LIVE NOW

(Live)ಕರ್ನಾಟಕ ಚುನಾವಣೆ 2018: ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಘೋಷಣೆ ಬೆನ್ನಲ್ಲೇ ಬಂಡಾಯದ ಬಿಸಿ

Kannada.news18.com | April 16, 2018, 9:28 PM IST
facebook Twitter google Linkedin
Last Updated April 16, 2018
auto-refresh

Highlights

ನ್ಯೂಸ್ 18 ಕನ್ನಡ

ಬೆಂಗಳೂರು(ಎ.16): ಈ ಬಾರಿಯ ಕರ್ನಾಟಕ ಚುನಾವಣೆ ಈಗಾಗಲೇ ಭಾರೀ ಕುತೂಹಲ ಕೆರಳಿಸಿದ್ದು, ಇಡೀ ದೇಶದ ಚಿತ್ತ ಕರುನಾಡಿನತ್ತ ಹೊರಳುವಂತೆ ಮಾಡಿದೆ. ಪಕ್ಷಗಳ ರಾಷ್ಟ್ರೀಯ ಮುಖಂಡರುಗಳು ಕೂಡಾ ಇಲ್ಲಿಗಾಗಮಿಸಿ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದರಿಂದ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಆದರೆ ಮತದಾರ ಯಾರ ಕೈ ಹಿಡಿಯುತ್ತಾನೋ ಅವರೇ ಆಡಳಿತ ನಡೆಸುತ್ತಾನೆ. ಸದ್ಯ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದಕ್ಕೆ ಸಂಬಂಧಿಸಿದ ಇಂದಿನ ಎಲ್ಲಾ ಬೆಳವಣಿಗೆಗಳ ಕ್ಷಣಕ್ಷಣದ ಮಾಹಿತಿ ನಿಮ್ಮ ನ್ಯೂಸ್ 18 ಕನ್ನಡದ ಲೈವ್ ಬ್ಲಾಗ್​ನಲ್ಲಿ

 
7:29 pm (IST)

ಐದಾರು ಕೋಟಿ ಖರ್ಚು ಮಾಡಿದ್ದೇನೆ: ಕೊತ್ತೂರು ಹನುಮಂತರಾಯಪ್ಪ ಅಳಲು

ಪಾವಗಡ ಟಿಕೆಟ್ ಆಕಾಂಕ್ಷಿಯಾಗಿದ್ದ ಕೊತ್ತೂರು ಹನುಮಂತರಾಯಪ್ಪ‌ ಸಹ . ಮಾಜಿ ಸಂಸದ ಜಿ.ಎಸ್. ಬಸವರಾಜ್ ಹಾಗೂ ಪಾವಗಡ ಸ್ಥಳೀಯ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ನಾನು ಈಗಾಗಲೇ ಐದಾರು ಕೋಟಿ ರೂ.‌ಖರ್ಚು ಮಾಡಿದ್ದೇನೆ. ಸ್ಥಳೀಯ ಮುಖಂಡರು ಪಕ್ಷಕ್ಕಾಗಿ ದುಡಿಯುತ್ತಾರೆ ಎಂದು ಹಣ ಕೊಟ್ಟಿದ್ದೀನಿ. ಆದರೆ, ಈಗ ಬಲರಾಮ್​ರನ್ನ ಕಾಂಗ್ರೆಸ್​ನಿಂದ ತಂದು ಟಿಕೆಟ್ ಕೊಡಿಸಲು ಅಣಿಯಾಗಿದ್ದಾರೆ. ಹಾಗಾದರೆ, ನಾನು ಹಣ ಖರ್ಚು ಮಾಡಿದ್ದು ಯಾಕೆ?

ಹಣ ಖರ್ಚು ಮಾಡಿದ್ದಕ್ಕೆ ನನ್ನ ಬಳಿ ಎಲ್ಲ ದಾಖಲೆಗಳಿವೆ. ಮಾಜಿ ಸಂಸದ ಜಿ.ಎಸ್.‌ಬಸವರಾಜ್ ಹಾಗೂ ಸ್ಥಳೀಯ ಕೆಲ ಮುಖಂಡರು‌ ನನಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಹೈಕಮಾಂಡ್ ಹಾಗೂ ಯಡಿಯೂರಪ್ಪನವರ ಮೇಲೆ ನನಗೆ ಈಗಲೂ ವಿಶ್ವಾಸವಿದೆ. ಆದರೆ,  ಟಿಕೆಟ್ ನೀಡದೆ ಹೋದರೆ ನಾನು ಮುಂದೆ ಏನು ಮಾಡಬೇಕು‌ ನಿರ್ಧಾರ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

7:02 pm (IST)

ಬಿಜೆಪಿಗೆ ಬಂಡಾಯದ ಬಿಸಿ: ಟಿಕೆಟ್ ಸಿಗದ ಹಿನ್ನೆಲೆ ಕಾರ್ಯಕರ್ತರ ಜೊತೆ ಪುಟ್ಟಸ್ವಾಮಿ ಗೌಪ್ಯ ಸಭೆ

ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಬೆನ್ನಲ್ಲೇ  ಅಸಮಾಧಾನ ಭುಗಿಲೆದ್ದಿದೆ. ಟಿಕೆಟ್ ಸಿಗದ ಆಕಾಂಕ್ಷಿಗಳು ಪಕ್ಷದ ವಿರುದ್ಧ ಸಿಡಿದೆದಿದ್ದಾರೆ. ಅರಕಲಗೂಡು ಕ್ಷೇತ್ರಕ್ಕೆ ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿಗೆ ಟಿಕೇಟ್ ಸಿಗದ ಹಿನ್ನೆಲೆ ಅರಕಲಗೂಡಿನಲ್ಲಿ ಅಸಮಾಧಾನ ಭುಗಿಲೆದ್ದಿದೆ. ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಯೋಗಾರಮೇಶ್​ಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನ ಜೋರಾಗಿದೆ.

ಹೀಗಾಗಿ, ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿ ಕಾರ್ಯಕರ್ತರ ಜೊತೆ ಗೌಪ್ಯ ಸಭೆ ನಡೆಸುತ್ತಿದ್ದಾರೆ. ನಿವೃತ್ತ ಅರಕಲಗೂಡು ಕ್ಷೇತ್ರದಲ್ಲಿ ಒಕ್ಕಲಿಗರನ್ನು ಬಿಟ್ಟರೆ ಕುರುಬ ಮತಗಳೇ ನಿರ್ಣಾಯಕ. 60 ಸಾವಿರ ಕುರುಬ ಮತಗಳನ್ನೊಂದಿರುವ ಕ್ಷೇತ್ರವಾಗಿದ್ದು, ಕುರುಬ ಸಮಾಜದಿಂದಲೂ ಅರಕಲಗೂಡಿನಲ್ಲಿ ಸಭೆ ನಡೆಸಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.

5:41 pm (IST)

ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ ಹಿನ್ನಲೆ: ಭಾಲ್ಕಿ ಕ್ಷೇತ್ರದಲ್ಲಿ ಭುಗಿಲೇದ್ದ ಭಿನ್ನಮತ

ಮಾಜಿ ಶಾಸಕ ಪ್ರಕಾಶ್ ಖಂಡ್ರೆಗೆ ಟೀಕೇಟ್ ಕೈತಪ್ಪಿದ ಹಿನ್ನಲೆ 

ಸಿದ್ದರಾಮ್ ಡಿಕೆ ಗೆ ಟೀಕೇಟ್ ನೀಡಿದ್ದಕ್ಕೆ ಆಕ್ರೋಶ

ಮಾಜಿ ಶಾಸಕ ಪ್ರಕಾಶ್ ಖಂಡ್ರೇ ಬೆಂಬಲಿಗರಿಂದ ಪ್ರತಿಭಟನೆ

ರಸ್ತೆ ಮದ್ಯೆ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ

ಮೂಲ ಬಿಜೆಪಿಯವರನ್ನ ಕಡೆಗಣಿಸಿದ್ದಕ್ಕೆ ಆಕ್ರೋಶ

ಪ್ರಕಾಶ್ ಖಂಡ್ರೆ ಪಕ್ಷೇತರ ಅಧವಾ ಜೆಡಿಎಸ್ ನಿಂದ ಸ್ಪರ್ದೆ ಸಾದ್ಯತೆ..?

ಬೀದರ್ ಉತ್ತರ ಕ್ಷೇತ್ರದಲ್ಲಿ ಸಂಭ್ರಮಾಚಾರಣೆ

ಮಾಜಿ ಸಚಿವ ಪುತ್ರನಿಗೆ ಟೀಕೇಟ್ ನೀಡಿದ್ದ ಕ್ಕೆ ಸಂಭ್ರಮಾಚಾರಣೆ

ಬೀದರ್ ಉತ್ತರ ಕ್ಷೇತ್ರದಲ್ಲಿ ಉಮಾಕಾಂತ್ ನಾಗಮಾರಪಳ್ಳಿಗೆ ಕಣಕ್ಕಿಳಿಸಿದ ಬಿಜೆಪಿ

ಮಾಜಿ ಸಚಿವ ದಿ.ಗುರುಪಾದಪ್ಪ ನಾಗಮಾರಪಳ್ಳಿ ಪುತ್ರ ಸೂರ್ಯಕಾಂತ್ 

ಅಂಬೇಡ್ಕರ್ ವೃತ್ತದ ಬಳಿ ಪಟಾಕಿ ಸಿಡಿಸಿ ಸಂಬ್ರಮಾಚಾರಣೆ

ಸೂರ್ಯಕಾಂತ್ ಮಾಗಮಾರಪಳ್ಳಿ ಬೆಂಬಲಿಗರಿಂದ ಸಂಭ್ರಮಾಚಾರಣೆ

Load More