ಶಾಲಾ ಆರಂಭದ ಕುರಿತು ಜ.15ರ ನಂತರ ನಿರ್ಧಾರ; ಶಿಕ್ಷಣ ಸಚಿವ ಸುರೇಶ್ ಕುಮಾರ್

ಯಾವೆಲ್ಲ ಪಠ್ಯಗಳನ್ನು ಕಡಿತ ಮಾಡಬೇಕೆಂದು ಈಗಾಗಲೇ  ತೀರ್ಮಾನ ಮಾಡಿದ್ದೇವೆ.  ಕನಿಷ್ಠ ಶೇ. 30ರಷ್ಟು ಪಠ್ಯ ಕಡಿತವಾಗಲಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಸುರೇಶ್ ಕುಮಾರ್

ಸುರೇಶ್ ಕುಮಾರ್

  • Share this:
ಚಾಮರಾಜನಗರ (ಜ. 12): ಒಂದರಿಂದ ಒಂಭತ್ತನೇ ತರಗತಿ ಹಾಗೂ ಮೊದಲ ಪಿಯುಸಿ ತರಗತಿಯವರೆಗೆ ಶಾಲೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಜನವರಿ 15ರ ನಂತರ ತಜ್ಞರ ಸಮಿತಿ ಜೊತೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಚಾಮರಾಜನಗರ ತಾಲೂಕಿನ ನಲ್ಲೂರು, ನಾಗವಳ್ಳಿ,  ಚಂದಕವಾಡಿ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾಗಮ ಹಾಗೂ ತರಗತಿಗಳು ನಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.

ವಿದ್ಯಾರ್ಥಿಗಳ ಅನಿಸಿಕೆ ಹಾಗೂ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮಾತನಾಡಿದ ಅವರು, ಮೊದಲು 8, 9 ಹಾಗೂ ಪ್ರಥಮ ಪಿಯುಸಿ ತರಗತಿಗಳಿಗೆ ಶಾಲಾ-ಕಾಲೇಜು ಆರಂಭಿಸಬೇಕೆಂಬ ಅಭಿಪ್ರಾಯ ಕೇಳಿ ಬಂದಿದೆ. ತರಗತಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಕೊಠಡಿಗಳ ಲಭ್ಯತೆ ಹೇಗಿದೆ ಎಂಬುದನ್ನು ನೋಡಬೇಕು. ಇದೆಲ್ಲವನ್ನೂ ಮುಂದಿಟ್ಟುಕೊಂಡು ಜನವರಿ 15 ರ ನಂತರ ತಜ್ಞರ ಸಮಿತಿ ಜೊತೆ ಸಮಾಲೋಚನೆ ನಡೆಸಿ ಅವರ ಅಭಿಪ್ರಾಯದಂತೆ ಮುಂದಿನ ಕ್ರಮ ವಹಿಸಲಾಗುವುದು ಎಂದರು.

ವಸತಿ ಶಾಲೆಗಳನ್ನು ಆರಂಭಿಸಲು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಯಾರಾಗಿವೆ. ಕೆಲವು ಕಡೆ 10ನೇ ತರಗತಿ ಆರಂಭಿಸಲಾಗಿದೆ ಉಳಿದ ಕಡೆ ನಿಯಮಗಳನ್ನು ಪಾಲಿಸಿಕೊಂಡು, ವಸತಿ ಶಾಲೆಗೆ ಬರುವ ಮಕ್ಕಳಗೆ ಮೊದಲ   ಕೋವಿಡ್ ಟೆಸ್ಟ್ ಮಾಡಿಸಿ,  ಮಕ್ಕಳ ಸುರಕ್ಷತೆಯ ಬಗ್ಗೆ ಗಮನ ನೀಡಿ ವಸತಿ ಶಾಲೆಗಳನ್ನು ಆರಂಭಿಸಬಹುದಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಇದನ್ನೂ ಓದಿ: ಭರವಸೆಯಂತೆ ಕಾಂಗ್ರೆಸ್​ನಿಂದ ಬಂದವರನ್ನು ಸಚಿವರನ್ನಾಗಿ ಮಾಡಿದ್ದೇವೆ; ಸಚಿವ ಈಶ್ವರಪ್ಪ ಹೇಳಿಕೆ

ಖಾಸಗಿ ಶಾಲೆಗಳ ಶುಲ್ಕದ ವಿಚಾರದಲ್ಲಿ ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕೆಂಬ ಒತ್ತಾಯವಿದೆ.  ಟ್ಯೂಷನ್ ಫೀಸ್​ನಲ್ಲಿ  ಶೇ. 70ರಷ್ಟು ಮಾತ್ರ  ತೆಗೆದುಕೊಳ್ಳುವುದಾಗಿ ಈಗಾಗಲೇ ಎರಡು ಖಾಸಗಿ ಶಾಲಾ ಒಕ್ಕೂಟಗಳು ಮುಂದೆ ಬಂದಿವೆ. ಈ ವಿಚಾರವನ್ನು ಪೋಷಕರ ಗಮನಕ್ಕೂ ತಂದಿವೆ. ಕೋವಿಡ್  ಪರಿಣಾಮ  ಒಂದು ಕಡೆ ಪೋಷಕರು ಜರ್ಝಿರಿತರಾಗಿದ್ದಾರೆ. ಇನ್ನೊಂದು ಕಡೆ  ಖಾಸಗಿ ಶಾಲಾ ಶಿಕ್ಷಕರಿಗೆ ಸಂಬಳವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಈ ಎರಡೂ  ವಿಚಾರವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆ ಆಯುಕ್ತರು ತಮ್ಮ ಮಟ್ಟದಲ್ಲಿ ಪೋಷಕರ ಸಂಘಟನೆಗಳ ಪ್ರಮುಖರು, ಹಾಗು ಖಾಸಗಿ ಶಾಲೆ ಸಂಘಟನೆಗಳ ಪ್ರಮುಕಗತರ ಸಭೆ ಕರೆದು ಎಲ್ಲರಿಗು ಒಪ್ಪುವ ಒಂದು ಸೂತ್ರ ರಚಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ಅವರು ಹೇಳಿದರು.

ಯಾವೆಲ್ಲ ಪಠ್ಯಗಳನ್ನು ಕಡಿತ ಮಾಡಬೇಕೆಂದು ಈಗಾಗಲೇ  ತೀರ್ಮಾನ ಮಾಡಿದ್ದೇವೆ.  ಕನಿಷ್ಠ ಶೇ. 30ರಷ್ಟು ಪಠ್ಯ ಕಡಿತವಾಗಲಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ.  ಯಾವ ಯಾವ ಪಠ್ಯ ಎಷ್ಟು ಕಡಿತವಾಗಲಿದೆ ಎಂಬುದರ ಬಗ್ಗೆ ಇಂದು ಸಂಜೆ ಅಥವಾ ನಾಳೆ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಪ್ರಕಟಿಸಲಿದೆ ಎಂದು ಸಚಿವರು ತಿಳಿಸಿದರು.

ಈಗಾಗಲೇ ರಾಜ್ಯದ ವಿವಿದೆಡೆ 160 ರಿಂದ 170 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರಿಯಲು ಪ್ರಯತ್ನಿಸಿದ್ದೇನೆ.  ತರಗತಿಗಳ ಆರಂಭದ ಬಗ್ಗೆ ಅವರ ಅಭಿಪ್ರಾಯ ಕೇಳಿದ್ದೇನೆ. ಪರೀಕ್ಷೆಗಳಿಗೆ ಸಾಕಷ್ಟು ಸಮಯ ನೀಡಲಾಗುವುದು ಹಾಗೂ ಯಾವುದೇ ಒತ್ತಡಕ್ಕೆ ಒಳಗಾಗಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದೇನೆ ಎಂದ ಅವರು ವಿದ್ಯಾಗಮ ನಿಲ್ಲಿಸಬಾರದು ಎಂಬ ಅಭಿಪ್ರಾಯ ಕೇಳಿಬಂದಿದೆ ಎಂದರು

(ವರದಿ: ಎಸ್.ಎಂ.ನಂದೀಶ್ )
Published by:Sushma Chakre
First published: