ಕರವೇ ಕಾರ್ಯಕರ್ತರ ಬಂಧನ: ಮುಷ್ಕರ ಕೈಬಿಟ್ಟ ವೈದ್ಯರು: ಮತ್ತೆ ಒಪಿಡಿ ಸೇವೆ ಆರಂಭ

ಈಗಾಗಲೇ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣ ಸಂಬಂಧ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣಾಗಿದ್ದಾರೆ. ಇಂದು ಬೆಳಗ್ಗೆಯೇ ಅಶ್ವಿನಿಗೌಡ ಸೇರಿದಂತೆ 13 ಮಂದಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿವಿ ಪುರಂ ಪೊಲೀಸರಿಗೆ ಶರಣಾಗಿದ್ದರು.

news18-kannada
Updated:November 8, 2019, 3:47 PM IST
ಕರವೇ ಕಾರ್ಯಕರ್ತರ ಬಂಧನ: ಮುಷ್ಕರ ಕೈಬಿಟ್ಟ ವೈದ್ಯರು: ಮತ್ತೆ ಒಪಿಡಿ ಸೇವೆ ಆರಂಭ
ವೈದ್ಯರ ಮುಷ್ಕರ
  • Share this:
ಬೆಂಗಳೂರು(ನ.08): ಮಿಂಟೊ ಆಸ್ಪತ್ರೆ ಕರ್ತವ್ಯನಿರತ ವೈದ್ಯರ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಕಾರ್ಯಕರ್ತರು ಹಲ್ಲೆ ನಡೆಸಿದ್ದರು ಎಂದು ಖಂಡಿಸಿ ಹೂಡಿದ್ದ ಮುಷ್ಕರ ಹಿಂಪಡೆಯಲಾಗಿದೆ. ಹಾಗಾಗಿಯೇ ವೈದ್ಯರು ಬೆಳಗ್ಗೆಯಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗ(ಒಪಿಡಿ) ಸ್ಥಗಿತಗೊಳಿಸಿ ನಡೆಸುತ್ತಿದ್ದ ಪ್ರತಿಭಟನೆ ಅಂತ್ಯಗೊಂಡಿದೆ.

ಸುಮಾರು ಏಳು ದಿನಗಳಿಂದ ಸರ್ಕಾರಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದರು. ಈ ವೈದ್ಯರ ಪ್ರತಿಭಟನೆಗೆ ಖಾಸಗಿ ಆಸ್ಪತ್ರೆಗಳು ಬೆಂಬಲ ಘೋಷಿಸಿದ್ದವು. ಈ ಮಧ್ಯೆ ರೋಗಿಗಳ ಹಿತಕ್ಕಾಗಿ ಪೊಲೀಸರ ಮುಂದೆ ಕರವೇ ಕಾರ್ಯಕರ್ತರು ಶರಣಾದರು. ಅತ್ತ ಕರವೇ ಕಾರ್ಯಕರ್ತರ ಬಂಧನವಾಗುತ್ತಿದ್ದಂತೆ ಇತ್ತ ಮುಷ್ಕರ ಕೈಬಿಡುತ್ತಿದ್ದೇವೆಂದು ಭಾರತೀಯ ವೈದ್ಯಕೀಯ ಸಂಘ ಘೋಷಿಸಿದೆ. ಇದೀಗ ಮುಷ್ಕರ ಕೈಬಿಟ್ಟ ವೈದ್ಯರು, ಎಂದಿನಂತೆ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕರವೇ ಕಾರ್ಯಕರ್ತರ ಬಂಧನಕ್ಕೂ ಮುನ್ನವೇ ಭಾರತ ವೈದ್ಯಕೀಯ ಸಂಘದ ಸಭೆ ನಡೆಯಿತು. ಆರೋಪಿಗಳ ಬಂಧನವಾಗುತ್ತಿದ್ದಂತೆಯೇ ಮುಷ್ಕರ ಕೈಬಿಡುವ ಬಗ್ಗೆ ಚರ್ಚಿಸಲಾಗಿತ್ತು. ಇಲ್ಲಿ ಬಹುತೇಕರು ಮುಷ್ಕರ ಕೈಬಿಡುವ ಬಗ್ಗೆ ಸಹಮತ ವ್ಯಕ್ತಪಡಿಸಿದರು. ಆದ್ದರಿಂದಲೇ ಈಗ ಮುಷ್ಕರ ವಾಪಸ್ಸು ಪಡೆದು ತಮ್ಮ ಕೆಲಸಕ್ಕೆ ಮರಳಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ವೈದ್ಯರ ಮೇಲೆ ಹಲ್ಲೆ: ಕರವೇ ಕಾರ್ಯಕರ್ತರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು

ಈಗಾಗಲೇ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣ ಸಂಬಂಧ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣಾಗಿದ್ದಾರೆ. ಇಂದು ಬೆಳಗ್ಗೆಯೇ ಅಶ್ವಿನಿಗೌಡ ಸೇರಿದಂತೆ 13 ಮಂದಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿವಿ ಪುರಂ ಪೊಲೀಸರಿಗೆ ಶರಣಾಗಿದ್ದರು.

ಈ ಮುನ್ನ ನ್ಯೂಸ್​​-18 ಕನ್ನಡ ಜತೆ ಮಾತಾಡಿದ್ದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರು, ನಮ್ಮಿಂದ ಬಡ ರೋಗಿಗಳಿಗೆ ತೊಂದರೆಯಾಗಬಾರದು. ಕರವೇ ಕಾರ್ಯಕರ್ತರು ಜನರ ಹಿತಕ್ಕಾಗಿ ಪೊಲೀಸರಿಗೆ ಶರಣಾಗಲು ತೀರ್ಮಾನ ಮಾಡಿದ್ದೇವೆ. ಅಶ್ವಿನಿ ಗೌಡ ಸೇರಿದಂತೆ ಸುಮಾರು 25 ಜನ‌ ಕರವೇ ಕಾರ್ಯಕರ್ತರು ಬೆಂಗಳೂರು ಪೊಲೀಸ್​​ ಆಯುಕ್ತರ ಮುಂದೆ ಶರಣಾಗಲಿದ್ದೇವೆ ಎಂದು ಹೇಳಿದ್ದರು.

ವೈದ್ಯರ ಮುಷ್ಕರಕ್ಕೆ ಹೆದರಿ ಈ ತೀರ್ಮಾನ ತೆಗೆದುಕೊಂಡಿಲ್ಲ. ವೈದ್ಯರ ಮುಷ್ಕರದಿಂದ ಅನಗತ್ಯವಾಗಿ ರೋಗಿಗಳಿಗೆ ತೊಂದರೆಯಾಗುತ್ತಿದೆ. ನಾವು ಮಾನವೀಯ ದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸ್ಪಷ್ಟನೆ ನೀಡಿದ್ದರು.ಇದನ್ನೂ ಓದಿ: ವೈದ್ಯರ ಪ್ರತಿಭಟನೆ ಕಾವು: ಚಿಕಿತ್ಸೆಗಾಗಿ ರೋಗಿಗಳು ನರಳಾಟ; ಪೊಲೀಸರಿಗೆ ಶರಣಾಗಲು ಕರವೇ ನಿರ್ಧಾರ

ಇನ್ನು ನನ್ನನ್ನು ಯಾಕೇ ಟಾರ್ಗೆಟ್ ಮಾಡಿದ್ದಾರೆ ಎಂದು ಗೊತ್ತಿಲ್ಲ. ನಾವು ಬಡವರ ಪರ ಸದಾ ಹೋರಾಟ ಮಾಡಿಕೊಂಡು ಬಂದಿದ್ದೇನೆ. ವೈದ್ಯರ ಮುಷ್ಕರಕ್ಕೆ ಹೆದರಿ ನಾವು ಶರಣಾಗುತ್ತಿಲ್ಲ. ಬಡವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಶರಣಾಗುತ್ತಿದ್ದೇವೆ. ನಾವು ಬಂಧನವಾದರೂ ಬಡವರ ಪರ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಕರವೇ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅಶ್ವಿನಿ ಗೌಡ ತಿಳಿಸಿದ್ದರು.
-------------
First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading