ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಅವಶ್ಯಕತೆ ಇಲ್ಲ; ಸಚಿವ ಸಿ.ಟಿ. ರವಿ ಹೇಳಿಕೆಗೆ ಭುಗಿಲೆದ್ದ ವಿವಾದ, ಆಕ್ರೋಶ ಹೊರಹಾಕಿದ ಕರವೇ!

ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಅಗತ್ಯವಿಲ್ಲ ಎಂಬ ಸಚಿವ ಸಿ.ಟಿ. ರವಿ ಅವರ ಹೇಳಿಕೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದು, ಮುಂದಿನ ದಿನದಲ್ಲಿ ಈ ವಿವಾದ ಯಾವ ತಿರುವು ಪಡೆದುಕೊಳ್ಳಲಿದೆ. ರಾಜ್ಯ ಸರ್ಕಾರ ನಮ್ಮ ನಾಡಧ್ವಜಕ್ಕೆ ನಿಜಕ್ಕೂ ಅಧಿಕೃತ ಮಾನ್ಯತೆ ದಕ್ಕಿಸಿಕೊಡುತ್ತದೆಯೇ? ಅಥವಾ ಈ ಪ್ರಸ್ತಾಪವನ್ನೇ ಕೈಬಿಡುತ್ತದೆಯೇ? ಎಂಬುದನ್ನು ಕಾದುನೋಡಬೇಕಿದೆ.

MAshok Kumar | news18-kannada
Updated:August 29, 2019, 3:47 PM IST
ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಅವಶ್ಯಕತೆ ಇಲ್ಲ; ಸಚಿವ ಸಿ.ಟಿ. ರವಿ ಹೇಳಿಕೆಗೆ ಭುಗಿಲೆದ್ದ ವಿವಾದ, ಆಕ್ರೋಶ ಹೊರಹಾಕಿದ ಕರವೇ!
ಸಚಿವ ಸಿ.ಟಿ. ರವಿ.
  • Share this:
ಬೆಂಗಳೂರು (ಆಗಸ್ಟ್.29); ಕರ್ನಾಟಕ್ಕೆ ಪ್ರತ್ಯೇಕವಾದ ಅಧಿಕೃತ ನಾಡ ಧ್ವಜದ ಅಗತ್ಯವಿಲ್ಲ, ನಮಗೆ ರಾಷ್ಟ್ರ ಧ್ವಜವೇ ಸಾಕು ಎಂಬ ಸಚಿವ ಸಿ.ಟಿ. ರವಿ ಹೇಳಿಕೆ ಇದೀಗ ರಾಜ್ಯದಾದ್ಯಂತ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಸಚಿವರ ಈ ಹೇಳಿಕೆ ಇದೀಗ ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ ಹೊರಹಾಕಿದೆ.

ಕಳೆದ ಐದು ದಶಕದಿಂದ ರಾಜ್ಯದಲ್ಲಿ ಪ್ರತ್ಯೇಕ ನಾಡ ಧ್ವಜ ಬಳಕೆಯಲ್ಲಿದೆ. ಆದರೆ, ಇದಕ್ಕೆ ಅಧಿಕೃತ ಮಾನ್ಯತೆ ಇರಲಿಲ್ಲ. ಬದಲಾಗಿ ಸಾಂಸ್ಕೃತಿಕ ಬಿಂಬಕವಾಗಿ ಚಳುವಳಿ ಹಾಗೂ ಇತರ ಕನ್ನಡ ಪರ ಕಾರ್ಯಕ್ರಮಗಳಲ್ಲಿ ಈ ಧ್ವಜವನ್ನು ಬಳಕೆ ಮಾಡಲಾಗುತ್ತಿತ್ತು. ಹೀಗಾಗಿ ಕಳೆದ ಬಾರಿಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕೃತ ಧ್ವಜ ವಿನ್ಯಾಸಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ತಂಡವೊಂದನ್ನು ರಚನೆ ಮಾಡಿತ್ತು.

ಈ ತಂಡದ ಶಿಫಾರಸ್ಸಿನ ಮೇರೆ ಹಳದಿ ಬಿಳಿ ಹಾಗೂ ಕೆಂಪು ಬಣ್ಣದ ಧ್ವಜದ ಮಧ್ಯಭಾಗದಲ್ಲಿ ರಾಜ್ಯ ಲಾಂಛನ ಗಂಡಭೇರುಂಡ ಇರುವ ಹಾಗೆ ಧ್ವಜವನ್ನು ವಿನ್ಯಾಸ ಮಾಡಲಾಗಿತ್ತು. ಅಲ್ಲದೆ, ಈ ಧ್ವಜಕ್ಕೆ ರಾಜ್ಯದ ಅಧಿಕೃತ ನಾಡ ಧ್ವಜ ಎಂಬ ಮಾನ್ಯತೆ ನೀಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರದ ಎದುರು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಈವರೆಗೆ ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾವನೆಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಅಲ್ಲದೆ, ಈ ಧ್ವಜಕ್ಕೆ ಮಾನ್ಯತೆಯೂ ನೀಡಿಲ್ಲ.

ಇದನ್ನೂ ಓದಿ : ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಸೆ. 7 ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ; ಮಾಹಿತಿ ನೀಡಿದ ಬಿಎಸ್​ವೈ

ಈ ನಡುವೆ ನಾಡ ಧ್ವಜದ ಕುರಿತು ಇಂದು ಹೇಳಿಕೆ ನೀಡಿರುವ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, “ನಾಡಧ್ವಜವನ್ನು ಸಾಂಸ್ಕೃತಿಕ ಸಂಕೇತವಾಗಿ ಬಳಸಲು ಅವಕಾಶವಿದೆಯೇ ಹೊರತು ಸಾಂವಿಧಾನಾತ್ಮಕವಾಗಿ ಬಳಸಲು ಸಾಧ್ಯವಿಲ್ಲ. ಇಡೀ ರಾಷ್ಟ್ರಕ್ಕೆ ಒಂದೇ ತ್ರಿವರ್ಣ ಧ್ವಜ ಮಾತ್ರ ಬಳಕೆ ಮಾಡಲು ಧ್ವಜ ಸಂಹಿತೆಯಲ್ಲಿ ಅವಕಾಶ ಇದೆ” ಎಂದು ಹೇಳುವ ಮೂಕ ಪ್ರತ್ಯೇಕ ಕನ್ನಡ ನಾಡ ಧ್ವಜ ಪ್ರಸ್ತಾವನೆ ಕೈಬಿಟ್ಟಿರುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ.

ಆದರೆ, ಅವರ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಕನ್ನಡಪರ ಹೋರಾಟಗಾರರ ಕೆಂಗಣ್ಣಿಗೂ ಗುರಿಯಾಗಿದೆ. ಸಚಿವ ಸಿ.ಟಿ. ರವಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ, “ನಾಡಧ್ವಜ ಎಂಬುದು ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆ. ನಾವು ರಾಷ್ಟ್ರಧ್ವಜವನ್ನು ಗೌರವಿಸುವಷ್ಟೇ ನಾಡ ಧ್ವಜವನ್ನೂ ಗೌರವಿಸುತ್ತೇವೆ. ಪ್ರತಿಯೊಂದು ರಾಜ್ಯಕ್ಕೂ ತನ್ನದೇಯಾದ ಧ್ವಜವನ್ನು ಹೊಂದುವ ಅವಕಾಶ ಇದ್ದು, ನಮ್ಮ ಧ್ವಜಕ್ಕೆ ಮಾನ್ಯತೆ ಕೊಡಿಸುವಲ್ಲಿ ಸರ್ಕಾರ ಶ್ರಮಿಸಬೇಕು. ಆದರೆ, ಅದನ್ನು ಬಿಟ್ಟು ಹೀಗೆ ಹೇಳಿಕೆ ನೀಡುವುದನ್ನು ಕನ್ನಡಿಗರು ಸಹಿಸುವುದಿಲ್ಲ” ಎಂದಿದ್ದಾರೆ.

ಒಟ್ಟಿನಲ್ಲಿ ಸಚಿವ ಸಿ.ಟಿ. ರವಿ ಅವರ ಈ ಹೇಳಿಕೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದು, ಮುಂದಿನ ದಿನದಲ್ಲಿ ಈ ವಿವಾದ ಯಾವ ತಿರುವು ಪಡೆದುಕೊಳ್ಳಲಿದೆ. ರಾಜ್ಯ ಸರ್ಕಾರ ನಮ್ಮ ನಾಡಧ್ವಜಕ್ಕೆ ನಿಜಕ್ಕೂ ಅಧಿಕೃತ ಮಾನ್ಯತೆ ದಕ್ಕಿಸಿಕೊಡುತ್ತದೆಯೇ? ಅಥವಾ ಈ ಪ್ರಸ್ತಾಪವನ್ನೇ ಕೈಬಿಡುತ್ತದೆಯೇ? ಎಂಬುದನ್ನು ಕಾದುನೋಡಬೇಕಿದೆ.ಇದನ್ನೂ ಓದಿ : ಸಿದ್ದರಾಮಯ್ಯನಂತಹ ಶತದಡ್ಡನ ಪ್ರಶ್ನೆಗೆ ನಾನು ಉತ್ತರಿಸಬೇಕಾ?; ಮಾಜಿ ಸಿಎಂಗೆ ಸಚಿವ ಈಶ್ವರಪ್ಪ ತಿರುಗೇಟು

First published:August 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading