Karnataka Text Book: ವಿಪಕ್ಷಗಳಿಗೆ ಸಂಗೊಳ್ಳಿ ರಾಯಣ್ಣನ ಪಾಠ ಬೇಡ, ಟಿಪ್ಪು ಬಗ್ಗೆ ಐದು ಪುಟ ಪಾಠ ಬೇಕು: ಬಿ.ಸಿ.ನಾಗೇಶ್ ವ್ಯಂಗ್ಯ

ಅವರ ಪಠ್ಯ ಕೈಬಿಟ್ರು ಅನ್ನೋರು ಇವತ್ತು ಅವರನ್ನು ಬಿಟ್ರು, ಇವರನ್ನು ಬಿಟ್ರು ಎಂದು ಹೇಳ್ತಿದಾರೆ. ಆದರೆ ಬರಗೂರು ರಾಮಚಂದ್ರಪ್ಪ  ಅವರಿದ್ದಾಗ ಯಾಕೆ ಪ್ರಶ್ನೆ ಮಾಡಲಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರಶ್ನಿಸಿದ್ದಾರೆ. 

ಬಿ.ಸಿ.ನಾಗೇಶ್​

ಬಿ.ಸಿ.ನಾಗೇಶ್​

 • Share this:
  ಬೆಂಗಳೂರು: ವಿಪಕ್ಷ ಅಧಿಕಾರದಲ್ಲಿದ್ದಾಗ ಒಂದು ಪೇಜ್ ಇದ್ದ ಟಿಪ್ಪು ಪಠ್ಯ ಆರು ಪೇಜ್ ಮಾಡಿದ್ರು. ಒಡೆಯರ್ ಪಠ್ಯ ಯಾಕೆ ಕಡಿತ ಮಾಡಿದ್ದು? ಆವಾಗ ಏಕೆ ಯಾರೂ ಪ್ರಶ್ನೆ ಮಾಡಲಿಲ್ಲ. ಮತ ಬ್ಯಾಂಕ್ ಗಾಗಿ ಹೀಗೆಲ್ಲ ಮಾಡಿದ್ರಾ? ಬರಗೂರು ರಾಮಚಂದ್ರಪ್ಪ (Baraguru Ramachandrappa) ತುಂಬಾ ಒಳ್ಳೆಯವರು. ಅವರಿಗೆ ಒತ್ತಡ ಹೇರಿ ಹೀಗೆಲ್ಲ ಮಾಡಿದ್ರಾ? ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಪ್ರಶ್ನಿಸಿದ್ದಾರೆ. ಇದರ ಜೊತೆಗೆ ಈಗಾಗಲೆ ತೀವ್ರ ವಿವಾದ ಎಬ್ಬಿಸಿರುವ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಇನ್ನಷ್ಟು ದೊಡ್ಡದಾಗಿ ಲಕ್ಷಣ ಗೋಚರಿಸುತ್ತಿದೆ. ರೋಹಿತ್ ಚಕ್ರತೀರ್ಥ (Rohith Chakrathirtha) ನೇತೃತ್ವದ ಸಮಿತಿಯು ಇದೇ ಸಮಿತಿಗೆ ಪಿಯು ಪಠ್ಯ ಪುಸ್ತಕ ಪರಿಷ್ಕರಣೆಯ (2nd PU Text Book Revise) ಜವಾಬ್ದಾರಿಯನ್ನೂ ವಹಿಸಲು  ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

  ನಾರಾಯಣಗುರು, ಭಗತ್ ಸಿಂಗ್ ಇವರ ಜೊತೆ ಕ್ರಾಂತಿಕಾರಿಗಳಾದ ರಾಜದೇವ್, ಸುಖದೇವ್ ಅವರ ಪಠ್ಯವೂ ಅಳವಡಿಸಿದ್ದೇವೆ. ಕ್ರಾಂತಿಕಾರಿಗಳ ಬಗ್ಗೆ ವಿಪಕ್ಷ ನಾಯಕರು ಮಾತಾಡ್ತಿರೋದು ಸಂತೋಷ. ಹೀಗೆ ಅವರ ಬಗ್ಗೆ ಮಾತಾಡಲಿ ಎಂದು ಹೇಳಲು ಬಯಸ್ತೇನೆ ಎಂದು ಅವರು ಟೀಕಿಸಿದ್ದಾರೆ.

  ಬರಗೂರು ರಾಮಚಂದ್ರಪ್ಪ  ಅವರಿದ್ದಾಗ ಯಾಕೆ ಪ್ರಶ್ನೆ ಮಾಡಲಿಲ್ಲ?
  ಕುವೆಂಪು ಬಗ್ಗೆ ಒಂದೇ ಒಂದು ಲೈನ್ ಬದಲಾವಣೆ ಮಾಡಿದ್ದೆವೆಯೇ? ಜಾತಿ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅವರ ಪಠ್ಯ ಕೈಬಿಟ್ರು ಅನ್ನೋರು ಇವತ್ತು ಅವರನ್ನು ಬಿಟ್ರು, ಇವರನ್ನು ಬಿಟ್ರು ಎಂದು ಹೇಳ್ತಿದಾರೆ. ಆದರೆ ಬರಗೂರು ರಾಮಚಂದ್ರಪ್ಪ  ಅವರಿದ್ದಾಗ ಯಾಕೆ ಪ್ರಶ್ನೆ ಮಾಡಲಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (BC Nagesh) ಪ್ರಶ್ನಿಸಿದ್ದಾರೆ.

  ವಿವಾದ ಇಲ್ಲದೇ ಹೊಸ ಪಠ್ಯ ಪುಸ್ತಕ ರಚನೆ
  ಶಿಕ್ಷಣ ಸಚಿವ ಬಿ.ಸಿ.ನಾಗೇಶ್  ಪಿಯು ಪಠ್ಯ ಪರಿಷ್ಕರಣೆ ಕುರಿತು ಬರೆದಿದ್ದ ಪತ್ರಕ್ಕೆ ಸಂಬಂಧಿಸಿ  ಶಿಕ್ಷಣ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಮರುಪತ್ರ ಬರೆದಿರುವ ಪಿಯು ಬೋರ್ಡ್ ನಿರ್ದೇಶಕರು ವಿವಾದ ಇಲ್ಲದೇ ಹೊಸ ಪಠ್ಯ ಪುಸ್ತಕ ರಚಿಸುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

  ಮೊಘಲರು ಆಕ್ರಮಣ ಮಾಡಿದ್ದು ಏಕೆ? ಅಂತ ಹೇಳಲೇ ಇಲ್ಲ
  ಮೊಘಲರು ಆಡಳಿತ ಮಾಡಿರುವುದು ಹೇಳಿದ್ದೀರಿ? ಅವರು ಆಕ್ರಮ‌ಣ ಮಾಡಿದ್ದು ಯಾಕೆ ಹಾಕಿಲ್ಲ. ಇವರೆಲ್ಲಿಂದ‌ ಬಂದವರು ಎನ್ನೋ ಮಾಹಿತಿ ಇಲ್ಲ. ಮೊಘಲರ,‌ ಬ್ರಿಟೀಷರ ವಿರುದ್ದ ಹೋರಾಡಿದ ನಾಯಕರ‌ ಬಗ್ಗೆ ಪಠ್ಯ ಅಳವಡಿಸಿದ್ದೇವೆ. ಕಾಶ್ಮೀರದ ಮಹಾರಾಜ, ಅಸ್ಸಾಂ,‌ ತಮಿಳುನಾಡು ರಾಜರ ಪಠ್ಯ ಇದೆ  ಎಂದು ಹೊಸ ಪಠ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

  ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ಮಿಸ್ಸಿಂಗ್
  10ನೇ ತರಗತಿ ಪುಸ್ತಕದಲ್ಲಿ ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ಬಗ್ಗೆ ಒಂದೇ ಒಂದು ಲೈನ್ ಇಲ್ಲ. ಆದರೆ ಟಿಪ್ಪು ಬಗ್ಗೆ ಐದು ಪುಟ ಪ್ರಕಟಿಸಿದ್ದಾರೆ. ಇದ್ಯಾಕೆ ಹೀಗೆ? ಎಂದು ಪ್ರಶ್ನಿಸಿದ ಅವರು ಹಿಂದಿನ ಸರ್ಕಾರ ಮಕ್ಕಳ ತಲೆಯಲ್ಲಿ ಹಿಂದು ಮುಸ್ಲಿಂ ವರ್ಗ ಬೇಧ ಮಾಡಿದೆ. ಹಿಂದೂ ನಾಯಕರು ಇದ್ದರೆ ತೆಗೆದು ಹಾಕುವ ಕೆಲಸ ಮಾಡಿದ್ದಾರೆ. ಹಿಂದೂ ಮಹಾಸಾಗರ ಎಂದರೂ ಇವರು ಸಹಿಸಲ್ಲ. ಇಂಡಿಯನ್ ಓಷನ್ ಎಂದೇ ಹೇಳಲಾಗಿದೆ. ಮಕ್ಕಳ‌ ಕತೆಗಳನ್ನು ತೆಗೆದು ಹಾಕಿದ್ರು?

  ಕೆಂಪೇಗೌಡರಿಲ್ಲದೇ ಬೆಂಗಳೂರಿನ ಚರಿತ್ರೆ ಹೇಳೋದು ಹೇಗೆ?
  ಕೆಂಪೇಗೌಡರ ಪಠ್ಯವನ್ನೇ ತೆಗೆಯಲಾಗಿತ್ತು. ಕೆಂಪೇಗೌಡರ ಕುರಿತು ಒಂದೇ ಒಂದು ಲೈನ್ ಇಲ್ಲ. ಬೆಂಗಳೂರು ಪರಿಚಯ ಮಾಡಬೇಕೆಂದ್ರೆ ಕೆಂಪೇಗೌಡ ಇತಿಹಾಸ ಅವಶ್ಯವಿಲ್ಲವೇ? ಎಂದು ಬಳಸಿದ ಅವರು ಮಕ್ಕಳ ಕಥೆಗಳನ್ನು ಸಹ ಪಠ್ಯದಿಂದ ತೆಗೆಯಲಾಗಿತ್ತು ಎಂದು ಆರೋಪಿಸಿದ್ದಾರೆ.

  ಸಿಂಧೂ ಸಂಸ್ಕೃತಿ ಬದಲು ನೆಹರು ತನ್ನ ಮಗಳಿಗೆ ಪತ್ರ ಬರೆದ ಪಠ್ಯ ಸೇರಿಸಿದ್ದರು. ಸಿಂದೂ ಸಂಸ್ಕೃತಿ ಬಿಜೆಪಿ ಸಂಸ್ಕೃತಿಯೇ? ಎಂದು ಪ್ರಶ್ನಿಸಿದ್ದಾರೆ.

  ಇದನ್ನೂ ಓದಿ:  Viral Coconut Tree: ಒಂದೇ ಮರದಲ್ಲಿ ಭರ್ತಿ 2,000 ತೆಂಗಿನಕಾಯಿ! ವೈರಲ್ ಆಗ್ತಿದೆ ಕಾರವಾರದ ಕಲ್ಪವೃಕ್ಷ

  ಶಿಕ್ಷಣ ಇಲಾಖೆಯಿಂದ ರಾಷ್ಟ್ರಕವಿ ಕುವೆಂಪುಗೆ ಅವಮಾನ: ಶಿಕ್ಷಕರಿಂದಲೇ ಅಸಮಾಧಾನ
  ಮೇ 16 ರಿಂದ ಶಾಲೆಗಳು (School) ಪ್ರಾರಂಭಗೊಂಡಿವೆ. ಈ ಬಾರಿ ಸರ್ಕಾರ (Government) ಪಠ್ಯದಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದು, ಕೆಲ ಪಾಠಗಳಿಗೆ (Lesson) ಕೊಕ್ ನೀಡಿದೆ. ಮತ್ತೆ ಹೊಸ ಪಾಠಗಳನ್ನು ಸೇರಿಸಿದೆ. ಈಗಾಗಲೇ ಹೊಸ ಪಾಠಗಳ ಸೇರ್ಪಡೆ ವಿವಾದದ ಸ್ವರೂಪ ಪಡೆದುಕೊಂಡಿದೆ. ಇದೀಗ ಶಿಕ್ಷಣ ಇಲಾಖೆಯ (Education Department) ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದೆ. ತನ್ನ ಎಡವಟ್ಟಿನ ಮೂಲಕ ರಾಷ್ಟ್ರಕವಿ ಕುವೆಂಪು (Poet Kuvempu) ಅವರಿಗೆ ಶಿಕ್ಷಣ ಇಲಾಖೆ ಅವಮಾನ ಮಾಡಿದೆ. ನಾಲ್ಕನೇ ತರಗತಿಯ ಪಠ್ಯದಲ್ಲಿ ಈ ಎಡವಟ್ಟು ಉಂಟಾಗಿದೆ. ಇದಕ್ಕೆ ಶಿಕ್ಷಕರೇ ಅಸಮಾಧಾನ ಹೊರ ಹಾಕಿದ್ದು, ತಪ್ಪಾಗಿ ಮುದ್ರಣಗೊಂಡಿರುವ ಸಾಲುಗಳ ಫೋಟೋ (Photo) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ.

  ಇದನ್ನೂ ಓದಿ: Karnataka Fuel Tax: ಕರ್ನಾಟಕವೂ ಪೆಟ್ರೋಲ್, ಡೀಸೆಲ್ ತೆರಿಗೆ ಕಡಿಮೆ ಮಾಡಲಿದೆಯೇ? ಸಿಎಂ ಮಾತಿನ ಅರ್ಥವೇನು?

  ನಾಲ್ಕನೇ ತರಗತಿ ಅಧ್ಯಯನ ಪುಸ್ತಕದಲ್ಲಿ ಕುವೆಂಪು ಅವರಿಗೆ ಚಿಕ್ಕಂದಿನಿಂದಲೂ ಕಥೆ, ಕವನ, ಪುಸ್ತಕ ಓದುವ, ಬರೆಯುವ ಹವ್ಯಾಸ ಇತ್ತು. ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂದು ಬರೆಯಲಾಗಿದೆ.
  Published by:guruganesh bhat
  First published: