ಬೆಂಗಳೂರು (ಜು.23): ರಾಜ್ಯದಲ್ಲಿ ಖಾಸಗಿ ಶಾಲೆ-ಕಾಲೇಜುಗಳ (School- College) ಸಂಖ್ಯೆ ಗಳೇನು ಕಡಿಮೆ ಇಲ್ಲ. ನೂರಾರು ಹೊಸ ಶಾಲೆ-ಕಾಲೇಜು ಓಪನ್ ಆಗುತ್ತಲ್ಲೇ ಇರುತ್ತವೆ. ಖಾಸಗಿ ಶಾಲೆಗಳಿಗೆ ಅನುಮತಿಯನ್ನು ನೀಡಲು ಆನ್ಲೈನ್ ನಲ್ಲಿ ಶಿಕ್ಷಣ ಇಲಾಖೆ (Education Department) ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಜುಲೈ 25ರ ವರೆಗೆಗೂ ಅವಕಾಶವನ್ನು ಕಲ್ಪಿಸಲಾಗಿತ್ತು. ಹೊಸ ಖಾಸಗಿ ಶಿಕ್ಷಣ ಸಂಸ್ಥೆ ತೆರೆಯಲು 980ಕ್ಕೂ ಅಧಿಕ ಸಂಸ್ಥೆ ಅರ್ಜಿ ಸಲ್ಲಿಸಿದೆ. ಜೊತೆ ಸರ್ಕಾರ ಅನುಮತಿ ನೀಡೋ ಮುನ್ನವೇ ಮಕ್ಕಳನ್ನು (Children) ನೇಮಕ ಮಾಡಿಕೊಂಡಿದೆ. ಆದ್ರೆ ಸರ್ಕಾರದ ನಿರ್ಧಾದಿಂದ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಅತಂತ್ರವಾಗುವ ಹಂತ ತಲುಪಿವೆ.
ಅನಧಿಕೃತ ಶಾಲೆಗಳನ್ನು ಮುಚ್ಚಿಸುವಂತೆ ಆದೇಶ
ರಾಜ್ಯ ಶಿಕ್ಷಣ ಇಲಾಖೆ ಅನುಮತಿ ನೀಡುವ ಮೊದಲೇ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ದಾಖಲಾತಿಯನ್ನು ಮಾಡಿಕೊಂಡಿವೆ. ಮೇ ಮತ್ತು ಜೂನ್ ತಿಂಗಳಲ್ಲಿ ದಾಖಲಾತಿಯನ್ನು ಮಾಡಿಕೊಂಡಿರುವ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡಿದೆ. ಇದರಿಂದಾಗಿ ಎಚ್ಚೆತ್ತ ಶಿಕ್ಷಣ ಇಲಾಖೆ ಅಧಿಕೃತ ಶಾಲೆಗಳನ್ನು ಸಮೀಪದ ಪೊಲೀಸರಿಗೆ ದೂರು ನೀಡಿ ಮುಚ್ಚಿಸುವಂತೆ ಆದೇಶ ಮಾಡಿದೆ.
ಅನೇಕ ಶಿಕ್ಷಣ ಸಂಸ್ಥೆಗಳಿಗೆ ಸಂಕಷ್ಟ
ಶಾಲೆಗಳು ಅರ್ಜಿಯನ್ನು ಸಲ್ಲಿಸಿದ ಮಾತ್ರಕ್ಕೆ ಶಾಲೆಗಳಿಗೆ ಅನುಮತಿ ನೀಡಬೇಕೆಂದಿಲ್ಲ. ಶಾಲೆಗಳು ಅರ್ಜಿ ಸಲ್ಲಿಸುವ ವೇಳೆಯಲ್ಲಿ ವಿದ್ಯಾರ್ಥಿಗಳನ್ನು ದಾಖಲೆಯನ್ನು ಮಾಡಿಕೊಳ್ಳಲು ಅನುಮತಿಯನ್ನು ನೀಡಿರುವುದಿಲ್ಲ. ಶಿಕ್ಷಣ ಇಲಾಖೆಯಿಂದ ಮಾನ್ಯತೆ ದೊರೆಯಬೇಕಾದರೆ ಇಲಾಖೆಯ ಎಲ್ಲಾ ನಿಯಮವನ್ನು ಪಾಲಿಸಿರಬೇಕಾಗುತ್ತದೆ. ಆ ನಿಯಮ ಪರಿಪಾಲನೆಯ ಪರಿಶೀಲನೆಯ ಬಳಿಕವಷ್ಟೇ ಶಾಲೆಗೆ ಮಾನ್ಯತೆಯನ್ನು ನೀಡಬೇಕೋ ಬೇಡವೋ ಎಂಬುದನ್ನು ತೀರ್ಮಾನವನ್ನು ಮಾಡಲಾಗುತ್ತದೆ. ಆದರೆ ಅನುಮತಿ ಸಿಗುವ ಮೊದಲೇ ಶಾಲೆಗಳು ತೆರೆಯಲಾಗಿದ್ದು ಸರ್ಕಾರದ ನಿರ್ಧಾರದಿಂದ ಅಂತಹ ಶಿಕ್ಷಣ ಸಂಸ್ಥೆ ಅತಂತ್ರವಾಗಲಿವೆ.
ಇದನ್ನೂ ಓದಿ: Uttara Kannada: ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ಅಭಿಯಾನ, ಪಾಲ್ಗೊಳ್ಳೋದು ಹೇಗೆ?
30,000 ಸಾವಿರ ವಿದ್ಯಾರ್ಥಿಗಳಿಗೆ ಸಂಕಷ್ಟ
ಹೊಸದಾಗಿ ಅರ್ಜಿಯನ್ನು ಸಲ್ಲಿಸಿರುವ 980ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಇದರಿಂದ ಅತಂತ್ರವಾಗಿವೆ. ಇದರಲ್ಲಿ ಕೆಲವು ಶಾಲೆಗಳಿಗೆ ಬರುವ ದಿನಗಳಲ್ಲಿ ಅನುಮತಿಯು ಸಿಗಬಹುದು. ಇನ್ನು ಕೆಲವು ಶಾಲೆಗಳಿಗೆ ನಿಯಮ ಉಲ್ಲಂಘನೆಯಡಿ ಅನುಮತಿಯನ್ನು ನಿರಾಕರಿಸಬಹುದು. ಅನುಮತಿ ನಿರಾಕರಿಸದರೆ ಅಂತಹ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವು ಅತಂತ್ರವಾಗಲಿದೆ. ಅಂದಾಜಿನ ಪ್ರಕಾರ 980 ಶಾಲೆಯ 30000 ಸಾವಿರ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ.
ಶಿಕ್ಷಣ ಇಲಾಖೆಯ ಆದೇಶದಿಂದ ಹೊಸ ಶಾಲೆಗೆ ಭೀತಿ
ಶಿಕ್ಷಣ ಇಲಾಖೆ ಅಥವಾ ಕೇಂದ್ರ ಇಲಾಖೆಗಳಿಂದ ಅನುಮತಿಯನ್ನು ಪಡೆಯದೆ ಶಾಲೆಯನ್ನು ನಡೆಸುವಂತಿಲ್ಲ. ಅಂತಹ ಶಾಲೆಗಳು ಗಮನಕ್ಕೆ ಬಂದರೇ ಪೋಷಕರಿಗೆ ಅನಧಿಕೃತ ಶಾಲೆಯ ಬಗ್ಗೆ ಸ್ಥಳೀಯ ಪತ್ರಿಕೆಯಲ್ಲಿ ಸ್ಥಳೀಯವಾಗಿ ಅನಧಿಕೃತ ಶಾಲೆ ಎಂಬುದನ್ನು ಪ್ರಕಟಿಸಬೇಕು. ಅನಧಿಕೃತ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಧಿಕೃತ ಮಾನ್ಯತೆ ನೀಡಲು ಬರುವುದಿಲ್ಲ.
ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳಾಗುವ ಉದ್ದೇಶದಿಂದ ಸ್ಥಳೀಯ ಪೊಲೀಸ್ ಠಾಣೆಗೆ ಸಿಆರ್ಪಿ, ಬಿಆರ್ಪಿ, ಶಿಕ್ಷಣ ಸಂಯೋಜಕರೇ ದೂರನ್ನು ನೀಡುವ ಮೂಲಕ ಅನಧಿಕೃತ ಶಾಲೆಯನ್ನು ಮುಚ್ಚುವ ಕೆಲಸವನ್ನು ಮಾಡಬೇಕು ಎಂದು ಆದೇಶಿಸಲಾಗಿದೆ. ಆ ಮೂಲಕ ಶಿಕ್ಷಣ ಇಲಾಖೆ ಅನಧಿಕೃತ ಸಂಸ್ಥೆಯನ್ನು ಮುಚ್ಚಿಸುವ ಕೆಲಸಕ್ಕೂ ಮುಂದಾಗಿದೆ.
ಇದನ್ನೂ ಓದಿ: BS Yediyurappa: ಪುತ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟಿದ್ಯಾಕೆ? ಇಲ್ಲಿವೆ ಯಡಿಯೂರಪ್ಪ ನಿರ್ಧಾರದ ಹಿಂದಿನ 8 ರಹಸ್ಯಗಳು
ಆದೇಶ ಹಿಂಪಡೆಯಲು ಒತ್ತಾಯ
2022-23 ರ ಶೈಕ್ಷಣಿಕ ವರ್ಷದ ಮಾನ್ಯತೆ ಅವಧಿ ಮುಕ್ತಾಯ ಅಥವಾ ಮಾನ್ಯತೆ ಇಲ್ಲದೆ ನಡೆಸುತ್ತಿರುವ ಶಾಲೆಗಳನ್ನು ಕಾನೂನು ಬಾಹಿರ ಎಂದು ಘೋಷಣೆ ಮಾಡುವಂತೆ ಬಿಇಒ ಗಳಿಗೆ ಸೂಚನೆಯನ್ನು ನೀಡಲಾಗಿದೆ. ಈ ಆದೇಶ ಹಿಂಪಡೆಯುವಂತೆ ಶಿಕ್ಷಣ ಇಲಾಖೆಗೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ