ದಾವಣಗೆರೆ (ಸೆ. 12): ಪ್ರಶಾಂತ್ ಸಂಬರಗಿ ನನ್ನ ಮೇಲೆ ಮಾಡಿರುವ ಡ್ರಗ್ ಆರೋಪ ಸಾಬೀತಾದರೆ ನನ್ನ ಸಂಪೂರ್ಣ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದು ಶಾಸಕ ಜಮೀರ್ ಅಹಮದ್ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಗುಜರಿ ಗಿರಾಕಿ. ಅನೈತಿಕ ಚಟುವಟಿಕೆಯಿಂದಲೇ ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ. ಅವರ ಬಳಿ ಇರುವ ಆಸ್ತಿ ನೈತಿಕ ಮಾರ್ಗದಿಂದ ಸಂಪಾದಿಸಿದ್ದಲ್ಲ. ಅವರು ಅನ್ಯಾಯ ಮಾರ್ಗದಿಂದ ಸಂಪಾದಿಸಿದ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡಲಿ. ಇನ್ನಾದರೂ ಆತ ರಾಜಕೀಯ ನಿವೃತ್ತಿ ಪಡೆಯಲಿ ಎಂದು ಟೀಕಿಸಿದ್ದಾರೆ.
ಹೊನ್ನಾಳಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ರೇಣುಕಾಚಾರ್ಯ, ಜಮೀರ್ ಅನೈತಿಕ ಚಟುವಟಿಕೆಗಳಿಂದ ಅರ್ಥಿಕವಾಗಿ ಸದೃಢರಾಗಿದ್ದಾರೆ. ಹಲವು ಬಾರಿ ಶ್ರೀಲಂಕಾದ ಕ್ಯಾಸಿನೋಗೂ ಹೋಗಿದ್ದಾರೆ. ಅವರ ಆಸ್ತಿ ನೈತಿಕ ಮಾರ್ಗದಿಂದ ಬಂದಿದ್ದಲ್ಲ. ಜಮೀರ್ ಆಹಮದ್ ಎರಡು ನಾಲಿಗೆ ವ್ಯಕ್ತಿ. ಕೊಟ್ಟ ಮಾತಿನಿಂದ ಎಂದೂ ನಡೆದುಕೊಂಡಿಲ್ಲ. ಅವನು ಹೇಳಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನೆ ವಾಚ್‌ಮನ್ ಆಗಬೇಕಿತ್ತು, ಅದರೆ ಆಗಲಿಲ್ಲ. ಡ್ರಗ್ಸ್ ವಿಚಾರದಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತಿದೆ. ತನಿಖೆ ನಂತರ ಸತ್ಯಾಸತ್ಯತೆ ಹೊರಬರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Sandalwood Drug Case: ಸ್ಯಾಂಡಲ್ವುಡ್ ಡ್ರಗ್ ದಂಧೆ; ನಾಪತ್ತೆಯಾಗಿದ್ದ ಚಿನ್ನದ ಉದ್ಯಮಿ ವೈಭವ್ ಜೈನ್ ಬಂಧನ
ಹಿಂದಿನ ಸರ್ಕಾರದ ವೈಫಲ್ಯಗಳಿಂದ ರಾಜ್ಯದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು.ನಮ್ಮ ಸರ್ಕಾರ ಅಧಿಕಾರವಿದ್ದಾಗ ಇಂಥ ದಂಧೆ ಇರಲಿಲ್ಲ. ನಾವು ಡಗ್ಸ್ ದಂಧೆ ಮಟ್ಟ ಹಾಕುತ್ತೇವೆ. ಕಾವೇರಿ ನಿವಾಸದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಯಡಿಯೂರಪ್ಪನವರನ್ನು ಭೇಟಿ ಆಗಿದ್ದಾರೆ. ಯಾವುದೇ ರಾಜಕೀಯ ಉದ್ದೇಶಿತ ಭೇಟಿಯಲ್ಲ. ಕೇವಲ ಅಭಿವೃದ್ಧಿ ಹಿನ್ನೆಲೆ ಭೇಟಿ ಆಗಿದ್ದಾರೆ. ಸರ್ಕಾರ ಸ್ವಾತಂತ್ರ್ಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಧಿವೇಶನದಲ್ಲಿ ಡ್ರಗ್ಸ್ ಮಟ್ಟ ಹಾಕಲು ಚರ್ಚೆಗೆ ಬೆಂಬಲ ನೀಡಿದರೆ ಸ್ವಾಗತ. ಡಿಜೆ ಹಳ್ಳಿ, ಕೆ.ಜಿ. ಹಳ್ಳಿ ಘಟನೆ ಬಗ್ಗೆ ಬೆಳಕು ಚೆಲ್ಲಿದರೆ ಸ್ವಾಗತ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ