• Home
  • »
  • News
  • »
  • state
  • »
  • BC Nagesh: ಶಿಕ್ಷಣ ಇಲಾಖೆ ಆದೇಶಕ್ಕೆ ವ್ಯಾಪಕ ವಿರೋಧ; ಶಾಲೆಯಲ್ಲಿ 100 ರೂ ದೇಣಿಗೆ ಸಂಗ್ರಹ ಆದೇಶ ವಾಪಸ್​!

BC Nagesh: ಶಿಕ್ಷಣ ಇಲಾಖೆ ಆದೇಶಕ್ಕೆ ವ್ಯಾಪಕ ವಿರೋಧ; ಶಾಲೆಯಲ್ಲಿ 100 ರೂ ದೇಣಿಗೆ ಸಂಗ್ರಹ ಆದೇಶ ವಾಪಸ್​!

ಬಿ.ಸಿ.ನಾಗೇಶ್​

ಬಿ.ಸಿ.ನಾಗೇಶ್​

ದೇಣಿಗೆ ಸಂಗ್ರಹದ ಆದೇಶ ವಾಪಸ್​ ಪಡೆಯಲು ಶಿಕ್ಷಣ ಇಲಾಖೆ ಆಯುಕ್ತರಿಗೆ ಸಚಿವ ಬಿಸಿ ನಾಗೇಶ್ ಸೂಚನೆ ನೀಡಿದ್ದಾರೆ. ಶಾಲೆಗಳ ಅಭಿವೃದ್ಧಿಗಾಗಿ 100 ರೂಪಾಯಿ ದೇಣಿಗೆ ಸಂಗ್ರಹಕ್ಕೆ  ಶಿಕ್ಷಣ ಇಲಾಖೆ ಆದೇಶ​ ಹೊರಡಿಸಿತ್ತು. 

  • News18 Kannada
  • Last Updated :
  • Karnataka, India
  • Share this:

ಶಾಲಾ ಅಭಿವೃದ್ಧಿಗಾಗಿ (School Development) ದೇಣಿಗೆ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ವಿರೋಧ ವ್ಯಕ್ತವಾಗಿತ್ತು. ಸರ್ಕಾರಿ ಶಾಲಾ ಮಕ್ಕಳ (Children) ಪೋಷಕರ ಬಳಿ 100 ರೂಪಾಯಿ ಸಂಗ್ರಹ ಮಾಡೋದು ನಾಚಿಕೆ ವಿಚಾರ ಎಂದು ಬಿಜೆಪಿ ಸರ್ಕಾರದ (BJP Government) ವಿರುದ್ಧ ವಿರೋಧ ಪಕ್ಷದ ನಾಯಕರು ಕಿಡಿಕಾರಿದ್ರು.  ಜೊತೆಗೆ ಪೋಷಕರು ಹಾಗೂ ಸಾರ್ವಜನಿಕರಿಂದಲೂ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ಸರ್ಕಾರ ದೇಣಿಗೆ ಸಂಗ್ರಹ ಆದೇಶ (Order) ವಾಪಸ್ಸು ಪಡೆಯಲು ಸೂಚಿಸಿದೆ. 


ದೇಣಿಗೆ ಸಂಗ್ರಹದ ಆದೇಶ ವಾಪಸ್​ ಪಡೆಯಲು ಶಿಕ್ಷಣ ಇಲಾಖೆ ಆಯುಕ್ತರಿಗೆ ಸಚಿವ ಬಿಸಿ ನಾಗೇಶ್ ಸೂಚನೆ ನೀಡಿದ್ದಾರೆ. ಶಾಲೆಗಳ ಅಭಿವೃದ್ಧಿಗಾಗಿ 100 ರೂಪಾಯಿ ದೇಣಿಗೆ ಸಂಗ್ರಹಕ್ಕೆ  ಶಿಕ್ಷಣ ಇಲಾಖೆ ಆದೇಶ​ ಹೊರಡಿಸಿತ್ತು.


ದೇಣಿಗೆ ರೂಪದಲ್ಲಿ 100 ರೂಪಾಯಿ ಪಡೆಯಲು ಆದೇಶ


ಸರ್ಕಾರಿ ಶಾಲೆಗಳ ಶೌಚಾಲಯ, ವಿದ್ಯುತ್ ಬಿಲ್, ಕಡಿಯುವ ನೀರು ನಿರ್ವಹಣೆಗೆ ಮಾಸಿಕ ವಿದ್ಯಾರ್ಥಿಗಳ ಪೋಷಕರಿಂದ 100 ರೂಪಾಯಿ ದೇಣಿಗೆ ರೂಪದಲ್ಲಿ ಪಡೆಯಲು ಎಸ್​ಡಿಎಮ್​ಸಿಗಳಿಗೆ ಅವಕಾಶ ನೀಡಲಾಗಿತ್ತು. ಇದರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ದಕ್ಕೆ ತರೋಕೆ ಶಿಕ್ಷಣ ಸಚಿವರು ಹೊರಟ್ಟಿದ್ದಾರೆ. ಮೂರು ತಿಂಗಳಿಗೊಮ್ಮೆ ಪೋಷಕರು ಸಭೆಗೆ ಸಹ ಬರೋದಿಲ್ಲ.


ಆದೇಶಕ್ಕೆ ಭಾರೀ ವಿರೋಧ


ಬಡ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಅಂತ ಪೋಷಕರ ಮಕ್ಕಳನ್ನ ತಂದು ಸರ್ಕಾರಿ ಶಾಲೆಗೆ ಬಿಡುತ್ತಾರೆ. ಇದೀಗ ಸರ್ಕಾರ ವಸೂಲಿಗೆ ಮುಂದಾದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009ರ ಸ್ಪಷ್ಟ ಉಲ್ಲಂಘನೆಯಿದೆ ಎಂದು ಕಿಡಿ ಕಾರಿದ್ದಾರೆ.


No board exams for 5 and 8 classes said minister B C Nagesh mrq
ಬಿ ಸಿ ನಾಗೇಶ್


ಇದನ್ನೂ ಓದಿ: Rahul-Ramya: ಭಾರತ್​ ಜೋಡೋ ಯಾತ್ರೆಗೆ ಪದ್ಮಾವತಿ ಎಂಟ್ರಿ; ರಾಹುಲ್ ಗಾಂಧಿ​ಗೆ ರಮ್ಯಾ ಸಾಥ್​


ಸಚಿವರ ವಿರುದ್ಧ ಸಿಎಂ ಗರಂ


ದೇಣಿಗೆ ಕುರಿತು ಮೈಸೂರಿನಲ್ಲಿ ಸಮರ್ಥಿಸಿಕೊಂಡಿದ್ದ ಸಚಿವ ಬಿ. ಸಿ ನಾಗೇಶ್​, ಸಚಿವರ ಗಮನಕ್ಕಿಲ್ಲದೆ ಇಂತಹ ಮಹತ್ವದ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಸಿ ನಾಗೇಶ್​, ಈ ವಿಚಾರಕ್ಕೆ ಸಂಬಂಧಿಸಿದಂತೆ ನನಗೂ ಸಿಎಂಗೂ ಸಂಬಂಧವಿಲ್ಲ ಎಂದು ಹೇಳಿದ್ರು.  ಸಚಿವರ ಈ ನಿರ್ಧಾರಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಸ್ವತಃ ಸಂಘ ಪರಿವಾರದಿಂದಲೂ ವಿರೋಧ ಕೇಳಿ ಬಂದ ಹಿನ್ನೆಲೆ ಸಿಎಂ ಕೂಡ ಸಚಿವರಿಂದ ವಿವರಣೆ ಪಡೆದಿದ್ದರು. ಸಿಎಂ ಕೂಡ ಸಚಿವರ ಮೇಲೆ ವಿವಾದಾತ್ಮಕ ಸುತ್ತೋಲೆ ಬಗ್ಗೆ ದೂರವಾಣಿ ಮಾತುಕತೆ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ: JDS Politics: ಚುನಾವಣೆ ಘೋಷಣೆಗೂ ಮುನ್ನವೇ ಜೆಡಿಎಸ್​ ರಣಕಹಳೆ; ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್​


ಕಾಂಗ್ರೆಸ್​ ನಾಯಕರು (Congress Leaders) ಹಾಗೂ ಜೆಡಿಎಸ್​ ನಾಯಕರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ತಕ್ಷಣವೇ ಸರ್ಕಾರ ಆ ಹಣವನ್ನ ಹಿಂದಿರುಗಿಸಬೇಕು. ಪೋಷಕರ (Parents) ಬಳಿ ಹಣ ವಸೂಲಿ ಮಾಡೋದು ಕೆಟ್ಟ ನಿರ್ಧಾರ. ಸರ್ಕಾರಿ ಶಾಲೆಗಳಲ್ಲಿ ಸರಿಯಾಗಿ ಮೂಲಭೂತ ಸೌಕರ್ಯಗಳಿಲ್ಲ. ಆದರೆ ಪೋಷಕರಿಂದ ಚಂದಾ ವಸೂಲಿ ಮಾಡೋದು ಸರ್ಕಾರದ ದಿವಾಳಿತನ ಈ ರೀತಿಯ ತೀರ್ಮಾನ ಮಾಡೋಕೆ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ (HD Kumaraswamy)  ಕಿಡಿಕಾರಿದ್ರು.


ಶಾಲೆಗಳಿಗೆ ಅಗತ್ಯವಿರುವ ಖರ್ಚು–ವೆಚ್ಚಗಳಿಗಾಗಿ ಪೋಷಕರಿಂದ ದೇಣಿಗೆ ಸಂಗ್ರಹಿಸುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ರಮದ ಬಗ್ಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಇಲಾಖೆಯ ಕ್ರಮ ಖಂಡಿಸಿ ಟ್ವೀಟ್‌ ಮಾಡಿರುವ ಖರ್ಗೆ, 'ಸರ್ಕಾರಿ ಶಾಲೆ ಮಕ್ಕಳಿಗೆ ದೇಣಿಗೆ ಕೊಡಿ ಎನ್ನುವಷ್ಟು ದಿವಾಳಿಯಾಗಿರುವ ಸರ್ಕಾರ, ಉನ್ನತ ಶಿಕ್ಷಣಕ್ಕೆ ವಿಶೇಷ ವಿದ್ಯಾರ್ಥಿವೇತನ ನೀಡುವುದೇ? ಎಂದು ಪ್ರಶ್ನಿಸಿದ್ದಾರೆ.

Published by:ಪಾವನ ಎಚ್ ಎಸ್
First published: