Kuvempu; ಶಿಕ್ಷಣ ಇಲಾಖೆಯಿಂದ ರಾಷ್ಟ್ರಕವಿ ಕುವೆಂಪುಗೆ ಅವಮಾನ: ಶಿಕ್ಷಕರಿಂದಲೇ ಅಸಮಾಧಾನ

ನಾಲ್ಕನೇ ತರಗತಿಯ ಪಠ್ಯದಲ್ಲಿ ಈ ಎಡವಟ್ಟು ಉಂಟಾಗಿದೆ. ಇದಕ್ಕೆ ಶಿಕ್ಷಕರೇ ಅಸಮಾಧಾನ ಹೊರ ಹಾಕಿದ್ದು, ತಪ್ಪಾಗಿ ಮುದ್ರಣಗೊಂಡಿರುವ ಸಾಲುಗಳ ಫೋಟೋ (Photo) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ.  

ಕುವೆಂಪು

ಕುವೆಂಪು

  • Share this:
ಮೇ 16 ರಿಂದ ಶಾಲೆಗಳು (School) ಪ್ರಾರಂಭಗೊಂಡಿವೆ. ಈ ಬಾರಿ ಸರ್ಕಾರ (Government) ಪಠ್ಯದಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದು, ಕೆಲ ಪಾಠಗಳಿಗೆ (Lesson) ಕೊಕ್ ನೀಡಿದೆ. ಮತ್ತೆ ಹೊಸ ಪಾಠಗಳನ್ನು ಸೇರಿಸಿದೆ. ಈಗಾಗಲೇ ಹೊಸ ಪಾಠಗಳ ಸೇರ್ಪಡೆ ವಿವಾದದ ಸ್ವರೂಪ ಪಡೆದುಕೊಂಡಿದೆ. ಇದೀಗ ಶಿಕ್ಷಣ ಇಲಾಖೆಯ (Education Department) ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದೆ. ತನ್ನ ಎಡವಟ್ಟಿನ ಮೂಲಕ ರಾಷ್ಟ್ರಕವಿ ಕುವೆಂಪು (Poet Kuvempu) ಅವರಿಗೆ ಶಿಕ್ಷಣ ಇಲಾಖೆ ಅವಮಾನ ಮಾಡಿದೆ. ನಾಲ್ಕನೇ ತರಗತಿಯ ಪಠ್ಯದಲ್ಲಿ ಈ ಎಡವಟ್ಟು ಉಂಟಾಗಿದೆ. ಇದಕ್ಕೆ ಶಿಕ್ಷಕರೇ ಅಸಮಾಧಾನ ಹೊರ ಹಾಕಿದ್ದು, ತಪ್ಪಾಗಿ ಮುದ್ರಣಗೊಂಡಿರುವ ಸಾಲುಗಳ ಫೋಟೋ (Photo) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ.  

ನಾಲ್ಕನೇ ತರಗತಿ ಅಧ್ಯಯನ ಪುಸ್ತಕದಲ್ಲಿ ಕುವೆಂಪು ಅವರಿಗೆ ಚಿಕ್ಕಂದಿನಿಂದಲೂ ಕಥೆ, ಕವನ, ಪುಸ್ತಕ ಓದುವ, ಬರೆಯುವ ಹವ್ಯಾಸ ಇತ್ತು. ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂದು ಬರೆಯಲಾಗಿದೆ.

Karnataka Education department insults Poet Kuvempu
ನಾಲ್ಕನೇ ತರಗತಿ ಪಠ್ಯ


ಪರಿಷ್ಕೃತ ಶಾಲಾ ಪಠ್ಯ-ಪುಸ್ತಕ ವಿರೋಧಿಸಿ ಟ್ವಿಟರ್ ನಲ್ಲಿ ಅಭಿಯಾನ

ರಾಜ್ಯದಲ್ಲಿ ಪಠ್ಯ ಪುಸ್ತಕ ವಿವಾದ (Text Book Controversy) ಜೋರಾಗುತ್ತಿದೆ. ಪಠ್ಯ ಪುಸ್ತಕ ಮರು ಪರಿಷ್ಕರಣೆ (Revised) ಅಸಮರ್ಪಕವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯ ಪುಸ್ತಕ ಜಾರಿಗೆ ತರಬಾರದು ಅಂತ ಆಗ್ರಹಿಸಿ ನಾಡಿನ ಹಲವು ಸಾಹಿತಿಗಳು, ಪ್ರಗತಿಪರ ಚಿಂತಕರು ರಾಜ್ಯ ಸರ್ಕಾರಕ್ಕೆ (State Government) ನಿನ್ನೆ ಪತ್ರ (Letter) ಬರೆದಿದ್ದರು.

ಇದನ್ನೂ ಓದಿ:  Bengaluru Schoolಗಳಿಗೆ ಹುಸಿ ಬಾಂಬ್ ಮೇಲ್ ಪ್ರಕರಣದ ಹಿಂದೆ 17 ವರ್ಷದ ಬಾಲಕ: ಹೇಗೆ? ಎಲ್ಲಿಂದ ಬಂದಿದ್ದು ಆ ಮೇಲ್?

ಇದೀಗ ಸಾಮಾಜಿಕ ಜಾಲತಾಣದಲ್ಲೂ (Social Media) ಅಭಿಯಾನ (Campaign) ಕೈಗೊಳ್ಳಲಾಗಿದೆ. ಇಂದು ಸಂಜೆ 5 ಗಂಟೆಗೆ ಟ್ವಿಟರ್‌ನಲ್ಲಿ (Twitter) #RejectBrahminTextBokks ಎಂಬ ಹ್ಯಾಶ್ ಟ್ಯಾಗ್ ನಡಿ ಅಭಿಯಾನ ಕೈಗೊಳ್ಳಲು ಪ್ರಗತಿಪರ ಚಿಂತಕರು, ಹೋರಾಟಗಾರು ನಿರ್ಧರಿಸಿದ್ದಾರೆ.

71ಕ್ಕೂ ಹೆಚ್ಚು ಸಾಹಿತಿಗಳಿಂದ ಪತ್ರ

ಪಠ್ಯಪುಸ್ತಕ ಮರು ಪರಿಷ್ಕರಣೆ ಜಾರಿಯಾಗಬಾರದು ಅಂತ ಆಗ್ರಹಿಸಿ ಸುಮಾರು 71ಕ್ಕೂ ಹೆಚ್ಚು ಸಾಹಿತಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಕೆ.ಮರುಳಸಿದ್ದಪ್ಪ, ವಿಜಯಾ, ರಾಜೇಂದ್ರ ಚೆನ್ನಿ, ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಟಿ.ಆರ್.ಚಂದ್ರಶೇಖರ್, ಹಿ.ಶಿ. ರಾಮಚಂದ್ರೇಗೌಡ, ವಿ.ಪಿ. ನಿರಂಜನಾರಾಧ್ಯ, ಕಾಳೇಗೌಡ ನಾಗವಾರ, ಕುಂ.ವೀರಭದ್ರಪ್ಪ, ರಹಮತ್ ತರಿಕೆರೆ, ವಸಂತ ಬನ್ನಾಡಿ ಸೇರಿದಂತೆ 71 ಮಂದಿ ಒಪ್ಪಿಗೆ ಸೂಚಿಸಿದ್ದರು.

ಪತ್ರದಲ್ಲಿ ಸಾಹಿತಿಗಳ ಆರೋಪವೇನಾಗಿತ್ತು?

ಕನ್ನಡ ನಾಡಿನ ಅಸ್ಮಿತೆ, ಕನ್ನಡ ಭಾಷೆಯ ಘನತೆಗಳನ್ನು ಗಾಳಿಗೆ ತೂರುವ ರೋಹಿತ್ ಚಕ್ರತೀರ್ಥರವರ ಸಮಿತಿ, ಅದಕ್ಕೆ ಬದಲಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕರಲ್ಲೊಬ್ಬರಾದ ಹಡಗೇವಾರ್‌ರವರ 'ನಿಜವಾದ ಆದರ್ಶ ಪುರುಷ ಯಾರಾಗಬೇಕು', ಬನ್ನಂಜೆ ಗೋವಿಂದಾಚಾರ್ಯರವರ 'ಶುಕನಾಸನ ಉಪದೇಶ' ಶತಾವಧಾನಿ ಗಣೇಶ್ ರವರ 'ಶ್ರೇಷ್ಠ ಭಾರತೀಯ ಚಿಂತನೆಗಳು, ಶಿವಾನಂದ ಕಳವೆಯವರ 'ಸ್ವದೇಶಿ ಸೂತ್ರದ ಸರಳ ಹಬ್ಬ' ಪಠ್ಯಗಳನ್ನು ಸೇರಿಸಲಾಗಿದೆ. ಯಾವ ಕಾರಣಕ್ಕೆ ಕನ್ನಡದ ಪ್ರಮುಖ ಲೇಖಕ, ಲೇಖಕಿಯರ ಪಠ್ಯಗಳನ್ನು ಕೈ ಬಿಟ್ಟಿದ್ದಾರೆ ಎನ್ನುವುದಕ್ಕೆ ಯಾವುದೇ ಕಾರಣಗಳನ್ನು ಕೊಟ್ಟಿಲ್ಲ ಅಂತ ಪತ್ರದಲ್ಲಿ ಆರೋಪಿಸಿದ್ದರು.

ಪರಿಷ್ಕೃತ ಪಠ್ಯಕ್ಕೆ ಹೊಸ ಪಾಠಗಳ ಸೇರ್ಪಡೆ

ಇನ್ನು ವಿವಾದದ ನಡುವೆಯೇ ಪರಿಷ್ಕೃತ ಪಠ್ಯ ಪುಸ್ತಕಕ್ಕೆ ಹೊಸ ಪಾಠಗಳನ್ನು ಸೇರ್ಪಡೆ ಮಾಡಲಾಗಿದೆ. ಸಾಮಾಜಿಕ ಹೋರಾಟಗಾರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ‘ತಾಯಿ ಭಾರತಿಯ ಅಮರಪುತ್ರರು’ ಪಾಠ ಸೇರ್ಪಡೆ ಮಾಡಲಾಗಿದೆ. 10ನೇ ತರಗತಿಯ ಕನ್ನಡ ಪಠ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ಪಾಠ ಸೇರ್ಪಡೆ ಮಾಡಲಾಗಿದೆ.

ಇದನ್ನೂ ಓದಿ:  Save Soil Movement: ಸಿಎಂ ಬೊಮ್ಮಾಯಿ ಜೊತೆ ಮಣ್ಣು ಉಳಿಸಿ ಅಭಿಯಾನ ಬೆಂಬಲಕ್ಕೆ ನಿಂತ ಎಲ್ಲಾ ಮಾಜಿ ಸಿಎಂಗಳು

ಚಕ್ರವರ್ತಿ ಸೂಲಿಬೆಲೆ ಪಾಠ ಸೇರ್ಪಡೆಗೆ ವಿರೋಧ

ಇನ್ನು ಪಠ್ಯಪೂರಕ ಅಧ್ಯಯನಕ್ಕೆ ಭಗತ್ ಸಿಂಗ್ ಪಾಠದ ಜೊತೆ ಚಕ್ರವರ್ತಿ ಸೂಲಿಬೆಲೆ ಪಾಠವನ್ನೂ ಶಿಕ್ಷಣ ಇಲಾಖೆ ಸೇರಿಸಿದೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಚಕ್ರವರ್ತಿ ಸೂಲಿಬೆಲೆಯವರ ಅಧ್ಯಯನ ದಕ್ಷತೆ ಬಗ್ಗೆ ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಗತಿಪರರು, ಹಲವು ಸಾಹಿತಿಗಳು ತೀಕ್ಷ್ಮವಾಗಿ ಪ್ರಶ್ನಿಸಿದ್ದಾರೆ
Published by:Mahmadrafik K
First published: