕಾರಕ್ಕೆ ಬಂದ ತಕ್ಷಣ ಪೊಲೀಸ್​ ಅಧಿಕಾರಿಗಳ ವರ್ಗಾವಣೆ ಮಾಡಿದ್ದಾರೆ

ರಾಮನಗರದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯನ್ನು ಬದಲಾಯಿಸಿದ್ದಾರೆ

ಇಷ್ಟು ಗಾಬರಿ, ತುರ್ತಾಗಿ ಮಾಡುತ್ತಿದ್ದಾರೆ ಅಂದರೆ ಅಧಿಕಾರ ದಾಹ ಎಷ್ಟಿದೆ ಎಂಬ ಅರಿವಾಗುತ್ತದೆ

ಕೈಗೆ ಸಿಕ್ಕಿರುವ ತಾತ್ಕಾಲಿಕ ಅಧಿಕಾರವನ್ನು ಯಡಿಯೂರಪ್ಪ ದುರ್ಬಳಕೆ ಮಾಡುತ್ತಿದ್ದಾರೆ

ಯಡಿಯೂರಪ್ಪ ಮತ್ತು ಬಿಜೆಪಿ ನಡೆಯನ್ನು ಇಡೀ ದೇಶ ಗಮನಿಸುತ್ತಿದೆ


7:26 pm (IST)

ಪ್ರಕಾಶ್ ಜಾವಡೇಕರ್ ಹೇಳಿಕೆ

ರಾಜ್ಯದಲ್ಲಿ ಕಾಂಗ್ರೆಸ್ ನ ನಡೆ ಹಾಸ್ಯಾಸ್ಪದವಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ನಾಳೆ ವಿಚಾರಣೆ ಇದೆ.

ಜೆಡಿಎಸ್ ಕಾಂಗ್ರೆಸ್ ಶಾಸಕರನ್ನು ಬಂಧನದಲ್ಲಿಟ್ಟಿವೆ. ಶಾಸಕರ ಕುಟುಂಬಸ್ಥರಿಗೆ ಚಿಂತೆಯಾಗಿದೆ.

ಅವರದೇ ಶಾಸಕರ ಮೇಲೆ ಅವರಿಗೇ ವಿಶ್ವಾಸವಿಲ್ಲ ಇದು ರೆಸಾರ್ಟ್ ರಾಜಕೀಯವಲ್ಲ,

ಬೆದರಿಕೆಯ ರಾಜಕೀಯ  ಕಾಂಗ್ರೆಸ್ - ಜೆಡಿಎಸ್ ಭಯ ಬಿದ್ದಿದ್ದಾರೆ

ಅವರಿಗೆ ಗೊತ್ತಿದೆ ನಾವು ಸರ್ಕಾರ ರಚನೆ ಮಾಡಲ್ಲ ಅಂತ 

ಬಿಜೆಪಿ ಶಾಸಕರನ್ನು ಕಾಂಗ್ರೆಸಿಗರು ಸಂಪರ್ಕಿಸಿದ್ದಾರೆ ಎನ್ನುವುದು  ಕೇವಲ ವದಂತಿ.

ನಾವು ಪೂರ್ಣ ಬಹುಮತದೊಂದಿಗೆ ಐದು ವರ್ಷ ಪೂರೈಸುತ್ತೇವೆ


7:22 pm (IST)

7:21 pm (IST)

ಪ್ರಕಾಶ್ ಜಾವಡೇಕರ್ ಹೇಳಿಕೆ

ಕಾಂಗ್ರೆಸ್​ ನಡೆ ಪ್ರಜಾಪ್ರಭುತ್ವದ ಪದ್ದತಿಯಲ್ಲ

ಗೋವಾದಲ್ಲಿ ಅತಿ ದೊಡ್ಡ ಪಕ್ಷ ಎಂಬುದನ್ನು ಕಾಂಗ್ರೆಸ್  ಕ್ಲೇಮ್ ಮಾಡಿಯೇ ಇರಲಿಲ್ಲ

ರಾಜ್ಯಪಾಲರಿಗೆ ಎಂಪಿಪಿ ನೀಡಿದ ಪತ್ರವನ್ನೂ ಕಾಂಗ್ರೇಸ್ ಫೋರ್ಜರಿ ಮಾಡಿತ್ತು
ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಚುನಾವಣಾ ಪೂರ್ವ ಹೊಂದಾಣಿಕೆ  ಇರಲಿಲ್ಲ

ಕುಮಾರಸ್ವಾಮಿ ಅಪ್ಪನಾಣೆ ಸಿಎಂ ಆಗಲ್ಲ ಅಂತ ಸಿದ್ರಾಮಯ್ಯ ಹೇಳಿದ್ರು

ಅದಕ್ಕೆ ಕುಮಾರಸ್ವಾಮಿ ಸಿದ್ರಾಮಯ್ಯ ಅವರಪ್ಪನ ಮೇಲೆ ಆಣೆ ಹಾಕಲಿ ಎಂದಿದ್ದರು
ಈಗ ನೋಡಿದ್ರೆ ಮೈತ್ರಿ ಮಾಡಿಕೊಂಡಿದ್ದಾರೆ. ಇಂಥ ಪ್ರೀತಿ ಇವರದ್ದು


7:18 pm (IST)

ಪ್ರಕಾಶ್ ಜಾವಡೇಕರ್ ಹೇಳಿಕೆ

ಕಾಂಗ್ರೆಸ್  ಮಾಡ್ತಿರೋದು ಸರಿಯಿಲ್ಲ

ಗೋವಾ, ಮಣಿಪುರ ರಾಜ್ಯದಲ್ಲಿ ಕಾಂಗ್ರೆಸ್ ತಾನೇ ದೊಡ್ಡ ಪಕ್ಷ ಅಂತ ಹೇಳಿಕೊಳ್ತಿದೆ

ಈ ಸಂದರ್ಭದಲ್ಲಿ ಕಾಂಗ್ರೆಸ್  ಆ ರಾಜ್ಯಗಳಲ್ಲಿ ದೊಡ್ಡ ಪಕ್ಷ ಅಂತ ಕ್ಲೇಮ್ ಮಾಡಿಕೊಳ್ಳಲು ಸಾಧ್ಯವಿಲ್ಲ

ಮಣಿಪುರದಲ್ಲಿ ಎಂಪಿಪಿ ಪಾರ್ಟಿಯ ಪತ್ರವನ್ನೂ ಕೂಡ ನೀಡಿದ್ದರು

ಕಾಂಗ್ರೆಸ್ ಅನ್ನುವುದರ ಅರ್ಥವೇ ಫೋರ್ಜರಿ. ಆ ರಾಜ್ಯಗಳಲ್ಲಿ ನಮಗೆ ಸ್ಪಷ್ಟ ಬಹುಮತವಿದೆ
ಕಾಂಗ್ರೆಸ್  ಗವರ್ನರ್ ಗೆ ಶಾಸಕರ ಸಹಿ ಇರುವ  ಪಟ್ಟಿಯನ್ನು ನೀಡಿದೆ


7:11 pm (IST)

ಕೈ ಪಡೆಯ ಶಾಸಕರೂ ರಾತ್ರಿಯೇ ಸ್ಥಳಾಂತರ

ಕಾಂಗ್ರೆಸ್​ ಶಾಸಕರನ್ನು ಪಂಜಾಬ್​, ಕೊಚ್ಚಿ ಅಥವಾ ಆಂಧ್ರಪ್ರದೇಶಕ್ಕೆ ಸ್ಥಳಾಂತರ ಸಾಧ್ಯತೆ

ಅಶೋಕ ಹೋಟೆಲ್​ನಲ್ಲಿ ನಡೆಯುತ್ತಿರುವ ಅಂತಿಮ ಸಭೆ

ಸಭೆಯಲ್ಲಿ ಜೆಡಿಎಸ್​ ಶಾಸಕಾಂಗ ಅಧ್ಯಕ್ಷ ಕುಮಾರಸ್ವಾಮಿ ಭಾಗಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್​, ಮಲ್ಲಿಕಾರ್ಜುನ್​ ಖರ್ಗೆ ಭಾಗಿ

ಕಾಂಗ್ರೆಸ್​ನ ಒಬ್ಬ ಶಾಸಕ ಮಾತ್ರ ಸಂಪರ್ಕದಲ್ಲಿಲ್ಲ

ಮಿಕ್ಕೆಲ್ಲ ಶಾಸಕರೂ ನಿರಂತರ ಸಂಪರ್ಕದಲ್ಲಿದ್ದಾರೆ - ಡಿಕೆಶಿ ಹೇಳಿಕೆ

ಸಂಪರ್ಕದಲ್ಲಿರದ ಶಾಸಕರ ಹೆಸರನ್ನು ಬಿಟ್ಟುಕೊಡದ ಡಿಕೆಶಿ

ಈಗಲ್​ಟನ್​ ರೆಸಾರ್ಟ್​ನಿಂದ ಪೊಲೀಸ್​ ಪಡೆ ಹಿಂಪಡೆದ ವಿಚಾರ

ನಮ್ಮ ಶಾಸಕರಿಗೆ ಸೆಕ್ಯುರಿಟಿ ಬೇಕಿಲ್ಲ, ಬಿಎಸ್​ವೈ ಯಾವ ರೀತಿ ಅಧಿಕಾರ ಮಾಡುತ್ತಾರೆ ಎಂಬುದು ಇದರಿಂದಲೇ ತಿಳಿಯುತ್ತಿದೆ - ಡಿಕೆಶಿ


7:10 pm (IST)
ಬಿಜೆಪಿ ಸರ್ಕಾರ ರಚನೆಗೆ ವಿರೋಧ ;  ಬೀದಿಗಿಳಿದ ಕಾಂಗ್ರೆಸ್ - ಜೆಡಿಎಸ್ ಕಾರ್ಯಕರ್ತರ ಬಂಧನ
 
ಕಲಬುರ್ಗಿ  (ಮೇ.17) :  ಬಿ.ಎಸ್.ಯಡಿಯೂರಪ್ಪಗೆ ಸರ್ಕಾರ ರಚಿಸಲು ಆಹ್ವಾನ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜಿಲ್ಲಾ ಕಾಂಗ್ರೆಸ್ ಕಛೇರಿ ಎದುರಿನ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.
ಬಹುಮತವಿಲ್ಲದ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದನ್ನು ಖಂಡಿಸಿದರು. ಕೂಡಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಈ ವೇಳೆ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. 
ಮತ್ತೊಂದೆಡೆ ಜಗತ್  ವೃತ್ತದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ರಾಜಪಾಲರು ಪ್ರಜಾಪ್ರಭುತ್ವ ನೀತಿ ವಿರುದ್ಧ ನಡೆದುಕೊಳ್ಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆಗೆ ಮುಂದಾದ ವೇಳೆ ಹಲವು ಜೆಡಿಎಸ್ ಕಾರ್ಯಕರ್ತರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

7:07 pm (IST)

7:07 pm (IST)

7:00 pm (IST)

ಇಂದು ರಾತ್ರಿ ವಿಶೇಷ ವಿಮಾನದಲ್ಲಿ ಎಚ್ ಎ ಎಲ್ ವಿಮಾನ ನಿಲ್ದಾಣದ ಮೂಲಕ ಕೊಚ್ಚಿಗೆ ತೆರಳಲಿರುವ ಜೆಡಿಎಸ್ ಶಾಸಕರು. 

ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ರಾಜ್ಯ ಮಹಾ ಕಾರ್ಯದರ್ಶಿ ಬಿ.ಎಂ. ಫಾರೂಕ್ ಉಸ್ತುವಾರಿಯಲ್ಲಿ ಕೊಚ್ಚಿಗೆ ತೆರಳಲಿರುವ ಶಾಸಕರು.

ಆಪರೇಷನ್ ಕಮಲಕ್ಕೆ ತಮ್ಮ ಶಾಸಕರು ತುತ್ತಾಗದಂತೆ ನೋಡಿಕೊಳ್ಳಲು ಕೊಚ್ಚಿ ಹೋಟೆಲ್ ಗೆ ಶಿಫ್ಟ್

ಕೊಚ್ಚಿಯ ಬ್ರಂಟನ್ ಬೋಟ್ ಯಾರ್ಡ್ ಹೋಟೆಲ್ ನಲ್ಲಿ ಶಾಸಕರ  ವಾಸ್ತವ್ಯ

ಶಾಂಗ್ರೀಲಾ ಹೋಟೆಲ್ ನಿಂದ ವಿಮಾನ ನಿಲ್ದಾಣಕ್ಕೆ ಶಾಸಕರನ್ನು ಕರೆದೊಯ್ಯಲು ಸಿದ್ದಗೊಂಡಿರುವ ಎರಡು ಬಸ್ 


6:43 pm (IST)

ಜೂನ್​​.11ಕ್ಕೆ ಜಯನಗರ ಚುನಾವಣೆ ನಡೆಯಲಿದೆ

ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆ

ವಿಜಯಕುಮಾರ್​ ಅಕಾಲಿಕ ನಿಧನದ ಹಿನ್ನಲೆ

ಜಯನಗರ ಚುನಾವಣೆ ಮುಂದೂಡಲಾಗಿತ್ತು

ಇಂದಿನಿಂದಲೇ ನೀತಿಸಂಹಿತೆ ಜಾರಿಗೊಳಿಸಿದ ಆಯೋಗ

ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಗೆ ಮೇ.25 ಕೊನೆ ದಿನ

ಈ ಮುಂಚೆಯೇ ಆರ್​ಆರ್​ ನಗರ ಚುನಾವಣೆ ಸಾಧ್ಯತೆ

ಚುನಾವಣೆ ಆಯೋಗದಿಂದ ದಿನಾಂಕ ಘೋಷಣೆ


6:30 pm (IST)

ಬಿಜೆಪಿ ತಂತ್ರಕ್ಕೆ ಜೆಡಿಎಸ್​ ಕಾಂಗ್ರೆಸ್​ ಪ್ರತಿತಂತ್ರ

ಕಮಲ ಪಾಳೆಯದ 8 ನಾಯಕರ ಜೊತೆ ನಿರಂತರ ಸಂಪರ್ಕ

ಕೈ ಆಪರೇಷನ್​ಗೆ ಡಿಕಶಿ ಮಾಸ್ಟರ್​ ಪ್ಲಾನ್​

ಹೆಚ್​ಡಿಕೆ ಮತ್ತು ಡಿಕೆಶಿ ಒಟ್ಟಿಗೆ ಆಪರೇಷನ್​ ಸಾಧ್ಯತೆ

ಬಿಜೆಪಿಗೆ ಕಾದು ನೋಡುವ ತಂತ್ರ ಅನುಸರಿಸುತ್ತಿರೋ ಡಿಕೆಶಿ 

 


6:26 pm (IST)

ಆಪರೇಷನ್ ಕಮಲದ ಆತಂಕಕ್ಕೆ ಬೆಚ್ಚಿಬಿದ್ದ ಕೈ ಪಾಳೆಯ

ಈಗಲ್​ಟನ್​ ರೆಸಾರ್ಟ್​ನಿಂದಲೇ ಕಾಂಗ್ರೆಸ್​ ಶಾಸಕರು ಶಿಫ್ಟ್​

ಕಾಂಗ್ರೆಸ್​ ಎಲ್ಲ ಶಾಸಕರು ಕೊಚ್ಚಿಗೆ ತೆರಳಲು ತೀರ್ಮಾನ

​ಕಾಂಗ್ರೆಸ್​ 18 ಶಾಸಕರು ಬಿಜೆಪಿ ಸಂಪರ್ಕದಲ್ಲಿರುವ ಸಾಧ್ಯತೆ

ಡಿಕೆಶಿ ನೇತೃತ್ವದಲ್ಲಿ ಸಭೆ, ಕೊಚ್ಚಿಗೆ ತೆರಳುವ ನಿರ್ಧಾರ 


6:15 pm (IST)

 

ತುಮಕೂರಿನ ಸಿದ್ದಗಂಗಾ ಮಠಕ್ಕೆ ಬಿ ಎಸ್ ವೈ ಆಗಮನ .

ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಶ್ರೀಗಳ ಆಶೀರ್ವಾದ ಪಡೆಯಲು ಬಂದ ಬಿ ಎಸ್ ವೈ.

 ಶಿವಕುಮಾರ ಸ್ವಾಮೀಜಿಗಳ ದರ್ಶನ ಪಡೆದು ಆಶೀರ್ವಾದ ಪಡೆದ ಯಡಿಯೂರಪ್ಪ.

ಬಿ ಎಸ್ ವೈ ದರ್ಶನಕ್ಕೆ ಆಗಮಿಸಿದ ಜಿಲ್ಲೆಯ ನೂರಾರು ಬಿಜೆಪಿ ಕಾರ್ಯಕರ್ತರು.


6:12 pm (IST)

ಬಿಜೆಪಿಗೆ ಬೆಂಬಲ ತಳ್ಳಿಹಾಕಿದ ಶಾಸಕ ಎನ್ ಮಹೇಶ್ 

ರಾಜ್ಯದ ಏಕೈಕ ಬಿಎಸ್ಪಿ ಶಾಸಕ ಎನ್ ಮಹೇಶ್

ಬಿಜೆಪಿಗೆ ಬೆಂಬಲ ನೀಡೋ ಸುದ್ದಿ ಕೇವಲ ವದಂತಿಯಷ್ಟೇ

ಜೆಡಿಎಸ್ ಜೊತೆ ಚುನಾವಣಾಪೂರ್ವ ಹೊಂದಾಣಿಕೆ ಮಾಡಿಕೊಂಡು ಆಯ್ಕೆಯಾಗಿದ್ದೇನೆ

ಹೆಚ್.ಡಿ ಕುಮಾರಸ್ವಾಮಿ ಜೊತೆ ಹೋಗಲು ಬಿಎಸ್ಪಿ ವರಿಷ್ಠೆ ಮಾಯಾವತಿ ಹೇಳಿದ್ದಾರೆ

ಮಾಯಾವತಿ ನಿರ್ದೇಶನದಂತೆ ಮುನ್ನಡೆಯುವೆ

ಸಧ್ಯ ಬೆಂಗಳೂರಿನಲ್ಲಿ ಜೆಡಿಎಸ್ ಶಾಸಕರ ಜೊತೆ ವಾಸ್ತವ್ಯ ಹೂಡಿರುವ ಶಾಸಕ ಎನ್ ಮಹೇಶ್


6:09 pm (IST)

ಮುಖ್ಯಮಂತ್ರಿಗಳ ಕಾರ್ಯಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ

ಹಿರಿಯ ಐಎಎಸ್ ಅಧಿಕಾರಿ ಎಂ ಲಕ್ಷ್ಮೀನಾರಾಯಣ ವರ್ಗಾವಣೆ ಮಾಡಿ ಸರ್ಕಾರ ಆದೇಶ

​ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಲ್​.ಕೆ. ಅತೀಕ್​ ವರ್ಗಾವಣೆ 

ಅತೀಕ್​ಗೆ ಯಾವುದೇ ಹುದ್ದೆ ನೀಡದೇ ವರ್ಗಾವಣೆ


5:50 pm (IST)

ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

ಬಿಜೆಪಿ ಬಳಿ ಬಹುಮತ ಇಲ್ಲ, ಯಡಿಯೂರಪ್ಪನವರ ವರ್ತನೆಗಳನ್ನು ಜನ ನೋಡ್ತಿದ್ದಾರೆ

ಇನ್ನೂ ವಿಧಾನಸಭೆಯಲ್ಲಿ ಯಡಿಯೂರಪ್ಪ ಬಹುಮತ ಸಾಬೀತು ಮಾಡಿಲ್ಲ

ಆಗಲೇ ಯಡಿಯೂರಪ್ಪ ಅಧಿಕಾರಿಗಳ ವರ್ಗಾವಣೆಗೆ ಕೈಹಾಕಿದ್ದಾರೆ

ಬಿಜೆಪಿಯವರು ನಮ್ಮ ಯಾವುದೇ ಶಾಸಕರನ್ನು ಸೆಳೆಯಲು ಸಾಧ್ಯವಿಲ್ಲ

ನಮ್ಮ ಪಕ್ಷದ ಎಲ್ಲ ಶಾಸಕರೂ ಒಟ್ಟಾಗಿದ್ದೇವೆ. ಕಾಂಗ್ರೆಸ್ ಶಾಸಕರೂ ಒಟ್ಟಾಗಿ ಇದ್ದಾರೆ

ಬಿಜೆಪಿಯವರು ನಮ್ಮ ಮೂರು ಶಾಸಕರನ್ನು ಸೆಳೆದರೆ ನಾವು ಬಿಜೆಪಿಯ ಆರು ಶಾಸಕರನ್ನು ಸೆಳೆಯುತ್ತೇವೆ


5:49 pm (IST)

ಮಸ್ಕಿ ಕಾಂಗ್ರೆಸ್ #ಶಾಸಕ ಪ್ರತಾಪಗೌಡ ನಿನ್ನೆಯಿಂದ ನಾಪತ್ತೆ

ಸಂಜೆಯವರೆಗೂ ಕೆಪಿಸಿಸಿ ಅಧ್ಯಕ್ಷರೊಂದಿಗೆ ಇದ್ದ #ಪ್ರತಾಪಗೌಡ ಪಾಟೀಲ

ಅವರು ಯಾವುದೇ ಆಸೆ ಆಮಿಷ್ ಗಳೊಂದಿಗೆ ಒಳಗಾಗಾಬಾರದು

ನಿರಂತರವಾಗಿ ಸಂಪರ್ಕ ಪ್ರಯತ್ನಿಸುತ್ತೇವೆ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಹ ಸಂಪರ್ಕ ಸಿಗುತ್ತಿಲ್ಲ. 

ದೇವರ ಮೇಲೆ ನಂಬಿಕೆ ಇರುವ ಪ್ರತಾಪಗೌಡರು

ಈಗ ತಪ್ಪು ಮಾಡುವುದಿಲ್ಲ
ಅವರು ಪಕ್ಷದೊಂದಿಗೆ ಸಂಪರ್ಕಕ್ಕೆ ಬರುತ್ತಾರೆ ಎನ್ನುವ ನಂಬಿಕೆ ಇದೆ

ನಾಳೆಯೊಳಗೆ ಪಕ್ಚದೊಂದಿಗೆ ಬರದಿದ್ದರೆ

ನಾಳೆ ಮಸ್ಕಿಯಲ್ಲಿ ಪ್ರತಾಪಗೌಡರ ಮನೆಯ ಮುಂದೆ ಪ್ರತಿಭಟನೆ ಮಾಡಲಾಗುವುದು

ಜಿಲ್ಲಾ #ಕಾಂಗ್ರೆಸ್ ಅಧ್ಯಕ್ಷ #ರಾಮಣ್ಣ ಇರಬಗೇರಾ ಹೇಳಿಕೆ


5:43 pm (IST)

 ಗೋವಾ, ಬಿಹಾರದ, ಮೇಘಾಲಯದ ನಂತರ ಮಣಿಪುರದಲ್ಲೂ ಬಿರುಸಿನ ರಾಜಕೀಯ ಚಟುವಟಿಕೆ

 ನಾಳೆ ಮಣಿಪುರದ ರಾಜ್ಯಪಾಲರನ್ನು ಭೇಟಿ ಮಾಡಲಿರುವ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ  ಓಕ್ರಮ್ ಇಬೋಬಿ ಸಿಂಗ್

ಸರ್ಕಾರ ವಿಸರ್ಜನೆಗೊಳಿಸಿ ಕಾಂಗ್ರೆಸ್​ಗೆ ಬಹುಮತ ಸಾಬೀತಿಗೆ ಅವಕಾಶ ಮಾಡಿಕೊಡುವಂತೆ ಮನವಿ

ಮಣಿಪುರದಲ್ಲಿ ಕಾಂಗ್ರೆಸ್ 60 ಕ್ಷೇತ್ರಗಳಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿತ್ತು 

 ಆದರೆ 21 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಅನ್ಯ ಪಕ್ಷಗಳ ಜತೆಗೂಡಿ ಸರ್ಕಾರ ಸ್ಥಾಪಿಸಿತ್ತು

 ಎಲ್ಲೆಡೆ ಬಿಜೆಪಿಯ ಮೇಲೆ ತೃತೀಯರಂಗದ ವ್ಯವಸ್ಥಿತ ದಾಳಿ

 

 


5:40 pm (IST)

 ಚಿಕ್ಕಮಗಳೂರು ಎಸ್ ಪಿ ಅಣ್ಣಾಮಲೈ ವರ್ಗಾವಣೆ

 ರಾಮನಗರ ಜಿಲ್ಲಾ ಎಸ್ ಪಿ ಯಾಗಿ ವರ್ಗಾವಣೆ

ಅಧಿಕಾರಕ್ಕೆ ಬಂದು 8 ಗಂಟೆಗಳಲ್ಲಿ ಈ ವರೆಗೂ 5 ಐಪಿಎಸ್​ ಅಧಿಕಾರಿಗಳನ್ನು ಬಿಜೆಪಿ ಸರ್ಕಾರ ವರ್ಗಾವಣೆ ಮಾಡಿದೆ


5:26 pm (IST)

ಶಾಸಕರ ರಕ್ಷಣೆಯೇ ಈಗ ಕಾಂಗ್ರೆಸ್​ಗೆ  ತಲೆನೋವು

ಒಬ್ಬ ಪೊಲೀಸ್ ಪೇದೆಯನ್ನು ಬಿಡದೇ ಎಲ್ಲರನ್ನೂ ವಾಪಸ್​ ಕರೆದು ಕೊಂಡ ನೂತನ ಸರ್ಕಾರ 

 ರಾತ್ರಿ ಹೊತ್ತಲ್ಲಿ ಶಾಸಕರು ಕಣ್ಮರೆಯಾದ್ರೆ ಹೇಗೆ ಅನ್ನೋ ಚಿಂತೆ ಕೈ ನಾಯಕರದ್ದು

ಇದೀಗ ಪಂಜಾಬ್​ ಸರ್ಕಾರದಿಂದಲೂ ಶಾಸಕರ ರಕ್ಷಣೆಗೆ ಆಫರ್

ಅಲ್ಲಿಯೂ ಕಾಂಗ್ರೆಸ್ ಸರ್ಕಾರ ಅಸ್ಥಿತ್ವದಲ್ಲಿದ್ದು, ಹೋದರೂ ತೊಂದರೆ ಇಲ್ಲ ಅನ್ನೋ ಅಭಿಪ್ರಾಯಕ್ಕೆ ಮುಖಂಡರು ಬಂದಿದ್ದಾರೆ

ಇದೀಗ ಸೀಮಾಂಧ್ರ, ತೆಲಂಗಾಣ, ಪಂಜಾಬ ಹಾಗೂ ಕೇರಳ ಈ ರಾಜ್ಯಗಳ ಆಫರ್ ರಾಜ್ಯ ಕೈ ಮುಖಂಡರಿಗೆ ಬಂದಿದೆ

ಯಾವುದು ಬೆಸ್ಟ್ ಅನ್ನೋದರ ಬಗ್ಗೆ ಚರ್ಚೆ ಆರಂಭ


5:23 pm (IST)

ಅಶೋಕ ಹೊಟೇಲ್​ಗೆ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ

ಕಾಂಗ್ರೆಸ್ ನಾಯಕರೊಂದಿಗೆ ಹೆಚ್​ಡಿಕೆ ಸಮಾಲೋಚನೆ

ಬಿಜೆಪಿಯವರು ನಮ್ಮ ಮೂವರು ಶಾಸಕರನ್ನು ಸೆಳೆದರೆ,

ನಾವು ಬಿಜೆಪಿಯ ಆರು ಶಾಸಕರನ್ನು ಸೆಳೆಯುತ್ತೇವೆ

ಬೆಂಗಳೂರಿನಲ್ಲಿ ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿಕೆ

ಬಿಜೆಪಿ ಬಳಿ ಬಹುಮತ ಇಲ್ಲ 

ಯಡಿಯೂರಪ್ಪನವರ ವರ್ತನೆಗಳನ್ನು ಜನ ನೋಡುತ್ತಿದ್ದಾರೆ

ಇನ್ನೂ ವಿಧಾನಸಭೆಯಲ್ಲಿ ಯಡಿಯೂರಪ್ಪ ಬಹುಮತ ಸಾಬೀತು ಮಾಡಿಲ್ಲ

ಅಶೋಕ ಹೊಟೇಲ್​ನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ

ಆಗಲೇ ಯಡಿಯೂರಪ್ಪ ಅಧಿಕಾರಿಗಳ ವರ್ಗಾವಣೆಗೆ ಕೈಹಾಕಿದ್ದಾರೆ

ಬಿಜೆಪಿಯವರು ನಮ್ಮ ಯಾವುದೇ ಶಾಸಕರನ್ನು ಸೆಳೆಯಲು ಸಾಧ್ಯವಿಲ್ಲ

ನಮ್ಮ ಪಕ್ಷದ ಎಲ್ಲ ಶಾಸಕರೂ ಒಟ್ಟಾಗಿದ್ದೇವೆ

ಬಿಜೆಪಿಯವರು ನಮ್ಮ ಮೂವರು ಶಾಸಕರನ್ನು ಸೆಳೆದರೆ,

ನಾವು ಬಿಜೆಪಿಯ ಆರು ಶಾಸಕರನ್ನು ಸೆಳೆಯುತ್ತೇವೆ - ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ


5:16 pm (IST)

ತೇಜಸ್ವಿನಿ ಯಾದವ್​ ಪತ್ರಿಕಾ ಗೋಷ್ಠಿ

ಬಿಜೆಪಿ ವಿರುದ್ಧ ಕೆಂಡಾಮಂಡಲವಾದ ತೇಜಸ್ವಿ ಯಾದವ್​

ಬಿಜೆಪಿಯೇತರ ಎಲ್ಲಾ ಪಕ್ಷಗಳು ಒಂದುಗೂಡಲು ಕರೆ 

ನಾವೆಲ್ಲರೂ ಬೆಂಗಳೂರಿಗೆ ತೆರಳಿ ಪ್ರತಿಭಟಿಸೋಣ

ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವ ಬಿಜೆಪಿ ವಿರುದ್ಧ ತೊಡೆತಟ್ಟೋಣ

​ಕಾಂಗ್ರೆಸ್​- ಜೆಡಿಎಸ್​ ಪಕ್ಷಗಳನ್ನು ಕರ್ನಾಟಕಕ್ಕೆ ತೆರಳಿ ಬೆಂಬಲಿಸೋಣ

 


5:07 pm (IST)

ಬೆಳಗಾವಿಯ ಗೋಕಾಕ್​ ಕ್ಷೇತ್ರದ ಶಾಸಕ ರಮೇಶ್​ ಜಾರಕಿಹೊಳಿ ನಾಪತ್ತೆ

ಕೈ ಶಾಸಕರ ಸಂಪರ್ಕಕ್ಕೆ ಸಿಗದ ರಮೇಶ್​ ಜಾರಕಿಹೊಳಿ


5:06 pm (IST)

ಕಾಂಗ್ರೆಸ್​ ಲಿಂಗಾಯತ ವಿಷಬೀಜ ಬಿತ್ತುವ ಯತ್ನ ಮಾಡಿದ್ರೂ ಫಲ ನೀಡಲಿಲ್ಲ
ನಮಗೆ ಕಾಂಗ್ರೆಸ್ ಜೆಡಿಎಸ್ ಮೈತ್ರಿಯ ಚಿಂತೆ ಇಲ್ಲ...
ಗೂಂಡಾಗಿರಿ ಏನಾದರೂ ಮಾಡಬಹುದು ಎನ್ನುವ ಯೋಚನೆ ಇದ್ರೆ ಬಿಟ್ಬಿಡಿ.
ವಿಧಾನಸಭೆ ನಡೆಯುವಾಗ ಗೂಂಡಾಗಿರಿ ಮಾಡುವ ಯೋಚನೆ ಕಾಂಗ್ರೆಸ್​ ಜೆಡಿಎಸ್ ಮಾಡಿವೆ...
ಸರ್ಕಾರ ನಮ್ಮದಿದೆ‌ ಅವರನ್ನು ಧೈರ್ಯವಾಗಿ ಎದುರಿಸೋಣ...
ಜನ ಅಧಿಕಾರ ಕೊಟ್ಟಿದ್ದಾರೆ‌.ಜನರಿಗೆ ನೀಡಿದ ಭರವಸೆಯನ್ನು ಈಡೇರಿಸೋಣ.


5:00 pm (IST)

ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ ಆನಂದ್ ಸಿಂಗ್

ಕಾಂಗ್ರೆಸ್ ಗೆ ಪತ್ರ ಬರೆದು ಬೆಂಬಲ‌ ಸೂಚಿಸಿರುವ ಆನಂದ್ ಸಿಂಗ್

ನಾಳೆ ಆನಂದ್ ಸಿಂಗ್ ಪತ್ರವನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಕೆ

ಪತ್ರ ಸಲ್ಲಿಸಲಿರುವ ಕಾಂಗ್ರೆಸ್-ಜೆಡಿಎಸ್ ವಕೀಲ ಅಭಿಷೇಕ್ ಮನು ಸಿಂಘ್ವಿ

ಎಲ್ಲರ ಬೆಂಬಲವೂ ಇದೆ ಎಂದು ತಿಳಿಸಲು ಪತ್ರ ಸಲ್ಲಿಕೆ

ನ್ಯೂಸ್ ೧೮ ಕನ್ನಡಕ್ಕೆ ಎಐಸಿಸಿ ಮೂಲಗಳಿಂದ ಮಾಹಿತಿ


4:59 pm (IST)

ನಾಲ್ಕು ದಿನಗಳಲ್ಲಿ ರೈತರ ಸಾಲಮನ್ನಾ 

ನೇಕಾರರ ಸಾಲ ಮನ್ನಾವಾಗಲಿದೆ


4:58 pm (IST)

ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ ಇದನ್ನು ಸಹಿಸಲಾಗದೆ ಅನೇಕರು ಮಾತನಾಡುತ್ತಿದ್ದಾರೆ

ಕಳೆದ ನಾಲ್ಕರುದಿನಗಳಿಂದ​ ಜೆಡಿಎಸ್​ ಕಾಂಗ್ರೆಸ್ ನಾಯಕರ ಮಾತುಗಳು ಅವರಿಗೆ ಗೌರವ ತರುವಂಥದ್ದಲ್ಲ

ನಿಮ್ಮ ಯಾವ ಮಾತಿಗೆ ನಾವು ಉತ್ತರಿಸಬೇಕಾಗಿಲ್ಲ

ನಿಮ್ಮ ಮಾತಿಗೆ ನಮ್ಮ ಬದಲು ಜನರೇ ಉತ್ತರಿಸುತ್ತಾರೆ 


4:55 pm (IST)

ಕಳೆದ ಅನೇಕ ತಿಂಗಳುಗಳಿಂದ ಪ್ರಕಾಶ್ ಜಾವ್ಡೇಕರ್ ಮಾರ್ಗದರ್ಶನ ಮಾಡಿದರು

ಈ ಗೆಲುವಿಗೆ 104 ಸ್ಥಾನ ಪಡೆದುಕೊಳ್ಳಲು ಮುರುಳೀಧರ್ ರಾವ್ ಕಾರಣ...

ಈ ಚುನಾವಣೆ ಇಡೀ ದೇಶದ ಗಮನ ಸೆಳೆಯಿತು...

ನಿನ್ನೆ ರಾತ್ರಿ ಅಮಿತ್ ಶಾ, ಪ್ರಧಾನಿ ಮೋದಿ ಜೊತೆ ಫೋನ್ ಮೂಲಕ ಆಶೀರ್ವಾದ ಪಡೆದಿದ್ದೇನೆ

ಈ ಬಾರಿ ಚುನಾವಣೆಯಲ್ಲಿ ಪಕ್ಷದ ಸುಮಾರು 20 ಹಿರಿಯ ಶಾಸಕರಿಗೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿದೆ

ಆದರೆ ಇದಕ್ಕೆ ದೃತಿಗೆಡಬೇಕಾಗಿಲ್ಲ. ನಿಮ್ಮೊಂದಿಗೆ ಪಕ್ಷ ಸರ್ಕಾರ ಎಲ್ಲ ಇದೆ

ನಿಮ್ಮ ಗೌರವವನ್ನು ಕಾಪಾಡಲು ಸಂಪೂರ್ಣ ಸಹಕಾರ ನೀಡುತ್ತೇವೆ

 ಹಿರಿಯ ರಾಜಕಾರಣಿಗಳು ಈ ಬಗ್ಗೆ ಮನಸ್ಸಿಗೆ ನೋವು ಮಾಡಿಕೊಳ್ಳಬೇಡಿ ಎಂದು ಮನವಿ


4:51 pm (IST)

ನಾಮ ಮಾತ್ರ ಈಗಲ್​ಟನ್​ ರೆಸಾರ್ಟ್​ ನಲ್ಲಿ ಪೊಲೀಸ್​ ಬಂದೋಬಸ್ತ್​ 

ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವವರೆಗೂ ಬಿಗಿಬಂದೋಬಸ್ತ್​ ನೀಡಲಾಗಿತ್ತು

 


4:43 pm (IST)

ಮೇಘಾಲಯದಲ್ಲಿ ಬಿರುಸುಗೊಂಡ ರಾಜಕೀಯ ಚಟುವಟಿಕೆ

ನ್ಯಾಷನಲ್​ ಪೀಪಲ್ಸ್​ ಪಾರ್ಟಿಯೊಂದಿಗೆ ಬಿಜೆಪಿ ಜೆಡಿಯು ಇತರೆ ಪಕ್ಷಗಳು ಕೈ ಜೋಡಿಸಿದ್ದವು

2018ರಲ್ಲಿ ನಡೆದ ಚುನಾವಣೆಯಲ್ಲಿ ಮೇಘಾಲಯದಲ್ಲಿ ಕಾಂಗ್ರೆಸ್​ ದೊಡ್ಡ ಪಕ್ಷವಾಗು ಹೊರ ಹೊಮ್ಮಿತ್ತು

ಕರ್ನಾಟಕ ಚುನಾವಣಾ ಅವಲೋಕಿಸಿ ಈಗ ರಾಜ್ಯಪಾಲರ ಮುಂದೆ ಹೋಗಲು ಮೇಘಾಲಯ ಕಾಂಗ್ರೆಸ್​ ಶಾಸಕರ ನಿರ್ಧಾರ

 


4:31 pm (IST)

ಬಿಜೆಪಿ ಕಚೇರಿಯಲ್ಲಿ ನೂತನ ಮುಖ್ಯಮಂತ್ರಿ ಯಡಿಯೂರಪ್ಪಗೆ ಸನ್ಮಾನ

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ

ಹೂಗುಚ್ಛ ನೀಡಿ ಸನ್ಮಾನ

ಕಾರ್ಯಕರ್ತರಿಂದ ಹರ್ಷೋದ್ಘಾರ 


4:20 pm (IST)

ಎಲ್ಲೆಡೆ ಬಿಜೆಪಿ ವಿರುದ್ಧ ಭುಗಿಲೆದ್ದ ಆಕ್ರೋಶ

ಗೋವಾ ನಂತರ ಬಿಹಾರದಲ್ಲಿ ಬಿಜೆಪಿಗೆ ಸೆಡ್ಡು 

ರಾಜ್ಯಪಾಲರನ್ನು ಭೇಟಿ ಮಾಡಲು ಮುಂದಾದ ತೇಜಸ್ವಿ ಯಾದವ್​ 

ತೇಜಸ್ವಿ ಯಾದವ್​  ಬಿಹಾರ್​ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಲಾಲು ಪ್ರಸಾದ್ ಯಾದವ್​ ಪುತ್ರ 

ಜೆಡಿಯು-ಆರ್​ಜೆಡಿ- ಕಾಂಗ್ರೆಸ್​ ಮಹಾಘಟಿ ಬಂಧನವನ್ನು ಮುರಿದು ಜೆಡಿಯು ಜೊತೆಗೂಡಿ ಬಿಜೆಪಿ ಅಧಿಕಾರ ಸ್ಥಾಪಿಸಿತ್ತು.

ಆದರೆ ಆರ್​ಜೆಡಿ ಬಿಹಾರದ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು

ತೇಜಸ್ವಿ ಯಾದವ್​ ಬಹುಮತ ಸಾಬೀತು ಪಡಿಸುವುದಾಗಿ ಹಲವು ಬಾರಿ ರಾಜ್ಯಪಾಲರನ್ನು ಕೇಳಿ ಕೊಂಡಿದ್ದರು. 

ಆದರೂ ಬಿಹಾರ ರಾಜ್ಯಪಾಲ ಸತ್ಯಪಾಲ್​ ಮಾಲೀಕ್​ ಅವಕಾಶ ನೀಡಿರಲಿಲ್ಲ

ಬಿಜೆಪಿಗೆ ಒಂದು ನ್ಯಾಯ, ಬಿಜೆಪಿಯೇತರ ಪಕ್ಷಗಳಿಗೆ ಒಂದು ನ್ಯಾಯ ಎಂಬ ಕೂಗು ರಾಷ್ಟ್ರವ್ಯಾಪಿಯಾಗಿ ಕೇಳಿ ಬಂದಿದೆ

ಕರ್ನಾಟಕ ಚುನಾವಣಾ ಕಾವು ಇಡೀ ದೇಶವನ್ನು ವ್ಯಾಪಿಸಿದೆ.  

ಬಿಜೆಪಿ-ಆರ್​ಜೆಡಿ ,ಮೈತ್ರಿ ಸರ್ಕಾರವನ್ನು ವಿಸರ್ಜಿಸುವಂತೆ ಕೋರಲಿರುವ ತೇಜಸ್ವಿಯಾದವ್​


4:03 pm (IST)

ನಾಲ್ವರು ಐಪಿಎಸ್​ ಅಧಿಕಾರಿಗಳ ವರ್ಗಾವಣೆ

ಅಧಿಕಾರ ಚುಕ್ಕಾಣಿ ಹಿಡಿದ ದಿನವೇ ಪೊಲೀಸ್​ ಅಧಿಕಾರಿಗಳನ್ನು ವರ್ಗಾವಣೆ  ಮಾಡಿದ ಯಡಿಯೂರಪ್ಪ

ಅಮರ್​ ಕುಮಾರ್ ಪಾಂಡೆ ಎಡಿಜಿಪಿ ರೈಲ್ವೆ ಯಿಂದ ಎಡಿಜಿಪಿ ಗುಪ್ತಚರ ಇಲಾಖೆ

ಸಂದೀಪ್​ ಪಾಟೀಲ್​ ಡಿಐಜಿ ಕೆಎಸ್​ಆರ್​ಪಿ ಯಿಂದ ಡಿಐಜಿ ಗುಪ್ತಚರ ಇಲಾಖೆ

ಡಿ.ದೇವರಾಜ್​ ಎಸ್​ಪಿ ಬೀದರ್​ ಯಿಂದ ಬೆಂಗಳೂರು ಕೇಂದ್ರ ವಿಭಾಗ ಡಿಸಿಪಿ

ಎಸ್​ ಗಿರೀಶ್​ ಎಸ್​ಪಿ ಎಸಿಬಿ ಯಿಂದ ಡಿಸಿಪಿ ಈಶಾನ್ಯವಿಭಾಗ 

ಸಂಜೆಯ ವೇಳೆ ಇನ್ನಷ್ಟು ವರ್ಗಾವಣೆಗಳು ಆಗುವ ಸಾಧ್ಯತೆ 

 

 


3:50 pm (IST)

ಕರ್ನಾಟಕದಲ್ಲಿ ಸರ್ಕಾರ ರಚನೆಯ ಕಸರತ್ತಿನ ಹಿನ್ನೆಲೆ

ಸುಪ್ರೀಂ ಕೋರ್ಟಿನಲ್ಲಿ ಮತ್ತೊಂದು‌ ದೂರು ದಾಖಲು

ಆಂಗ್ಲೋ‌ ಇಂಡಿಯನ್ ಶಾಸಕರ ನೇಮಕದ ಬಗ್ಗೆ ಆಕ್ಷೇಪ

ರಾಜ್ಯಪಾಲರು ತರಾತುರಿಯಲ್ಲಿ ನೇಮಕ ಮಾಡಿದ್ದಾರೆಂದು ಆಕ್ಷೇಪ

ಬಿಜೆಪಿಯ ಸಂಖ್ಯಾಬಲ‌ ಹೆಚ್ಚಿಸಲೆಂದೇ ನೇಮಕ ಎಂದು ಆರೋಪ

ರಾಜ್ಯಪಾಲರ ನಡೆ ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ದೂರು ದಾಖಲು


3:49 pm (IST)

ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್​ ಪ್ರತಿತಂತ್ರ 

ಗೋವಾದಲ್ಲಿ ಸರ್ಕಾರ ರಚನೆಗೆ ಅವಕಾಶ ಕೋರಿ ರಾಜ್ಯಪಾಲರ ಬಳಿ ತೆರಳಿದ ಕಾಂಗ್ರೆಸ್​ ಶಾಸಕರು

ಗೋವಾ ಚುನಾವಣೆಯಲ್ಲಿ ಬಹುಮತ ಪಡೆ ಪಕ್ಷವಾಗಿ ಹೊರ ಹೊಮ್ಮಿದ ಕಾಂಗ್ರೆಸ್​ 

ಮಾರ್ಚ್​ 2017ರಲ್ಲಿ ನಡೆದ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಕಾಂಗ್ರೆಸ್​ 

ಕಾಂಗ್ರೆಸ್​-17, ಬಿಜೆಪಿ 13, ಇತರೆ 10 ಸ್ಥಾನಗಳನ್ನು ಪಡೆದಿದ್ದವು. 

ಆದರೆ ಬಹುಮತ ಪಡೆದ ಕಾಂಗ್ರೆಸ್​ ಗೆ ಬಿಟ್ಟು ಬಿಜೆಪಿ ಮೈತ್ರಿ ಸರ್ಕಾರಕ್ಕೆ ಅವಕಾಶ ಮಾಡಿದ್ದ ಗೋವಾ ರಾಜ್ಯಪಾಲ ಮೃದಲಾ ಸಿನ್ಹಾ

ಕಾಂಗ್ರೆಸ್​ಗೆ ಬಿಟ್ಟು ಬಿಜೆಪಿ ಮೈತ್ರಿಗೆ ಅವಕಾಶ ನೀಡಿದ್ದ ರಾಜ್ಯಪಾಲರು

ಈಗ ಕರ್ನಾಟಕದಲ್ಲಿ ಮೊದಲು ಬಿಜೆಪಿ ಗೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿರುವ ಗೋವಾ ಶಾಸಕರು 

 


3:37 pm (IST)

ಕಾಂಗ್ರೆಸ್​ ನಾಯಕರ ಭೇಟಿ ಮಾಡಿದ ಕುಮಾರಸ್ವಾಮಿ

ಜಮೀರ್​ ಅಹ್ಮದ್​ ಜೊತೆ ಎಚ್​ಡಿಕೆ ಉಭಯಕುಶಲೋಪರಿ


3:27 pm (IST)

ರವಿವರ್ಮ ಕುಮಾರ್​ ನೇತೃತ್ವದಲ್ಲಿ  ಬಹುಮತ ಇರುವವರಿಗೆ  ಸರ್ಕಾರ ರಚನೆ ಮಾಡಲು ಅವಕಾಶ ಕೋರಿದ ನಿಯೋಗ

ಹಿರಿಯ ವಕೀಲ ರವಿವರ್ಮ ಕುಮಾರ್​ , ಕೆ.ಎಲ್​ ಅಶೋಕ್​, ಬಿಟಿ ಲಲಿತಾ ನಾಯ್ಕ್​ ಒಳಗೊಂಡ ನಿಯೋಗ

ರಾಜ್ಯಪಾಲರ ಭೇಟಿ ಮಾಡಿ  ಮನವಿ ಪತ್ರ ಸಲ್ಲಿಕೆ


3:23 pm (IST)

ಬಹುಮತ ಸಾಬೀತಿಗೆ ಬಿಜೆಪಿ ಆಪರೇಷನ್ ಕಮಲ ಮಾಡಲು ಹಿಂದೇಟು
ಆಪರೇಷನ್ ಕಮಲಕ್ಕಿಂತ ಸರಳ ಉಪಾಯ ಮಾಡಲಿರುವ ಬಿಜೆಪಿ
ಸದನದ ಸಂಖ್ಯಾಬಲವನ್ನೇ ಕುಗ್ಗಿಸುವ ಲೆಕ್ಕಾಚಾರಕ್ಕಿಳಿದ ಬಿಜೆಪಿ
ಹತ್ತಾರು ಶಾಸಕರ ಪ್ರಮಾಣ ವಚನ ಪ್ರಕ್ರಿಯೆಯನ್ನೇ ವಿಳಂಬಗೊಳಿಸಿವುದು
ಅಂತಹ ಜನಪ್ರತಿನಿಧಿಗಳು ಅಧಿಕೃತವಾಗಿ ಶಾಸಕರಾಗುವುದಿಲ್ಲ
ಶಾಸಕರೇ ಆಗದಿದ್ದರೆ  ಪಕ್ಷದ ವಿಪ್​ ವ್ಯಾಪ್ತಿಗೆ ಒಳಪಡುವುದಿಲ್ಲ
ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಗೂ ಬರುವುದಿಲ್ಲ
ಶಾಸಕರಾದರೆ ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಭಾಗವಹಿಸ ಬೇಕಾಗುತ್ತದೆ
104 ಸದಸ್ಯ ಬಲಕ್ಕೆ ಹೊಂದಾಣಿಕೆ ಮಾಡಲು ಪ್ರಯತ್ನ
ಸುಮಾರು 15 ಶಾಸಕರ ಪ್ರತಿಜ್ನಾ ವಿಧಿ ವಿಳಂಬಕ್ಕೆ ರಣತಂತ್ರ


3:21 pm (IST)

ನಿನ್ನೆ ರಾತ್ರಿ ಕೂಡ ಮನೆಯಲ್ಲಿ ವಿಶ್ರಾಂತಿ ಪಡದಿದ್ದೆ

ನಾನು ಲಗ್ಗೇಜ್, ಮಾತ್ರೆ ಏನೂ ತೆಗೆದುಕೊಂಡು ಹೋಗಿರಲಿಲ್ಲ

ನಾನು ವಿಶ್ರಾಂತಿ ಪಡೆಯಲು ಮನೆಗೆ ವಾಪಸ್ ಬಂದಿದ್ದೇನೆ

ನಾನು ವಾಪಸ್ ರೆಸಾರ್ಟ್​ಗೆ ಹೋಗುತ್ತೇನೆ

ನನಗೆ ಬಿಜೆಪಿ ನಾಯಕರು ದೂರವಾಣಿ ಕರೆ ಮಾಡಿಲ್ಲ

ಬೇರೆ ಶಾಸಕರಿಗೆ ಬಿಜೆಪಿಯವರು ಕರೆ ಮಾಡಿದ್ದಾರೋ ಗೊತ್ತಿಲ್ಲ

ಮಾತ್ರೆ ತೆಗೆದುಕೊಂಡು ಹೋಗಲು ಮನೆಗೆ ಬಂದಿದ್ದೇನೆ

ಮನೆಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ರಾತ್ರಿ ರೆಸಾರ್ಟ್​ಗೆ ಹೋಗುತ್ತೇನೆ-ಹುಮ್ನಾಬಾದ್​ ಶಾಸಕ ಸ್ಪಷ್ಟನೆ


3:11 pm (IST)

ಕಾಂಗ್ರೆಸ್​ ಜೆಡಿಎಸ್​ ಮೈತ್ರಿ ಸರ್ಕಾರ ರಚಿಸುವ ಬಗ್ಗೆ ವಿಶ್ವಾಸವಿದೆ

ಬಿಜೆಪಿಯಿಂದ ನನಗೆ ಕರೆ ಬಂದಿಲ್ಲ, ನಾನು ಎಲ್ಲಿಗೂ ಹೋಗುವುದಿಲ್ಲ

ಮನೆಯಲ್ಲಿ ವಿಶ್ರಾಂತಿ ಪಡೆದು ರೆಸಾರ್ಟ್​ಗೆ ಮರಳಲಿದ್ದೇನೆ

 


3:07 pm (IST)

ನಾನು ಕಾಂಗ್ರೆಸ್​ ಜೊತೆಯೇ ಇದ್ದೇನೆ ಈಗ ಈಗಲ್​ ಟನ್​ ರೆಸಾರ್ಟ್​ಗೆ ತೆರಳಲಿದ್ದೇನೆ

​ಹುಮ್ನಾಬಾದ್ ಶಾಸಕ ರಾಜಶೇಖರ್​ ಪಾಟೀಲ್​ ಸ್ಪಷ್ಟನೆ

ಆರೋಗ್ಯ ಸರಿಯಿಲ್ಲದ ಕಾರಣ ಮನೆಗೆ ಬಂದಿದ್ದೆ.

ಕಾಂಗ್ರೆಸ್​ ತೊರೆಯುವ ಮಾತಿಲ್ಲ ಎಂದು ನ್ಯೂಸ್​ 18ಗೆ  ಸ್ಪಷ್ಟನೆ


2:58 pm (IST)

ಸುಪ್ರೀಂ ಕೋರ್ಟ್ ತೀರ್ಮಾನ ನೋಡಿ ಮುಂದಿನ ನಿರ್ಧಾರ 

ಸದ್ಯ ಹೋಟೆಲ್ ನಲ್ಲಿರಲು ಚಿಂತನೆ ನಡೆಸಿರುವ ಜೆಡಿಎಸ್ ಮುಖಂಡರು

ಅತ್ತ ಕಾಂಗ್ರೆಸ್ ಶಾಸಕರೂ ಸಹ ಈಗಲ್ಟನ್ ನಲ್ಲೇ ವಾಸ್ತವ್ಯ ಮುಂದುವರೆಸಲು ತೀರ್ಮಾನ

ಈ ಬಗ್ಗೆ ಕಾಂಗ್ರೆಸ್ ಮುಖಂಡರ ಜೊತೆ ಮಾತನಾಡಲಿರುವ ಕುಮಾರಸ್ವಾಮಿ

ಸುಪ್ರೀಂ ಕೋರ್ಟ್ ಲಾಯರ್ ಜೊತೆಯೂ ದೂರವಾಣಿ ಮಾತುಕತೆ ನಡೆಸಿರುವ ಕುಮಾರಸ್ವಾಮಿ

ಕಾನೂನು ಹೋರಾಟ ಹಾಗೂ ಶಾಸಕರ ರಕ್ಷಣೆ ಬಗ್ಗೆ ಚರ್ಚೆ ನಡೆಸಲು ಮುಂದಾದ ಕುಮಾರಸ್ವಾಮಿ

 


2:50 pm (IST)

ರೆಸಾರ್ಟ್​ನಿಂದ ಹೊರನಡೆದ ಶಾಸಕ ರಾಜಶೇಖರ್​ ಪಾಟೀಲ್​

ಹುಮ್ನಾಬಾದ್​ ಕಾಂಗ್ರೆಸ್​ ಶಾಸಕ ರಾಜಶೇಖರ್ ಪಾಟೀಲ್​

ಬಿಡದಿಯ ಈಗಲ್​ಟನ್​ ರೆಸಾರ್ಟ್​ನಿಂದ ಹೊರಬಂದ ಶಾಸಕ

ಕುತೂಹಲ ಮೂಡಿಸಿದ ಶಾಸಕ ರಾಜಶೇಖರ್ ಪಾಟೀಲ್​ ನಡೆ

ತುರ್ತು ಕೆಲಸ ನಿಮಿತ್ತ ಹೊರ ಹೋಗುವುದಾಗಿ ಹೇಳಿದ ಪಾಟೀಲ್​

ಕಾಂಗ್ರೆಸ್​ ಮುಖಂಡರ ಒಪ್ಪಿಗೆ ಪಡೆದಿರುವ ರಾಜಶೇಖರ್ ಪಾಟೀಲ್

ರೆಸಾರ್ಟ್​ನಿಂದ ಹೊರ ಬಂದ ಬೆಳಗಾವಿ ಜಿಲ್ಲೆಯ ಶಾಸಕಿಯರು

ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಹೊರಬಂದ ಶಾಸಕರು


2:45 pm (IST)

ರೆಸಾರ್ಟ್​ನಿಂದ ಹೊರಬಂದ ಇನ್ನಷ್ಟು ಶಾಸಕರು

ಈಗಲ್​ಟನ್ ರೆಸಾರ್ಟ್​ನಿಂದ ಹೊರಬಂದ ಹುಮ್ನಾಬಾದ್ ಶಾಸಕ ರಾಜಶೇಖರ್ ಪಾಟೀಲ್

ತುರ್ತು ಕೆಲಸ ಇದೆ ಎಂದು ಹೇಳಿ ಹೊರಬಂದ ಪಾಟೀಲ್

ಗೇಟ್​ನಲ್ಲಿ ತಡೆದ ಭದ್ರತಾ ಸಿಬ್ಬಂದಿಗೆ, ತಾನು ಮುಖಂಡರ ಒಪ್ಪಿಗೆ ಪಡೆದಿರುವುದಾಗಿ ತಿಳಿಸಿದ ಶಾಸಕ

ರಾಜಶೇಖರ್ ಪಾಟೀಲರನ್ನು ಹಿಂಬಾಲಿಸಿದ ಪ್ರಿಯಾಂಕ್ ಖರ್ಗೆ

ಆಸ್ಪತ್ರೆಗೆ ಹೋಗುತ್ತೇನೆಂದು ಖರ್ಗೆಗೆ ತಿಳಿಸಿದ ಪಾಟೀಲ್

ರೆಸಾರ್ಟ್​ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಅಂಜಲಿ ನಿಂಬಾಳ್ಕರ್ ಕೂಡ ಹೊರಗೆ


2:30 pm (IST)

ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಗುಡುಗು:

ಸಿದ್ದರಾಮಯ್ಯನವರು ಹೀನಾಯವಾಗಿ ಸೋತಿದ್ದಾರೆ

ಸೋಲಿನ ಕಾರಣ ಏನೆಂದು ಸಿದ್ಧರಾಮಯ್ಯ ಕಾಡಿಗೆ ಹೋಗಿ ಆತ್ಮವಲೋಕನ ಮಾಡಿಕೊಳ್ಳಬೇಕು 

ಕಾಂಗ್ರೇಸ್ ಅದೋಗತಿಗೆ ಇಳಿದಿದೆ.

ಅಧಿಕಾರವಿಲ್ಲದೇ ಕಾಂಗ್ರೇಸ್ ವಿಲವಿಲ ಅಂತ ಒದ್ದಾಡುತ್ತಿದೆ

ಸಿದ್ದರಾಮಯ್ಯ ಎಂದೆದೂ ನಾನೇ ಮುಖ್ಯಮಂತ್ರಿ ಅಂತ ಹೇಳ್ತಿದ್ರು

ಇದೀಗ ಸಿದ್ದರಾಮಯ್ಯ ಭೀಕ್ಷುಕನ ರೀತಿ ಜೆಡಿಎಸ್ ಮುಂದೆ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿ ಬಂದಿದೆ

ಚಾಮುಂಡೇಶ್ವರಿಯಲ್ಲಿ  ಸಿದ್ಧರಾಮಯ್ಯ ಹೀನಾಯವಾಗಿ ಸೋತಿದ್ದಾರೆ

ನಾವು ಬಹುಮತ ಸಾಭೀತು ಮಾಡುತ್ತೇವೆ

ಹೇಗೆ ಎಂದು ಯುದ್ಧದ ತಂತ್ರವನ್ನ ಮಾಧ್ಯಮದ ಮುಂದೇ ಹೇಳೋದಿಲ್ಲ

ಆರ್.ಅಶೋಕ್ ಹೇಳಿಕೆ


2:29 pm (IST)

ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ

ಸಿದ್ದರಾಮಯ್ಯನವರು ಹೀನಾಯವಾಗಿ ಸೋತಿದ್ದಾರೆ

ಸೋಲಿನ ಕಾರಣ ಏನೆಂದು ಸಿದ್ಧರಾಮಯ್ಯ ಕಾಡಿಗೆ ಹೋಗಿ ಆತ್ಮವಲೋಕನ ಮಾಡಿಕೊಳ್ಳಬೇಕು

ಕಾಂಗ್ರೇಸ್ ಅದೋಗತಿಗೆ ಇಳಿದಿದೆ.

ಅಧಿಕಾರವಿಲ್ಲದೇ ಕಾಂಗ್ರೇಸ್ ವಿಲವಿಲ ಅಂತ ಒದ್ದಾಡುತ್ತಿದೆ

ಸಿದ್ದರಾಮಯ್ಯ ಎಂದೆದೂ ನಾನೇ ಮುಖ್ಯಮಂತ್ರಿ ಅಂತ ಹೇಳ್ತಿದ್ರು

ಇದೀಗ ಸಿದ್ದರಾಮಯ್ಯ ಭೀಕ್ಷುಕನ ರೀತಿ ಜೆಡಿಎಸ್ ಮುಂದೆ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿ ಬಂದಿದೆ

ಚಾಮುಂಡೇಶ್ವರಿಯಲ್ಲಿ  ಸಿದ್ಧರಾಮಯ್ಯ ಹೀನಾಯವಾಗಿ ಸೋತಿದ್ದಾರೆ

ನಾವು ಬಹುಮತ ಸಾಭೀತು ಮಾಡುತ್ತೇವೆ. ಹೇಗೆ ಎಂದು ಯುದ್ಧದ ತಂತ್ರವನ್ನ ಮಾಧ್ಯಮದ ಮುಂದೇ ಹೇಳೋದಿಲ್ಲ

ಬಿಜೆಪಿ ಮುಖಂಡ ಆರ್. ಅಶೋಕ್ ಹೇಳಿಕೆ


1:27 pm (IST)

120 ಶಾಸಕರ ಬಹುಮತವನ್ನು ಬಿಜೆಪಿ ಪಡೆದುಕೊಳ್ಳುತ್ತದೆ

ಶೀಘ್ರದಲ್ಲೇ ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ

ನ್ಯೂಸ್​18 ಕನ್ನಡಕ್ಕೆ ಬಿಜೆಪಿ ಶಾಸಕ ಆರ್.ಅಶೋಕ್ ಹೇಳಿಕೆ

ಕಾಂಗ್ರೆಸ್ ಮುಖಂಡರಿಗೆ ತನ್ನ ಸದಸ್ಯರ ಬಗ್ಗೆ ವಿಶ್ವಾಸವಿಲ್ಲ

ಕಾಂಗ್ರೆಸ್​ ಶಾಸಕರನ್ನು ಸಂಪರ್ಕಿಸಲು ಕುಟುಂಬದವರಿಗೇ ಬಿಡುತ್ತಿಲ್ಲ

1975ರಲ್ಲಿ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿದಂತೆ ಈಗಿನ ಸ್ಥಿತಿ

ಕಾಂಗ್ರೆಸ್ ಈ ಹಿಂದೆ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡಿತ್ತು

ತನ್ನ ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾ ಮಾಡಲಾಗಿದೆ

.ರಾಜ್ಯದ ಜನತೆ ಬಿಜೆಪಿಗೆ ಹೆಚ್ಚಿನ ಸ್ಥಾನ ನೀಡಿ ಸರ್ಕಾರ ರಚಿಸಲು ಜನಾದೇಶ ನೀಡಿದ್ದಾರೆ


1:18 pm (IST)

ರೆಸಾರ್ಟ್​ನಿಂದಲೇ ಮಸ್ಕಿ ಶಾಸಕ ಪ್ರತಾಪ್​ ಗೌಡ ಪಾಟೀಲ ನಾಪತ್ತೆ

ಕಾಂಗ್ರೆಸ್ ಶಾಸಕರಿರುವ ರಿಸಾರ್ಟಿನಲ್ಲಿ ಮುಂಜಾನೆಯಿಂದ ನಾಪತ್ತೆ

ಪ್ರತಾಪ್​ಗೌಡರನ್ನು ಬಿಜೆಪಿ ಮುಖಂಡರು ಹೈಜಾಕ್ ಮಾಡಿದ ವದಂತಿ

ಯಾರ ದೂರವಾಣಿ ಸಂಪರ್ಕಕ್ಕೂ ಸಿಗದ ಪ್ರತಾಪ್​ ಗೌಡ ಹಾಗೂ ಆಪ್ತರು

ಕೆಲವರ ಪ್ರಕಾರ ಅನಾರೋಗ್ಯದ ನೆಪ ಹೇಳಿ ಆಸ್ಪತ್ರೆಯಲ್ಲಿದ್ದಾರೆಂದು ಮಾಹಿತಿ

2008ರಲ್ಲಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದ ಪ್ರತಾಪ್​ ಗೌಡ

ಆಗ ಬಳ್ಳಾರಿ ರೆಡ್ಡಿ ಬಳಗದಲ್ಲಿ ಗುರುತಿಸಿಕೊಂಡಿದ್ದ ಪ್ರತಾಪ್​ ಗೌಡ


1:07 pm (IST)

ಕರ್ನಾಟಕದಲ್ಲಿ ಬಿಜೆಪಿ ಪ್ರಜಾತಂತ್ರವನ್ನ ಹತ್ಯೆ ಮಾಡಿದೆ; ಬಿಎಸ್​ಪಿ ನಾಯಕಿ ಮಾಯಾವತಿ

ಬಹುಮತವಿಲ್ಲದ ಯಡಿಯೂರಪ್ಪ ಸಿಎಂ ಆಗಿರೋದು ಖಂಡನೀಯ

ಬಿಜೆಪಿ ಸರ್ಕಾರಿ ಯಂತ್ರವನ್ನ ದುರುಪಯೋಗ ಪಡಿಸಿಕೊಳ್ಳುತ್ತಿದೆ

ಸುಪ್ರೀಂಕೋರ್ಟ್​ ಲೋಕತಂತ್ರವನ್ನ ಎತ್ತಿ ಹಿಡಿಯುವ ಕೆಲಸ ಮಾಡಬೇಕು

ಕಾಂಗ್ರೆಸ್ ಇನ್ನಾದ್ರೂ ತನ್ನ ಮಾತು, ಭಾಷೆಯಲ್ಲಿ ಹಿಡಿತ ಇಟ್ಟುಕೊಳ್ಳಬೇಕು

 ಜೆಡಿಎಸ್​ ಬಿಜೆಪಿಯ ‘ಬಿ’ ಟೀಮ್ ಎಂದು ಕಾಂಗ್ರೆಸ್​ ಹೇಳಿದೆ

ಹಾಗೆ ಹೇಳದೇ ಇದ್ದಿದ್ರೆ ಬಿಜೆಪಿಗೆ ಇಷ್ಟು ಸೀಟ್ ಬರುತ್ತಿರಲಿಲ್ಲ

ಬಿಎಸ್​ಪಿ ನಾಯಕಿ ಮಾಯಾವತಿ ಹೇಳಿಕೆ


1:03 pm (IST)

ಕಾಂಗ್ರೆಸ್​ ಶಾಸಕರ ರಕ್ಷಣೆಗೆ ಮುಂದಾಳತ್ವ ವಹಿಸಿದ್ದೇನೆ; ಡಿಕೆ ಶಿವಕುಮಾರ್​

ಮಹಾರಾಷ್ಟ್ರದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದಾಗ ವಿಲಾಸ್​ ರಾವ್​ ದೇಶಮುಖ್​ಕ್ಕೆ ಹೊಣೆ ನೀಡಿದ್ದರು

ಗುಜರಾತ್ ರಾಜ್ಯಸಭಾ ಚುನಾವಣೆ ವೇಳೆ ಶಾಸಕರ ರಕ್ಷಣೆ ಹೊಣೆ ನಾನು ಹೊತ್ತಿದ್ದೆ

ಈಗ ಕರ್ನಾಟಕದ ಕಾಂಗ್ರೆಸ್​ ಶಾಸಕರ ಹೊಣೆಯೂ ನನ್ನ ಮೇಲಿದೆ.

ಹಿರಿಯ ನಾಯಕರಿದ್ದಾರೆ, ದೇವರಿದ್ದಾರೆ ನಾವು ಬಹುಮತ ಸಾಬೀತು ಮಾಡುತ್ತೇವೆ

ಈ ಹೊಣೆ ಹೊತ್ತಿರುವುದರಿಂದ ನನಗೆ ನೂರೆಂಟು ಸಮಸ್ಯೆ ಎದುರಾಗಬಹುದು 

ಹೆಚ್ಚೆಂದರೆ ನನ್ನನ್ನು ಜೈಲಿಗೆ ಕಳುಹಿಸಬಹುದು. ಅದಕ್ಕೆ ನಾನು ಸಿದ್ಧ  


12:56 pm (IST)

ಸಿಎಂ ಯಡಿಯೂರಪ್ಪ ಕಾರಿಗೆ ಅಡ್ಡಹಾಕಿದ ಜೆಡಿಎಸ್​ ಅಭಿಮಾನಿ

 ಕುಮಾರಸ್ವಾಮಿ ಸಿಎಂ ಆಗುವುದು ಖಚಿತ ಎಂದು ಆವಾಜ್​

 ಶ್ರೀನಿವಾಸ್​ ಆವಾಜ್​ಗೆ ಪೊಲೀಸರು ಕಕ್ಕಾಬಿಕ್ಕಿ 

 


12:50 pm (IST)

ಜಾತಿ ಆಧಾರದ ಮೇಲೆ ಶಾಸಕರನ್ನು ಸೆಳೆಯಲು ಮುಂದಾದ ಬಿಜೆಪಿ 

ಕಾಂಗ್ರೆಸ್​ನಲ್ಲಿರುವ ಲಿಂಗಾಯತರನ್ನು ಸೆಳೆಯಲು ಮುಂದಾದ ಬಿಜೆಪಿ

ಬಿಜೆಪಿಯಲ್ಲಿರುವ ಗೌಡರನ್ನು ಸೆಳೆಯಲು ಮುಂದಾದ ಜೆಡಿಎಸ್​ 

ಜೆಡಿಎಸ್​ನ ಯಾವುದೇ ನಾಯಕರಿಗೆ ಗಾಳ ಹಾಕದ ಬಿಜೆಪಿ


12:47 pm (IST)

ಸರ್ಕಾರ ಶಿಷ್ಟಾಚಾರ ಹಿನ್ನಲೆಯಲ್ಲಿ ಪೊಲೀಸ್​ ಭದ್ರತೆ ಸಿಗದ ಹಿನ್ನೆಲೆ ಆಂಂಧ್ರ, ತೆಲಂಗಾಣಕ್ಕೆ ಕಾಂಗ್ರೆಸ್​ ನಾಯಕರು

ಕೇರಳಕ್ಕೆ ಜೆಡಿಎಸ್​ ನಾಯಕರು ಶಿಫ್ಟ್​ 

ಕಾಂಗ್ರೆಸ್​ ನಾಯಕರಿಗೆ ರಕ್ಷಣೆ ನೀಡುತ್ತೇವೆ ಎಂದಿರುವ ಆಂಧ್ರ ಪ್ರದೇಶ, ತೆಲಂಗಾಣ ಸಿಎಂ

15ದಿನಗಳ ವರೆಗೂ ಯಾವುದೇ ಬಿಜೆಪಿ ನಾಯಕರು ಅವರಿಗೆ ಸಂಪರ್ಕಿಸದಂತೆ ರಕ್ಷಿಸುತ್ತೇವೆ ಎಂದು ಭರವಸೆ

​ಕೇರಳದಲ್ಲಿ ಜೆಡಿಎಸ್  ಮೈತ್ರಿ ಸರ್ಕಾರದ ಹಿನ್ನಲೆ ಅಲ್ಲಿಗೆ ಜೆಡಿಎಸ್​ ನಾಯಕರು ಶಿಫ್ಟ್​ ಆಗುವ ಸಾಧ್ಯತೆ 

 


12:38 pm (IST)

ರಾಜ್ಯಪಾಲರ ಕ್ರಮ ಪ್ರಶ್ನಿಸಿ ಜೇಠ್ಮಾಲನಿ ಅರ್ಜಿ

ಸುಪ್ರೀಂಕೋರ್ಟ್​ಗೆ ಅರ್ಜಿಸಲ್ಲಿಸಿದ ಜೇಠ್ಮಾಲನಿ 

ಜೇಠ್ಮಾಲನಿ ಸುಪ್ರೀಂ ಕೋರ್ಟ್​ನ ಹಿರಿಯ ನ್ಯಾಯವಾದಿ 

ಯಡಿಯೂರಪ್ಪ ಆಹ್ವಾನ ನೀಡಿದ ಕ್ರಮ ಪ್ರಶ್ನಿಸಿ ಅರ್ಜಿ


12:35 pm (IST)

ಪಾಕಿಸ್ತಾನದಂತೆ ದೇಶದ ನ್ಯಾಯಾಂಗ ವ್ಯವಸ್ಥೆ ಹದಗೆಡುತ್ತಿದೆ

ಸಾರ್ವಜನಿಕ ಅಭಿಪ್ರಾಯವನ್ನು ನ್ಯಾಯಾಂಗ ಕೇಳುವ ಪರಿಸ್ಥಿತಿಗೆ ಬಂದಿದೆ

​ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್​ ಗಾಂಧಿ


12:13 pm (IST)

ಸುಪ್ರೀಂ ತೀರ್ಪಿನ ನಂತರ ಜೆಡಿಎಸ್​ ರೆಸಾರ್ಟ್​ನತ್ತ ಶಾಸಕರು

ಸುಪ್ರೀಂ ಕೋರ್ಟ್​ನಲ್ಲಿ ಗೆಲ್ಲಲ್ಲೇ ಬೇಕು ಎಂದು ಹಠಕ್ಕೆ ಬಿದ್ದಿರುವ ಜೆಡಿಎಸ್​ ಶಾಸಕರು

ಸುಪ್ರೀಂ ಕೋರ್ಟ್​ನಲ್ಲಿ ಅಫಿಡವಿಟ್​ ಸಲ್ಲಿಸಲು ಪ್ರತಿಯೊಬ್ಬ ಶಾಸಕರು ನಿರ್ಧಾರ

ರಾಜ್ಯಪಾಲರ ಆದೇಶ ಸರಿ ಎಂದರೇ ಆಂಧ್ರಕ್ಕೆ ಪಯಣ


12:10 pm (IST)

ಕುತೂಹಲ ಮೂಡಿಸಿದ ಕಾಂಗ್ರೆಸ್​-ಜೆಡಿಎಸ್​ ನಡೆ

ಪ್ರತಿಭಟನೆ ಬಳಿಕ ರಾಜಭವನದತ್ತ? ಅಥವಾ ರೆಸಾರ್ಟ್​ನತ್ತ?

ಈ ಬಗ್ಗೆ ಗುಟ್ಟು ಬಿಡದ ಕಾಂಗ್ರೆಸ್​ ನಾಯಕರು

 


12:01 pm (IST)

ಸುಪ್ರೀಂ ಕೋಟ್೯ ತೀಪು೯ ನೋಡಿಕೊಂಡು ರೆಸಾಟ್೯ ರಾಜಕಾರಣ ಮಾಡಲು ಜೆಡಿಎಸ್ ನಿಧಾ೯ರ..

ಸುಪ್ರೀಂ ಕೋಟ್೯ ನಿಂದ ರಾಜ್ಯಪಾಲರ ಆದೇಶ ಸರಿ ಅಂದ್ರೆ ಪಕ್ಕದ ಆಂಧ್ರಕ್ಕೆ ಹಾರಲು ಯೋಜನೆ

ಹೈದರಾಬಾದ್ ಅಥವಾ ವಿಶಾಖಪಟ್ನಂಗೆ ಹೋಗಲು ಸಿದ್ಧತೆ ನಡೆಸಿರುವ ಜೆಡಿಎಸ್ ಮುಖಂಡರು..

ಸುಪ್ರೀಂ ಕೋಟ್೯ನಲ್ಲಿ ಗೆಲ್ಲಲ್ಲೇಬೇಕು ಅಂಥ ಹಠಕ್ಕೆ ಬಿದ್ದ ಜೆಡಿಎಸ್ ..

ಸುಪ್ರೀಂ ಕೋಟಿ೯ಗೆ ಪ್ರತಿಯೊಬ್ಬ ಶಾಸಕ ಅಫಿಡೆವಿಟ್ ಸಲ್ಲಿಸಲು ಜೆಡಿಎಸ್ ನಿಧಾ೯ರ ..

ಅಫಿಡೆವಿಟ್ ನಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿಕೂಟದ ಸಕಾ೯ರಕ್ಕೆ ಬೆಂಬಲ ನೀಡಲಿದ್ದೇವೆ ಅಂಥ ಶಾಸಕರು ಹೇಳಿಕೆ..


11:56 am (IST)

11:56 am (IST)

ಬಿಜೆಪಿ ಕಚೇರಿಯಲ್ಲಿ ಕೇಕ್​ ಕತ್ತರಿಸಿ ಸಂಭ್ರಮ ಆಚರಿಸಿದ ಶ್ರೀರಾಮುಲು


11:51 am (IST)

ನಮ್ಮ ಜೊತೆ ಬಹಳಷ್ಟು ಪಕ್ಷೇತರರು ಇದ್ದಾರೆ

ಯಾರೂ ಊಹಿಸಲಾರದಷ್ಟು ಸಂಖ್ಯೆಯಲ್ಲಿ ನಮ್ಮ ಜೊತೆ ಶಾಸಕರು ಬರುತ್ತಾರೆ

ಯಾರೂ ಊಹಿಸಲಾರದಷ್ಟು ಸಂಖ್ಯೆಯಲ್ಲಿ ಬಹುಮತ ಸಾಬೀತು ಮಾಡುತ್ತೇವೆ

ಕಾಂಗ್ರೆಸ್​ ಜೆಡಿಎಸ್ ನಲ್ಲಿ ದೊಡ್ಡ ಸಂಖ್ಯೆಯ ಅಸಮಾಧಾನಿತರಿದ್ದಾರೆ

ಅವರೆಲ್ಲರೂ ನಮ್ಮ ಜೊತೆ ಬಂದೇ ಬರ್ತಾರೆ.

ಬಿಜೆಪಿ ಕಚೇರಿಯಲ್ಲಿ ಶ್ರೀರಾಮುಲು ಹೇಳಿಕೆ


11:49 am (IST)

ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿದ ಹಿನ್ನೆಲೆ.
ರಾಜ್ಯಪಾಲರ ವಿರುದ್ಧ ಜೆಡಿಎಸ್  ಕಾರ್ಯಕರ್ತರ ಪ್ರತಿಭಟನೆ.
ಮೈಸೂರಿನ ಕೋರ್ಟ್  ಮುಂಭಾಗ ಪ್ರತಿಭಟನೆ.
ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ.
ರಾಜ್ಯಪಾಲರು, ಕೇಂದ್ರ ಸರ್ಕಾರದ ಏಜೆಂಟ್ ಆಗಿದ್ದಾರೆಂದೆ ಘೋಷಣೆ.
ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಆಕ್ರೋಶ. 
ಜೆಡಿಎಸ್ ಗೆ ಸರ್ಕಾರ ರಚಿಸುವ ಅವಕಾಶ ಕೊಡುವಂತೆ ಒತ್ತಾಯ.


11:41 am (IST)

ರಾಜ್ಯಪಾಲರು ವಿಶ್ವಾಸ ಮತ ಸಾಬೀತು ಪಡಿಸಲು 15ದಿನಗಳ ಕಾಲಾವಕಾಶ ನೀಡಿದ್ದಾರೆ

ಆದರೆ ಅಲ್ಲಿಯವರೆಗೂ ನಾನು ಕಾದು ಕುಳಿತುಕೊಳ್ಳುವುದಿಲ್ಲ

ಆದಷ್ಟು ಬೇಗ ಸದನ ಕರೆದು ಬಹುಮತ ಸಾಬೀತು ಪಡಿಸುತ್ತೇನೆ- ಬಿಎಸ್​ವೈ


11:40 am (IST)

60ರ ದಶಕದಲ್ಲಿ ಇಂದಿರಾಗಾಂಧಿಗೆ ಬಹುಮತವಿರಲಿಲ್ಲ

ಆತ್ಮ ಸಾಕ್ಷಿಯಿಂದ ಮತ ಕೇಳಿ ಇಂದಿರಾ ಯಶಸ್ವಿಯಾಗಿದ್ದರು

ಅದೇ ರೀತಿ ನಮಗೂ ಬೆಂಬಲ ಸಿಗಲಿದೆ- ಯಡಿಯೂರಪ್ಪ ವಿಶ್ವಾಸ


11:37 am (IST)

ರಾಜ್ಯದ ಎಲ್ಲಾ ಶಾಸಕರು ಆತ್ಮ ಸಾಕ್ಷ್ಯಿಗೆ ಅನುಗುಣವಾಗಿ ನಮಗೆ ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಇದೆ

ಮೋದಿ- ಅಮಿತ್​ ಷಾಗೆ ಕೃತಜ್ಞತೆ ಸಲ್ಲಿಸಿದ ಯಡಿಯೂರಪ್ಪ

ಮುಖ್ಯಮಂತ್ರಿಯಾದ ಬಳಿಕ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್​ಗಳ ಸಾಲ ಮನ್ನಾ ಮಾಡಿದ್ದೇನೆ

ನೇಕಾರರ 1 ಲಕ್ಷ ಸಾಲಮನ್ನಾ ಮಾಡಿದ್ದೇನೆ

ರೈತರ ಸಾಲಮನ್ನಾದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ಕೇಳಿದ್ದೇವೆ

ಮಾಹಿತಿ ಸಿಕ್ಕ ನಂತರ ಸಾಲಮನ್ನಾ

ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಸಾಲಮನ್ನಾ


11:34 am (IST)

ಜನಾದೇಶ ನನ್ನ ಮತ್ತು ಬಿಜೆಪಿ ಪರವಿದ್ದರೂ ಕಾಂಗ್ರೆಸ್​-ಜೆಡಿಎಸ್​ ಅಧಿಕಾರ ಕಬಳಿಸಲು ಯತ್ನಿಸುತ್ತಿದೆ

ಆದರೆ ನಮ್ಮ ಪರ ಕಾಂಗ್ರೆಸ್​-ಜೆಡಿಎಸ್​ ಅನೇಕ ಶಾಸಕರಿದ್ದಾರೆ.

ಅವರು ನಮಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ


11:33 am (IST)

ರಾಜ್ಯದ ಜನರಿಗೆ ಶುಭಾಶಯ ತಿಳಿಸಿದ ಯಡಿಯೂರಪ್ಪ

ರಾಜ್ಯದ ಜನರಿಗೆ, ರೈತರ, ಹಿಂದುಳಿದವರ್ಗಗಳ ಬೆಂಬಲಕ್ಕೆ ಧನ್ಯವಾದ 


11:32 am (IST)

ಸಿಎಂ ಆದ ಬಳಿಯ ಯಡಿಯೂರಪ್ಪ ಮೊದಲ ಪತ್ರಿಕಾ ಗೋಷ್ಠಿ

 ಮಹದಾಯಿ ವಿವಾದ ಸಂಬಂಧ ಪ್ರಸ್ತಾಪಿಸುವ ಸಾಧ್ಯತೆ

ಭಾಷಣದ ಆರಂಭದಲ್ಲೇ ಭಾವುಕರಾದ ಯಡಿಯೂರಪ್ಪ


11:14 am (IST)

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ  ದೇವೇಗೌಡರು

ದೇವೇಗೌಡರು ಆಗಮಿಸುತ್ತಿದ್ದಂತೆ ಸಿದ್ದರಾಮಯ್ಯ ಜೊತೆ ಚರ್ಚೆ

ಪ್ರಸಕ್ತ ಬೆಳವಣಿಗೆ ಬಗ್ಗೆ ಸಿದ್ದರಾಮಯ್ಯ ಜೊತೆ ಮಾತು

ನಗುತ್ತಲೇ ದೇವೇಗೌಡರಿಗೆ ಸ್ವಾಗತಿಸಿದ ಮಾಡಿದ ಸಿದ್ದರಾಮಯ್ಯ


11:10 am (IST)


ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ

ಕಾಂಗ್ರೆಸ್​ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ದೇವೇಗೌಡರು

ವಿಧಾನಸೌಧದ ಮುಂದೆ ಕಾಂಗ್ರೆಸ್​ ಜೆಡಿಎಸ್​ ಪ್ರತಿಭಟನೆ


11:08 am (IST)

ರಾಜಭವನದ ಸುತ್ತ ಪೊಲೀಸ್​ ಸರ್ಪಗಾವಲು 

ರಾಜಭವನದ ಸುತ್ತ ಬಿಗಿ ಪೊಲೀಸ್​ ಬಂದೋಬಸ್ತ್​ 


10:59 am (IST)

ಬಹುಮತ ಸಾಬೀತುಪಡಿಸಲು ವಿಫಲವಾದರೆ ಗೊಂದಲದಲ್ಲಿ ಸಾಲಮನ್ನಾ ಆದೇಶ

1 ಲಕ್ಷ ರೂವರೆಗಿನ ರೈತರ ಸಾಲಮನ್ನಾಕ್ಕೆ ಆದೇಶ

ಕುಮಾರಸ್ವಾಮಿಯವರು ಪ್ರಣಾಳಿಕೆಯಲ್ಲಿ ಸಾಲಮನ್ನಾ ಬಗ್ಗೆ ಆಶ್ವಾಸನೆ ನೀಡಿದ್ದರು


10:57 am (IST)

ಹ್ಯಾಟ್ರಿಕ್ ಮೂರನೇ ಬಾರಿಗೆ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾರೆ.

ಬಿಜೆಪಿಗೆ ಜನಾದೇಶ ಇದೆ.

ಕಾಂಗ್ರೆಸ್ ನವರು ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ 

ಕಾಂಗ್ರೆಸ್ ನವರು ಸೋನಿಯಾ ರಾಹುಲ್ ವಿರುದ್ಧ ಪ್ರತಿಭಟನೆ ಮಾಡಲಿ

ಇನ್ನು 5 ವರ್ಷ ಕಾಂಗ್ರೇಸ್ ನವರು ಜನಾದೇಶ ಒಪ್ಪಿಕೊಳ್ಳಬೇಕು

ವಾಮಮಾರ್ಗದಲ್ಲಿ ವಿಪಕ್ಷಗಳು, ಹಿಂದಿನ ಬಾಗಿಲು ರಾಜಕಾರಣ ಮಾಡುತ್ತಿದ್ದಾರೆ

ಹಗಲು ರಾತ್ರಿ ಎನ್ನದೇ ಸರ್ಕಾರ ರಚಿಸಲು ಕಸರತ್ತು ಮಾಡುತ್ತಿದ್ದಾರೆ 

ಬಿಎಸ್ ಯಡಿಯೂರಪ್ಪನವರು ರೈತ ನಾಯಕರು 

ಬಿಎಸ್ ವೈ ಎರಡು ಬಾರಿ ಈ ಹಿಂದೆ ರೈತರ ಸಾಲ ಮನ್ನಾ ಮಾಡಿದ್ದಾರೆ .

O % ಬಡ್ಡಿ ದರದಲ್ಲಿ ರೈತರಿಗೆ ಸಾಲ‌ ನೀಡಿದ್ರು 

ಯಡಿಯೂರಪ್ಪನವರು ಜನಪರ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ವಿದೆ ..

ಕಾಂಗ್ರೆಸ್ 78 ,ಜೆಡಿಎಸ್ 38 ,ಹೀಗಾಗಿ ಜನರು ತಿರಸ್ಕಾರ ಮಾಡಿದ್ದಾರೆ ..

ರಾಜ್ಯದಲ್ಲಿ ದೊಡ್ಡ ಪಕ್ಷಕ್ಕೆ ಮೊದಲ ಆದ್ಯತೆ 

ಹೀಗಾಗಿ ಬಿಎಸ್ ವೈ ಸಿಎಂ ಅಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ


10:56 am (IST)

ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಸಾಲಮನ್ನಾ

ರೈತರ ಸಾಲಮನ್ನಾ ಮಾಡಿದ ಯಡಿಯೂರಪ್ಪ

 


10:55 am (IST)

ರಾಷ್ಟ್ರೀಕೃತ ಬ್ಯಾಂಕ್​ ಮತ್ತು ಸಹಕಾರಿ ಬ್ಯಾಂಕ್​ಗಳ ಸಾಲಮನ್ನಾಕ್ಕೆ ಮುಂದಾದ ಯಡಿಯೂರಪ್ಪ

56 ಸಾವಿರ ಕೋಟಿ ಮೊತ್ತದ ಸಾಲಮನ್ನಾ

 


10:54 am (IST)

ರೈತರ ಸಾಲಮನ್ನಾ ಮಾಡಿದ ನೂತನ ಮುಖ್ಯಮಂತ್ರಿ ಬಿಎಸ್​ವೈ

 


10:44 am (IST)

10:43 am (IST)

10:38 am (IST)

ಪ್ರತಿಭಟನೆ ವೇಳೆ ಶಾಸಕ ರಮೇಶ್ ಕುಮಾರ್ ಆಕ್ರೋಶ

ಮನುಷ್ಯನಿಗೆ ‌ನಾಚಿಕೆ ಇರಬೇಕು.. ನಾಚಿಕೆ ಇಲ್ಲದೆ ಯಡಿಯೂರಪ್ಪ ಪ್ರಮಾಣ ಸ್ವೀಕಾರ ಮಾಡಿದ್ದಾನೆ

ಮೊದಲು ಸದಸ್ಯರ ಬಹುಮತ ಸಾಬೀತು ಪಡಿಸಲಿ

ನಮಗೂ ನಾಚಿಕೆ ಮಾನ ಮರ್ಯಾದೆ, ಜನರ ಭಯ ಇದೆ

ಸಂವಿಧಾನದ ಪ್ರಕಾರ ನಾವು ನಡೆದಕೊಳ್ತೇವೆ

ಕೆಲ ಶಾಸಕರು ಇಲ್ಲದೆ ಇರುವ ವಿಚಾರ

ನಾವು ವಿಧಾನಸಭೆಯಲ್ಲಿ ಸದಸ್ಯರ ಬಹುಮತ ‌ಸಾಬೀತು ಮಾಡುತ್ತೇವೆ

ನ್ಯೂಸ್ 18ಗೆ ಮಾಜಿ ಸಚಿವ ರಮೇಶ್ ಕುಮಾರ್ ‌ಹೇಳಿಕೆ


10:35 am (IST)

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ

ಈ ಬಗ್ಗೆ ಕಾಂಗ್ರೆಸ್​ ಜೆಡಿಎಸ್​ ನಾಯಕರು ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ

ಬಿಜೆಪಿ ಮಣಿಸಲು ಭಿನ್ನಾಭಿಪ್ರಾಯ ಮರೆತು ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದಾಗಬೇಕು

ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳ ಎಲ್ಲ ಮುಖ್ಯಮಂತ್ರಿಗಳನ್ನು ಈ ಮೂಲಕ ಮನವಿ ಮಾಡುತ್ತೇನೆ

ಬಿಜೆಪಿಯನ್ನು ಹೀಗೆ ಬಿಟ್ಟರೆ ರಾಜ್ಯ ದೇಶವನ್ನು ಮಾರಿಬಿಡುತ್ತದೆ. ಇದು ಬಿಜೆಪಿಯ ಹುಟ್ಟುಗುಣ

ಆನಂದ್​ ಸಿಂಗ್​ಗೆ ಬೆದರಿಸುವ ಪ್ರಯತ್ನ ನಡೆಯುತ್ತಿದೆ 

ಅವರ ಮೇಲಿರುವ ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಮುಗಿಸಿಹಾಕುತ್ತೇವೆ ಎಂಬ ಭಯ ಹುಟ್ಟಿಸಿದ್ದಾರೆ 

ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರಸ್ವಾಮಿ 


10:30 am (IST)

ಮೋದಿ, ಅಮಿತ್​ ಷಾರಿಂದ ಸಂವಿಧಾನದ ಕಗ್ಗೊಲೆಯಾಗುತ್ತಿದೆ

ರಾಜ್ಯಪಾಲರು ಕಾನೂನಾತ್ಮಕವಾಗಿ ಕ್ರಮ ಕೈಗೊಂಡಿಲ್ಲ- ಕುಮಾರಸ್ವಾಮಿ

ಜೆಡಿಎಸ್​-ಕಾಂಗ್ರೆಸ್​ ಶಾಸಕರನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದೆ. 

ಆಮಿಷವನ್ನು ಕೂಡ ಶಾಸಕರಿಗೆ ಒಡ್ಡಲಾಗಿದೆ

 


10:24 am (IST)

ಕಾಂಗ್ರೆಸ್ ಜೆಡಿಎಸ್ ಶಾಸಕರ ರಕ್ಷಣೆ ಜವಾಬ್ದಾರಿಗೆ ಮುಂದಾದ ತೆಲಂಗಾಣ, ಆಂಧ್ರ ಸಿಎಂಗಳು

ಶಾಸಕರ ರಕ್ಷಣೆ ಜವಾಬ್ದಾರಿ ನಮಗೆ ಕೊಡಿ ಎಂದ ಇಬ್ಬರು ಮುಖ್ಯಮಂತ್ರಿಗಳು

15 ದಿನ ನಮ್ಮ ಜೊತೆ ಇರಲಿ, ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ

ಬಿಜೆಪಿಯ ಯಾವ ಮುಖಂಡರು ಅವರನ್ನ ಸಂಪರ್ಕಿಸದಂತೆ ನೋಡಿಕೊಳ್ಳುತ್ತೇವೆ

ತಕ್ಷಣವೇ ಹೊರಟು ಬನ್ನಿ ಎಂದಿದ್ದಾರೆ ಇಬ್ಬರು ಮುಖ್ಯಮಂತ್ರಿಗಳು

ತೆಲಂಗಾಣ ಹಾಗೂ ಆಂಧ್ರ ಮುಖ್ಯಮಂತ್ರಿಗಳಿಂದ ಕಾಂಗ್ರೆಸ್ ಜೆಡಿಎಸ್ ಮೈತ್ರಿಗೆ ಬೆಂಬಲ

ನಮ್ಮ ರಾಜ್ಯಕ್ಕೆ ಬನ್ನಿ ಎಂದಿದ್ದಾರೆ ಕೆಸಿಆರ್ ಹಾಗೂ ಚಂದ್ರಬಾಬು ನಾಯ್ಡು

ಇಂದು ಸಂಜೆ ಆಂಧ್ರ ಅಥವಾ ತೆಲಂಗಾಣಕ್ಕೆ ಹೊರಡಲು ಸಿದ್ದವಾಗಿದ್ದಾರೆ ಶಾಸಕರು

ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಒಂದೇ ರೆಸಾರ್ಟ್ ಗೆ ಹೋಗಲು ಚಿಂತನೆ

ವಿಶೇಷ ವಿಮಾನದಲ್ಲೇ ಶಾಸಕರು , ಪರಿಷತ್ ಸದಸ್ಯರು ಸೇರಿ ಒಟ್ಟು 140 ಜನ ಪ್ರಯಾಣ

ಸಂಜೆ 4 ಗಂಟೆಗೆ ಗಾಂಧಿ ಪ್ರತಿಮೆ ಬಳಿಯಿಂದ ಹೊರಡಲಿದ್ದಾರೆ


10:21 am (IST)

ಬಿಎಸ್​ವೈ ಸಿಎಂ ಆಗಿ ಪ್ರಮಾಣ ವಚನ ಸ್ವೀಕರ ಹಿನ್ನೆಲೆ

ಬಿಜೆಪಿ ಕಚೇರಿಯಲ್ಲಿ ಸಂಸದೆ ಶೋಭಾ ಕರಾದ್ಲಂಜೆ ಹೇಳಿಕೆ

ನಮ್ಮ ನಾಯಕರಾದ ಯಡಿಯೂರಪ್ಪನವರು  ಹಸಿರು ಶಾಲು ಹೂದ್ದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ದೇವರು ಹಾಗೂ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ

ಮೊದಲ ಕ್ಯಾಬಿನೆಟ್ ನಲ್ಲಿ ರೈತರ ಪರ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ನಂಬಿಕೆ ಇದೆ.

ಸಂಪೂರ್ಣ ಬೆಂಬಲದೂಂದಿಗೆ ಸರ್ಕಾರ ರಚನೆ ಮಾಡುತ್ತೇವೆ 

ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುತ್ತೇವೆ

ನಮಗೆ ಹಾಗೂ ನಮ್ಮ ನಾಯಕರಿಗೆ ಪೂರ್ಣ ವಿಶ್ವಾಸ ಇದೆ .

ಬಿಜೆಪಿ ಕಚೇರಿಯಲ್ಲಿ ಸಂಸದೆ ಶೋಭಾ ಕರದ್ಲಾಂಜೆ ಹೇಳಿಕೆ


10:19 am (IST)

ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕಾರ ಹಿನ್ನಲೆ

ಶಿವಮೊಗ್ಗ ಜಿಲ್ಲಾ ಬಿಜೆಪಿ ಘಟಕದಲ್ಲಿ ವಿಜಯೋತ್ಸವ .

ಬಿಜೆಪಿ ಕಚೇರಿಯಲ್ಲಿ ಸಂಭ್ರಮೋತ್ಸವ ಆಚರಿಸಿದ ಬಿಜೆಪಿ ಕಾರ್ಯಕರ್ತರು.

ಪಟಾಕಿ ಸಿಡಿಸಿ  ಯಡಿಯೂರಪ್ಪ ಪರ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು.

ಸಾರ್ವಜನಿಕರಿಗೆ ಸಿಹಿ ಹಂಚಿ ಸಂತೋಷ ಹಂಚಿಕೊಂಡ ಬಿಜೆಪಿ ಕಾರ್ಯಕರ್ತರು.


10:07 am (IST)

10:03 am (IST)

ಸಿಎಂ ಆಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಹಿನ್ನೆಲೆ

ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಬಿಜೆಪಿ ಕಚೇರಿ ಬಳಿ ಕಾರ್ಯಕರ್ತರ ಭರ್ಜರಿ ಸಂಭ್ರಮಾಚರಣೆ

ಪಟಾಕಿ ಸಿಡಿಸಿ, ಸಿಹಿ ಹಂಚಿ ಕಾರ್ಯಕರ್ತರ ಸಂಭ್ರಮ

ಮಂಗಳೂರಿನ ಕೋಡಿಯಾಲ್ ಬೈಲ್​ನಲ್ಲಿರುವ ಬಿಜೆಪಿ ಕಚೇರಿ


10:00 am (IST)

ನೂತನ ಮುಖ್ಯಮಂತ್ರಿ ಯಡಿಯೂರಪ್ಪಗೆ ಹೂಗುಚ್ಛನೀಡಿ ಸ್ವಾಗತಿಸಿದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ


9:59 am (IST)

ವಿಧಾನಸೌಧದ ಪ್ರವೇಶಕ್ಕೆ ಕೈ ಮುಗಿದು ಪ್ರವೇಶಿಸಿದ ಯಡಿಯೂರಪ್ಪ

ಮೂರನೇ ಬಾರಿ ಮುಖ್ಯಮಂತ್ರಿಯಾಗಿ ವಿಧಾನಸೌಧ ಪ್ರವೇಶ


9:57 am (IST)


ಯಡಿಯೂರಪ್ಪ ಮುಖ್ಯಮಂತ್ರಿಯಾಗಿ  ಪ್ರಮಾಣವಚನ ಸ್ವೀಕರಿಸಿದ ಹಿನ್ನಲೆ,
ಹಾಸನದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ,
ನಗರದ ಹೇಮಾವತಿ ಪ್ರತಿಮೆ ಬಳಿ ವಿಜಯೋತ್ಸವ ಆಚರಿಸಿದ ಬಿಜೆಪಿ ಕಾರ್ಯಕರ್ತರು,
ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ದ  ನೂರಾರು ಕಾರ್ಯಕರ್ತರು,
ಹಾಸನ ಜಿಲ್ಲೆಯ ಹಲವೆಡೆ ಸಂಭ್ರಮಾಚರಣೆ,
ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಬಿಜೆಪಿಯಿಂದ ಸಂಭ್ರಮ,
ಮೋದಿ ಮತ್ತು ಯಡಿಯೂರಪ್ಪಗೆ ಜೈಕಾರ ಹಾಕಿ ಹರ್ಷೊದ್ಘಾರ ವ್ಯಕ್ತಪಡಿಸಿದ ಅಭಿಮಾನಿಗಳು,
ನೂರಾರು ಅಭಿಮಾನಿಗಳಿಂದ ಸಂಭ್ರಮಾಚರಣೆ.


9:54 am (IST)

ವಿಧಾನಸೌಧದ ಮುಖ್ಯಮಂತ್ರಿ ಕೊಠಡಿಗೆ ಆಗಮಿಸಿದ ಯಡಿಯೂರಪ್ಪ

ಶಾಸಕ ಅರಗ ಜ್ಞಾನೇಂದ್ರ, ಪುತ್ರ ವಿಜಯೇಂದ್ರ, ಬಸವರಾಜ್​ ಬೊಮ್ಮಾಯಿ ಜೊತೆ ಆಗಮನ


9:52 am (IST)

ಕಾಂಗ್ರೆಸ್​ ನಾಯಕರಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಪ್ರತಿಭಟನೆ


9:38 am (IST)

9:38 am (IST)

ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರಕ್ಕೆ ಆಕ್ರೋಶ

ಜೆಡಿಎಸ್​-ಕಾಂಗ್ರೆಸ್​ ಶಾಸಕರಿಂದ ವಿಧಾನಸೌಧ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ

ಸಿದ್ದರಾಮಯ್ಯ, ಗುಲಾಂ ನಬಿ ಆಜಾದ್​ , ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರು ಭಾಗಿ

ಪ್ರಜಾಪ್ರಭುತ್ವದ ಕಗ್ಗೊಲೆಗೆ ರಾಜ್ಯಪಾಲರಿಂದ ದಾರಿ- ಗುಲಂ ನಬಿ 

ಕೇಂದ್ರದಿಂದ ರಾಜ್ಯಪಾಲರ ಅಧಿಕಾರ ದುರ್ಬಳಕೆ

ರಾಜ್ಯಪಾಲರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆಂದು ಆಪಾದನೆ


9:31 am (IST)

ರಾಜ್ಯಪಾಲರ ಕ್ರಮ ಅಸಂವಿಧಾನಿಕ; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯ ಮತ್ತು ದೇಶದ ಇತಿಹಾಸದಲ್ಲೇ ಎಂದೂ ಕೂಡ ಬಹುಮತ ಸಾಬೀತಿಗೆ 15 ದಿನ ಅವಕಾಶ ನೀಡಿಲ್ಲ\

ಗೋವಾ, ಮಣಿಪುರಗಳಲ್ಲಿ ಏಕೈಕ ದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಲಾಗಿದೆ

ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿಗೆ ರಾಜ್ಯಪಾಲರಿಗೆ ಮನವಿ ಮಾಡಿದರೂ ಅವಕಾಶ ನೀಡಿಲ್ಲ

ಈ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಲಿದೆ


9:24 am (IST)

9:22 am (IST)

9:17 am (IST)

ಬಹುಮತವಿದ್ದರು ನಮ್ಮನ್ನು ಕರೆಯದಿದ್ದು ದುರಾದೃಷ್ಟ

ಪದ್ಮನಾಭನಗರದ ಹೆಚ್​ಡಿಡಿ ನಿವಾಸದಲ್ಲಿ ಹೆಚ್.ಡಿ.ರೇವಣ್ಣ ಹೇಳಿಕೆ

ಸುಪ್ರಿಂಕೋರ್ಟ್ ತೀರ್ಪಿದ್ದರೂ ರಾಜ್ಯಪಾಲರು BJPಗೆ ಅವಕಾಶ ನೀಡಿದ್ದಾರೆ

ನಾವೆಲ್ಲ ಹೋಗಿ ನಮಗೆ ಬಹುಮತ ಇದೆ ಎಂದರು ರಾಜ್ಯಪಾಲರು ನಮ್ಮನ್ನ ಕರೆದಿಲ್ಲ

ಯಡಿಯೂರಪ್ಪ ಸರ್ಕಾರ ಇರತ್ತೊ ಇಲ್ಲವೇ ಎಂದು 2 ದಿನ ಕಾದು ನೋಡಬೇಕು

ಪದ್ಮನಾಭನಗರದ ಹೆಚ್​ಡಿಡಿ ನಿವಾಸದಲ್ಲಿ ಹೆಚ್.ಡಿ.ರೇವಣ್ಣ ಹೇಳಿಕೆ


9:14 am (IST)

ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರಾಜಭವನದತ್ತ ಕಾಂಗ್ರೆಸ್​ ಶಾಸಕರು

ಈಗಲ್ಟ್ ಟನ್ ಕಡೆಯಿಂದ ಹೊರಟ ಬಸ್ ಶಾಸಕರ ಬಸ್​ 

ಮನೆಯಲ್ಲೇ ಕುಳಿತುಕೊಂಡು ರಾಜಕೀಯ ವಿದ್ಯಾಮಾನದ ಮಾಹಿತಿ ಪಡೆಯುತ್ತಿರುವ ಸಿದ್ದರಾಮಯ್ಯ
ಬದಾಮಿ ಹಾಗೂ ಅನೇಕ‌ಕಡೆಗಳಿಂದ ಆಗಮಿಸಿರುವ ಮುಖಂಡರೊಂದಿಗೆ ಚರ್ಚಿಸುತ್ತಿರುವ ಸಿದ್ದರಾಮಯ್ಯ


9:07 am (IST)

9:06 am (IST)

ನೂತನ ಸಿಎಂ ಆಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ

23ನೇ‌ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ

ರಾಜ್ಯಪಾಲರಿಂದ ಪ್ರಮಾಣ ವಚನ ಬೋಧನೆ

ದೇವರು, ರೈತರ ಹೆಸರಿನಲ್ಲಿ ಯಡಿಯೂರಪ್ಪ ‌ಪ್ರಮಾಣ ವಚನ

ರಾಜಭವನದಲ್ಲಿ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ


9:04 am (IST)

ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ

ರೈತರು, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ


9:02 am (IST)

ದೇವರ, ರೈತರ ಹೆಸರಿನಲ್ಲಿ ಬಿಎಸ್​ವೈ ಪ್ರಮಾಣವಚನ


9:01 am (IST)

ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ

ರಾಜ್ಯಪಾಲರಿಂದ ಪ್ರಮಾಣ ವಚನ


8:59 am (IST)

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಆರಂಭ

ಪ್ರತಿಜ್ಞಾವಿಧಿ ಬೋಧಿಸಲಿರುವ  ರಾಜ್ಯಪಾಲ ವಜುಬಾಯಿವಾಲ 

ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಉಪಸ್ಥಿತಿ


8:52 am (IST)

ರಾಜಭವನಕ್ಕೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ

ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಯಡಿಯೂರಪ್ಪ

ಹಸಿರು ಶಾಲು ಹೊದ್ದು ಆಗಮಿಸಿರುವ B.S. ಯಡಿಯೂರಪ್ಪ

 ಗಾಜಿನ ಮನೆಯಲ್ಲಿ ಯಡಿಯೂರಪ್ಪಗೆ ಶುಭಾಶಯಗಳ ಮಹಾಪೂರ.

ಕೇಂದ್ರ ಸಚಿವರು, ರಾಜ್ಯದ ಮಾಜಿ ಸಚಿವರು, ಪಕ್ಷದ ನಾಯಕರಿಂದ ಶುಭಾಶಯಗಳ ಸುರಿಮಳೆ


8:47 am (IST)

8:45 am (IST)

8:45 am (IST)

"ಕಳೆದ ಎಪ್ಪತ್ತು ವರ್ಷಗಳಲ್ಲಿ ಈ ರೀತಿ ಹಲವು ಬಾರಿಯಾಗಿದೆ. ಬಹುಮತ ಸಾಭೀತು ಮಾಡುತ್ತೇವೆ. ನಮಗೆ ಬಹುಮತ ಸಾಭೀತು ಪಡಿಸಲು ಯಾವುದೇ ಸಮಸ್ಯೆ ಇಲ್ಲ," ಅನಂತ್​ ಕುಮಾರ್​, ಕೇಂದ್ರ ಸಚಿವ. 


8:44 am (IST)

23ನೇ ಸಿಎಂ ಆಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆ

ರಾಜಭವನದ ಗಾಜಿನಮನೆಯಲ್ಲಿ ವೇದಿಕೆ ಸಿದ್ಧ

ಬಿಎಸ್​ವೈ ಪ್ರಮಾಣವಚನಕ್ಕೆ ಎಲ್ಲ ಸಿದ್ಧತೆ ಮಾಡಿರುವ DPAR ಸಿಬ್ಬಂದಿ

250ಕ್ಕೂ ಗಣ್ಯರಿಗೆ ಶ್ವೇತವರ್ಣದ ಆಸನದ ವ್ಯವಸ್ಥೆ

ಗಾಜಿನ ಮನೆಯ ವೇದಿಕೆ ಮುಂಬಾಗ ಕುಳಿತ ಕೇಂದ್ರ ಸಚಿವರು

ಜೆ.ಪಿ ನಡ್ಡಾ, ಪ್ರಕಾಶ್ ಜಾವ್ಡೇಕರ್, ಧರ್ಮೇಂದ್ರ ಪ್ರಧಾನ್ 

ರಾಜಭವನದ ಗಾಜಿನ ಮನೆಗೆ ಬಿಜೆಪಿಯ ಹಲವು ಶಾಸಕರ ಆಗಮನ

ಗಾಜಿನ ಮನೆಗೆ ಆಗಮಿಸಿದ ಕೇಂದ್ರ ಸಚಿವ ಅನಂತ್ ಕುಮಾರ್,

ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ, ಪ್ರತಾಪ್​ ಸಿಂಹ ಸೇರಿದಂತೆ ಹಲವರು ಭಾಗಿ


8:43 am (IST)

ಈಗಲ್ ​ಟನ್​ ರೆಸಾರ್ಟ್​ನಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್​ ಶಾಸಕರು

ಕಾಂಗ್ರೆಸ್ ಬೀಡು ಬಿಟ್ಟಿರುವ ರೆಸಾರ್ಟ್​ಗೆ ಪೊಲೀಸರ ಸರ್ಪಗಾವಲು

ಬಿಡದಿ ಬಳಿ ಇರುವ ಈಗಲ್ ಟನ್ ರೆಸಾರ್ಟ್ ನಲ್ಲಿರುವ ಶಾಸಕರು

ಶಾಸಕರ ಭದ್ರತೆ ನೀಡಲು ಬರೋಬ್ಬರಿ 250 ಪೊಲೀಸರ ನಿಯೋಜನೆ

ರೆಸಾರ್ಟ್ ಸುತ್ತಲೂ ಸುಭದ್ರ ಕಂಪೌಂಡ್. ಜೊತೆಗೆ ಖಾಸಗಿ ಸೆಕ್ಯೂರಿಟಿ


8:42 am (IST)

ಬಿಎಸ್​ವೈ ಕಾರಿಗೆ ಯೂಥ್ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ

ಯೂಥ್ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಸಂಜಯ್ ನಗರದಲ್ಲಿ ಪೂಜೆ ಮುಗಿಸಿ ತೆರಳುತ್ತಿದ್ದ ವೇಳೆ  ಬಿಎಸ್​ವೈ ಕಾರಿಗೆ ಮುತ್ತಿಗೆ


8:40 am (IST)

8:40 am (IST)

ರಾಜಭವನಕ್ಕೆ ಕೇಂದ್ರ ಸಚಿವ ಅನಂತ್​ ಕುಮಾರ್​, ಗೋವಿಂದ ಕಾರಜೋಳ

ಬಹುಮತ ಸಾಭೀತುಪಡಿಸುವ ವಿಶ್ವಾಸ ವ್ಯಕ್ತಪಡಿಸಿದ ಅನಂತ್​ ಕುಮಾರ್​


8:28 am (IST)

ಪ್ರಮಾಣವಚನಕ್ಕೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಎಸ್​ವೈ

ಸಂಜಯನಗರದ ರಾಧಾಕೃಷ್ಣ ದೇವಸ್ಥಾನಕ್ಕೆ ತೆರಳಿದ ಬಿಎಸ್​ವೈ

ರಾಧಾಕೃಷ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿರುವ ಬಿಎಸ್​ವೈ

ಇಂದು 23ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ


8:25 am (IST)

ಆನಂದ್ ಸಿಂಗ್ ನಾಪತ್ತೆ ಬೆನ್ನಲ್ಲೇ ಮತ್ತೊಬ್ಬ ಶಾಸಕ ನಾಪತ್ತೆ

ಕಾಂಗ್ರೆಸ್​ ಶಾಸಕ ವೆಂಕಟರಮಣಪ್ಪ ನಾಪತ್ತೆ

ಪಾವಗಡ ಕಾಂಗ್ರೆಸ್ ಶಾಸಕ‌ ವೆಂಕಟರಮಣಪ್ಪ

ಯಾರ ಸಂಪರ್ಕಕ್ಕೂ ಸಿಗದ ವೆಂಕಟರಮಣಪ್ಪ

ವೆಂಕಟರಮಣಪ್ಪ ಬಿಜೆಪಿ ಜೊತೆ ಹೋಗಿರುವ ಶಂಕೆ


8:24 am (IST)

ಬಳ್ಳಾರಿ ಜಿಲ್ಲೆ ವಿಜಯನಗರ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ನಾಪತ್ತೆ

ನಿನ್ನೆಯಿಂದ ಎಲ್ಲೂ ಕಾಣಿಸಿಕೊಳ್ಳದ ವಿಜಯನಗರ ಶಾಸಕ ಆನಂದ್ ಸಿಂಗ್

ನಿನ್ನೆ ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ಭಾಗಿಯಾಗದೇ ಗೈರು

ನಿನ್ನೆ ಬೆಂಗಳೂರಿನಲ್ಲಿದ್ದರೂ ಸಭೆಗೆ ಹಾಜರಾಗದ ಶಾಸಕ ಆನಂದ್ ಸಿಂಗ್

ಸಿಂಗ್ ಕರೆತರಲು ಶಾಸಕ ನಾಗೇಂದ್ರ, ಜಮೀರ್ ಅಹ್ಮದ್ ಯತ್ನ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಿ ಬರಿಗೈಲಿ ವಾಪಾಸ್ ಬಂದ ಶಾಸಕರು

ಬಳ್ಳಾರಿ ಜಿಲ್ಲೆ ವಿಜಯನಗರ ಶಾಸಕ ಆನಂದ್ ಸಿಂಗ್ ನಡೆ ನಿಗೂಢ

ಕೇಂದ್ರ ಸಚಿವ ರಾಜಾನಾಥ್ ಸಿಂಗ್ ಜೊತೆ ಉತ್ತಮ ಸಂಬಂಧವಿರುವ ಆನಂದ್ ಸಿಂಗ್

ಆನಂದ್ ಸಿಂಗ್ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆ

ಕ್ಷೇತ್ರದಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಸಾಕಷ್ಟು ವಿರೋಧ ವ್ಯಕ್ತ

ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದ ಆನಂದ್ ಸಿಂಗ್

ಬೆಂಗಳೂರು ಇಲ್ಲವೇ ದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಆನಂದ್​ ಸಿಂಗ್

ರಾಜಕೀಯ ಪರಿಸ್ಥಿತಿ ನೋಡಿಕೊಂಡು ತಮ್ಮ ಮುಂದಿನ ನಡೆ ನಿರ್ಧಾರ

ಪ್ರಸ್ತುತ ಯಾವುದೇ ಪಕ್ಷದ ನಾಯಕರಿಗೂ ಸಿಗದ ಶಾಸಕ ಆನಂದ್ ಸಿಂಗ್


8:20 am (IST)

ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ.

ರಾಜಭವನ ಕಡೆಗೆ ಅಗಮಿಸುತ್ತಿರುವ ಬಿಜೆಪಿ ನಾಯಕರು.

ಸಿ ಟಿ ರವಿ, ಪಿ ಸಿ ಮೋಹನ್, ರಾಜೀವ್ ಚಂದ್ರಶೇಖರ್, ರಾಮಚಂದ್ರ ಗೌಡ 

ಪ್ರತಾಪ್​ ಸಿಂಹ, ರಾಮದಾಸ್​ ಸೇರಿದಂತೆ ಹಲವರು ಬಿಜೆಪಿ ನಾಯಕರ ಆಗಮನ


8:19 am (IST)

8:17 am (IST)

8:15 am (IST)

ಪ್ರಮಾಣ ವಚನದ ಸಂಭ್ರಮದ ಜೊತೆಗೆ ಸಂಖ್ಯಾಬಲದ ಲೆಕ್ಕಾಚಾರ

ಜೆಡಿಎಸ್-ಕಾಂಗ್ರೆಸ್ ಮೈತ್ರಿಯೊಂದಿಗೇ 3 ಕ್ಷೇತ್ರ ಗೆಲ್ಲುವ ಬಗ್ಗೆ ಚಿಂತನೆ

ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಮಾಸ್ಟರ್ ಪ್ಲಾನ್

ಒಕ್ಕಲಿಗರ ಪ್ರಾಬಲ್ಯವಿರುವ 2 ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿಸಲು ಹೆಚ್​ಡಿಕೆ ಒತ್ತಡ   

ರಾಜರಾಜೇಶ್ವರಿ ನಗರ, ರಾಮನಗರದಲ್ಲಿ ಜೆಡಿಎಸ್ ಬೆಂಬಲಿಸಲು ಹೆಚ್​ಡಿಕೆ ಒತ್ತಡ   

ಮೈತ್ರಿ ಹಿನ್ನೆಲೆಯಲ್ಲಿ ಒಪ್ಪಿಗೆ ಸೂಚಿಸಿರುವ ಕಾಂಗ್ರೆಸ್ ನಾಯಕರು

ಜಯನಗರದಲ್ಲಿ ಕಾಂಗ್ರೆಸ್​ಗೆ ಸಂಪೂರ್ಣ ಬೆಂಬಲ ಕೊಡುವುದಾಗಿ ಜೆಡಿಎಸ್ ಒಪ್ಪಿಗೆ

ರೆಸಾರ್ಟ್​ನಲ್ಲೇ ರಾಜಕೀಯ ಲೆಕ್ಕಾಚಾರಕ್ಕೆ ಮುಂದಾದ ನಾಯಕರು


8:14 am (IST)

23ನೇ ಸಿಎಂ ಆಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆ

ರಾಜಭವನದ ಗಾಜಿನಮನೆಯಲ್ಲಿ ವೇದಿಕೆ ಸಿದ್ಧ

ಬಿಎಸ್​ವೈ ಪ್ರಮಾಣವಚನಕ್ಕೆ ಎಲ್ಲ ಸಿದ್ಧತೆ ಮಾಡಿರುವ DPAR ಸಿಬ್ಬಂದಿ

250ಕ್ಕೂ ಗಣ್ಯರಿಗೆ ಶ್ವೇತವರ್ಣದ ಆಸನದ ವ್ಯವಸ್ಥೆ

ರಾಜಭವನಕ್ಕೆ ಮೂವರು ಕೇಂದ್ರ ಸಚಿವರು ಆಗಮನ

ಜೆ.ಪಿ ನಡ್ಡಾ, ಪ್ರಕಾಶ್ ಜಾವ್ಡೇಕರ್, ಧರ್ಮೇಂದ್ರ ಪ್ರಧಾನ್ ಆಗಮನ


8:13 am (IST)

ನಾಡಿನ ಜನತೆ ಬಿ.ಎಸ್.ಯಡಿಯೂರಪ್ಪರನ್ನು ಆರಿಸಿದ್ದಾರೆ

ಪ್ರಮಾಣವಚನ ಸ್ವೀಕರಿಸಿದ ಬಳಿಕ ಜನರ ಸೇವೆಗೆ ಮುಂದಾಗಲಿದ್ದಾರೆ

ಬಿಎಸ್​ವೈ ನಿವಾಸದ ಬಳಿ ಶಾಸಕ ರಾಮದಾಸ್ ಹೇಳಿಕೆ

ಹಿರಿಯ ಶಾಸಕರಿಗೆ ಅವಕಾಶದ ಬಗ್ಗೆ ಯಡಿಯೂರಪ್ಪ ಜೊತೆ ಚರ್ಚೆ

ಯಡಿಯೂರಪ್ಪ ಜೊತೆ ಚರ್ಚಿಸಿ ಹಿರಿಯರು ಕ್ರಮ ಕೈಗೊಳ್ಳಲಿದ್ದಾರೆ

ಸುಪ್ರೀಂಕೋರ್ಟ್ ವಿಚಾರದಲ್ಲಿ ಬಿಜೆಪಿಗೆ ಮೊದಲ ಗೆಲುವು ಸಿಕ್ಕಿದೆ

ರಾಜ್ಯಪಾಲರು ಬಹುಮತ ಸಾಬೀತಿಗೆ ಅವಕಾಶ ಕೊಟ್ಟಿದ್ದಾರೆ

ನಾವು ಬಹುಮತ ಸಾಬೀತ ಪಡಿಸುತ್ತೇವೆ

ಬಿ.ಎಸ್​.ಯಡಿಯೂರಪ್ಪ ರಾಜ್ಯದ ರೈತರ ಪರವಾಗಿದ್ದಾರೆ

ಅಧಿಕಾರ ಸಿಕ್ಕ ಕೂಡಲೇ ರೈತರ ಪರ ನಿರ್ಧಾರ ಕೈಗೊಳ್ಳುವರು

ಬಿಎಸ್​ವೈ ನಿವಾಸದ ಬಳಿ ಶಾಸಕ ರಾಮದಾಸ್ ಹೇಳಿಕೆ


8:12 am (IST)

BYS ಪ್ರಮಾಣ ವಚನ ಸ್ವೀಕರ ಹಿನ್ನಲೆ

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಹಬ್ಬದ ವಾತವರಣ

ಬಿಜೆಪಿ ಕಚೇರಿಗೆ ಹೂವಿನ ಅಲಂಕಾರ ಶೃಂಗಾರ

ಬಿಜೆಪಿ ಧ್ವಜ   ಕಟ್ಟತ್ತಿರುವ ಬಿಜೆಪಿ ಕಾರ್ಯಕರ್ತರು.

ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ನೇರ ದೃಶ್ಯವಳಿ  ವೀಕ್ಷಿಸಲು

ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂಭಾಗ ಬೃಹತ್ LED TV. ವ್ಯವಸ್ಥೆ.

ಬಿಜೆಪಿ ಕಚೇರಿಗೆ ಆಗಮಿಸುತ್ತಿರುವ ಪ್ರಮುಖ ನಾಯಕರು

ಬಿಜೆಪಿ ಕಚೇರಿ ಬಳಿ ಬಿಗಿ ಪೊಲೀಸ್ ಭದ್ರತೆ

ರಸ್ತೆಯ ಎರಡು ಬದಿಯಲ್ಲೂ ಬ್ಯಾರಿಕೇಡ್ ಹಾಕಿರುವ ಪೊಲೀಸರು

ಬಿಜೆಪಿ ಕಚೇರಿ ಬಳಿ  ಎರಡು ಕೆ ಎಸ್ ಆರ್ ಪಿ ತುಕಡಿ

ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಠೋಡ್ ನೇತೃತ್ವದಲ್ಲಿ ಭದ್ರತೆ ಉಸ್ತುವಾರಿ

ಭದ್ರತೆಗೆ ಹೆಚ್ಚಿನ ಪೊಲೀಸರ ನಿಯೋಜನೆ


8:11 am (IST)

ಜಿಲ್ಲಾ ಯುವ ಕಾಂಗ್ರೇಸದ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನ.

ಯವ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ ಯತ್ನ.

ಶಿವಮೊಗ್ಗದ ದೀನದಯಾಳ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿ.

ಯಡಿಯೂರಪ್ಪ, ರಾಜ್ಯಪಾಲರ ವಿರುದ್ಧ ಘೋಷಣೆ.

ಅಯ್ಯಯ್ಯೋ ಅನ್ಯಾಯ ಎಂದು ಆಕ್ರೋಶ.

ಪ್ರತಿಭಟನೆ ನಡೆಸಿದ ೧೫ ಹೆಚ್ಚು  ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು.

ಬಿಜೆಪಿ ಕಚೇರಿಯ ನಾಮಪಲಕಕ್ಕೆ ಟಮೋಟ ಎಸೆದ ಕಾಂಗ್ರೇಸ್ ಕಾರ್ಯಕರ್ತರು.


7:44 am (IST)

ಬಿಎಸ್ ವೈ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ.

ರಾಜಭವನ ಸುತ್ತ ಬಿಗಿ ಬಂದೋಬಸ್ತ್.

ರಾಜಭವನ ಬಳಿ ಒಂದು ಸಾವಿರ ಪೊಲೀಸರ ನಿಯೋಜನೆ.

ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್.

ಇದೇ ವೇಳೆ ಜೆಡಿಎಸ್ ಮತ್ತು ಕಾಂಗ್ರೆಸ್ ವತಿಯಿಂದ ರಾಜಭವನ ಬಳಿ ಪ್ರತಿಭಟನೆ.

ಪ್ರತಿಭಟನೆಗೆ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು, ಬೆಂಬಲಿಗರು ಅಗಮಿಸೋ ಸಾಧ್ಯತೆ.

ರಾಜಭವನ ಸುತ್ತ ಹೆಚ್ಚಿನ ಭದ್ರತೆ ಕಲ್ಪಿಸಿದ ಪೊಲೀಸರು


7:44 am (IST)

ಯಡಿಯೂರಪ್ಪ ನಿವಾಸಕ್ಕೆ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಆಗಮನ

ನಾನು ಯಾವುದೇ ಪಕ್ಷದೊಂದಿಗೂ ಸಂಪರ್ಕದಲ್ಲಿ ಇಲ್ಲ

ಭಾರತೀಯ ಜನತಾ ಪಕ್ಷ , ಯಡಿಯೂರಪ್ಪ ಜೊತೆಗೆ ಇರ್ತೀನಿ

ನನ್ನ ಬಗ್ಗೆ ಸುಳ್ಳು ಸುದ್ಧಿ ಬಿತ್ತರಿಸಬೇಡಿ ಎಂದು ಕೈ ಮುಗಿದು ಬೇಡಿಕೊಂಡ ಬೆಳ್ಳಿ ಪ್ರಕಾಶ್


7:43 am (IST)

ರಾಜ್ಯಪಾಲರಿಗೆ ಸಲ್ಲಿಸಿರುವ ಪಟ್ಟಿಯಲ್ಲಿ  ಎರಡೂ ಕಡೆಯಿಂದಲೂ ಗೊಂದಲ. 117  ಜನರ ಪಟ್ಟಿ ಸಲ್ಲಿಸಿರುವ ಕಾಂಗ್ರೆಸ್ ಜೆಡಿಎಸ್ ನಲ್ಲೂ ಹಲವರ ಸಹಿ ಇಲ್ಲ. ಬಿಜೆಪಿಯ ಬಿಎಸ್ವೈ ಸಲ್ಲಿಸಿರುವ ಪಟ್ಟಿಯಲ್ಲೂ ಕೆಲವರ ಸಹಿ  ಇಲ್ಲ. ಎರಡೂ ಪಕ್ಷದ ನಾಯರಲ್ಲೂ ಪಟ್ಟಿ ಢವ ಢವ. ಕೆಲವರ ಸಹಿಯನ್ನ ನಕಲಿ ಮಾಡಿರುವ ಮಾತೂ ಕೂಡ ಕೇಳಿ ಬರ್ತಿದೆ. ಜೆಡಿಎಸ್ ಕಾಂಗ್ರೆಸ ಸಲ್ಲಿಸಿರುವ ಪಟ್ಟಿಯ ಎಲ್ಲ ಸದಸ್ಯರೂ ಜೊತೆ ಇಲ್ಲ. ಬಿಜೆಪಿ ಪಟ್ಟಿಯ ಎಲ್ಲ ಸದಸ್ಯರೂ ಸದ್ಯಕ್ಕೆ ಜೊತೆ ಇಲ್ಲ.


7:42 am (IST)

ಅತ್ತ ಪ್ರಮಾಣವಚನದ ಸಂಭ್ರಮ ಜೊತೆ ಗೆ ಸಂಖ್ಯಾಬಲದ ಲೆಕ್ಕಾಚಾರ. ಇತ್ತ ಜೆಡಿಎಸ್ ಕಾಂಗ್ರೆಸ್ ಮೈತ್ರಿಯೊಂದಿಗೇ ಮೂರೂ ಕ್ಷೇತ್ರಗಳನ್ನ ಗೆಲ್ಲುವ ಬಗ್ಗೆ ಚಿಂತನೆ. ಬಿಜೆಪಿ ಹಣಿಯುವುದಕ್ಕೆ ಮಾಸ್ಟರ್ ಪ್ಲಾನ್ ಮಾಡ್ತಿರೋ ಕಾಂಗ್ರೆಸ್ ಜೆಡಿಎಸ್ ನಾಯಕರು. ಒಕ್ಕಲಿಗರ ಪ್ರಾಬಲ್ಯವರೋ ರಾಜರಾಜೇಶ್ವರಿ ನಗರ ಹಾಗೂ ರಾಮನಗರಕ್ಕೆ ಜೆಡಿಎಸ್ ಅಭ್ಯರ್ತೀ ನಿಲ್ಲಿಸಲು ಕುಮಾರಸ್ವಾಮಿ ನಿಲುವು. ಮೈತ್ರಿ ಹಿನ್ನಲೆಯಲ್ಲಿ ಒಪ್ಪಿಗೆ ಸೂಚಿಸಿರುವ ಕಾಂಗ್ರೆಸ್ ನಾಯಕರು. ಜಯನಗರದಲ್ಲಿ ಕಾಂಗ್ರೆಸ್ ಗೆ ಸಂಪೂರರ್ಣ ಬೆಂಬಲ ಕೊಡುವುದಾಗಿ ಜೆಡಿಎಸ್ ಒಪ್ಪಿಗೆ ನೀಡಿದೆ.


7:21 am (IST)
ಯಡಿಯೂರಪ್ಪ ಪ್ರಮಾಣ ವಚನಕ್ಕೆ ಸುಪ್ರೀಂಕೋರ್ಟ್ ಷರತ್ತುಬದ್ಧ ಒಪ್ಪಿಗೆ ಸುಪ್ರೀಕೋರ್ಟ್'ನಲ್ಲಿ ಅಂತಿಮ ಹಂತದಲ್ಲಿ ನಡೆದ ವಾದ ೨೦೧೨ರಲ್ಲಿ ದೆಹಲಿ ವಿಚಾರ ಪ್ರಸ್ತಾಪಿಸಿದ ಮನು ಸಿಂಘ್ವಿ ಲೆಫ್ಟಿನೆಂಟ್ ಜನರಲ್ ಕಾಂಗ್ರೆಸ್-ಆಪ್'ಗೆ ಅವಕಾಶ ನೀಡಿದ್ದರು ಜಮ್ಮು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಏಕೈಕ ದೊಡ್ಡ ಪಕ್ಷವಾಗಿತ್ತು ರಾಜ್ಯಪಾಲರು ಪಿಡಿಪಿ-ಬಿಜೆಪಿ ಮೈತ್ರಿಗೆ ಅವಕಾಶ ಕೊಟ್ಟರು ಸಾಂವಿಧಾನಿಕ ಸಂಸ್ಥೆಯ ಆದೇಶ ಪ್ರಶ್ನಿಸುವುದು ಸರಿಯೇ? ಅಭಿಷೇಕ್ ಮನು ಸಿಂಘ್ವಿಯನ್ನು ಪ್ರಶ್ನಿಸಿದ ನ್ಯಾಯಪೀಠ ಸುಪ್ರೀಂಕೋರ್ಟ್ ರಾಜ್ಯಪಾಲರ ಆದೇಶ ಪರಿಶೀಲಿಸಬಹುದು ನ್ಯಾಯಮೂರ್ತಿಗಳಿಗೆ ಉತ್ತರ ನೀಡಿದ ಅಭಿಷೇಕ್ ಮನು ಸಿಂಘ್ಬಿ ನಮ್ಮ‌ ಸಮಸ್ಯೆ ಪರಿಶೀಲನೆ ನಡೆಸುವುದಲ್ಲ ಎಂದ ನ್ಯಾ. ಬೋಬ್ಡೆ ರಾಜ್ಯಪಾಲರ ಆದೇಶಕ್ಕೆ ತಡೆ ನೀಡುವುದೇ ತೊಡಕು ಎಂದ ಬೋಬ್ಡೆ ಸಿಂಘ್ವಿ ವಾದ ಮಂಡನೆಯ ನಡುವೆಯೇ ನ್ಯಾಯಮೂರ್ತಿಗಳ ಸಮಾಲೋಚನೆ ಮತ್ತೆ ವಾದ ಶುರುಮಾಡಿದ ಅಭಿಷೇಕ್ ಮನು ಸಿಂಘ್ವಿ ಯಡಿಯೂರಪ್ಪ ಬಿಜೆಪಿ ಸಂಖ್ಯೆ ಇಟ್ಟುಕೊಂಡು ಅವಕಾಶ ಕೇಳುತ್ತಿದ್ದಾರೆ ಕುಮಾರಸ್ವಾಮಿ ಮೈತ್ರಿ ಸಂಖ್ಯೆಯನ್ನು ಪ್ರಸ್ತುತಪಡಿಸಿದ್ದಾರೆ ಯಡಿಯೂರಪ್ಪ ಅವರಿಗೆ ಬಿಜೆಪಿ ಹೊರತಾಗಿ ಬೇರೆ ಬೆಂಬಲ ಇಲ್ಲ ಕುಮಾರಸ್ವಾಮಿಗೆ ಮೈತ್ರಿಯ ಶಾಸಕರ ಸಂಖ್ಯಾಬಲ ಸಾಕು ನ್ಯಾಯಮೂರ್ತಿಗಳನ್ನು ಹೊಗಳಿದ ಅಭಿಷೇಕ್ ಮನು ಸಿಂಘ್ವಿ ನಮ್ಮ ದೂರನ್ನು ಆಲಿಸಲು ಮೂವರು ನ್ಯಾಯಮೂರ್ತಿಗಳು ಬಂದಿದ್ದೀರಿ ತಡರಾತ್ರಿಯಲ್ಲಿ ವಿಚಾರಣೆ ನಡೆಸುತ್ತಿರುವುದು ಗ್ರೇಟ್ ಕಾಂಗ್ರೆಸ್ ದೂರಿಗೆ ಬಿಜೆಪಿ ಪರ ವಕೀಲ ಮುಕುಲ್ ರೋಹಟಗಿ ಆಕ್ಷೇಪ ತಡರಾತ್ರಿಯಲ್ಲಿ ವಿಚಾರಣೆ ನಡೆಸುವಂಥ ಅಗತ್ಯ ಏನಿತ್ತು ದೂರುದಾರರ ಪರ ವಕೀಲರನ್ನು ಪ್ರಶ್ನಿಸಿದ ಮುಕುಲ್ ರೋಹಟಗಿ ಬಿಜೆಪಿಗೆ ಸಂಖ್ಯಾ ಬಲ ಇದೆಯೆ?-ಅಟಾರ್ನಿ ಜನರಲ್'ಗೆ ಸುಪ್ರೀಂಕೋರ್ಟ್ ಪ್ರಶ್ನೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟಕ್ಕೆ ಬಹುಮತ ಇದೆ ಮೈತ್ರಿ ಕೂಟ ಶಾಸಕರ ಪಟ್ಟಿ ಮತ್ತು ಸಹಿ ನೀಡಿದೆ ಆದರೂ ಯಡಿಯೂರಪ್ಪ ಬಹುಮತ ಪಡೆಯಲು ಹೇಗೆ ಸಾಧ್ಯ? ಅಭಿಷೇಕ್ ಮನು ಸಿಂಘ್ವಿ ಹೇಳಿಕೆ ಬಿಜೆಪಿ ಬಳಿ‌ ಇರುವುದೇ ೧೦೪ ಶಾಸಕರು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ೧೧೭ಶಾಸಕರನ್ನು ಹೊಂದಿದೆ ಯಡಿಯೂರಪ್ಪ ಬಹುಮತ ಸಾಬೀತು ಪಡಿಸುವುದು ಹೇಗೆ ಸಾಧ್ಯ? ನ್ಯಾಯಮೂರ್ತಿಗಳ ಪ್ರಶ್ನೆಗೆ ವೇಣುಗೋಪಾಲ್ ಉತ್ತರ ಮೈತ್ರಿ ಕೂಟದ ಶಾಸಕರು ಹೆಸರು ಮತ್ತು ಸಹಿ ನೀಡಿರಬಹುದು ಆದರೆ ಬಹುಮತ ಸಾಬೀತಾಗಬೇಕಿರುವುದು ವಿಧಾನಸಭೆಯಲ್ಲಿ ವಿಧಾನಸಭೆಯಲ್ಲಿ ಶಾಸಕರು ಯಾರನ್ನು ಬೆಂಬಲಿಸುತ್ತಾರೆ ಎನ್ನುವುದು ಪರೀಕ್ಷೆಯಾಗಲಿ ಬಹುಮತ ಸಾಬೀತು ಪಡಿಸುವುದಕ್ಕೂ ಪ್ರಮಾಣವಚನಕ್ಕೂ ಸಂಬಂಧ ಇಲ್ಲ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಎಲ್ಲಾ ಶಾಸಕರ ಅಸಲಿಯೇ? ಶಾಸಕರ ಸಹಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವೇಣುಗೋಪಾಲ್ ವಿಧಾನಸಭೆಯಲ್ಲಿ ಯಡಿಯೂರಪ್ಪ ಬಹುಮತ ಸಾಬೀತುಪಡಿಸುತ್ತಾರಾ? ಕೆ.ಕೆ. ವೇಣುಗೋಪಾಲ್ ಗೆ ನ್ಯಾಯಮೂರ್ತಿಗಳ ಪ್ರಶ್ನೆ ಗೊತ್ತಿಲ್ಲ, ಬಹುಮತ ಸಾಬೀತುಪಡಿಸದಿದ್ದರೆ ಮುಂದಿನ ನಡೆ ಕಡೆ ನೋಡಬಹುದು ಕೆ‌ಕೆ ವೇಣುಗೋಪಾಲ್ ವಾದಕ್ಕೆ ದನಿಗೂಡಿಸಿದ ಮುಕುಲ್ ರೋಹಟಗಿ ಬಹುಮತ ಸಾಬೀತು ಪಡಿಸಲು ೧೫ದಿನ ಏಕೆ ಬೇಕು? ವೇಣುಗೋಪಾಲ್ ಗೆ ನ್ಯಾಯಮೂರ್ತಿಗಳ ಪ್ರಶ್ನೆ ಅದು ನಮಗೆ ಗೊತ್ತಿಲ್ಲ, ರಾಜ್ಯಪಾಲರೇ ಉತ್ತರಿಸಬೇಕು ರಾಜ್ಯಪಾಲರನ್ನು ಸುಪ್ರೀಂ ಕೋರ್ಟಿಗೆ ಕರೆತರುವುದು ಸೂಕ್ತವಲ್ಲ ನ್ಯಾಯಮೂರ್ತಿಗಳಿಗೆ ಕೆಕೆ ವೇಣುಗೋಪಾಲ್ ಉತ್ತರ ವೇಣುಗೋಪಾಲ್ ಉತ್ತರಕ್ಕೆ ತಿರುಗೇಟು ನೀಡಿದ ನ್ಯಾ. ಸಿಕ್ರಿ ರಾಜ್ಯಪಾಲರ ಆದೇಶವನ್ನು ಮಾರ್ಪಾಟು ಮಾಡಬಹುದು ೭ ದಿನಗೊಳಳಗೆ ಬಹುಮತ ಸಾಬೀತು ಪಡಿಸಲು ನಾವು ಸಿದ್ದ ಸುಪ್ರೀಂ ಕೋರ್ಟಿಗೆ ಯಡಿಯೂರಪ್ಪ ಪರ ವಕೀಲರ ಹೇಳಿಕೆ ಮುಕುಲ್ ರೋಹಟಗಿ, ಯಡಿಯೂರಪ್ಪ ಪರ ವಕೀಲ* ಕೆಕೆ ವೇಣುಗೋಪಾಲ್ ಅವರಿಂದಲೂ ೭ ದಿನ ಸಾಕು ಎಂಬ ಉತ್ತರ ನಾಳೆ ಸಂಜೆಗೆ ಪ್ರಮಾಣವಚನ ಮುಂದೂಡಿ- ಮನುಸಿಂಘ್ವಿ ಯಾವ ದಾಖಲೆ ಬೇಕಾದರೂ ಪರಿಶೀಲಿಸಿ ತೀರ್ಮಾನ ಮಾಡಿ ಕಾಂಗ್ರೆಸ್-ಜೆಡಿಎಸ್ ದೂರನ್ನು ವಜಾ ಮಾಡಿ- ಮುಕುಲ್ ರೋಹಟಗಿ ಸಂವಿಧಾನಿಕ ಸಂಸ್ಥೆಯ ಕಾರ್ಯವೈಖರಿಯಲ್ಲಿ ಹಸ್ತಕ್ಷೇಪ ಬೇಡ ರಾಜ್ಯಪಾಲರ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ- ರೋಹಟಗಿ ಸುಪ್ರೀಂಕೋರ್ಟ್ ‌ರಾಜ್ಯಪಾಲರಿಗೆ ನೊಟೀಸ್ ನೀಡುವುದಕ್ಕೂ ಸಾಧ್ಯವಿಲ್ಲ ಕುಮಾರಸ್ವಾಮಿ ಯಾರು ಎಂದು ಕೇಳಿದ ನ್ಯಾ. ಬೋಬ್ಡೆ ಕುಮಾರಸ್ವಾಮಿ ಕಾಂಗ್ರೆಸ್ ಶಾಸಕರಾ ಎಂದು ಕೇಳಿದ ನ್ಯಾ. ಬೋಬ್ಡೆ ಕುಮಾರಸ್ವಾಮಿ ಮೈತ್ರಿ ಕೂಟದ ನಾಯಕ ಎಂದು ಸ್ಪಷ್ಟೀಕರಣ ನೀಡಿದ ಸಿಂಘ್ವಿ ಬಿಜೆಪಿ ಶಾಸಕರ ಸಹಿಯುಳ್ಳ ಪತ್ರ ಕೇಳಿದ ನ್ಯಾಯಮೂರ್ತಿಗಳು ಪತ್ರ ಇಲ್ಲದೆ ಪರದಾಡಿದ ಯಡಿಯೂರಪ್ಪ ಪರ ವಕೀಲ ಬೆಳಿಗ್ಗೆ ನ್ಯಾಯಪೀಠಕ್ಕೆ ಹಾಜರುಪಡಿಸುವುದಾಗಿ ಹೇಳಿಕೆ ಬೇರೆ ಯಾವುದಾದರೂ ಸಣ್ಣ ಪಕ್ಷ ಇದ್ದಿದ್ದರೆ ಪರಿಸ್ಥಿತಿ ಬೇರೆ ರೀತಿ‌ ಇರುತ್ತಿತ್ತು ಉಳಿದೆರಡು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ
7:01 am (IST)
ಬಿಎಸ್ ವೈ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ರಾತ್ರಿ ಪೂರ್ತಿ ಉಸ್ತುವಾರಿ ಮುರುಳಿಧರ್ ರಾವ್ , ಧರ್ಮೆಂದ್ರ ಪ್ರಧಾನ್, ಶ್ರೀರಾಮುಲು , ಶೋಭಕರಂದ್ಲಾಜೆ ಸೇರಿದಂತೆ ಹಲವಾರು ಹಿರಿಯ ನಡೆ ಬಗ್ಗೆ ಚರ್ಚಿಸಿದ ಬಿಎಸ್ ವೈ ರಾತ್ರಿ ಪೂರ್ತಿ ಸುಪ್ರೀಂಕೋರ್ಟ್ ಬೆಳವಣಿಗೆಯನ್ನು ವೀಕ್ಷೀಸಿದ ಯಡಿಯೂರಪ್ಪ ರಾತ್ರಿ ೩ ಗಂಟೆವರೆಗೂ ಟಿವಿಯಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನ ವೀಕ್ಷಿಸಿದ ಯಡಿಯೂರಪ್ಪ ಸುಪ್ರೀಂಕೋರ್ಟ್ ಯಡಿಯೂರಪ್ಪ ಪ್ರಮಾಣ ಸ್ವೀಕಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು ಬಿಎಸ್ ವೈ ಸಂತಸ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಯಡಿಯೂರಪ್ಪ ಜ್ಯೋತಿಷಿ ಮತ್ತು ಹಿತೈಷಿಗಳ ಸಲಹೆಯಂತೆ ಪ್ರತಿಙಾ ವಿಧಿ ಸ್ವೀಕರಿಸಲಿರುವ ಬಿಎಸ್ ವೈ
6:59 am (IST)
ಯಡಿಯೂರಪ್ಪ ಪ್ರಮಾಣವಚನಕ್ಕೆ ಸುಪ್ರೀಂ ಗ್ರೀನ್ ಸಿಗ್ನಲ್ ಹಿನ್ನೆಲೆ. ಬಿಜೆಪಿಯಲ್ಲಿ ಸಂತಸದ ಜೊತೆಗೇ ಟೆನ್ಷನ್. ಸಂಖ್ಯಾಬಲ ತೋರಿಸುವ ಟೆನ್ಷನ್. ಯಡಿಯೂರಪ್ಪಗೆ 2 ಗಂಟೆ ಒಳಗೆ ಸಂಖ್ಯಾಬಲ ತೋರಿಸಬೇಕು. ನಾಳೆ ಬೆಳಗ್ಗೆ ಒಳಗೆ ಸುಪ್ರೀಂ ಕೋರ್ಟ್ ಗೆ ಸಂಖ್ಯಾಬಲ ಮತ್ತು ಶಾಸಕರ ಸಹಿ‌ಪತ್ರ ನೀಡಬೇಕು. ಈ ಹಿನ್ನೆಲೆಯಲ್ಲಿ ಮತ್ತಷ್ಟು ಚುರುಕಾದ ಬಿಜೆಪಿ.
6:56 am (IST)
ಯಡಿಯೂರಪ್ಪ ಪ್ರಮಾಣವಚನಕ್ಕೆ ಷರತ್ತು ಬದ್ಧ ಒಪ್ಪಿಗೆ ನೀಡಿದ ಸುಪ್ರೀಂ ಕೋರ್ಟ್ 2 ಗಂಟೆಯೊಳಗೆ ಸಂಖ್ಯಾಬಲದ ಶಾಸಕರ ಸಹಿಯುಳ್ಳ ಪತ್ರ ಸಲ್ಲಿಸಲು ಸೂಚನೆ
2:50 am (IST)
ಬಿಜೆಪಿ ನಮಗೆ ಬೇರೆ ಶಾಸಕರ ಬೆಂಬಲ‌ ಇದೆ ಅಂತಾ ಹೇಳಿಲ್ಲ ಯಾವುದೇ ಶಾಸಕರ ಹೆಸರು ಮತ್ತು ಸಹಿಯನ್ನು ರಾಜ್ಯಪಾಲರಿಗೆ ನೀಡಿಲ್ಲ ಈಗ ಬಿಜೆಪಿಗೆ ಅವಕಾಶ ಕೊಟ್ಟರೆ ದೊಡ್ಡ ಮಟ್ಟದಲ್ಲಿ ಶಾಸಕರ ಖರೀದಿಗೆ ಅವಕಾಶ ಮಾಡಿಕೊಟ್ಟಂತಾಗಿದೆ ಆದ್ದರಿಂದ ಪ್ರಮಾಣವಚನಕ್ಕೆ ತಡೆಯಾಜ್ಞೆ ನೀಡಬೇಕು ರಾಜ್ಯದಲ್ಲಿ ಈಗ ಯಾರ ಸರ್ಕಾರ ಇದೆ ಎಂದು ಕೇಳಿದ ಜಡ್ಜ್ ಕೇರ್ ಟೇಕರ್ ಸರ್ಕಾರ ಇದೆ ಎಂದ ಮನು ಸಿಂಘ್ಬಿ ಮಣಿಪುರದ ಪ್ರಕರಣ ಉಲ್ಲೇಖಿಸಿದ ಮನು ಸಿಂಘ್ವಿ ರಾಜ್ಯಪಾಲರ ಆದೇಶಕ್ಕೆ ತಡೆ ನೀಡಿದರೆ ಆಡಳಿತ ಯಂತ್ರವೇ ಇಲ್ಲದಂತೆ ಆಗುವುದಿಲ್ಲವೇ? ಅಭಿಷೇಕ್ ಮನು ಸಿಂಘ್ವಿಗೆ ನ್ಯಾಯಮೂರ್ತಿಗಳ ಪ್ರಶ್ನೆ ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಕೇರ್ ಟೇಕರ್ ಸರ್ಕಾರ ಇದೆ ಎಂದ ಸಿಂಘ್ವಿ ಬೇರೆಯವರ ಪ್ರಮಾಣವಚನ ಆಗುವವರೆಗೆ ಉಸ್ತುವಾರಿ ಸರ್ಕಾರವೇ ಇರಲಿದೆ
2:42 am (IST)
ಶಾಸಕರ ಸಂಖ್ಯೆಗಳನ್ನು ಪಕ್ಷವಾರು ವಿವರಿಸುತ್ತಿರುವ ಅಭಿಷೇಕ್ ಮನು ಸಿಂಘ್ವಿ ನಂತರ ಫಲಿತಾಂಶದ ಬಳಿಕ ನಡೆದ ಘಟನಾವಳಿಗಳನ್ನು ವಿವರಿಸಿದ ಸಿಂಘ್ವಿ ಮೇ. ೧೫ರಂದು ೩ಗಂಟೆಗೆ ಕೆಪಿಸಿಸಿ ಅಧ್ಯಕ್ಷರು ಬೆಂಬಲ ಪತ್ರ ಬರೆದಿದ್ದಾತೆ ೩.೪೫ಕ್ಕೆ ಕುಮಾರಸ್ವಾಮಿ ಕಾಂಗ್ರೆಸ್ ಬೆಂಬಲ ಒಪ್ಪಿ ಪತ್ರ ಬರೆದಿದ್ದಾರೆ ೬ಗಂಟೆಗೆ ಕುಮಾರಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ ಮೇ ೧೬ ೧೦ಕ್ಕೆ ಮತ್ತೊಮ್ಮೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಮೊದಲಿಗೆ ಏಕೈಕ ದೊಡ್ಡ ಪಕ್ಷಕ್ಕೆ ಅವಕಾಶ ನೀಡಬೇಕು ಆದರೆ ಮೈತ್ರಿ ಪಕ್ಷಗಳಿಗೆ ಬಹುಮತ ಇದ್ದರೆ ಮೈತ್ರಿಗೆ ಅವಕಾಶ ನೀಡಬೇಕು ಮೈತ್ರಿಗೆ ಬಹುಮತ ಇದ್ದರೂ ರಾಜ್ಯಪಾಲರು ಅವಕಾಶ ನೀಡಿಲ್ಲ ನಾವು ರಾಜ್ಯಪಾಲರ ನಡೆಯನ್ನು ಆಕ್ಷೇಪಿಸುತ್ತಿದ್ದೇವೆ ರಾಜ್ಯಪಾಲರಿಗೆ ಬಹುಮತವುಳ್ಳ ಮೈತ್ರಿಗೆ ಅವಕಾಶ ಕೊಡದೆ ಬೇರೆ ಮಾರ್ಗಗಳಿಲ್ಲ ಗೋವಾದಲ್ಲಿ ಚುನಾವಣಾ ಪೂರ್ವ ಮೈತ್ರಿಗೂ ಅವಕಾಶ ಜಾರ್ಖಂಡ್'ನಲ್ಲೂ‌ಮೈತ್ರಿಗೆ ಅವಕಾಶ ಮಾಡಿಕೊಡಲಾಗಿತ್ತು ಮೊದಲನೆಯದಾಗಿ ೧೦೪ ಶಾಸಕರನ್ನು ಹೊಂದಿರುವ ಬಿಜೆಪಿಗೆ ಅವಕಾಶ ಕೊಟ್ಟಿದ್ದು ತಪ್ಪು ಬಹುಮತ ಸಾಬೀತು ಪಡಿಸಲು ಬಿಜೆಪಿ ಕೇಳಿದ್ದು ೭ ದಿನ ರಾಜ್ಯಪಾಲರು ಬಿಜೆಪಿಗೆ ಅವಕಾಶ ಕೊಟ್ಟಿರುವುದು ೧೫ ದಿನ ಹೆಚ್ಚು ಕಾಲವಕಾಶ ನೀಡಿರುವುದರಿಂದ ಶಾಸಕರ ವ್ಯಾಪಾರಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದ್ದರೂ ಬೆಂಬಲಕ್ಕೆ ಬೇರೆ ಶಾಸಕರಿಲ್ಲ ಪಕ್ಷೇತರ ಶಾಸಕರು ಕೂಡ ಮೈತ್ರಿ ಜೊತೆಗಿದ್ದಾರೆ ಮೈತ್ರಿಗೆ ಎಲ್ಲಾ ಶಾಸಕರು ಸಹಿ ಮಾಡಿದ್ದಾರೆ ಶಾಸಕರು ಸಹಿ ಮಾಡಿರುವ ಪತ್ರ ರಾಜ್ಯಪಾಲರಿಗೆ ನೀಡಲಾಗಿದೆ ಚುನಾವಣಾ ಆಯೋಗದ ಅಧಿಕೃತ ಪತ್ರದಲ್ಲೂ ಬಿಜೆಪಿ ೧೦೪ ಶಾಸಕರನ್ನು ಹೊಂದಿದೆ ಯಡಿಯೂರಪ್ಪ ಅವರಿಗೆ ಬೆಂಬಲ ಇಲ್ಲ ಅಂತಾ ನಿಮಗೆ ಹೇಗೆ ಗೊತ್ತು? ಅಭಿಷೇಕ್ ಮನು ಸಿಂಘ್ವಿಯನ್ನು ಪ್ರಶ್ನಿಸಿದ ನ್ಯಾಯಪೀಠ ಜಡ್ಜ್ ಪ್ರಶ್ನೆಗೆ ಮತ್ತೆ ಸಂಖ್ಯೆಗಳನ್ನು ವಿವರಿಸಿದ ಅಭಿಷೇಕ್ ಮನು ಸಿಂಘ್ವಿ
2:37 am (IST)
ಕಾಂಗ್ರೆಸ್-ಜೆಡಿಎಸ್ ಪರವಾಗಿ ಅಭಿಷೇಕ್ ಮನುಸಿಂಘ್ವಿ ವಾದ ಮಂಡನೆ ಬಿಜೆಪಿ ಪರವಾಗಿ ಮುಕುಲ್ ರೋಹ್ಟಗಿ ವಾದಮಂಡನೆ
2:04 am (IST)

1:46 am (IST)
ಸುಪ್ರೀಂಕೋರ್ಟ್ ನಂಬರ್ ೬ರಲ್ಲಿ ಕಾಂಗ್ರೆಸ್-ಜೆಡಿಎಸ್ ಅರ್ಜಿ ವಿಚಾರಣೆ ನ್ಯಾಯಮೂರ್ತಿಗಳಾದ ಬೋಬ್ಡೆ, ಎ.ಕೆ. ಸಿಕ್ರಿ ಮತ್ತು ಅಶೋಕ್ ಭೂಷಣ್ ನೇತೃತ್ವದ ಪೀಠದಲ್ಲಿ ವಿಚಾರಣೆ ವಿಚಾರಣೆ ಮುಗಿದ ಬಳಿಕ ತೀರ್ಪು ಪ್ರಕಟ ಸುಪ್ರೀಂಕೋರ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಅರ್ಜಿ ವಿಚಾರಣೆ ಪ್ರಮಾಣ ವಚನಕ್ಕೆ ತಡೆ ನೀಡಬೇಕೆಂದು ಕೇಳಿರುವ ಅರ್ಜಿ ತಕ್ಷಣವೇ ಅರ್ಜಿ ವಿಚಾರಣೆ ನಡೆಸಬೇಕೆಂಬ ಕಾಂಗ್ರೆಸ್ ಮನವಿ ಒಪ್ಪಿಕೊಂಡ ಸಿಜೆಐ ಮನವಿ ಒಪ್ಪಿಕೊಂಡು ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಮೂರು ಗಂಟೆಗೆ ತೀರ್ಪು ಪ್ರಕಟಿಸುವ ಸಾಧ್ಯತೆ
12:48 am (IST)

ಕಾಂಗ್ರೆಸ್-ಜೆಡಿಎಸ್ ದೂರಿನ ಪ್ರತಿ ಜೊತೆ ಸಿಜೆ ಮನೆಗೆ ತೆರಳಿದ ರಿಜಿಸ್ಟ್ರಾರ್

ಕಾಂಗ್ರೆಸ್-ಜೆಡಿಎಸ್ ನೀಡಿರುವ ದೂರಿನ ವಿಚಾರಣೆ ಸಾಧ್ಯತೆ

ಕೂಡಲೇ ವಿಚಾರಣೆ ನಡೆಸುವಂತೆ ಮನವಿ ಮಾಡಿರುವ ಉಭಯ ಪಕ್ಷಗಳು

ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತಡೆ ನೀಡುವಂತೆ ಮನವಿ

 


12:27 am (IST)

12:01 am (IST)

ಕರ್ನಾಟಕದಲ್ಲಿ ಸರ್ಕಾರ ರಚನೆಗೆ ಬಿಜೆಪಿಗೆ ಅವಕಾಶ: ಸುಪ್ರೀಂಕೋರ್ಟ್ ಸಿಜೆಗೆ ಕಾಂಗ್ರೆಸ್-ಜೆಡಿಎಸ್​ನಿಂದ ಜಂಟಿ ದೂರು ಸಲ್ಲಿಕೆ

ರಾಜ್ಯದಲ್ಲಿ ಬಿಜೆಪಿಗೆ ಸರ್ಕಾರ ರಚನೆಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನ ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಾತ್ರೋರಾತ್ರಿ ನ್ಯಾಯಾಂಗದ ಮೊರೆ ಹೋಗಿವೆ. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ನೇತೃತ್ವದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮನೆಗೆ ತೆರಳಿದ ಕಾಂಗ್ರೆಸ್ ನಾಯಕರು ದೂರು ದಾಖಲಿಸಿದ್ದಾರೆ. ಕೂಡಲೇ ಅರ್ಜಿ ವಿಚಾರನೆ ನಡೆಸಿ ನಾಳೆ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತಡೆ ನೀಡುವಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನೀಡಿರುವ ಜಂಟಿ ದೂರಿನಲ್ಲಿ ಮನವಿ ಮಾಡಲಾಗಿದೆ. ದೂರು ಸ್ವೀಕರಿಸಿರುವ ರಿಜಿಸ್ಟ್ರಾರ್ ದೂರಿನ ಪರಿಶೀಲನೆ ನಡೆಸುತ್ತಿದ್ದಾರೆ. ರಿಜಿಸ್ಟ್ರಾರ್ ಪರಿಶೀಲನೆ ಬಳಿಕ ಸಿಜೆಗೆ ದೂರಿನ ಪ್ರತಿ ರವಾನೆಯಾಗಲಿದೆ. ಬಳಿಕ ಅರ್ಜಿಯ ವಿಚಾರಣೆಗೆ ರಿಜಿಸ್ಟ್ರಾರ್ ನ್ಯಾಯಪೀಠ ರಚನೆ ಮಾಡಲಿದ್ದಾರೆ. 

 


11:49 pm (IST)

11:32 pm (IST)

ಒಂದು ಕಡೆ 116 ಶಾಸಕರ ಬೆಂಬಲ ಇರುವಾಗ 104 ಶಾಸಕರಿರುವ ಪಕ್ಷಕ್ಕೆ ಬಹುಮತ ಸಾಬೀತುಪಡಿಸಲು 15 ದಿನ ಅವಕಾಶ ಕೊಟ್ಟಿರುವುದನ್ನ ನಾವು ಎಂದೂ ಕೇಳಿಲ್ಲ. ಉತ್ತರಪ್ರದೇಶದ ಜಗದಾಂಬಿಕ ಪಾಲ್ ಪ್ರಕರಣದಲ್ಲಿ ವಿಶ್ವಾಸಮತ ಯಾಚನೆಗೆ ನೀಡಿದ್ದ ಸಮಯವನ್ನ ಸುಪ್ರೀಂಕೋರ್ಟ್ ಕಡಿತಗೊಳಿಸಿತ್ತು. ಜಾರ್ಖಂಡ್​ನ ಅನಿಲ್ ಝಾ ಪ್ರಕರಣ ಮತ್ತು ಗೋವಾದ ಕೇವಲ್ಕೇರ್ ಪ್ರಕರಣದಲ್ಲಿ 7 ದಿನಗಳ ಸಮಯವನ್ನ ಸುಪ್ರೀಂಕೋರ್ಟ್ 48 ಗಂಟೆಗೆ ಇಳಿಸಿತ್ತು. ಈ ಸಂದರ್ಭ ಸುಪ್ರೀಂಕೋರ್ಟ್ ಇದೇ ನಿರ್ಧಾರ ಕೈಗೊಳ್ಳದೆ ಇರುವುದಕ್ಕೆ ಯಾವುದೇ ಕಾರಣವಿಲ್ಲ.ಎಂದು 11:14 pm (IST)

ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುವ ವಿಚಾರ

ಮುಖ್ಯ ನ್ಯಾಯಮೂರ್ತಿ ಮನೆಗೆ ಕಾಂಗ್ರೆಸ್ ನಾಯಕರ ಆಗಮನ

ಕಾಂಗ್ರೆಸ್-ಜೆಡಿಎಸ್ ಜಂಟಿ ದೂರು ಸಲ್ಲಿಕೆಗೆ ಆಗಮನ

ಮನೆಯಲ್ಲಿ ಮುಖ್ಯ ನ್ಯಾಯಮೂರ್ತಿ ಇಲ್ಲದ ಹಿನ್ನೆಲೆ

ಸಿಜೆಐ ಬರುವಿಕೆಗಾಗಿ ಕಾಯುತ್ತಿರುವ ಕಾಂಗ್ರೆಸ್ ನಾಯಕರು

ನಾಳಿನ ಪ್ರಮಾಣವಚನ ಕಾರ್ಯಕ್ರಮಕ್ಕೆ ತಡೆ ಕೋರಲಿರುವ ನಿಯೋಗ


11:10 pm (IST)

ನಮ್ಮ ಕಾರ್ಯಕರ್ತರನ್ನ ನಾಳೆಯಿಂದ ಮುಟ್ಟಿದ್ರೆ ಜೋಕೆ!
ಟ್ವಿಟರ್​ನಲ್ಲಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ.
23 ಜನರನ್ನ ಕಳೆದುಕೊಂಡ ನೋವಿಗೆ ನಾಳೆ ಅಂತಿಮ ತೆರೆ!11:05 pm (IST)

 

ಯಡಿಯೂರಪ್ಪ ಜೊತೆ ನಾಲ್ವರು ಸಚಿವರು ಪ್ರಮಾಣವಚನ ಸ್ವೀಕಾರ..?#

ಯಡಿಯೂರಪ್ಪ ಜೊತೆ ನಾಲ್ವರು ಸಚಿವರು ಪ್ರಮಾಣವಚನ ಸ್ವೀಕಾರ..?#

ಯಡಿಯೂರಪ್ಪನವರ ಜೊತೆ  ಶ್ರೀರಾಮುಲು,ಆರ್ ಅಶೋಕ್,ಕೆ ಎಸ್ ಈಶ್ವರಪ್ಪ, ಗೋವಿಂದ ಕಾರಜೋಳ ನಾಲ್ಕು ಜನ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ


10:36 pm (IST)

ತ್ರಿಮೂರ್ತಿಗಳ ಗುಜರಾತ್ ವ್ಯಾಪಾರ ಕರ್ನಾಟಕದಲ್ಲಿ ನಡೆಯಲು ಬಿಡಲ್ಲ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ

ಮತ್ತೆ ರಾಜ್ಯದಲ್ಲಿ ಆಪರೇಶನ್ ಕಮಲ ಮಾಡಲು ಹೊರಟಿದ್ದಾರೆ

ಬಹುಮತ ಸಾಬೀತುಪಡಿಸಲು 3-4 ದಿನ ಅವಕಾಶ ನೀಡಬಹುದಿತ್ತು

ಯಡಿಯೂರಪ್ಪಗೆ 15 ದಿನ ಅವಕಾಶ ನೀಡಿರುವುದೇಕೆ..? 

ನಮ್ಮ ಶಾಸಕರನ್ನ ನಾವು ರಕ್ಷಿಸಿಕೊಳ್ಳಬೇಕಿದೆ, ಅದಕ್ಕೆ ರೆಸಾರ್ಟ್​ಗೆ ಹೋಗುತ್ತಿದ್ದೇವೆ

ರೆಸಾರ್ಟ್ ರಾಜಕಾರಣಕ್ಕೆ ಕಾರಣ ಗ್ರೇಟ್ ನರೇಂದ್ರಮೋದಿ

ದೇಶ ಉದ್ಧಾರದ ಹೆಸರಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.

ಪದ್ಮನಾಭನಗರ ನಿವಾಸದಲ್ಲಿ ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಎಚ್ಡಿಕೆ ಹೇಳಿಕೆ

ಮೋದಿಯವರು ದೇಶದ ಸಂವಿಧಾನವನ್ನು ಬುಡಮೇಲು ಮಾಡಲು ಹೊರಟ್ಟಿದ್ದಾರೆ

ಬಿಜೆಪಿಗರು ಕಿಡ್ನಾಪ್ ಮಾಡಲು ಎಕ್ಸ್'ಪರ್ಟ್ ಗಳಿದ್ದಾರೆ, ನಮ್ಮವರನ್ನು ರಕ್ಷಣೆ ಮಾಡೊದು ನಮ್ಮ ಕರ್ತವ್ಯ

ಇವತ್ತಿನ ಪರಿಸ್ಥಿತಿಲಿ ರೆಸಾರ್ಟ್ ರಾಜಕಾರಣಕ್ಕೆ ಮೋದಿಯೇ ಕಾರಣ

ರಾಜ್ಯಪಾಲರ ನಿರ್ಧಾರಕ್ಕೆ ನಾವು ಹದಿನೈದು ನಮ್ಮ ಶಾಸಕರನ್ನು ಕಾಯಲೇಬೇಕು

ಬಿಜೆಪಿ ನಾಯಕರ ವರ್ತನೆ ಅನುಮಾನ ಮೂಡಿಸುತ್ತಿದೆ

ರಾಜ್ಯಪಾಲರು ಸಹ ಬಿಜೆಪಿಗರಿಗೆ ಹದಿನೈದು ದಿನಗಳ ಕಾಲ ನೀಡಿ ಅವರಿಗೆ ಉತ್ತೇಜಿಸುತ್ತಿದ್ದಾರೆ

ಅವರಿಗೆ ಬಹುಮತವಿಲ್ಲ ಅವರಿಗೆ ಇರುವುದು ಕೇವಲ 104 ಸ್ಥಾನ ಮಾತ್ರ

ಇನ್ನುಳಿದ ಶಾಸಕರನ್ನ ಎಲ್ಲಿಂದ ತರುತ್ತಾರೆ

ರಾಜ್ಯಪಾಲರು 15 ದಿನಗಳ ಕಾಲ ನೀಡಿರುವುದು ಅಸಂವಿಧಾನಿಕ 

ಅಧಿಕಾರ ಸಿಕ್ಕ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಬಿಜೆಪಿ ಹೇಳಿದೆ

ಅವರಿಗೆ ಬಹುಮತವಿಲ್ಲದೇ ಹೇಗ ಸಾಲ ಮನ್ನಾ ಮಾಡುತ್ತಾರೆ

ಪೂರ್ಣ ಬಹುಮತ ಸಾಬೀತು ಮಾಡುವವರಿಗೆ ಅವರಿಗೆ ಯಾವುದೇ ಘೋಷಣೆ ಮಾಡಲು ರಾಜ್ಯಪಾಲರು ಬಿಡಬಾರದು

ಗುಜರಾತಿ ವ್ಯಾಪಾರ ಕರ್ನಾಟಕದಲ್ಲಿ ಮಾಡಲು ನಾವು ಬಿಡಲ್ಲ

ಶ್ರಿರಾಮುಲು ರೆಡ್ಡಿ ಬ್ರದರ್ಸ್ ಏನೇನ್ ಆಮಿಷ ಹೊಡ್ಡಿದ್ದಾರೆ ಎಲ್ಲರಿಗೂ ಗೊತ್ತು

ರಾಜ್ಯ ಲೂಟಿ ಮಾಡಿದವರಿಗೆ ಮತ್ತೆ ಅವಕಾಶ ನೀಡಬಾರದು ಎಂದು ಈ ಬಾರಿ ಕಾಂಗ್ರೆಸ್ ಜೊತೆ ಹೋಗುವ ನಿರ್ಧಾರ ಕೈಗೊಂಡಿದ್ದೇನೆ

ಬಿಡದಿಯಲ್ಲಿ ಕಾಂಗ್ರೆಸ್ ನಾಯಕರು ಸೇರಿದ್ದಾರೆ. ನನಗೂ ಬರುವಂತೆ ಕರೆ ಮಾಡಿದ್ದಾರೆ

ನಾನೀಗ ಈಗಲ್ ಟನ್ ರೆಸಾರ್ಟ್ ಗೆ ಹೋಗ್ತಿದ್ದೇನೆ

ಮೋದಿಯವರ ದ್ವಿಮುಖ ನಿಲುವು ಸರಿಯಲ್ಲ

ಮಣಿಪುರ, ಗೋವಾ, ಕರ್ನಾಟಕದಲ್ಲಿ ಯಾವ ರೀತಿ ನಡೆದುಕೊಳ್ತಿದ್ದಾರೆ

ಹದಿನೈದು ದಿನಗಳಲ್ಲಿ ನೇಪಾಳಕ್ಕೆ ಹೋಗಿ‌ ಮಂತ್ರ ಹಾಕ್ತಾರೆ

ನಿನ್ನೆಯಿಂದಲೇ ಕುದುರೆ ವ್ಯಾಪಾರ ಆರಂಭವಾಗಿದೆ

ಐದು ವರ್ಷ ರಾಜ್ಯ ಲೂಟಿ ಮಾಡಿ ಮತ್ತೆ ಆಪರೇಶನ್ ಕಮಲ ಮಾಡಲು ಹೊರಟಿದ್ದಾರೆ

ನಾವು ಈ ಬಗ್ಗೆ ಸುಪ್ರಿಂ ಕೋರ್ಟ್​ನಲ್ಲಿ ದೂರು ನೀಡುತ್ತೇವೆ

ದೇವೆಗೌಡರ ನಿವಾಸದಲ್ಲಿ ಕುಮಾರಸ್ವಾಮಿ ಹೇಳಿಕೆ

 


9:45 pm (IST)

ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು  ಅವಕಾಶ ನೀಡಿದ್ದಾರೆ.

ಜನ ಹೆಚ್ಚು ಸ್ಥಾನ ನೀಡಿದ್ದಾರೆ, ಯಡಿಯೂರಪ್ಪ ನಾಳೆ ಪ್ರಮಾಣವಚನ ಸ್ವೀಕರಿಸುತ್ತಾರೆ

ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಹೇಳಿಕೆ

ಕಾಂಗ್ರೆಸ್ ಹಾಗೂ ಜೆಡಿಎಸ್ ನಡೆದುಕೊಳ್ತಿರೋದನ್ನ ದೇಶ, ವಿಶ್ವದ ಜನ ನೋಡ್ತಿದ್ದಾರೆ.

ಹೊಂದಾಣಿಕೆ ರಾಜಕಾರಣಕ್ಕೆ ಯಾವ ಕಾರಣಗಳೂ ಇಲ್ಲ.

ಪರಸ್ಪರ ಸಾಕಷ್ಟು ಕೆಸರೆರಚಾಟ ಮಾಡಿದ್ದಾರೆ.

ಈಗ ಚುನಾವಣೆ ಫಲಿತಾಂಶ ಬಂದ ನಂತರ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿವೆ.

ಕಾಂಗ್ರೆಸ್ ವಿರುದ್ಧವಾಗಿ ಜನ ಮತ ಹಾಕಿದ್ದಾರೆ.

ಸಿದ್ದರಾಮಯ್ಯ ಸರ್ಕಾರ, ಅದರ ಕೆಲಸದ ವಿರುದ್ಧ ಜನ ಮತ ಹಾಕಿದ್ದಾರೆ.

ಇಷ್ಟಾದ್ರೂ ಇವರು ಹೇಗೆ ಹೊಂದಾಣಿಕೆ ಮಾಡಿಕೊಳ್ತಾರೆ?

ಇದು ಕೇವಲ ಬಿಜೆಪಿ ವಿರುದ್ಧ ಪ್ರಜಾಪ್ರಭುತ್ವ ವಿರೋಧಿ ಹೊಂದಾಣಿಕೆ.

 


9:41 pm (IST)

ಸರ್ಕಾರ ರಚನೆಗೆ ಯಡಿಯೂರಪ್ಪನವರಿಗೆ ಗವರ್ನರ್ ಆಹ್ವಾನ ನೀಡಿರುವ ಪತ್ರ


9:37 pm (IST)

ನಾಳೆ ಬೆಳಗ್ಗೆ 9.30ಕ್ಕೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುತ್ತಾರೆ

ರಾಜಭವನದ ಗಾಜಿನಮನೆಯಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ

​ಬಹುಮತ ಸಾಬೀತಿಗೆ ರಾಜ್ಯಪಾಲರು 15 ದಿನ ಸಮಯ ನೀಡಿದ್ದಾರೆ

ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ ಹೇಳಿಕೆ

ಯಡಿಯೂರಪ್ಪ ನಿವಾಸದಲ್ಲೇ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ


9:25 pm (IST)

ದೇವೇಗೌಡರ ನಿವಾಸದಲ್ಲಿ ದಿನದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ..

ದೇವೇಗೌಡ, ಎಚ್ ಡಿ ಕುಮಾರಸ್ವಾಮಿ, ಎಚ್ ಡಿ ರೇವಣ್ಣ, ಚಾಮರಾಜಪೇಟೆ ಅಲ್ತಾಪ್ ಖಾನ್ ಸೇರಿದಂತೆ ಹಿರಿಯ ಮುಖಂಡರಿಂದ ಚರ್ಚೆ...

ಅರ್ಧಗಂಟೆಯಿಂದ ದೇವೇಗೌಡರ ಜೊತೆ ಚರ್ಚೆ  ನಡೆಸುತ್ತಿರುವ ಎಚ್ ಡಿ ಕೆ..

ನಾಳಿನ ಬೆಳವಣಿಗೆಗಳ ಬಗ್ಗೆ ನಾಯಕರ ಸುದೀರ್ಘ ಚರ್ಚೆ


9:23 pm (IST)

9:11 pm (IST)

ನಾಳೆ ಬೆಳಗ್ಗೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವ ಕುರಿತಾಗಿ ಸುರೇಶ್ ಕುಮಾರ್ ಮಾಡಿದ್ದ ಟ್ವೀಟ್ ಡಿಲೀಟ್ ಆಗಿದೆ. ಇದರಿಂದ ನಾಳೆಯ ಸಮಾರಂಭ ನಡೆಯುವುದರ ಬಗ್ಗೆ ಸಣ್ಣ ಗೊಂದಲ ಎದ್ದಿದೆ.


9:08 pm (IST)

ಬಿಎಸ್​ವೈಯಿಂದ ನಾಳೆ ಸಾಲಮನ್ನಾ?

ನಾಳೆ ಪ್ರಮಾಣವಚನ ಸ್ವೀಕರಿಸಿದ ಒಂದೇ ಗಂಟೆಯಲ್ಲಿ ಸಾಲ ಮನ್ನಾ ಮಾಡಲು ಬಿಎಸ್​ವೈ ನಿರ್ಧಾರ

ಚುನಾವಣಾ ಪ್ರಣಾಳಿಕೆಯಲ್ಲಿ ಒಂದು ಲಕ್ಷ ರೂ ರೈತರ ಸಾಲ ಮನ್ನಾ ಮಾಡುವುದಾಗಿ ಬಿಜೆಪಿ ಭರವಸೆ ನೀಡಿತ್ತು

ಒಂದು ವೇಳೆ ಬಹುಮತ ಸಾಬೀತಾಗದಿದ್ದರೆ ಸಾಲ ಮನ್ನಾ ಮಾಡಿದ ಕ್ರೆಡಿಟ್ ಪಡೆಯುವುದು ಬಿಎಸ್​ವೈ ಪ್ರಯತ್ನವೇ?


8:49 pm (IST)

ಗವರ್ನರ್ ನಿರ್ಧಾರವನ್ನ ಸುಪ್ರೀಂಕೋರ್ಟ್​ನಲ್ಲಿ  ಪ್ರಶ್ನಿಸುತ್ತೇವೆ:: ಪಿ. ಚಿದಂಬರಂ

​ಕಾಂಗ್ರೆಸ್-ಜೆಡಿಎಸ್ ಸರ್ಕಾರಕ್ಕೆ ಗವರ್ನರ್ ಅವಕಾಶ ನೀಡಬೇಕಿತ್ತು,

ಅನುಕೂಲಕ್ಕಾಗಿ ಸಂವಿಧಾನ ಬದಲಿಸಲಾಗದು, 

ದೊಡ್ಡ ಪಕ್ಷವೆಂಬ ಕಾರಣಕ್ಕೆ ಬಿಜೆಪಿಗೆ ಸರ್ಕಾರ ರಚನೆ ಅವಕಾಶ ಸರಿಯಲ್ಲ

 


8:27 pm (IST)

ತ್ತೂರು ಮಂಜು ಮೂಲಕ ಶಾಸಕ ನಾಗೇಶ್ ಸೆಳೆಯಲು ಬಿಜೆಪಿ ಯತ್ನ

ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಆಗಮಿಸಿರುವ ಕೊತ್ತೂರು ಮಂಜು

​ವಿಶೇಷ ಕಾರಿನಲ್ಲಿ ಮಂಜುವನ್ನು ಕರೆ ತಂದ ಬಿಜೆಪಿ ನಾಯಕರು

ನಾಗೇಶ್, ಮುಳಬಾಗಿಲು ಪಕ್ಷೇತರ ಶಾಸಕ

ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ನಾಗೇಶ್

ಕೊತ್ತೂರು ಮಂಜುವನ್ನು ಕರೆತಂದ ನಿರ್ಮಲ್ ಕುಮಾರ್ ಸುರಾನ

ಗುರುವಿನ ಮೂಲಕ ಶಿಷ್ಯನನ್ನ ಸೆಳೆಯಲು ಮುಂದಾದ ಬಿಜೆಪಿ


8:22 pm (IST)

ನಾಳೆ ಬೆಳಗ್ಗೆ 9.30ಕ್ಕೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ

ಬಹುಮತ ಸಾಬೀತುಪಡಿಸಲು 10 ದಿನ ಕಾಲಾವಕಾಶ ನೀಡಿರುವ ರಾಜ್ಯಪಾಲರು

ಕಂಠೀರವ ಕ್ರೀಡಾಂಗಣದಿಂದ ಸಮಾರಂಭ ರಾಜಭವನಕ್ಕೆ ಶಿಫ್ಟ್

ಕಂಠೀರವ ಕ್ರೀಡಾಂಗಣದಲ್ಲಿ ಕಾಂಗ್ರೆಸ್, ಜೆಡಿಎಸ್ ಪ್ರತಿಭಟನೆ ನಡೆಸುವ ಸಾಧ್ಯತೆ ಹಿನ್ನೆಲೆ ಶಿಫ್ಟ್

ರಾಜಭವನದಲ್ಲೂ ಬಿಗಿ ಭದ್ರತೆ ಕೈಗೊಳ್ಳಲು ಮುಂದಾದ ಪೊಲೀಸರು

 


8:18 pm (IST)

ನಾಳೆ ಬೆಳಗ್ಗೆ 9.30ಕ್ಕೆ ಯಡಿಯೂರಪ್ಪ ಪ್ರಮಾಣ ವಚನ.

ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿರುವ ಯಡಿಯೂರಪ್ಪ.

ರಾಜಭವನದಿಂದ ಯಡಿಯೂರಪ್ಪನವರಿಗೆ ಆಹ್ವಾನ.

 


8:12 pm (IST)

ನಾಳೆ ಬೆಳಗ್ಗೆ 9.30ಕ್ಕೆ ಯಡಿಯೂರಪ್ಪ ಪ್ರಮಾಣವಚನ..?  ಸುಪ್ರೀಂಕೋರ್ಟ್​​ಗೆ ಕಾಂಗ್ರೆಸ್-ಜೆಡಿಎಸ್

ರಾಜ್ಯಪಾಲರ ವಿರುದ್ಧ ಸುಪ್ರೀಂಕೋರಟ್​ ಮೆಟ್ಟಿಲೇರಲು ಕಾಂಗ್ರೆಸ್ ನಿರ್ಧಾರ

ಇಂದು ರಾತ್ರಿ ಸುಪ್ರೀಂಕೋರಟ್​ ನ್ಯಾಯಾಧಿಶರ ಮನೆಗೇ ತೆರಳಿ ದೂರು ನೀಡಲಿರುವ  ನಿಯೋಗ

​ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಬಹುಮತವಿದ್ದರೂ ಬಿಜೆಪಿಗೆ ಅವಕಾಶ ನೀಡಿರುವ ಬಗ್ಗೆ ದೂರು


7:53 pm (IST)

ಆನಂದ್ ಸಿಂಗ್ ಕಾಂಗ್ರೆಸ್​ಗೆ ಕೈ‌ ಕೊಡುವುದು ಖಚಿತ
7:38 pm (IST)

ಸುಪ್ರೀಂಕೋರ್ಟ್ ವಕೀಲರ ಸಲಹೆ ಪಡೆದ ಗವರ್ನರ್

ರಾಜ್ಯ ಸರ್ಕಾರ ರಚನೆ ಕಸರತ್ತು: ಸುಪ್ರೀಂಕೋರ್ಟ್ ವಕೀಲರ ಸಲಹೆ ಕೇಳಿದ ಗವರ್ನರ್

ಸೋಲಿ ಸೊರಾಬ್ಜಿ, ಮುಕುಲ್ ರೋಹ್ಟಗಿ ಅಭಿಪ್ರಾಯ ಪಡೆದ ಗವರ್ನರ್

ಡಿಪಿಎಆರ್ ಶಿಷ್ಟಾಚಾರ ವಿಭಾಗಕ್ಕೆ ಮಾಹಿತಿ ರವಾನಿಸಿದ ರಾಜಭವನದ ಅಧಿಕಾರಿಗಳು


7:11 pm (IST)

ಆಪರೇಶನ್ ಕಮಲ ತಡೆಯುವ ಹೊಣೆ ಸಂತೋಷ್ ಲಾಡ್​ಗೆ

7:09 pm (IST)

ಕಾಂಗ್ರೆಸ್​ನ ಲಿಂಗಾಯತ ಶಾಸಕರನ್ನ ಸೆಳೆಯಲು ಬಿಜೆಪಿ ಯತ್ನ

ಸ್ವಾಮೀಜಿಗಳ ಮೂಲಕ ಒತ್ತಡ ಹೇರುತ್ತಿರುವ ಬಿಜೆಪಿ ಮುಖಂಡರು

6 ಶಾಸಕರನ್ನ ಸೆಳೆಯಲು ಬಿಜೆಪಿ ಯತ್ನ


7:07 pm (IST)

ಬಿಜೆಪಿಯ ಮೂವರು ಒಕ್ಕಲಿಗ ಶಾಸಕರನ್ನ ಸೆಳೆಯಲು ಜೆಡಿಎಸ್ ಯತ್ನ

ಜೆಡಿಎಸ್​ಗೆ ಬಂದರೆ ಮಂತ್ರಿ ಸ್ಥಾನ ನಿಡುವುದಾಗಿ ಜೆಡಿಎಸ್​ನಿಮದ ಭರವಸೆ

ಮೂವರು ಬಿಜೆಪಿ ಶಾಸಕರನ್ನ ಸಂಪರ್ಕಿಸಿರುವ ಜೆಡಿಎಸ್ ಮುಖಂಡರು

ಜೆಡಿಎಸ್ ಆಫರ್​ಗೆ ಯಾವುದೇ ಪ್ರತಿಕ್ರಿಯೆ ನೀಡದ ಶಾಸಕರು.

 


6:56 pm (IST)

ಸೋಮನಾಥ್ ಚಟರ್ಜಿ ಬುದ್ಧಿವಾದ:

ಕರ್ನಾಟಕ ರಾಜಕಾರಣದ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯಪಾಲರು ಸರಿಯಾಗಿ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ವಿಶ್ವಾಸಮತ ಯಾಚನೆಗೆ ಹೆಚ್ಚು ಅವಧಿ ಕೊಟ್ಟಷ್ಟೂ ಕುದುರೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ರಾಜ್ಯಪಾಲರು ಬೇಗನೇ ಒಂದು ಪಕ್ಷ ಅಥವಾ ಮೈತ್ರಿಕೂಟವನ್ನು ಕರೆದು ಸರಕಾರ ರಚಿಸಲು ಹೇಳಬೇಕು ಎಂದು ಕಮ್ಯೂನಿಸ್ಟ್ ಮುಖಂಡ ಮತ್ತು ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಬುದ್ಧಿವಾದ ಹೇಳಿದ್ದಾರೆ.


6:47 pm (IST)

ಜಾತಿ ಆಧಾರದ ಮೇಲೆ ಶಾಸಕರನ್ನ ಸೆಳೆಯಲು ಯತ್ನ

ಬಿಜೆಪಿಯ ಒಕ್ಕಲಿಗ ಶಾಸಕರಿಗೆ ಜೆಡಿಎಸ್, ಕುರುಬ ಶಾಸಕರಿಗೆ ಕಾಂಗ್ರೆಸ್ ಗಾಳ

ಕಾಂಗ್ರೆಸ್​ನ ಲಿಂಗಾಯತ ಶಾಸಕರನ್ನ ಸೆಳೆಯಲು ಬಿಜೆಪಿ ಯತ್ನ

ಸರ್ಕಾರ ರಚಿಸಲು ಮೂರೂ ಪಕ್ಷಗಳಿಂದ ಮುಮದುವರಿದ ಕಸರತ್ತು 


6:27 pm (IST)

ನಾಳೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಬಿಎಸ್​ವೈ ಪ್ರಮಾಣವಚನದ ಸ್ಥಳ ರಾಜಭವನಕ್ಕೆ ಶಿಫ್ಟ್

ರಾಜಭವನದ ಫ್ಯಾಕ್ಸ್ ಸಂದೇಶಕ್ಕೆ ಕಾಯುತ್ತಿರುವ ನಾಯಕರು

ನಾಳೆ ಮಧ್ಯಾಹ್ನ 12 ಗಂಟೆವರೆಗೆ ರಾಹುಕಾಲವಿರುವ ಹಿನ್ನೆಲೆಯಲ್ಲಿ, 12.20ಕ್ಕೆ ಪ್ರಮಾಣವಚನ ನಡೆಯುವ ಸಾಧ್ಯತೆ ಇದೆ.


6:10 pm (IST)

ಆಂಗ್ಲೋ-ಇಂಡಿಯನ್ ನಾಮನಿರ್ದೇಶನ ಈಗ ಬೇಡವೆಂದು ಮನವಿ:

ವಿಶ್ವಾಸಮತ ಯಾಚನೆ ಮುಗಿಯುವವರೆಗೂ ಆಂಗ್ಲೋ-ಇಂಡಿಯನ್ ಶಾಸಕನ ನಾಮನಿರ್ದೇಶನ ಮಾಡಬೇಡಿ ಎಂದು ಆ ಸಮುದಾಯದ ಸಂಘಟನೆಯ ಅಧ್ಯಕ್ಷರು ರಾಜ್ಯಪಾಲರಿಗೆ ಮನವಿ ಮಾಡಿದ್ಧಾರೆ. 224 ಶಾಸಕರ ಜೊತೆಗೆ ಒಂದು ನಾಮನಿರ್ದೇಶಿತ ಶಾಸಕ ಸ್ಥಾನವೂ ಇರುತ್ತದೆ. ಅದನ್ನು ಆಯ್ಕೆ ಮಾಡುವ ಅಧಿಕಾರ ರಾಜ್ಯಪಾಲರಿಗಿದೆ. ಈ ಸಂದರ್ಭದಲ್ಲಿ ನಾಮನಿರ್ದೇಶನವಾದರೆ ಅಲ್ಪಸಂಖ್ಯಾತ ಸಮುದಾಯದ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆ. ವಿಶ್ವಾಸಮತ ಯಾಚನೆ ಎಲ್ಲಾ ಮುಗಿದ ಬಳಿಕ ನಾಮನಿರ್ದೇಶನ ಮಾಡಿ ಎಂದು ಸಮುದಾಯ ಸಂಘಟನೆಯ ಅಧ್ಯಕ್ಷ ಬ್ಯಾರಿ ಓ-ಬ್ರಿಯಾನ್ ಮನವಿ ಮಾಡಿದ್ದಾರೆ.


5:59 pm (IST)

ವಿಜಯೇಂದ್ರರನ್ನು ಭೇಟಿ ಮಾಡಿದ ಬಿಜೆಪಿ ಶಾಸಕರು

ಬಿ.ವೈ ವಿಜಯೇಂದ್ರ ಸ್ಪರ್ಧಿಸಿದ್ದರೆ  ಮೈಸೂರು, ಚಾಮರಾಜನಗರ, ಮಂಡ್ಯ ಭಾಗದಲ್ಲಿ ಬಿಜೆಪಿ ಇನ್ನಷ್ಟು ಸ್ಥಾನ ಗೆಲ್ಲಬಹುದಿತ್ತು.

ವಿಜಯೇಂದ್ರರಿಗೆ ಟಿಕೇಟ್ ನೀಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕೆಲ ಮುಖಂಡರು

ಬಿ.ಎಸ್.ವೈ ಬಳಿ ಅಭಿಪ್ರಾಯ  ವ್ಯಕ್ತಪಡಿಸಿದ ಕೆಲ ಆಪ್ತ ಮುಖಂಡರು

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ.

ವಿಜಯೇಂದ್ರ ಸ್ಪರ್ಧಿಸಿದ್ದರೆ ವರುಣಾ ಕ್ಷೇತ್ರದಲ್ಲಿಯೂ ಬಿಜೆಪಿ ಗೆಲ್ಲುತ್ತಿತ್ತು.

ಸಿದ್ದರಾಮಯ್ಯರಿಗೆ ಮುಖಭಂಗ ಆಗ್ತಿತ್ತು.

ಜೊತೆಗೆ ಕೊಳ್ಳೆಗಾಲದಲ್ಲೂ ಬಿಜೆಪಿ ಗೆಲ್ಲುತ್ತಿತ್ತು.

ವರುಣಾ ಹಾಗೂ ಕೊಳ್ಳೇಗಾಲದಲ್ಲಿ ಬಿಜೆಪಿ ಗೆಲುವು ಪಕ್ಕಾ ಇತ್ತು‌.

ಬಿ‌‌.ಎಸ್‌.ವೈ ಪುತ್ರ ಸ್ಪರ್ಧಿಸುತ್ತಿದ್ದಾರೆ ಎಂದರೆ ಅದರ ವರ್ಚಸ್ಸೇ ಬೇರೆ ಇರ್ತಿತ್ತು‌

ಯಡಿಯೂರಪ್ಪ, ವಿಜಯೇಂದ್ರ ವರ್ಚಸ್ಸಿನ ಎಫೆಕ್ಟ್ ಮೈಸೂರು, ಚಾಮರಾಜನಗರ, ಹಾಗೂ ಮಂಡ್ಯ ಜಿಲ್ಲೆಗಳ ಮೇಲೆ ಆಗ್ತಿತ್ತು.

ವಿಜಯೇಂದ್ರರಿಗೆ ಟಿಕೇಟ್ ನೀಡಬೇಕಿತ್ತು ಎಂದ ಕೆಲ ನಾಯಕರು.

ಅದಕ್ಕೆ ಏನೂ ಮಾತನಾಡದೇ ಅದೆಲ್ಲಾ ಹಳೆ ವಿಚಾರ ಬಿಟ್ಟು ಬಿಡಿ ಎಂದ ಯಡಿಯೂರಪ್ಪ

ಇಂದು ಬಿಜೆಪಿ ಶಾಸಕಾಂಗ ಸಭೆಗೆ ಆಗಮಿಸಿದ್ದ  ಬಿ.ಎಸ್.ವೈ ಆಪ್ತ ಹಿರಿಯ ಶಾಸಕರು‌

ಸಭೆಗೂ ಮುನ್ನ ಬಿ.ಎಸ್.ವೈ ಗೆ ಅಭಿನಂದನೆ ತಿಳಿಸುವ ಸಂದರ್ಭದಲ್ಲಿ ನಿಮ್ಮ ಮಗ ಸ್ಪರ್ದಸಬೇಕಿತ್ತು ಎಂದಿದ್ದ ಕೆಲ ಮುಖಂಡರು.

ಇದನ್ನ ಕೇಳಿಸಿಕೊಂಡ ಕೇಂದ್ರ ಸಚಿವರಿಂದ ಸಮಾಧಾನ ಯತ್ನ.

ಈಗ ಯಡಿಯೂರಪ್ಪನವರಿಗೆ ಫುಲ್ ಪವರ್ ಕೊಟ್ಟಿದ್ದೇವೆ.

ಹೇಗೆ ಏನು ಮಾಡ್ತಾರೋ ಮಾಡ್ಲಿ.

ಒಟ್ಟಿನಲ್ಲಿ ಅಧಿಕಾರ ಕೈತಪ್ಪದಂತೆ ನೋಡಿಕೊಳ್ಳಲಿ.

ಯಡಿಯೂರಪ್ಪ ಯಾವುದೇ ನಿರ್ಧಾರಕ್ಕಾದರೂ ಹೈಕಮಾಂಡ್ ಬೆಂಬಲ ಇದೆ ಎಂದ ಕೇಂದ್ರ ನಾಯಕ ನಡ್ಡಾ ಹಾಗೂ ಧರ್ಮೇಂದ್ರ ಪ್ರಧಾನ್


5:57 pm (IST)

 ಪಕ್ಷೇತರ ಅಭ್ಯರ್ಥಿ ಶಂಕರ್ ಕೈಕೊಟ್ಟ ಹಿನ್ನೆಲೆ

ಈಶ್ವರಪ್ಪಗೆ ಬಿಜೆಪಿ ಹೈಕಮಾಂಡ್ ಬುಲಾವ್

 ಸ್ಯಾಡ್ ಮೂಡ್ ನಲ್ಲಿ ಬಿಜೆಪಿ ಕಚೇರಿಗೆ ಆಗಮಿಸಿದ ಈಶ್ವರಪ್ಪ

ಬುಲಾವ್ ನೀಡಿದ ಧರ್ಮೇಂದ್ರ ಪ್ರಧಾನ್


5:57 pm (IST)

ಈಗಲ್​ಟನ್​ ರೆಸಾರ್ಟ್​ನಲ್ಲಿ ಬಿಗಿ ಭದ್ರತೆ

ಕಾಂಗ್ರೆಸ್​  ಶಾಸಕರು ರೆಸಾರ್ಟ್​ಗೆ ಬರುವ ಹಿನ್ನೆಲೆ

ಈಗಲ್​ಟನ್​ ರೆಸಾರ್ಟ್​​ನಲ್ಲಿ ಹೆಚ್ಚಿದ ಬಿಗಿಭದ್ರತೆ

ರಾಮನಗರದ ಬಿಡದಿ ಬಳಿ ಇರುವ ಈಗಲ್​ಟನ್​ ರೆಸಾರ್ಟ್​

ರೆಸಾರ್ಟ್​ ಗೇಟ್​​ ಬಳಿ ಬರುವ, ಹೋಗುವ ವಾಹನಗಳ ತಪಾಸಣೆ

ಸ್ಥಳೀಯ ಪೊಲೀಸ್​ ಅಧಿಕಾರಿಗಳ ನೇತೃತ್ವದಲ್ಲಿ ತಪಾಸಣೆ


5:51 pm (IST)

ರಾಜ್ಯಪಾಲರ ಭೇಟಿ ಬಳಿಕ ಎಂ.ಬಿ.ಪಾಟೀಲ್​ ಹೇಳಿಕೆ

ಬಬಲೇಶ್ವರದ ಶಾಸಕ ಎಂ.ಪಾಟೀಲ್​ ಕಾಂಗ್ರೆಸ್​ ನಾಯಕರು ಎಲ್ಲರೂ ಒಗ್ಗಟ್ಟಾಗಿ ಇದ್ದಾರೆ.

ಕಾಂಗ್ರೆಸ್​ ಬಿಟ್ಟು ಹೋಗಲು ಸಾಧ್ಯವಿಲ್ಲ

 


5:47 pm (IST)

ಸಂವಿಧಾನ ಮತ್ತು ಸುಪ್ರೀಂ ಕೋರ್ಟ್​ ತೀರ್ಪಿನ ಅನ್ವಯ ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ.

ಮಿಜೋರಾಂ, ನಾಗಾಲ್ಯಾಂಡ್​, ತ್ರಿಪುರಾ, ಗೋವಾ ಈ ರಾಜ್ಯಗಳಲ್ಲಾದ ತೀರ್ಮಾನವನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ.

ಅದರಂತೆ ಇಲ್ಲೂ ತೀರ್ಮಾನ ಕೈಗೊಳ್ಳುವಂತೆ ಆಗ್ರಹಿಸಿದ್ದೇವೆ.

ರಾಜ್ಯಪಾಲರು ನಮ್ಮ ಮನವಿ ಸ್ವೀಕರಿಸಿದ್ದಾರೆ.

ಕಾನೂನು ತಜ್ಷರೊಂದಿಗೆ ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ.

117 ಶಾಸಕರ ಸಹಿ ಇರುವ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದೇವೆ.

ಸರ್ಕಾರ ರಚನೆಗೆ ಬೇಕಿರುವ ಸಂಖ್ಯಾಬಲವಿರುವ ಪತ್ರವನ್ನು ನೀಡಿದ್ದೇವೆ.

ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಸಿಂಗಲ್ ಲಾರಗಜೆಸ್ಟ್ ಪಾರ್ಟಿಗೆ ಅಧಿಕಾರ ನೀಡಿಲ್ಲ.

ಸಮ್ಮಶ್ರ ಸರ್ಕಾರಕ್ಕೆ ಸರ್ಕಾರ ರಚನೆಗೆ ಅವಕಾಶ ನೀಡ್ತಾರೆ

ಬಿಜೆಪಿಗೆ ಸರ್ಕಾರ ರಚನೆಗೆ ಅನುಮತಿ ನೀಡಿದ್ದಾರೆಂಬ ವಿಚಾರ

ಈ ಬಗ್ಗೆ ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ

ಹೆಚ್​ಡಿಕೆ ಹೇಳಿಕೆ

 

 


5:38 pm (IST)

ರಾಜ್ಯಪಾಲರನ್ನು ಭೇಟಿ ಮಾಡಿ ಹೊರಬಂದ ಜೆಡಿಎಸ್​, ಕಾಂಗ್ರೆಸ್​ ನಿಯೋಗ

ರಾಜ್ಯಪಾಲರ ಭೇಟಿ ಬಳಿಕ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್​ ಹೇಳಿಕೆ

ಉಭಯ ಪಕ್ಷದ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಬಂದಿದ್ಧೇವೆ

ಜೆಡಿಎಸ್​ಗೆ ಸಂಪೂರ್ಣ ಬೆಂಬಲ ಕೊಡಲು ನಿರ್ಧಾರ

ನಮ್ಮ ನಿರ್ಣಯವನ್ನು ರಾಜ್ಯಪಾಲರಿಗೆ ನೀಡಿದ್ದೇವೆ

ಬೆಳಗ್ಗೆ ಕಾಂಗ್ರೆಸ್​ ಶಾಸಕರ ಸಭೆ ನಡೆಸಿದ್ದೇವೆ

ಉಭಯ ಪಕ್ಷಗಳ ಸಭೆಯ ನಿರ್ಧಾರ ತಿಳಿಸಲಾಗಿದೆ.

 

 


5:36 pm (IST)

ಟೌನ್​ ಹಾಲ್​ ಬಳಿ ಪ್ರತಿಭಟನೆ

ಗೋ ಬ್ಯಾಕ್ ಗೋ ಬ್ಯಾಕ್ ಅಮಿತ್ ಶಾ ಗೋ ಬ್ಯಾಕ್ ಎಂಬ ಘೋಷಣೆ.

ಟೌನ್ ಹಾಲ್ ಬಳಿ ನಡೆಯತ್ತಿರೋ ಪ್ರತಿಭಟನೆಯಲ್ಲಿ ಪ್ರತಿಟನಾಕಾರರ ಆಕ್ರೋಶ.

ಪ್ರಗತಿಪರ ಚಿಂತಕರಿಂದ ಬಿಜೆಪಿಯ ವಿರುದ್ಧ ಆಕ್ರೋಶ.

ನಾಳೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲು ಚಿಂತನೆ


5:35 pm (IST)

ಪ್ರಗತಿಪರ ಚಿಂತಕರಿಂದ ಟೌನ್ ಹಾಲ್ ಬಳಿ ಪ್ರತಿಭಟನೆ

ಪ್ರಗತಿಪರ ಚಿಂತಕ ಕೆ.ಎಲ್ ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ.

ಶ್ರೀಮತಿ ವಿಜಯ, ಖ್ಯಾತ ಪತ್ರಕರ್ತರು.

ಬಿ.ಟಿ ಲಲಿತಾ ನಾಯಕ್, ಸಿರಿಮನೆ ನಾಗರಾಜ್, ಡಾ. ಬಿಆರ್ ಮಂಜುನಾಥ್, ವಿಜೆಕೆ ನಾಯರ್ ಸೇರಿದಂತೆ ಹಲವಾರು ಪ್ರಗತಿಪರ ಚಿಂತಕರಿಂದ ಪ್ರತಿಭಟನೆ.

ಸಂವಿಧಾನ ಉಳಿವಿಗಾಗಿ ಕರ್ನಾಟಕ  ಧ್ಯೇಯ ವಾಕ್ಯದ ಮೂಲಕ ಪ್ರತಿಭಟನೆ.

ಕೋಮುವಾದಿ ಬಿಜೆಪಿ ಪಕ್ಷದ ವಿರುದ್ದ ಸಮರ ಸಾರುತ್ತಿರೋ ಪ್ರಗತಿಪರ ಚಿಂತಕರು.

ಪ್ರಜಾಪ್ರಭುತ್ವ ಮೌಲ್ಯಗಳನ್ನ ಗಾಳಿಗೆ  ತೂರುತ್ತಿರುವ ಬಿಜೆಪಿಗೆ ದಿಕ್ಕಾರಗಳ ಘೋಷಣೆ.

ಕೋಮುವಾದಿ ಬಿಜೆಪಿ ಪಕ್ಷ ರಾಜ್ಯ ಆಡಳಿತಕ್ಕೆ ನಮ್ಮದು ಸಂಪೂರ್ಣ ವಿರೋಧ.

ರಾಜ್ಯದಲ್ಲಿ ಬಿಜೆಪಿ ಆಡಳಿತ ಬೇಡವೆ ಬೇಡ.

ರಾಜ್ಯಪಾಲರು ಬಿಜೆಪಿಗೆ ರಾಜ್ಯಾಡಳಿತ ಕ್ಕೆ ಅವಕಾಶ ನೀಡಕೂಡದು.

ಕುದುರೆ ವ್ಯಾಪಾರಕ್ಕಿಳಿದಿರೋ ಬಿಜೆಪಿ ಅಧಿಕಾರಕ್ಕೆ ಬರಬಾರದು.

ಅಧಿಕಾರಕ್ಕೆ ಬಂದರೇ ಉಗ್ರ ಹೋರಾಟ ನಡೆಸುತ್ತೆವೆ.

ಪ್ರಗತಿಪರ ಚಿಂತಕರ ಆಕ್ರೋಶ.

ಟೌನ್ ಹಾಲ್ ಬಳಿ ನಡೆಯುತ್ತಿರೊ ಪ್ರತಿಭಟನೆಯಲ್ಲಿ ಪ್ರಗತಿಪರರ ಆಕ್ರೋಶ.


5:29 pm (IST)

ಭೈರತಿ ಬಸವರಾಜ್​ ಜತೆ ರಾಜಭವನಕ್ಕೆ ಬಂದ ಆರ್​. ಶಂಕರ್​

ಬಿಜೆಪಿ ನಾಯಕರ ಜತೆಗಿದ್ದ ಆರ್​. ಶಂಕರ್​

ಮತ್ತೆ ಕಾಂಗ್ರೆಸ್​ ಪಾಳಯದಲ್ಲಿ ಗುರುತಿಸಿಕೊಂಡ ಶಂಕರ್​

ರಾಣಿ ಬೆನ್ನೂರು ಕೆಪಿಜೆಪಿ ಶಾಸಕ ಆರ್​ ಶಂಕರ್​

ಕಾಂಗ್ರೆಸ್​ಗೆ ನನ್ನ ಬೆಂಬಲ ಎಂದ ಆರ್​ ಶಂಕರ್​​


5:28 pm (IST)

ಒಬ್ಬೊಬ್ಬರಾಗಿ ಬರುತ್ತಿರುವ ಕಾಂಗ್ರೆಸ್ ಮುಖಂಡರು

ಎಂ ಬಿ ಪಾಟೀಲ್ ರಾಜಭವನಕ್ಕೆ ಆಗಮನ

ಡಿ ಕೆ ಶಿವಕುಮಾರ್ ಸಹ ರಾಜಭವನಕ್ಕೆ ಆಗಮನ

ರಾಮಲಿಂಗಾರೆಡ್ಡಿ ಆಗಮನ

ರಾಜಭವನದ ಒಳಗಡೆ ತೆರಳಿದ ಶಾಸಕ ರಾಮಲಿಂಗಾರೆಡ್ಡಿ

ಕೆಪಿಸಿಸಿ ಅಧ್ಯಕ್ಷ ಪರಮೆಶ್ವರ್​​, ಡಿ‌ಕೆ ಶಿವಕುಮಾರ್​, ದೇಶಪಾಂಡೆ, ಪ್ರಿಯಾಂಕ ಖರ್ಗೆ, ಜೆ.ಡಿ.ಎಸ್​​.ನ ಶಿವಲಿಂಗಯ್ಯ.

ರಾಜಭವನಕ್ಕೆ ಭೇಟಿ. ಸರ್ಕಾರ ರಚನೆಗೆ ಜೆ.ಡಿ.ಎಸ್ ಕಾಂಗ್ರೆಸ್ ಶಾಸಕರಿಂದ ಹಕ್ಕು ಮಂಡನೆ


5:26 pm (IST)

ಬೇರೇ ಶಾಸಕರಿಗಿಲ್ಲ ರಾಜಭವನಕ್ಕೆ ಪ್ರವೇಶ

ಜೆಡಿಎಸ್ ನಿಂದ ಹೆಚ್ಡಿಕೆ, ರೇವಣ್ಣ, ಜಿಟಿ ದೇವೇಗೌಡರಿಗಷ್ಟೇ ಅವಕಾಶ.

ಕಾಂಗ್ರೆಸ್ ನಿಂದ ಪರಮೇಶ್ವರ್ ,ಡಿಕೆಶಿ, ಎಸ್ ಆರ್ ಪಾಟೀಲ್, ಕೃಷ್ಣಾ ಭೈರೇಗೌಡರಿಗಷ್ಟೇ ಅವಕಾಶ

ಇನ್ನುಳಿದ ಕಾಂಗ್ರೆಸ್, ಜೆಡಿಎಸ್ ಶಾಸಕರು ಹೊರಗಡೆ ಉಳಿದಿದ್ದಾರೆ.

ರಾಜಭವನದ ಒಳಗಡೆ ತೆರಳಿದ ದಿನೇಶ್ ಗುಂಡೂರಾವ್,

ಇನ್ನುಳಿದ ಬೀರಪ್ಪ ಮೊಯ್ಲಿ, ಪ್ರಿಯಾಂಕ ಖರ್ಗೆ ಹೊರಗಡೆಯೆ ಇದ್ದಾರೆ.

ಜೊತೆಗೆ ಜೆಡಿಎಎಸ್ ನ ಎಲ್ಲಾ ಶಾಸಕರು ಹೊರಗಡೆಯೇ ಇದ್ದಾರೆ ‌


5:13 pm (IST)

ರಾಜಭವನಕ್ಕೆ ತೆರಳಿದ ಪರಮೇಶ್ವರ್ ,ಡಿಕೆಶಿ ಎಸ್ ಆರ್ ಪಾಟೀಲ್, ಪ್ರಿಯಾಂಕ ಖರ್ಗೆ, ಕೃಷ್ಣಭೈರೇಗೌಡ, ಜಾರ್ಜ್‌

ರಾಜಭವನಕ್ಕೆ ಆಗಮಿಸಿದ ವೀರಪ್ಪಮೊಯ್ಲಿ

ಜೆಡಿಎಸ್ ಕಾರ್ಯಕರ್ತರನ್ನ ಚದುರಿಸಿದ ಪೊಲೀಸರು

ಸರ್ಕಾರ ರಚನೆಗೆ ಹಕ್ಕು ಮಂಡನೆಗೆ ಬಂದಿರುವ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು


5:13 pm (IST)

ಬಿಜೆಪಿ ಕಚೇರಿಯಲ್ಲಿ ಶೋಭಾ ಕರಂದ್ಲಾಜೆ ‌ಗಂಭೀರ ಆರೋಪ.

ರಾಜ್ಯ ಸರ್ಕಾರ ನನ್ನ, ಸಿದ್ದೇಶ್ವರ, ಪಿ.ಸಿ.‌ಮೋಹನ್ ಫೋನ್ ಕದ್ದಾಲಿಕೆ ಮಾಡ್ತಿದೆ.

ಲೋಕಸಭಾ ಸ್ಪೀಕರ್, ದೇಶದ ಗೃಹ ಸಚಿವರು, ಐಜಿ, ಡಿಜಿಗೆ ಪತ್ರ ಬರೆದಿದ್ದೇವೆ.

ನಮ್ಮ ಫೋನ್ ಗಳಿಗೆ ಖಾಸಗಿತನ ಇಲ್ಲ.

ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತನಿಖೆ ನಡೆಸಬೇಕು.

ಶೋಭಾ ಗಂಭೀರ ಆರೋಪ.


5:12 pm (IST)

ರಾಜಭವನಕ್ಕೆ ಕಾಂಗ್ರೆಸ್, ಜೆಡಿಎಸ್ ಶಾಸಕರ ಭೇಟಿ

ರಾಜಭವನದ ಒಳಗೆ ತೆರಳಿದ ಕಾಂಗ್ರೆಸ್ ನಾಯಕರು

ಜೆಡಿಎಸ್ ಶಾಸಕರಿಗೆ ರಾಜಭವನ ಪ್ರವೇಶಕ್ಕೆ ನಿರಾಕರಣೆ

ಇಬ್ಬರಿಗೆ ಮಾತ್ರ ರಾಜಭವನಕ್ಜೆ ತೆರಳಲು ಅವಕಾಶ..
 ರಾಜಭವನ ಮುಂದೆ ಜೆಡಿಎಸ್, ಕಾಂಗ್ರೆಸ್ ಶಾಸಕರ ಪ್ರತಿಭಟನೆ.


5:10 pm (IST)

ಕೆಪಿಸಿಸಿಯಲ್ಲಿ ಪ್ರತ್ಯಕ್ಷವಾಗುವ ಮೂಲಕ ಅಚ್ಚರಿ ಮೂಡಿಸಿದ ಶಂಕರ

ಪಕ್ಷೇತರ ಅಭ್ಯರ್ಥಿ ಶಂಕರ್

ಭೈರತಿ ಬಸವರಾಜ ಜೊತೆ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಶಂಕರ್

ಬೆಳಿಗ್ಗೆಯೇ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಬಿಜೆಪಿಗೆ ಸಪೋರ್ಟ್ ಮಾಡಿದ್ದ ಶಂಕರ್

ರಾಣೆಬೆನ್ನೂರಿನ ಪಕ್ಷೇತರ ಶಾಸಕ

ಇದೀಗ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಳ್ಳುವ ಮೂಲಕ ಬಿಜೆಪಿಗೆ ಶಾಕ್ ನೀಡಿದ ಶಂಕರ್


5:09 pm (IST)

 ಇನ್ನೂ ಒಳಗೆ ಬಿಡದ ಪೊಲೀಸರು.

ನಿಂತಲ್ಲೆ ನಿಂತಿರುವ ಶಾಸಕರ ನಿಯೋಗ.

ರಾಜಭವನದ ಮುಂದೆ‌ ನಿಂತಿರುವ ಜೆಡಿಎಎಸ್​​ ನ ‌ಶಾಸಕರ‌‌ ನಿಯೋಗ.

 ರಾಜಭವನದ ಒಳಗಡೆ ತೆರಳಿದ ‌ಎಚ್ಡಿಕೆ ಮತ್ತು ರೇವಣ್ಣಪ್ರತಿಭಟನೆ ಶುರು

ಇಬ್ಬರು ‌ಮಾತ್ರ ರಾಜಭವನದ ಒಳಗಡೆ ಪ್ರವೇಶ

ಜೆಡಿಎಸ್ ನಿಂದ ಪ್ರತಿಭಟನೆ

ಬಿಜೆಪಿ ವಿರುದ್ಧ ಘೋಷಣೆ ಕೂಗಿದ ಜೆಡಿಎಸ್ ಕಾರ್ಯಕರ್ತರು

ರಾಜಭವನದ ಮುಂದೆ ಜೆಡಿಎಸ್ ಕಾಯ೯ಕತ೯ರಿಂದ ಪ್ರತಿಭಟನೆ


5:02 pm (IST)

ರಾಜ್ಯಪಾಲರ ಭೇಟಿಗೆ ಬಸ್ಸೇರಿ ಹೊರಡಲು ಸಜ್ಜಾದ ಕಾಂಗ್ರೆಸ್ ಶಾಸಕರು

ಕೆಪಿಸಿಸಿ ಪರಮೇಶ್ವರ್ ಸೇರಿ ಕಾಂಗ್ರೆಸ್ ಮುಖಂಡರು ಹಾಗೂ ಶಾಸಕರು ರಾಜಭವನದತ್ತ

ಅಲ್ಲಿಂದ ಶಾಸಕರು ಈಗಲ್ ಟನ್ ರೆಸಾರ್ಟ್ ಗೆ ಶಿಫ್ಟ್

ಸಿದ್ದರಾಮಯ್ಯ ಕೂಡ ಕೆಪಿಸಿಸಿಗೆ  ಆಗಮನ ಇಲ್ಲಿಂದಲೇ ರಾಜಭವನಕ್ಕೆ ತೆರಳಿರುವ ಕೈ ಮುಖಂಡರು


5:02 pm (IST)

ರಾಜಭವನದ ಒಳಗಡೆ ಹೋಗಲು 10 ಮಂದಿಗೆ ಮಾತ್ರ ಅನುಮತಿ


5:02 pm (IST)

ನಾವು ರಾಜಭವನಕ್ಕೆ ಹೋಗುತ್ತಿದ್ದೇವೆ

ರಾಜ್ಯಪಾಲರನ್ನ ಭೇಟಿ ಮಾಡ್ತೇವೆ.

ಸರ್ಕಾರ ರಚನೆಗೆ ಅವಕಾಶ ಕೇಳ್ತೇವೆ.


5:00 pm (IST)

ಸರಕಾರ ರಚನೆಗೆ ಬೇಕಿರುವ ಅಗತ್ಯ ಸಂಖ್ಯಾಬಲ ನಮ್ಮ ಬಳಿ ಇದೆ

ಹೀಗಾಗಿ ನಮಗೇ ಸರಕಾರ ರಚಿಸಲು ಅವಕಾಶ ನೀಡಬೇಕು

ನಮ್ಮ ಎಲ್ಲ ಶಾಸಕರೂ ನಮ್ಮ ಜತೆಯಲ್ಲೇ ಇದ್ದಾರೆ

ಕಾಂಗ್ರೆಸ್ ನಲ್ಲೂ ಯಾವ ಶಾಸಕರೂ ಬಿಜೆಪಿ ಜತೆ ಹೋಗಿಲ್ಲ

ಎಲ್ಲರೂ ಪತ್ರಕ್ಕೆ ಸಹಿ ಹಾಕಿದ್ದಾರೆ.


4:58 pm (IST)

ರಾಜಭವನದ ಒಳಗಡೆ ಬಿಡದ ಪೊಲೀಸರು.

ಹೆಚ್​ಡಿಕೆಯನ್ನು ಗೇಟ್​ ಬಳಿಯೇ ತಡೆದ ರಾಜಭವನದ ಸಿಬ್ಬಂದಿ

ಜೆಡಿಎಸ್​​ನ ಶಾಸಕರನ್ನು ಬಿಡದ ಪೊಲೀಸರು

ರಾಜಭವನದ ಮುಂದೆಯೇ ನಿಂತ ಶಾಸಕರ ನಿಯೋಗ

ಹೆಚ್ ಡಿ ಕುಮಾರಸ್ವಾಮಿ, ಜಿಟಿ ದೇವೇಗೌಡ, ಬಂಡಪ್ಪ ಕಾಶಂಪ್ಪನಬರ್ , ಮಹೇಶ್, ಶಿವಲಿಂಗೇಗೌಡ ಸೇರಿದಂತೆ ಹಲವರನ್ನು ತಡೆದ ಪೊಲೀಸರು

ಐದು ಗಂಟೆಗೆ ಅನುಮತಿ ಇರೋದು ಎಂದು ತಡೆದಿದ್ದಾರೆ.

ಐದು ನಿಮಿಷಗಳಿಂದ ರಾಜಭವನ ಹೊರಗಡೆ ನಿಂತ ಕುಮಾರಸ್ವಾಮಿ ಹಾಗೂ ಜೆಡಿಎಸ್ ಶಾಸಕರು


4:47 pm (IST)

ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ

ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿವೆ.

ಅಪ್ಪನಾಣೆಗೂ  ಕಾಂಗ್ರೆಸ ಜತೆ ಹೋಗಲ್ಲ ಎಂದಿದ್ದ ಕುಮಾರಸ್ವಾಮಿ ಈಗ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ.

ವಾಸ್ತವದಲ್ಲಿ ಶಾಸಕರ ಕುದುರೆ ವ್ಯಾಪಾರ ಮಾಡುತ್ತಿರುವುದೇ ಜೆಡಿಎಸ್ ಕಾಂಗ್ರೆಸ್.

ಯಾರಿಗೆ ಆ ಪಕ್ಷಗಳಲ್ಲಿ ಅಸಮಾಧಾನ ಇದೆಯೋ ಅವರನ್ನು ಸಹಜವಾಗಿಯೇ ಬಿಜೆಪಿಗೆ ಸ್ವಾಗತಿಸುತ್ತೇವೆ.

ಮೊದಲು ಸರ್ಕಾರ ರಚನೆ.

ಯಡಿಯೂರಪ್ಪ ಮುಖ್ಯಮಂತ್ರಿ ಆಗೋದು ಬಳಿಕ, ಸದನದಲ್ಲಿ ಬಹುಮತ ಸಾಬೀತು ಪಡಿಸುವ ಸಂದರ್ಭದಲ್ಲಿ ಅನ್ಯ ಪಕ್ಷಗಳ ಶಾಸಕರ ಬೆಂಬಲ ಗಳಿಸುವ ಯತ್ನ ನಡೆಯುತ್ತದೆ.


4:40 pm (IST)

ರಾಜಭವನ ತಲುಪಿದ ಎಚ್ ಡಿಕೆ

ಜೆಡಿಎಸ್ ಶಾಸಕರು ರಾಜಭವನಕ್ಕೆ

ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್​ ನಾಯಕರು ರಾಜಭವನಕ್ಕೆ 

ರಾಜ್ಯಪಾಲರ ಭೇಟಿಗೆ ತೆರಳುತ್ತಿದ್ದೇವೆ; ಹೆಚ್​.ಡಿ.ಕೆ

 


4:32 pm (IST)

ರೆಸಾರ್ಟ್ ಹುಡುಕುತ್ತಿರುವ ಬಿಜೆಪಿ

ಬಿಜೆಪಿ ನಾಯಕರನ್ನು ಸೇಫ್ ಆಗಿಡುವ ರೆಸಾರ್ಟ್ ಗಳಿಗಾಗಿ ಹುಡುಕಾಟ ಶುರು.

ರೆಸಾರ್ಟ್ ಹುಡುಕುವ ಜವಾಬ್ದಾರಿ ಯಲಹಂಕ ಶಾಸಕ ವಿಶ್ವನಾಥ್ ಹೆಗಲಿಗೆ.

ಗೋವಾದಲ್ಲಿ ರೆಸಾರ್ಟ್ ಗಳಿಗಾಗಿ ಹುಡುಕಾಟ.

ಬಿಜೆಪಿ 78 ಶಾಕರು ಹಾಗೂ ಕಾಂಗ್ರೆಸ್ ನಿಂದ ಬರುವ 16 ಶಾಸಕರು, ಜೆಡಿಎಸ್ ನ ನಾಲ್ವರು ಶಾಸಕರು ಉಳಿದುಕೊಳ್ಳಲು ಸಾಧ್ಯವಾಗುವ ರೆಸಾರ್ಟ್ ಹುಡುಕಾಟದಲ್ಲಿ ಬಿಜೆಪಿ.

ಒಂದುವೇಳೆ ಗೋವಾದಲ್ಲಿ ರೆಸಾರ್ಟ್ ಸಿಗದೆ ಹೋದರೆ  ನೆಲಮಂಗಲ ಅಥವಾ ಮಡಿಕೇರಿ ರೆಸಾರ್ಟ್​​ಗಳಿಗೆ ತೆರಳಲು ಬಿಜೆಪಿ ಚಿಂತನೆ.

ನಾಳೆ ಪ್ರಮಾಣ ವಚನದ ಬಳಿಕ ಶಾಸಕರು ರೆಸಾರ್ಟ್ ಗೆ ಶಿಫ್ಟ್ ಸಾಧ್ಯತೆ.

ನಾಳೆ ಬೆಳಗ್ಗೆ 12.20 ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ.

ಯಡಿಯೂರಪ್ಪ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅಮಿತ್ ಷಾ ಆಗಮನ ಸಾಧ್ಯತೆ.

ಹೀಗಾಗಿ ಇಂದು ಬರಬೇಕಿದ್ದ ಅಮಿತ್ ಷಾ ಬೆಂಗಳೂರು ವಿಸಿಟ್ ನಾಳೆಗೆ ಮುಂದೂಡಿಕೆ.

ನಾಳೆ ಬೆಳಗ್ಗೆ 9ಗಂಟೆಗೆ ಬೆಂಗಳೂರಿಗೆ ಅಮಿತ್ ಷಾ ಆಗಮಿಸಲಿರುವ ಸಾಧ್ಯತೆ.

ಅಮಿತ್ ಷಾ, ಬಿಜೆಪಿ ದ ರಾಷ್ಟ್ರೀಯ ಅಧ್ಯಕ್ಷ.

ಅಮಿತ್ ಷಾ ಸೂಚನೆ ಹಿನ್ನೆಲೆಯಲ್ಲಿ ರಾಜ್ಯದಲ್ಲೇ‌ ಮೊಕ್ಕಾಂ ಹೂಡಿರುವ ಮೂವರು ಕೇಂದ್ರ ಸಚಿವರು.

ಧರ್ಮೇಂದ್ರ ಪ್ರಧಾನ್, ಪ್ರಕಾಶ್ ಜಾವ್ಡೇಕರ್, ಜೆ.ಪಿ. ನಡ್ಡಾ.


4:31 pm (IST)

ರೆಸಾರ್ಟ್ ಗೆ ಶಾಸಕರನ್ನು ಕರೆದುಕೊಂಡು ಹೋಗಲು ಒಂದು ಬಸ್ ಮಾತ್ರ

ಈ ಬಸ್​ನಲ್ಲಿ 40 ತೆರಳಬಹುದು.

ಉಳಿದವರು ಕಾಂಗ್ರೆಸ್ ಮುಖಂಡರೇ ಆಗಿದ್ದು, ಅವರವರ ವಾಹನದಲ್ಲಿ ರೆಸಾರ್ಟ್ ಗೆ ತೆರಳಲಿದ್ದಾರೆ.

ರೆಸಾರ್ಟ್ ಗೂ ತೆರಳುವ  ಮುನ್ನ ಎಲ್ಲ ಶಾಸಕರನ್ನು ರಾಜಭವನಕ್ಕೆ ಕರೆದುಕೊಂಡು ಹೋಗಲು ತೀರ್ಮಾನ

ಪರಮೇಶ್ವರ್, ಹೆಚ್ಡಿಕೆ


4:30 pm (IST)

ಶಾಂಗ್ರಿ ಲಾದಲ್ಲೇ 30 ಕೊಠಡಿ ಪಡೆಯಲಾಗಿದೆ

ಕೆಲವು ಶಾಸಕರಿಗೆ ಬೆಂಗಳೂರಿನಲ್ಲಿ ಮನೆ ಇದೆ

ಇನ್ನುಳಿದ ಶಾಸಕರು ಶಾಂಗ್ರಿ ಲಾ ಹೋಟೆಲ್ ನಲ್ಲೇ ಉಳಿಯಲಿದ್ದಾರೆ

ಬೆಳಿಗ್ಗೆವರೆಗೂ ಇಲ್ಲೇ ಉಳಿಯುವ ಪ್ಲಾನ್ ನಲ್ಲಿ ಜೆಡಿಎಸ್ ಶಾಸಕರು

ನಾಳೆಯ ಬೆಳವಣಿಗೆ ಗಮನಿಸಿ ಮುಂದಿನ ನಿರ್ಧಾರ


4:30 pm (IST)

ಇನ್ನು ಕೆಲವೇ ಕ್ಷಣಗಳಲ್ಲಿ ರಾಜ್ಯಪಾಲ ರನ್ನು ಭೇಟಿಯಾಗಲಿರುವ ಉಭಯ ‌ನಾಯಕರ ನಿಯೋಗ

ರಾಜಭವನದಲ್ಲಿ ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟಿಯಾಗಲಿರುವ ನಿಯೋಗ...

ಸರ್ಕಾರ ರಚನೆಗೆ ಒಪ್ಪಿಗೆ ಕೊಡುವಂತೆ ರಾಜ್ಯಪಾಲರ ಬಳಿ ಮನವಿ ಮಾಡಲಿರುವ ನಿಯೋಗ..

ಕಾಂಗ್ರೆಸ್ ಹಾಗು ಜೆಡಿಎಸ್​​ನ ಜೊತೆಗೆ ಸರ್ಕಾರ ರಚನೆಗೆ ಒಪ್ಪಿಗೆ ಕೇಳಲಿರುವ ನಿಯೋಗ

ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರಾದ ಡಾ ಜಿ ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ರಿಂದ ಭೇಟಿ..

ವಜುಭಾಯಿ ವಾಲಾರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಒಪ್ಪಿಗೆ ಕೇಳಲಿರುವ ನಿಯೋಗ..


4:28 pm (IST)

ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ರಾಜ್ಯಪಾಲರಿಗೆ ವರದಿ ಸಲ್ಲಿಸಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್.

ನೂತನ ಶಾಸಕರ ಪಟ್ಟಿ ಸಹಿತ ವಿವರಣೆ ಸಲ್ಲಿಸಿದ ಸಂಜೀವ್ ಕುಮಾರ್.

ನಾಲ್ಕು ಗಂಟೆಗೆ ಕಾಂಗ್ರೆಸ್ ಹಾಗೂ ಐದು ಗಂಟೆಗೆ ಜೆಡಿಎಸ್ ‌ಪ್ರಮುಖರು ಭೇಟಿ ಮಾಡುತ್ತಿರುವ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರ ಪ್ರಕಟಣೆ ವಿಳಂಬ ಮಾಡಿರುವ ರಾಜ್ಯಪಾಲ ವಜೂಬಾಯ್ ವಾಲ.

ಆದರೆ ಮೌಖಿಕವಾಗಿ ಬಿಜೆಪಿಗೆ ಪ್ರಮಾಣ ವಚನ ಸ್ವೀಕಾರಕ್ಕೆ ಹಾಗೂ ಸಂಖ್ಯಾಬಲ ಪ್ರದರ್ಶನಕ್ಕೆ ಆಹ್ವಾನ ನೀಡಿರುವ ವಜುಬಾಯ್ ವಾಲಾ


4:25 pm (IST)

ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಟ್ವೀಟ್

'ಕರ್ನಾಟಕ ಶಾಸಕರ ಖರೀದಿಯಲ್ಲಿ ಗುಜರಾತ್ ಉದ್ಯಮಿ ಕೈವಾಡ?'

'ಆ ಉದ್ಯಮಿಗೂ ಬಿಜೆಪಿಗೂ ಏನು ಸಂಬಂಧ..?'

'ಬಿಜೆಪಿಯ ಈ ಭ್ರಷ್ಟಾಚಾರಕ್ಕೆ ಬ್ಯಾಂಕ್​​ಗಳು ಸಹಾಯ ಮಾಡ್ತಿವೆಯಾ?'

'ಈ ಬಗ್ಗೆ ನಮ್ಮ ತಾತ್ಕಾಲಿಕ ವಿತ್ತಸಚಿವ ಪಿಯೂಷ್​ ಗೋಯಲ್​ ಪ್ರತಿಕ್ರಿಯೆ ಕೊಡ್ತಾರಾ?'

 4:20 pm (IST)

JDS ಶಾಸಕರಿಗೆ 100 ಕೋಟಿ ಹಣದ ಆಮಿಷ ನೀಡಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ H.D.ಕುಮಾರಸ್ವಾಮಿ ಗಂಭೀರ ಆರೋಪ

JDS ಶಾಸಕರಿಗೆ ಕೇಂದ್ರ ಸಚಿವ ಸ್ಥಾನದ ಆಮಿಷವನ್ನೂ ನೀಡಿದ್ದಾರೆ.

 


4:19 pm (IST)

ಅವರು ಬಿಜೆಪಿ ಮೇಲೆ ಆಧಾರ ರಹಿತ ಆರೋಪ ಮಾಡ್ತಿದ್ದಾರೆ.

ಶಾಸಕರನ್ನ ಖರೀದಿ ಮಾಡುವುದು, ಕುದುರೆ ವ್ಯಾಪಾರ ಮಾಡುವುದು ಬಿಜೆಪಿ ಕೆಲಸವಲ್ಲ.

ಆ ಕೆಲಸ ಮಾಡುವುದಕ್ಕೆ ಕಾಂಗ್ರೆಸ್​-ಜೆಡಿಎಸ್​ ಪ್ರಖ್ಯಾತರಾಗಿದ್ದಾರೆ.

ಅವರ ಶಾಸಕರೇ, ಕಾಂಗ್ರೆಸ್​ ಜೆಡಿಎಸ್​ ಮೈತ್ರಿಗೆ ಒಪ್ಪುತ್ತಿಲ್ಲ.

ನಾವೇನು ಮಾಡುತ್ತಿಲ್ಲ, ಅವರ ಶಾಸಕರೇ ಮೈತ್ರಿಯಿಂದ ಖುಷಿಯಾಗಿಲ್ಲ.

ಕಾಂಗ್ರೆಸ್​- ಜೆಡಿಎಸ್​ ಮಾಡುತ್ತಿರುವ ಆಧಾರ ರಹಿತ ಆರೋಪವನ್ನ ಖಂಡಿಸುತ್ತೇನೆ.

 


4:18 pm (IST)

ನನಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಕಡೆಯಿಂದ ಆಫರ್ ಇದೆ ಎಂದ ಕುಮಾರಸ್ವಾಮಿ

ಜಾವ್ಡೇಕರ್ ಅವರನ್ನೇ ಭೇಟಿಯಾಗಿದ್ದೀರಾ ಅನ್ನೋ ಪ್ರಶ್ನೆಗೆ ಹೂ ಈಸ್ ದಟ್ ಜಾವ್ಡೇಕರ್ ಎಂದಿದ್ದಾರೆ.

ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರೋ ಜಾವಡೇಕರ್ ನಾವೇನು ಮಾಡುತ್ತಿಲ್ಲ, ಅವರ ಶಾಸಕರೇ ಮೈತ್ರಿಯಿಂದ ಖುಷಿಯಾಗಿಲ್ಲ.

ಕಾಂಗ್ರೆಸ್​- ಜೆಡಿಎಸ್​ ಮಾಡುತ್ತಿರುವ ಆಧಾರ ರಹಿತ ಆರೋಪವನ್ನ ಖಂಡಿಸುತ್ತೇನೆ ಎಂದಿದ್ದಾರೆ.

 


4:17 pm (IST)

ರಾಜ್ಯಪಾಲರ ಭೇಟಿಗೆ ಅನುಮತಿ ಕೋರಲು ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್-ಜೆಡಿಎಸ್‌ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ.


ಪರಮೇಶ್ವರ್, ಕುಮಾರಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ.  ರಾಜ್ಯಪಾಲರಿಗೆ ಶಾಸಕರ ಸಹಿ ಪತ್ರ ನೀಡಲಿರುವ ನಾಯಕರು ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಲಿದ್ದಾರೆ.

 


4:10 pm (IST)

ಕೆಪಿಸಿಸಿ ಕಚೇರಿಗೆ ಆಗಮಿಸಿದ ವಿಶೇಷ ಬಸ್​ ಆಗಮನ

ಶಾಸಕರನ್ನು ರೆಸಾರ್ಟ್​ಗೆ ಕರೆದೊಯ್ಯಲಿರುವ 'ಶರ್ಮಾ' ಬಸ್​

ಬಿಡದಿಯ ಈಗಲ್​ಟನ್​ ರೆಸಾರ್ಟ್​ಗೆ ಕರೆದೊಯ್ಯಲಿರುವ ಬಸ್

ಕೆಪಿಸಿಸಿ ಕಚೇರಿಯಿಂದ ರೆಸಾರ್ಟ್​ಗೆ ಕರೆದೊಯ್ಯಲಿರುವ ಬಸ್​

ಕಾಂಗ್ರೆಸ್ ಶಾಸಕರು ಇದೇ ಬಸ್ ನಲ್ಲೇ ಈಗಲ ಟನ್ ರೆಸಾರ್ಟ್ ಗೆ ತೆರಳಲಿದ್ದಾರೆ.


4:08 pm (IST)

ರಾಜ್ಯ ರಾಜಕಾರಣದಲ್ಲಿ ಅತಂತ್ರ ಪರಿಸ್ಥಿತಿ ಎದುರಾಗಿದ್ದು, ಬಿಜೆಪಿ ಪಕ್ಷವು ಆಪರೇಷನ್ ಫ್ಲವರ್ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಆಪರೇಷನ್ ಫ್ಲವರ್ ಹೆಸರಿನಲ್ಲಿ ಬಿಜೆಪಿ ಪಕ್ಷ ಒಂದು ವೇಳೆ ರೆಸಾರ್ಟ್ ರಾಜಕೀಯಕ್ಕೆ ಮುಂದಾದರೆ, ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಗೋಲ್ಡನ್ ಫಾಮ್ ರೆಸಾರ್ಟ್‌ಗೆ ಬರುವ ಸಾದ್ಯತೆ ಇದೆ.

ಬಿಜೆಪಿ ಪಕ್ಷದಿಂದ ಮೂರನೇ ಭಾರಿ‌ ಶಾಸಕರಾಗಿ ಆಯ್ಕೆಯಾಗಿರುವ, ಯಕಹಂಕ ಕ್ಷೇತ್ರದ ಬಿಜೆಪಿ ಶಾಸಕ ವಿಶ್ವನಾಥ್ ಕ್ಷೇತ್ರದಲ್ಲಿ ಈ ರೆಸಾರ್ಟ್ ಇರಲಿದ್ದು, ಬೆಂಗಳೂರಿಗೂ ಸಹ ಹತ್ತಿರವಿದೆ.

ಇನ್ನೂ ಕಳೆದ ಬಾರಿ ಬಿಜೆಪಿಯಲ್ಲಿ ನಡೆದ ಆಪರೇಷನ್ ಕಮಲದಲ್ಲಿ, ರೆಸಾರ್ಟ್ ರಾಜಕಾರಣಕ್ಕಾಗಿ ಬಿಜೆಪಿ ಪಕ್ಷ ಇದೇ ರೆಸಾರ್ಟ್ ಬಳಸಿಕೊಂಡಿದ್ದು. ಈಗಾಗಿ ಮತ್ತೆ ಇದೇ ರೆಸಾರ್ಟ್‌ಗೆ ಬರುವ ಸಾದ್ಯತೆಗಳಿವೆ.

ರೆಸಾರ್ಟ್ ಮೂಲಗಳ ಮಾಹಿತಿಯ ಪ್ರಕಾರ, ಇದುವರೆಗೂ ಯಾವುದೇ ರೂಂಗಳು ಬುಕ್ ಆಗಿಲ್ಲ ಎಂದು ತಿಳಿದು ಬಂದಿದೆ.

 


4:05 pm (IST)

ಸರ್ಕಾರ ರಚಿಸುವಂತೆ ಬಿಜೆಪಿಗೆ ಆಹ್ವಾನ ನೀಡಿದ ರಾಜ್ಯಪಾಲರು

ನಾಳೆ ಬಿಜೆಪಿ ಪಕ್ಷದಿಂದ ಸರ್ಕಾರ ರಚನೆ

ನಾಳೆ ಕಂಠೀರವ ಸ್ಟೇಡಿಯಂನಲ್ಲಿ ಬಿಎಸ್‌ವೈ ಪ್ರಮಾಣ ವಚನ

ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾರಣ ಬಿಜೆಪಿಗೆ ಆಹ್ವಾನ

ರಾಜ್ಯಪಾಲರ ತೀರ್ಮಾನದಿಂದ ಕಾಂಗ್ರೆಸ್-ಜೆಡಿಎಸ್‌ಗೆ ನಿರಾಸೆ


4:02 pm (IST)

ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸೇರಿ ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದಾರೆ.

ನಾವು ರಾಜ್ಯಪಾಲರ ಮೇಸೆಜ್ ಗೆ ಕಾಯುತ್ತಿದ್ದೇವೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ರಚನೆ ಮಾಡಲು ಹೆಚ್ಚು ಶಾಸಕರ ಸಂಖ್ಯೆ ಇದೆ.

ಬಿಜೆಪಿ ಶಾಸಕರ ಕೊರತೆ ಇದೆ..ಸಂಖ್ಯಾಬಲದ ಕೊರತೆ

ಸುಪ್ರೀಂ ಕೋರ್ಟ್ ಆದೇಶ ಸಹ  ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರದಿದ್ರೆ ಎರಡು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಬಹುದು ಅಂತ ಇದೆ.

ಹೀಗಾಗಿ ಸಮಯ ವ್ಯರ್ಥ ಮಾಡದೇ ಸರ್ಕಾರ ರಚನೆಗೆ ಅವಕಾಶ ಕೊಡಬೇಕು.

ಕುದುರೆ ವ್ಯಾಪಾರ ನಡೆಯಲು ಬಿಡಬಾರದು..ರಾಜ್ಯಪಾಲರು ತಮ್ಮ ಅಧಿಕಾರ ಬಳಸಿ ಕೂಡಲೇ ಸರ್ಕಾರ ರಚನೆ ಮಾಡಲು ಅವಕಾಶ ಕೊಡಬೇಕು.

ರಾಜ್ಯಪಾಲರ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್, ಜೆಡಿಎಸ್ ಸಿದ್ಧತೆ

ಕಾಂಗ್ರೆಸ್ ,ಜೆಡಿಎಸ್ ಮೈತ್ರಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡದಿದ್ದಲ್ಲಿ

ನಾಳೆ ರಾಜಭವನದ ಮುಂದೆ ಜೆಡಿಎಸ್, ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರಿಂದ ಧರಣಿ

ರಾಜ್ಯಪಾಲರ ನಿರ್ಧಾರ ವಿರೋಧಿಸಿ ಪ್ರತಿಭಟನೆಗೆ ಉಭಯ ಪಕ್ಷಗಳ ಮುಖಂಡರು ನಿರ್ಧಾರ

ಇಂದು ಸಂಜೆ ನಡೆಯುವ ಶಾಸಕಾಂಗ ಪಕ್ಷದ ಸಭೆಯ ಬಳಿಕ ಕಾಂಗ್ರೆಸ್ ಶಾಸಕರು ರೆಸಾರ್ಟ್ ಗೆ ಶಿಫ್ಟ್

ಬಿಡದಿ ಬಳಿ ಇರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಠಿಕಾಣಿ ಹೂಡಲಿರುವ ಕೈ ಶಾಸಕರು

ಈಗಾಗಲೇ 95 ರೂಂಗಳನ್ನು ಬುಕ್ ಮಾಡಲಾಗಿದೆ.


3:50 pm (IST)

ಪ್ರಜಾತಂತ್ರ ಉಳಿಸಲು ಪ್ರಗತಿಪರರಿಂದ ರಾಜಭವನ ಚಲೋ

ಬಿಜೆಪಿ ರಾಜಭವನ ದುರ್ಬಳಕೆ ವಿಚಾರದ ಹಿನ್ನೆಲೆ

ಪ್ರಜಾತಂತ್ರ ಉಳಿಸಲು ಪ್ರಗತಿಪರರ ಹೋರಾಟ

ಹಿರಿಯ ನಾಯಕ ದೊರೆಸ್ವಾಮಿ ನೇತೃತ್ವದಲ್ಲಿ ನಾಳೆ ರಾಜಭವನ ಚಲೋ ಚಳುವಳಿಗೆ ಸಿದ್ಧತೆ

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕ ಧರಣೆ ಪತ್ರ ಚಳುವಳಿ

ರಾಜ್ಯಪಾಲರಿಗೆ ಪತ್ರಜಾಪ್ರಭುತ್ವ ಉಳಿಸುವಂತೆ ಪತ್ರ ರವಾನೆ

ಮೈತ್ರಿ ರಾಜಕಾರಣಕ್ಕೆ ಅವಕಾಶ ಕೊಡುವಂತೆ ಮನವಿ

ನಾಳೆಯಿಂದ ಹೋರಾಟ ಆರಂಭಿಸಲು ನಿರ್ಧಾರ


3:48 pm (IST)

ಹೆಚ್​ಡಿಕೆ ಮತ್ತು ಜಿ.ಪರಮೇಶ್ವರ್ ಅವರಿಂದ ಸಂಜೆ 5ಕ್ಕೆ ರಾಜ್ಯಪಾಲರ ಭೇಟಿ

ಭೇಟಿಗೆ ಅನುಮತಿ ನೀಡಿರುವ ರಾಜ್ಯಪಾಲ ವಜುಬಾಯಿ ಆರ್.ವಾಲಾ

ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಳಿಕ ರಾಜ್ಯಪಾಲರನ್ನು ಭೇಟಿಗೆ ಹೊರಟ ಹೆಚ್​ಡಿಕೆ


3:45 pm (IST)

ಸಂಜೆ 5 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆ ಚರ್ಚೆ ಹಾಗೂ ಕೆಲ ಶಾಸಕರು ಬೆಳಗ್ಗೆ ನಡೆದ ಸಭೆಯಲ್ಲಿ ಭಾಗಿಯಾಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಭೆ

ಸಭೆಗೆ ಎಲ್ಲ ಶಾಸಕರು ಬಂದ ಬಳಿಕ ಸರ್ಕಾರ ರಚನೆ ಬಗ್ಗೆ ಚರ್ಚೆ


3:26 pm (IST)

ಸರಕಾರ ರಚಿಸಲು ಬಿಜೆಪಿಗೆ ರಾಜ್ಯಪಾಲರ ಆಹ್ವಾನ?#

ಸರಕಾರ ರಚಿಸಲು ಬಿಜೆಪಿಗೆ ರಾಜ್ಯಪಾಲರ ಆಹ್ವಾನ?

ರಾಜ್ಯಪಾಲರಿಂದ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಆಹ್ವಾನ ಸಾಧ್ಯತೆ.

ಬಿಜೆಪಿಗೆ ಬಹುಮತ ಸಾಬೀತು ಮಾಡುವ ಬಗ್ಗೆ ಗವರ್ನರ್ ಸೂಚನೆ ಸಾಧ್ಯತೆ.

ಗವರ್ನರ್ ಸೂಚನೆ ಹಿನ್ನೆಲೆ ಬಿಜೆಪಿಯಿಂದ ಮಾಸ್ಟರ್ ಪ್ಲಾನ್.

ಬಿಜೆಪಿ ಬಹುಮತ ಸಾಬೀತಿಗೆ ಮಾಸ್ಟರ್ ಪ್ಲಾನ್.

ಗವರ್ನರ್ ಆಹ್ವಾನ ಬಂದ ಕೂಡಲೇ ಪ್ರಮಾಣ ವಚನಕ್ಕೆ ತಯಾರಿ.

ಬಿ.ಎಸ್.ಯಡಿಯೂರಪ್ಪ ಒಬ್ಬರೇ ಸಿಎಂ ಆಗಿ ಪ್ರಮಾಣ ವಚನ.

ಪ್ರಮಾಣ ವಚನದ ಬಳಿಕ ವಿಧಾನಸಭೆಯಲ್ಲಿ ರಾಜ್ಯಪಾಲರು ಗಡುವು ನೀಡಿದ ದಿನಾಂಕದೊಳಗೆ ಬಹುಮತ ಸಾಬೀತಿಗೆ ನಿರ್ಧಾರ.

ಧ್ವನಿಮತದ ಮೂಲಕ ಬಹುಮತ ಸಾಬೀತಿಗೆ ಚಿಂತನೆ.

ಆಪರೇಷನ್ ಕಮಲಕ್ಕೆ ಒಳಗಾದ ಶಾಸಕರ ಗೈರಿಗೆ ತಯಾರಿ.

ಆಪರೇಷನ್ ಕಮಲಕ್ಕೆ ಒಳಗಾದವರು ಸದನಕ್ಕೆ ಗೈರಾಗುವಂತೆ ನೋಡಿಕೊಳ್ಳುವುದು.

ಹತ್ತಕ್ಕೂ ಹೆಚ್ಚು ಶಾಸಕರ ಗೈರಾಗಿಸಲು ಮಾಸ್ಟರ್ ಪ್ಲಾನ್.

ಶಾಸಕರ ಗೈರಿಂದ ಸರಳ ಬಹುಮತದ ಸಂಖ್ಯೆ ಇಳಿಮುಖ.

ಈ ಮೂಲಕ ಸದನದಲ್ಲಿ ಬಹುಮತ ನಿರೂಪಿಸುವ ಬಗ್ಗೆ ಗಂಭೀರ ಚಿಂತನೆ.

ಸದನದಲ್ಲಿ ಬಹುಮತ ಸಾಬೀತು ಮಾಡಿದರೆ 6 ತಿಂಗಳು ತಲೆನೋವಿಲ್ಲ.

ಅಷ್ಟರೊಳಗೆ ಸಂಪೂರ್ಣ ಬಹುಮತಕ್ಕೆ ಬೇಕಾಗುವಷ್ಟು ಸಂಖ್ಯೆಯ ಶಾಸಕರನ್ನು ಗೆಲ್ಲಿಸಿಕೊಳ್ಳುವುದು.

ಇಂದು ಬಿಎಸ್ವೈ ಸಮ್ಮುಖದಲ್ಲಿ ನಡೆದ ಟಾಪ್ ಲೀಡರ್ಸ್ ಸಭೆಯಲ್ಲಿ ನಿರ್ಧಾರ.

ಸಭೆಯಲ್ಲಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರಕಾಶ್ ಜಾವಡೇಕರ್,ಜೆಪಿ ನಡ್ಡಾ ತೀರ್ಮಾನ.

ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಮೇರೆಗೆ ರೂಪಿಸಿದ  ಮಾಸ್ಟರ್ ಪ್ಲಾನ್.

ಟಾಪ್ ಲೀಡರ್ ಜೊತೆ ಬಿಎಸ್ವೈ ಆಪರೇಷನ್ ಕಮಲ ಮಾಡುವುದು ಪ್ರಮುಖ ಜವಾಬ್ದಾರಿ.

ನ್ಯೂಸ್ ೧೮ ಕನ್ನಡಕ್ಕೆ ಬಿಜೆಪಿ ಉನ್ನತ ಮೂಲಗಳ ಮಾಹಿತಿ


2:53 pm (IST)

ಮೊದಲ ಬಾರಿ ಶಾಸಕರಿಗೆ ಗಾಳ ಹಾಕಿರೋ ಬಿಜೆಪಿ ನಾಯಕರು.

ಮಾಲೂರು ಶಾಸಕ‌‌ ನಂಜೇಗೌಡ.

ಶೃಂಗೇರಿ ಶಾಸಕ ಟಿ.ಡಿ‌ ರಾಜೇಗೌಡ.

ಕಂಪ್ಲಿ ಶಾಸಕ ಗಣೇಶ್ ಸೇರಿದಂತೆ ಕಾಂಗ್ರೆಸ್‌ನ‌ ಹತ್ತಕ್ಕೂ ಹೆಚ್ಚು ಶಾಸಕರ ಜೊತೆ ಸಂಪರ್ಕ.

ಬಿಜೆಪಿಗೆ ಬೆಂಬಲ‌ ನೀಡುವಂತೆ ಮನವಿ.

ಕಾಂಗ್ರೆಸ್ ಬುಟ್ಟಿಗೆ ಕೈ ಹಾಕಿರುವ ಬಿಜೆಪಿ.

ಆತಂಕದಲ್ಲಿ‌ ಕಾಂಗ್ರೆಸ್ ನಾಯಕರು.

ಹಿರಿಯ ಕಾಂಗ್ರೆಸ್ ನಾಯಕ ಗುಲಾಂನಭಿ ಆಜಾದ್‌ರಿಂದ ಶಾಸಕರ ಜೊತೆ ಚರ್ಚೆ.

ಯಾರಿಗೆಲ್ಲಾ ದೂರವಾಣಿ ಕರೆ ಬಂದಿದೆ ಎಂದು ವಿಚಾರಿಸುತ್ತಿರುವ‌‌ ಗುಲಾಂನಭಿ ಆಜಾದ್.

ಯಾವುದೇ ಕಾರಣಕ್ಕೂ ಬಿಜೆಪಿ ಆಮಿಷಕ್ಕೆ ಬಲಿಯಾಗಬೇಡಿ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ರೆ ಆಡಳಿತ ನಡೆಸೋದು ಪಿಎಂ ಮೋದಿ ಮತ್ತು ಅಮಿತ್ ಷಾ.

ಕೆಲಸ ಆದಮೇಲೆ‌ ಬಿಜೆಪಿಯವರು ಬೀದಿಗೆ ತಳ್ಳುತ್ತಾರೆ.

ಬಿಜೆಪಿ ಜೊತೆ ಹೋಗಬೇಡಿ

ಆಪರೇಷನ್ ಕಮಲಕ್ಕೆ ಬಲಿಯಾಗದಂತೆ  ಮನವಿ.

ಗುಲಾಂನಭಿ ಆಜಾದ್‌ರಿಂದ ಶಾಸಕರಲ್ಲಿ ಮನವಿ


2:51 pm (IST)

ಮತ್ತೆ ಸಂಜೆ 5 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆ ಚರ್ಚೆ ಹಾಗೂ ಕೆಲ ಶಾಸಕರು ಬೆಳಿಗ್ಗೆ ನಡೆದ ಸಭೆಯಲ್ಲಿ ಭಾಗಿಯಾಗದ ಹಿನ್ನಲೆಯಲ್ಲಿ ಮತ್ತೊಮ್ಮೆ ಸಭೆ

ಸಭೆಗೆ ಎಲ್ಲ ಶಾಸಕರು ಬಂದ ಬಳಿಕ ಸರ್ಕಾರ ರಚನೆ ಬಗ್ಗೆ ಚರ್ಚೆ


2:48 pm (IST)

ನಾನು ರಾಜ ಗುರುಗಳ ಶಿಷ್ಯ

ಇದು ರಾಜಕೀಯ ಭೇಟಿ ಅಂತೂ ಅಲ್ಲಾ

ಇವತ್ತು ವಿಶೇಷ ಪೂಜೆ ಇತ್ತು ಹೀಗಾಗಿ ಬಂದಿದ್ದೇನೆ

ಸುಮಾರು ದಿನಗಳ ಬಳಿಕ ಗುರುಗಳನ್ನ ಭೇಟಿ ಮಾಡಿದ್ದೇನೆ

ರಾಜಕೀಯ ವಿಚಾರವಾಗಿ ಏನೂ ಮಾತುಕತೆ ಮಾಡಿಲ್ಲಾ

ಇನ್ನೆರಡು ದಿನ ಕಾದು ನೋಡಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ

ಶಂಕರ್ ಬಿಜೆಪಿ ಸೇರ್ಪಡೆ ವಿಚಾರ

ರಾಜ್ಯಪಾಲರ ಬಳಿ ತೆರಳಿ, ಬೆಂಬಲ ವ್ಯಕ್ತಪಡಿಸಲಾಗಿದೆ

ಇನ್ನುಳಿದ ಶಂಕರ್ ಗಳು ಬಿಜೆಪಿ ಹುಡುಕಿಕೊಂಡು ಬರಲಿದ್ದಾರೆ


2:47 pm (IST)

ಈಶ್ವರಪ್ಪ ನನ್ನ ಶಿಷ್ಯ

ಇವತ್ತು ವಿಶೇಷ ಪೂಜೆ ಇತ್ತು ಹಾಗಾಗಿ ಬಂದಿದ್ದಾರೆ

ಈಶ್ವರಪ್ಪಗೆ ಕುದುರೆ ವ್ಯಾಪಾರ ಮಾಡಬೇಡಿ

ಬಿಜೆಪಿ ಸರ್ಕಾರನೇ ಅಧಿಕಾರಕ್ಕೆ ಬರುತ್ತೆ ಚಿಂತೆ ಮಾಡಬೇಡಿ

ಈ ಬಾರಿ ರಾಜ್ಯದ ಮೂರು ಸಿಎಂ ಅಭ್ಯರ್ಥಿಗಳು ಸಿಎಂ ಆಗಲ್ಲ

ಸಿದ್ದರಾಮಯ್ಯ,ಯಡಿಯೂರಪ್ಪ ,ಹೆಚ್ ಡಿ ಕುಮಾರಸ್ವಾಮಿ

ಬಿಜೆಪಿಯವರು ಕಾದು ನೋಡುವ ತಂತ್ರ ಅನುಸರಿಸಿ

ಬಿಜೆಪಿಯವರಿಗೆ ಒಳ್ಳೆಯದಾಗುತ್ತೆ

ಬಿಜೆಪಿ 104 ಸ್ಥಾನ ಗಳಿಸಿ,ಎಲ್ಲಾ ಪಕ್ಷಗಳಿಗಿಂತ ಮುಂದೆ ಇದ್ದಾರೆ

ಹೀಗಾಗಿ ಸರ್ಕಾರ ಬಿಜೆಪಿಯವರೇ ಅವರೇ ರಚನೆ ಮಾಡುತ್ತಾರೆ

ಹೆಚ್ ಡಿ ಕುಮಾರಸ್ವಾಮಿ ವಾಮವಾರ್ಗ ಹಿಡಿಯಬಾರದು

ದೇವೇಗೌಡ ಕುಟುಂಬದವರು ದೈವ ಭಕ್ತರು

ಅವರು ತಪ್ಪು ಮಾಡಬಾರದು

ಈಶ್ವರಪ್ಪ ಭೇಟಿ ಬಳಿಕ ದ್ವಾರಕನಾಥ್ ಗೂರುಜಿ ಹೇಳಿಕೆ


2:45 pm (IST)

ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಬಿಜೆಪಿ ವಿರೋಧ ಹಿನ್ನೆಲೆ

ಜೆಡಿಎಸ್ ಕಾರ್ಯಕರ್ತರಿಂದ ಬಿಜೆಪಿ ವಿರುದ್ಧ ಆಕ್ರೋಶ

ಚನ್ನಪಟ್ಟಣದ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕು

ಬಿಜೆಪಿ ಪಕ್ಷ ಹಾಗೂ ರಾಜ್ಯಪಾಲರ ವಿರುದ್ಧ ಜೆಡಿಎಸ್ ಕಾರ್ಯಕರ್ತರಿಂದ ಆಕ್ರೋಶ

ಆಪರೇಷನ್ ಕಮಲ ನಿಲ್ಲಿಸಿ ಎಂದು ಭಿತ್ತಿ ಪತ್ರಗಳನ್ನ ಪ್ರದರ್ಶಿಸಿ ಪ್ರತಿಭಟನೆ

ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಅಡ್ಡಿಪಡಿಸಬಾರದೆಂದು ಬಿಜೆಪಿ ಪಕ್ಷಕ್ಕೆ  ಜೆಡಿಎಸ್ ಕಾರ್ಯಕರ್ತರ ಆಗ್ರಹ

ಸರ್ಕಾರ ರಚನೆಗೆ ಅಡ್ಡಿಪಡಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವ ಎಚ್ಚರಿಕೆ


2:31 pm (IST)

ದೇವೇಗೌಡರ ಭೇಟಿಗೆ ಬಂದ ಮಾಜಿ ಶಾಸಕ‌ ಕೋನರೆಡ್ಡಿ

ದೇವೇಗೌಡರೊಂದಿಗೆ ಮಾತುಕತೆ ನಡೆಸಲು ಬಂದಿರುವ ಕೋನರೆಡ್ಡಿ


2:30 pm (IST)

ಚುನಾವಣಾ ಫಲಿತಾಂಶ ಪ್ರತಿ ರಾಜ್ಯಪಾಲರಿಗೆ ಸಲ್ಲಿಕೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿಯಿಂದ ಪ್ರತಿ ಸಲ್ಲಿಕೆ.

ರಾಜ್ಯಪಾಲರಿಗೆ ಫಲಿತಾಂಶ ಪ್ರತಿ ಸಲ್ಲಿಕೆ ಹಿನ್ನಲೆ.

ಸದ್ಯದಲ್ಲೇ ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ಸಾಧ್ಯತೆ.

ಫಲಿತಾಂಶ ಪ್ರತಿ ಸಲ್ಲಿಕೆ ಹಿನ್ನೆಲೆ

ರಾಜ್ಯಪಾಲರಿಂದ ಹಕ್ಕು ಮಂಡನೆಗೆ ಆಹ್ವಾನ

ಯಾವುದೆರ ಘಳಿಗೆಯಲ್ಲಿ‌ಆಹ್ವಾನ‌‌ ಸಾಧ್ಯತೆ.

ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಆಹ್ವಾನ ಸಾಧ್ಯತೆ


2:30 pm (IST)

ಈಗಲ್‌ಟನ್ ರೆಸಾರ್ಟ್ ಗೆ ಕೆಪಿಸಿಸಿ ಕಚೇರಿಯಿಂದ ಒಟ್ಟಾಗಿ ಪ್ರಯಾಣ.

ಕಾಂಗ್ರೆಸ್ ಶಾಸಕರ ಪ್ರಯಾಣ.

ನಾಯಕರ ಸಮ್ಮುಖದಲ್ಲಿ ಪ್ರಯಾಣ.

ಸರ್ಕಾರ ರಚನೆ ದಿನದವರೆಗೂ ರೆಸಾರ್ಟ್ ‌ನಲ್ಲೆಡ ವಾಸ್ತವ್ಯ ಹೂಡಲಿರುವ ಕಾಂಗ್ರೆಸ್ ಶಾಸಕರು.

ಸಂಸದ ಡಿ.ಕೆ ಸುರೇಶ್‌‌ಗೆ ಶಾಸಕರ ನೋಡಿಕೊಳ್ಳುವ ಜವಾಬ್ದಾರಿ.

ಶಾಸಕರ ಟೇಕ್ ಕೇರ್ ಉಸಾಬರಿ ಡಿ.ಕೆ ಸುರೇಶ್‌ಗೆ.

ಡಿ.ಕೆ ಸುರೇಶ್‌ಗೆ ಜವಾಬ್ದಾರಿ ನೀಡಿದ ಕೆಪಿಸಿಸಿ


2:21 pm (IST)

ಈ ಹಿನ್ನೆಲೆಯಲ್ಲಿ ಇಂದು ಸಂಜೆ ಮತ್ತೆ ಕಾಂಗ್ರೆಸ್ ಶಾಸಕರ ಸಭೆ.

ಎರಡನೇ ಬಾರಿ ಸಭೆ ಕರೆದಿರುವ ಕಾಂಗ್ರೆಸ್ ನಾಯಕರು.

ಒಗ್ಗಟ್ಟು ಕಾಪಾಡಿಕೊಳ್ಳಲು‌ ಸಭೆ ನಡೆಸುತ್ತಿರುವ ನಾಯಕರು.

ಸಂಜೆಯ ಸಭೆ ಬಳಿಕ ರೆಸಾರ್ಟ್ ‌ಗೆ ಪ್ರಯಾಣ.

ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ನಲ್ಲಿ ಹಿಡಿದಿಟ್ಟುಕೊಳ್ಳಲು ತೀರ್ಮಾನ


2:20 pm (IST)

ಸಂಜೆವರೆಗೆ ಕಾದುನೋಡಿ ನಂತರ ನಿರ್ಧರಿಸಲಿರುವ ಕಾಂಗ್ರೆಸ್

ಸಂಜೆವರೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಅವಕಾಶ ನೀಡಿದಿದ್ದರೆ ಕಾನೂನು ಹೋರಾಟ

ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಚಿಂತನೆ

ಶಾಸಕರ ಸಂಖ್ಯೆ ಆಧರಿಸಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ

ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಹಿರಿಯ ವಕೀಲರಾದ ಕಪಿಲ್ ಸಿಬಾಲ್, ಅಭಿಷೇಕ್ ಮನು ಸಿಂಘ್ವಿ ನೇತೃತ್ವದಲ್ಲಿ ತಯಾರಿ


2:17 pm (IST)

ನಾವು ಜೆಡಿಎಸ್ ಜೊತೆ ಸೇರಿ ಸರ್ಕಾರ ಮಾಡ್ತೇವೆ.

ಈ ಬಗ್ಗೆ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ.

ಪರಮೇಶ್ವರ್, ಸಿದ್ದರಾಮಯ್ಯ ನೇತೃತ್ವದಲ್ಲಿ  ಜೆಡಿಎಸ್ ಜೊತೆ ಸರ್ಕಾರ ರಚಿಸುವ ತೀರ್ಮಾನವಾಗಿದೆ.

ಅದಕ್ಕೆ ಎಲ್ಲರೂ ಬದ್ಧ.

ಆನಂದಸಿಂಗ್, ನಾಗೇಂದ್ರ‌ ಜೊತೆ ಖುದ್ದು ಮಾತಾಡಿದ್ದೇನೆ.

ಅವರು ಬಂದು ನಮ್ಮನ್ನ ಸೇರ್ತಾರೆ.


2:16 pm (IST)

ಪ್ರತಿ ಶಾಸಕರ ಜೊತೆ ಪ್ರತ್ಯೇಕ ಮಾತುಕತೆ ನಡೆಸುತ್ತಿರುವ ಕುಮಾರಸ್ವಾಮಿ

ಬಿಜೆಪಿಯಿಂದ ಕರೆ ಬಂದಿದ್ಯಾ, ಏನ್ ಹೇಳಿದ್ರು

ಯಾವುದೇ ಆಮೀಷಕ್ಕೆ ಒಳಗಾಗಬೇಡಿ

ಸರ್ಕಾರ ರಚನೆ ಬಳಿಕ ಪ್ರತಿಯೊಬ್ಬರನ್ನೂ ಗೌರವದಿಂದ ನಡೆಸಿಕೊಳ್ತೇವೆ

ಯಾವುದೇ ಸಂದರ್ಭದಲ್ಲಿ ಎಡವಬೇಡಿ ಎಂದು ಪ್ರತಿ ಶಾಸಕರಿಗೂ ಹೇಳುತ್ತಿರುವ ಹೆಚ್​ಡಿಕೆ

ಎಲ್ಲ ಶಾಸಕರ ಜೊತೆ ಮೀಟಿಂಗ್ ನಡೆಸಿದ ಬಳಿಕ ಈಗ ಪ್ರತಿ ಶಾಸಕರ ಜೊತೆ ಪ್ರತ್ಯೇಕವಾಗಿ ಮಾತನಾಡುತ್ತಿರುವ ಹೆಚ್​ಡಿಕೆ


2:12 pm (IST)

ಬಿಜೆಪಿಯ ಎಲ್ಲಾ ಶಾಸಕರು ಬೆಂಗಳೂರಲ್ಲೇ ಇರುವಂತೆ ಬಿಎಸ್‌ವೈ ತಾಕೀತು

ಕುಟುಂಬಗಳನ್ನೂ ಬೆಂಗಳೂರಿಗೆ ಕರೆಸಿಕೊಳ್ಳುವಂತೆ ಸೂಚನೆ

ಬೆಂಗಳೂರಿನಲ್ಲಿ ವಾಸ್ತವ್ಯ ಹೂಡುವಂತೆ ಶಾಸಕರಿಗೆ ಸೂಚನೆ

ಯಾವುದೇ ಕ್ಷಣದಲ್ಲಾದರೂ ಬಿಜೆಪಿ ಶಾಸಕರು ರೆಸಾರ್ಟ್‌ಗೆ ಶಿಫ್ಟ್

ಕಾಂಗ್ರೆಸ್ ಮತ್ತು ಜೆಡಿಎಸ್‌ನಂತೆ ಬಿಜೆಪಿ ರೆಸಾರ್ಟ್ ರಾಜಕಾರಣ


2:02 pm (IST)

ವಿಧಾನ ಸಭಾ ಚುನಾವಣೆ ಹಿನ್ನೆಲೆ

ಜ್ಯೋತಿಷಿ ಮೊರೆ ಹೋದ ಬಿಜೆಪಿ ಮುಖಂಡರು

ದ್ವಾರಕನಾಥ್ ಗೂರೂಜಿ ಮನೆಗೆ ಈಶ್ವರಪ್ಪ ಭೇಟಿ

ದ್ವಾರಕನಾಥ್ ಗೂರೂಜಿ ಜೊತೆ ಚರ್ಚೆ ನಡೆಸುತ್ತಿರುವ ಈಶ್ವರಪ್ಪ

ದ್ವಾರಕನಾಥ್ ಗೂರೂಜಿಯ ಗಂಗಾನಗರದ ಮನೆಗೆ ಈಶ್ವರಪ್ಪ ಭೇಟಿ

ಪ್ರಸಕ್ತ ರಾಜಕೀಯ ಬೆಳವಣೆಗೆ ಬಗ್ಗೆ ಚರ್ಚೆ ನಡೆಸುತ್ತಿರುವ ಈಶ್ವರಪ್ಪ

ಈಶ್ವರಪ್ಪ ಜೊತೆ ಮಗ ಕಾಂತೇಶ್ ಕೂಡ ಆಗಮನ


2:00 pm (IST)

ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದ ರಚನೆ‌ ವಿಚಾರ

ಹಾಗಾದರೆ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಸಮಾಧಿಯಾಗಲಿದೆ,

ಕೈ-ದಳ ದೋಸ್ತಿ ಆದ್ರೆ ಜಿಲ್ಲೆ ಕಾಂಗ್ರೆಸ್ ಕಾರ್ಯಕರ್ತರ ಕಗ್ಗೊಲೆಯಾಗಲಿದೆ,

ಸಮ್ಮಿಶ್ರ ಸರಕಾರ ರಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕೈ ಅಭ್ಯರ್ಥಿ,

ಮಂಜೇಗೌಡ ಹೊಳೆನರಸೀಪುರ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ

ತಮ್ಮ ಪರ ಪ್ರಚಾರಕ್ಕೆ ಬಾರದ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ಅಸಮಾಧಾನ

ಅವರ ಮೇಲೆ ಯಾವ ಒತ್ತಡ ಇತ್ತೋ ನನಗೆ ಗೊತ್ತಿಲ್ಲ,

ನಾನು ಹರಕೆಯೆ ಕುರಿ ಆಗಿಲ್ಲ, ಬಲಿಪಶು ಆಗಿಲ್ಲ

ರಾಜಕೀಯದಲ್ಲಿ ಏನು ಬೇಕಾದ್ರೂ ಆಗಬಹುದು

ಕುಮಾರಸ್ವಾಮಿ ಸಿಎಂ ಆಗಲ್ಲ ಅಂತ ಸಿದ್ದರಾಮಯ್ಯ ಹೇಳುತ್ತಿದ್ದರು

ಆದರೆ ಅವರೇ ಹೆಚ್ಡಿಕೆ ಯನ್ನು ಸಿಎಂ ಮಾಡಲು ಹೊರಟಿಲ್ಲವೇ ಎಂದು ಮಂಜೇಗೌಡ,

ಭಾವನಾತ್ಮಕ ವಿಷಯದಲ್ಲಿ ರೇವಣ್ಣ ಅವರಿಗೆ ಗೆಲುವಾಗಿದೆ,

270 ಗ್ರಾಮಗಳಲ್ಲಿ ದೇವಾಲಯ ಅಪೂರ್ಣ ವಾಗಿರುವುದರಿಂದ ಜನ ಅವರಿಗೆ ಓಟ್ ಹಾಕಿದ್ದಾರೆ.


1:58 pm (IST)

ಕೆಪಿಸಿಸಿ- ಪರಮೇಶ್ವರ್​ ಹೇಳಿಕೆ

ಕಾಂಗ್ರೆಸ್ ಶಾಸಕರಿಗೂ ಬೆದರಿಕೆ, ಒತ್ತಡ ಬರ್ತಾ ಇದೆ

ಹಳೆ ಟ್ರಿಕ್ಸ್ ಅನ್ನು ಬಿಜೆಪಿ ಪ್ಲೇ ಮಾಡಲು ಹೊರಟಿದೆ

ನಾವೂ ಕೂಡ ರಾಜ್ಯಪಾಲರನ್ನು ಭೇಟಿ ಮಾಡಲು ಅವಕಾಶ ಕೇಳಿದಿವಿ

ಅವಕಾಶ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ

ಇಲ್ಲದಿದ್ರೆ ಶಾಸಕರ ಪರೇಡ್ ಏನೂ ಮಾಡಲ್ಲ

ರಾಜ್ಯಪಾಲರು ಏನು ಮಾಡ್ತಾರೆ ನೋಡೋಣ ಎಂದ ಪರಮೇಶ್ವರ್


1:57 pm (IST)

ಕುದುರೆ ವ್ಯಾಪಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಕುಮ್ಮಕ್ಕು ಕೊಡ್ತಿದ್ದಾರೆ.

ಅಗತ್ಯ ಬಿದ್ರೆ ರೆಸಾರ್ಟ್ ಗೆ ಹೋಗೋ ಬಗ್ಗೆ ಯೋಚ್ನೆ ಮಾಡ್ತೇವೆ.

ಸಂಖ್ಯಾಬಲದ ಆಧಾರದ ಮೇಲೆ ಸರ್ಕಾರ‌‌ ರಚನೆಗೆ ಜೆಡಿಎಸ್ ಮತ್ತು ಕಾಂಗ್ರೆಸ್​ಗೆ ರಾಜ್ಯಪಾಲರು ಅವಕಾಶ ಕೊಡಬೇಕು.

ಒಂದು ವೇಳೆ ಬಿಜೆಪಿ ಗೆ ಅವಕಾಶ ಕೊಟ್ಟರೆ ಅದು ಸಂವಿಧಾನ‌ ವಿರೋಧ.

ಇದರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತೆ.

ಸಂವಿಧಾನ ನಿಯಮಾವಳಿಗಳಂತೆ ನಡೆದುಕೊಳ್ಳಬೇಕು.

ಸಂವಿಧಾನ ಬಾಹೀರವಾಗಿ ನಡೆದುಕೊಂಡರೆ ಹುದ್ದೆಗೆ ಗೌರವ ಇರಲ್ಲ.

ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ. ಆದರೆ ನಮ್ಮ ಶಾಸಕರು ಒಂದಾಗಿದ್ದೇವೆ.


1:55 pm (IST)

ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರ ಮೈತ್ರಿಗೆ ಮುಂದಾಗಿವೆ

ಆದರೆ ಅವರ ಪಕ್ಷದಲ್ಲೇ ಆ ಕುರಿತು ಕೆಲವರಿಗೆ ಅಸಮಾಧಾನವಿದೆ

ಹೀಗಾಗಿಯೇ ಕೆಲವು ಶಾಸಕರು ಶಾಸಕಾಂಗ ಸಭೆಗೆ ಹಾಜರಾಗಿಲ್ಲ

ನಾವು ಯಾರನ್ನೂ ಸೆಳೆಯುವ ಅಗತ್ಯವಿಲ್ಲ

ಅಸಮಾಧಾನ ಇದ್ದವರು ನಮ್ಮ ಕಡೆ ಬರ್ತಾರೆ

ಕುದುರೆ ವ್ಯಾಪಾರ ಮಾಡುವುದು ಬಿಜೆಪಿಯ ಜಾಯಮಾನವಲ್ಲ

ಯಾರಿಗೂ ನೂರು ಕೋಟಿಯ ಆಫರ್ ಕೂಡ ನೀಡ್ತಿಲ್ಲ

ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ನಾವೇ ಅಧಿಕಾರ ಹಿಡಿಯುತ್ತೇವೆ


1:52 pm (IST)

ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆ ಅಂತ್ಯ

ಶಾಸಕಾಂಗ ಸಭೆ ಮುಗಿಯುತ್ತಿದ್ದಂತೆ ಮನೆಗೆ ಹೊರಟ ಬಿಎಸ್ ವೈ

ಬಿಜೆಪಿ ಎಲ್ಲಾ ಶಾಸಕರ ಕುಟುಂಬಗಳು ಬೆಂಗಳೂರಿಗೆ ಶಿಪ್ಟ್

ಕುಟುಂಬಗಳನ್ನ ಬೆಂಗಳೂರಿಗೆ ಕರೆಸಿಕೊಳ್ಳುವಂತೆ ಸೂಚನೆ

ಬೆಂಗಳೂರಿನಲ್ಲಿ ವಾಸ್ತವ್ಯ ಹೂಡುವಂತೆ ಸೂಚನೆ

ಯಾವುದೇ ಕ್ಷಣದಲ್ಲಾದ್ರು ಬಿಜೆಪಿ ಶಾಸಕರು ರೆಸಾರ್ಟ್ ಗೆ ಶಿಫ್ಟ್

ಕಾಂಗ್ರೆಸ್ ಮತ್ತು ಜೆ ಡಿಎಸ್ ನಂತೆ ಬಿಜೆಪಿ ರೆಸಾರ್ಟ್ ರಾಜಕಾರಣ


1:39 pm (IST)

ಮೊದಲ ಶಾಸಕಾಂಗ ಸಭೆಯಲ್ಲಿ ಅಸಮಾಧಾನ ಸ್ಪೋಟ

ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ ಬಂದಾಗ ಭಾರೀ ಅಸಮಾಧಾನ ವ್ಯಕ್ತಪಡಿಸಿದ ಕೆಲ ಶಾಸಕರು

ಟಿಕೆಟ್ ಹಂಚಿಕೆಯಲ್ಲಾದ ಅವಗಡವೇ ಈ ಸೋಲಿಗೆ ಕಾರಣ

ಕೆಲ ಕಡೆ ಗೆಲ್ಲುವ ಅಭ್ಯರ್ಥಿಗಳಿದ್ದರೂ ಅಂತವರಿಗೆ ಟಿಕೆಟ್ ನೀಡಲಿಲ್ಲ

ಕೇವಲ ಪ್ರಭಾವಿ ನಾಯಕರ ಹಿಂಬಾಲಕರಾಗಿದ್ದಕ್ಕೆ ಟಿಕೆಟ್ ನೀಡಿದ್ದು ದೊಡ್ಡ ತಪ್ಪು

ಈ ತಪ್ಪಿನಿಂದಾಗಿಯೇ ನಾವು ಈ ಪರಿಸ್ಥಿತಿಗೆ ಬಂದು ನಿಂತಿದ್ದೇವೆ ಎಂದು ಅಸಮಾಧಾನ ಹೊರಹಾಕಿದ ಬಹುತೇಕ ಶಾಸಕರು

ಸಿಎಂ ಕಣ್ಣೀರು ಹಾಕಿ ಮಾತನಾಡಿದ ವೇಳೆಯೇ ಈ ಬಗ್ಗೆ ಅಸಮಾಧಾನ ಕೇಳಿ ಬಂದಿದೆ


1:37 pm (IST)

ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಆಗಿ ಸ್ಪರ್ಧಿಸಿರುವ ವೆಂಕಟ್

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಮಾಡೋಕೆ ಒಪ್ಪಿಕೊಂಡಿದ್ದಾರೆ

ರಾಜ್ಯಪಾಲರು ಬಹು ಮತ ಸಾಬೀತು ಪಡಿಸ್ತಿವಿ ಅಂದವರಿಗೆ ಅವಕಾಶ ಕೊಡಬೇಕು

ಪಕ್ಷ ನೋಡಿ ಎಂಎಲ್ ಎಗಳನ್ನ ಎಲೆಕ್ಟ್ ಮಾಡಿದ್ದಾರೆ

ರೆಸಾರ್ಟ್ ರಾಜಕೀಯದ ಬಗ್ಗೆ ಹುಚ್ಚ ವೆಂಕಟ್ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಪಕ್ಷಾಂತರ ಆಗುವ  ಶಾಸಕರ ಬಗ್ಗೆ ಹುಚ್ಚ ವೆಂಕಟ್ ಬೇಸರ

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಬಗ್ಗೆ ಹುಚ್ಚ ವೆಂಕಟ್ ಅಭಿಪ್ರಾಯ


1:35 pm (IST)

ಒಳ್ಳೆಯ ಕೆಲಸ ಮಾಡಿದರೂ ಜನ ಗೆಲ್ಲಿಸಿಲ್ಲ ಎಂದು ಸಿಎಂ ಕಣ್ಣೀರು ಹಾಕಿದರು ಅನ್ಮೋ ವಿಚಾರ

ಸಭೆಯಲ್ಲಿ ಸಿದ್ದರಾಮಯ್ಯ ಕಣ್ಣಿರ್ ಹಾಕಿಲ್ಲ. ಅಂತ ಸಮಜಾಯಿಷಿ ನೀಡಿದ ರಾಮಲಿಂಗಾರೆಡ್ಡಿ

ನಾವು ಒಳ್ಳೇ ಆಡಳಿತ ನೀಡಿದ್ದು ನಿಜ

ಬಿಜೆಪಿ ಆಡಳಿತದಲ್ಲಿ ಮೂರು ಸಿಎಂ ಆಗಿದ್ದರು

ಪ್ರಣಾಳಿಕೆಯಲ್ಲಿ ಇರೋದನ್ನ ಜಾರಿಗೆ ಮಾಡಿರಲಿಲ್ಲ

ಅವರ ಕಾಲದಲ್ಲಿ 14-15 ಜನ ಜೈಲಿಗೆ ಹೋಗಿರೋದು ನಿಜ ತಾನೇ

ನಾವೆಲ್ಲಾ ಒಟ್ಟಾಗಿಯೇ ಇರ್ತೇವೆ

ಹೆಚ್‌ಡಿಕೆ ಸಿಎಂ ಆಗಲು ನಾವು ಸಹಿ ಮಾಡಿಕೊಟ್ಟಿದ್ದೀವಿ

ರಾಜ್ಯಪಾಲರು ಯಾವ ತೀರ್ಮಾನ ಕೈಗೊಳ್ತಾರೆ ಅನ್ನೋದನ್ನ ಕಾದು ನೋಡ್ತೀವಿ

ರಾಜ್ಯಪಾಲರು ನಮಗೆ ಅವಕಾಶ ನೀಡಿಲ್ಲ ಅಂದ್ರೆ ಮುಂದಿನ ತೀರ್ಮಾನ

ಸಿಂಗಲ್ ಲಾರ್ಜೆಸ್ಟ್ ಪಾರ್ಟಿಗೆ ಅವಕಾಶ ನೀಡೋದಾದ್ರೆ, ಗೋವಾ, ಮಣಿಪುರದಲ್ಲಿ ಯಾಕ್ ನೀಡಲಿಲ್ಲ

ಮೋದಿ, ಅಮಿತ್ ಶಾ ನಿರ್ಧಾರಂತೆ ನಡೆದುಕೊಳ್ಳೋಕೆ ಆಗಲ್ಲ

ರಾಜ್ಯಪಾಲರು ಅವಕಾಶ ನೀಡಲಿಲ್ಲ ಅಂದ್ರೆ ಕಾನೂನು ಹಾಗೂ ರಾಜಕೀಯ ಹೋರಾಟ ಮಾಡುತ್ತೇವೆ

ಶಾಸಕಾಂಗ ಪಕ್ಷದ ನಾಯಕರ ಬಗ್ಗೆ ಚರ್ಚೆಯಾಗಿಲ್ಲ

ಕೇವಲ ಸರ್ಕಾರ‌ ರಚನೆ ಕುರಿತು ಮಾತ್ರ ಚರ್ಚೆ ಮಾಡಿದ್ದೇವೆ

 ಕುದುರೆ ವ್ಯಾಪಾರ ಮಾಡೋದು ಬಿಜೆಪಿಗೆ ಹೊಸದಲ್ಲ

2008 ರಲ್ಲಿ ಆಪರೇಷನ್ ಕಮಲ ಮಾಡಿದರು

ಈಗಲೂ ಅದೇ ರೀತಿ ಮಾಡಲು ಮುಂದಾಗಿದ್ದಾರೆ

ಅಧಿಕಾರಕ್ಕಾಗಿ ಹೇಸಿಗೆ ಕೆಲಸಕ್ಕೂ ಬಿಜೆಪಿಯವರು ಮುಂದಾಗಿದ್ದಾರೆ

ನಮ್ಮ  ಐದಾರು ಜನ ಶಾಸಕರಿಗೆ ಕಾಲ್ ಮಾಡಿದ್ದಾರೆ

ಬಿಜೆಪಿ ವಿರುದ್ಧ ರಾಮಲಿಂಗಾ ರೆಡ್ಡಿ ವಾಗ್ದಾಳಿ


1:34 pm (IST)

ಶಾಂಗ್ರೀಲಾಗೆ ಬಂದ ಪರಮೇಶ್ವರ್

ಸಿಎಂ ಇಬ್ರಾಹಿಂ ಹಾಗೂ ಪರಮೇಶ್ವರ್ ಜೊತೆ ಮಾತುಕತೆ ನಡೆಸಲಿರುವ ಕುಮಾರಸ್ವಾಮಿ

ಪರಮೇಶ್ವರ್,  ದಿನೇಶ್ ಗುಂಡೂರಾವ್,  ಇಬ್ರಾಹಿಂ. ಡಿ ಕೆ ಯಿಂದ ಹೆಚ್ ಡಿ ಕೆ ಭೇಟಿ..

ಹೋಟಲ್ ಶಾಂಗ್ರೀಲದಲ್ಲಿ ಭೇಟಿ

ಬಳಿಕ ರಾಜಭವನಕ್ಕೆ ತೆರಳುವ ಸಾಧ್ಯತೆ

ಜೆಡಿಎಸ್ ನ ಎಲ್ಲ ಶಾಸಕರನ್ನೂ ದೇವನಹಳ್ಳಿ ಬಳಿಯ ರೆಸಾರ್ಟ್ ಗೆ ಶಿಫ್ಟ್ ಮಾಡುವ ಸಾಧ್ಯತೆ