• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • School Opening - ಶಾಲೆ ಆರಂಭ, ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕ ನಾಳೆ ನಿರ್ಧಾರ ಸಾಧ್ಯತೆ

School Opening - ಶಾಲೆ ಆರಂಭ, ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕ ನಾಳೆ ನಿರ್ಧಾರ ಸಾಧ್ಯತೆ

ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಒಂದು ಸಭೆ

ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಒಂದು ಸಭೆ

ಜೂನ್ 28ರಂದು ಶಿಕ್ಷಣ ಇಲಾಖೆ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಶಾಲೆಗಳ ಆರಂಭ, ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕ ಇತ್ಯಾದಿ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

  • Share this:

ಬೆಂಗಳೂರು: ಕೊರೋನಾ ಕೇಸ್ ಕಡಿಮೆಯಾಗುತ್ತಿದ್ದಂತೆ, ಶಾಲೆ ಆರಂಭಿಸಲು ಸರ್ಕಾರ ಮುಂದಾಗಿದೆ. ಜುಲೈ 3ನೇ ವಾರದಲ್ಲಿ ತಿಂಗಳಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಕುರಿತು ನಾಳೆ ಸೋಮವಾರ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ಜರುಗಲಿದೆ. ಅಷ್ಟಕ್ಕೂ ಯಾವಾಗ ಶಾಲೆ ಆರಂಭವಾಗುತ್ತೆ? ಸಭೆಯಲ್ಲಿ ಮತ್ತೇನು ಚರ್ಚೆಯಾಗಲಿದೆ? ಈ ಕುರಿತು ವರದಿ ಇಲ್ಲಿದೆ. 


ರಾಜ್ಯದಲ್ಲಿ ಯಾವಾಗ ಶಾಲೆಗಳ ಆರಂಭ ಅನ್ನೋದು ಕಳೆದ ಒಂದು ವರ್ಷದಿಂದ ಬಹು ಚರ್ಚಿತ ವಿಷಯವಾಗಿದೆ. ಕೊರೋನಾ ತನ್ನ ಆರ್ಭಟ ಕಡಿಮೆ ಮಾಡುತ್ತಿದ್ದಂತೆ ಶಿಕ್ಷಣ ಇಲಾಖೆ ಚುರುಕು ಗೊಂಡಿದ್ದು ಕಳೆದ 2 ದಿನಗಳ ಹಿಂದೆ ಸಭೆ ಮೇಲೆ ಸಭೆ ನಡೆಸಿದೆ. ಡಾ. ದೇವಿ ಶೆಟ್ಟಿ ಅವರು ಶಾಲೆಗಳ ಆರಂಭಕ್ಕೆ ಸಲಹೆ ಕೊಡುತ್ತಿದ್ದಂತೆ, ಸಚಿವ ಸುರೇಶ್ ಕುಮಾರ್, ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಒಂದು ಸುತ್ತಿನ ಸಭೆ ಮುಗಿಸಿದ್ದಾರೆ. ಸಭೆಯಲ್ಲಿ ಶಿಕ್ಷಣ ತಜ್ಞರ ಸಲಹೆಯನ್ನು ಈಗಾಗಲೇ ಪರಿಶೀಲನೆ ಕೂಡ ಮಾಡಲಾಗಿದೆ.


ಇನ್ನು ನಾಳೆಯ ಸಭೆಯಲ್ಲಿ ಶಾಲೆ ಆರಂಭ ಮಾಡಬಹುದಾ, ಹೇಗೆ ಮಾಡಬಹುದು ಅಂತ ಎಲ್ಲಾ ಜಿಲ್ಲಾಧಿಕಾರಿಗಳು, DHO, ಜಿಲ್ಲಾ CEO ಹಾಗೂ ಎಲ್ಲಾ ಅಧಿಕಾರಿಗಳು ವರ್ಚುವಲ್ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಆ ಬಳಿಕ ಶಾಲೆಗಳ ಆರಂಭದ ಬಗ್ಗೆ ಅಂತಿಮ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆ ಇದೆ.


ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಉದಯವಾಯ್ತು ಥರ್ಡ್ ಫ್ರಂಟ್; ಸಿಎಂ ಗಾದಿಗಾಗಿ ದಲಿತ‌ ಅಸ್ತ್ರ..!


ಹಾಗಾದ್ರೆ ನಾಳೆಯ ಸಭೆಯಲ್ಲಿ ಚರ್ಚೆ ಮಾಡುವ ವಿಚಾರಗಳು ಏನು? ಶಾಲೆಗಳ ಆರಂಭ ಹೇಗೆ ಮಾಡಬೇಕು? ಭೌತಿಕ ತರಗತಿಗಳ ಅಥವಾ ವಿದ್ಯಾಗಮ ನಡೆಸಬೇಕಾ? ಯಾವ ರೀತಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು..?ತರಗತಿಗಳನ್ನು ಎಷ್ಟು ಅವಧಿ ನಡೆಸಬೇಕು? 50ಕ್ಕಿಂತ ಕಡಿಮೆ ಇರುವ ಶಾಲೆಗಳಲ್ಲಿ ಫಿಸಿಕಲ್ ಕ್ಲಾಸ್ ಗೆ ಅನುಮತಿ ನೀಡೋದಾ? SSLC ಪರೀಕ್ಷೆಗೆ ದಿನಾಂಕ ಪಿಕ್ಸ್ ಮಾಡೋದು, ಪರೀಕ್ಷೆಗೆ ಯಾರ್ಯಾರ ಸಹಕಾರ ಬೇಕು? ಏನೆಲ್ಲಾ ಮುಂಜಾಗ್ರತಾ ಕ್ರಮ ಕೈ ಗೊಳ್ಳಬೇಕು ಎಂಬಿದ್ಯಾದಿ ವಿಚಾರಗಳ ಬಗ್ಗೆ ನಾಳೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.


ಇನ್ನು ಸಭೆಯಲ್ಲಿ SSLC ಪರೀಕ್ಷೆ ಜುಲೈ ಮೂರನೇ ವಾರದಲ್ಲಿ ನಡೆಸಲು ತೀರ್ಮಾನವಾಗಲಿದೆ. ಪರೀಕ್ಷಾ ಕೇಂದ್ರಗಳ ಪೂರ್ವ ಪರಿಶೀಲನೆ ಕುರಿತು ಸಚಿವರು ಸಭೆಯಲ್ಲಿ ಚರ್ಚೆ ಜರುಗಲಿದೆ. ಸಭೆ ಬಳಿಕ SSLC ಪರೀಕ್ಷಾ ದಿನಾಂಕ ಹಾಗೂ ಭೌತಿಕ ತರಗತಿಗಳ ಪ್ರಾರಂಭಿಸುವ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ. ಕರ್ನಾಟಕ ಹೊರತು ಪಡಿಸಿ ಬೇರೆ ಯಾವ ರಾಜ್ಯಗಳು ಶಾಲೆ ತೆರೆಯಲು ಮುಂದಾಗಿವೆ ಎಂಬುದನ್ನು ನೋಡೋಣ.


ಇದನ್ನೂ ಓದಿ: ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟ ಪುನಾರಚನೆ; ರಾಜ್ಯದಿಂದ ಇಬ್ಬರು ಸಂಸದರಿಗೆ ಮಂತ್ರಿ ಗಿರಿ?


ಶಾಲಾ ಕಾಲೇಜು ಓಪನ್ ಮಾಡಲು ಸಿದ್ಧತೆ ಮಾಡಿಕೊಂಡಿರುವ ರಾಜ್ಯಗಳು:
ಬಿಹಾರ, ಉತ್ತರ ಪ್ರದೇಶ, ದೆಹಲಿ, ಹರಿಯಾಣ, ತಮಿಳುನಾಡು ರಾಜ್ಯಗಳಲ್ಲಿ ಜುಲೈ ನಿಂದ ಉನ್ನತ ಶಿಕ್ಷಣ ಪ್ರಾರಂಭವಾಗುವ ಸಾಧ್ಯತೆ ಇದೆ. ಪರೀಕ್ಷೆ ನಡೆಸುವಂತೆ ಶಾಲಾ ಕಾಲೇಜು ಬೇಗನೆ ಆರಂಭಿಸಿ ಎಂದು ಖಾಸಗಿ ಶಾಲಾಕಾಲೇಜು ಒಕ್ಕೂಟ ಒತ್ತಾಯಿಸುತ್ತಿದೆ.


ಒಟ್ಟಾರೆ ಕಳೆದ ಒಂದೂವರೆ ವರ್ಷದಿಂದ ಶಿಕ್ಷಣ ವ್ಯವಸ್ಥೆ ತಲೆ ಕೆಳಗಾಗಿದೆ. ಸಮರ್ಪಕ ಶಿಕ್ಷಣ ಸಿಗದೆ ವಿದ್ಯಾರ್ಥಿಗಳು ಅಡ್ಡದಾರಿ ಹಿಡಿಯುತ್ತಿದ್ದಾರೆ. ಹೀಗಾಗಿ ಈ ವರ್ಷವಾದ್ರೂ ಉತ್ತಮ ಶಿಕ್ಷಣ ಕೊಡೊದ್ರಲ್ಲಿ ಇಲಾಖೆ ಯಶಸ್ವಿ ಆಗುತ್ತಾ ಕಾದು ನೋಡಬೇಕಿದೆ.


(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)


ವರದಿ: ಶರಣು ಹಂಪಿ

Published by:Vijayasarthy SN
First published: