Karnataka District Wise Election Results 2023 Live: ನಾನು 5 ಬಾರಿ ಗೆದ್ದಿದ್ದೇನೆ, ನನಗೂ ಸಿಎಂ ಆಗುವ ಆಸೆ ಇದೆ!

Karnataka District Wise Election Results: ನಿಮ್ಮ ಜಿಲ್ಲೆಯ ನಿಮ್ಮ ಕ್ಷೇತ್ರದ ಕ್ಷಣ ಕ್ಷಣದ ಮಾಹಿತಿಯನ್ನು ಸಹ ನೀವು ಇಲ್ಲಿ ತಿಳಿದುಕೊಳ್ಳಬಹುದು. 

ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಭರದಿಂದ ನಡೆಯುತ್ತಿದೆ. ಪ್ರತಿಯೊಂದು ಕ್ಷೇತ್ರದ ಫಲಿತಾಂಶವೂ (Karnataka Election Results)  ಅತ್ಯಂತ ಮಹತ್ವದ್ದೆನಿಸಿದೆ. ಅತ್ಯಂತ ಮಹತ್ವದ್ದೆನಿಸಿದ ಕ್ಷೇತ್ರಗಳ ಕುತೂಹಲಕರ ಫಲಿತಾಂಶದ (Karnataka District Wise Election Results 2023 Live) ಮಾಹಿತಿ ಇಲ್ಲಿ ನಿಮಗೆ ಸಿಗಲಿದೆ. ನಿಮ್ಮ ಜಿಲ್ಲೆಯ ನಿಮ್ಮ ಕ್ಷೇತ್ರದ ಕ್ಷಣ ಕ್ಷಣದ ಮಾಹಿತಿಯನ್ನು ಸಹ ನೀವು ಇಲ್ಲಿ ತಿಳಿದುಕೊಳ್ಳಬಹುದು.


ಎಷ್ಟು ಅಭ್ಯರ್ಥಿಗಳಿದ್ದಾರೆ?
ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2615 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಆ ಪೈಕಿ 2430 ಮಂದಿ ಪುರುಷ ಅಭ್ಯರ್ಥಿಗಳಾದ್ರೆ, 184 ಮಂದಿ ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಜೊತೆಗೆ ಓರ್ವ ಲೈಂಗಿಕ ಅಲ್ಪಸಂಖ್ಯಾತ (ಟ್ರಾನ್ಸ್‌ಜೆಂಡರ್‌) ಸಮುದಾಯದ ಅಭ್ಯರ್ಥಿ ಇದ್ದಾರೆ.


ಅಭ್ಯರ್ಥಿಗಳ ಪೈಕಿ ಬಿಜೆಪಿಯಿಂದ 224, ಕಾಂಗ್ರೆಸ್​ನಿಂದ 223, ಜೆಡಿಎಸ್​ನಿಂದ 209 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಇನ್ನು 918 ಮಂದಿ ಪಕ್ಷೇತರ ಅಭ್ಯರ್ಥಿಗಳಾದ್ರೆ, ಎಎಪಿ 209, ಸಿಪಿಐಎಂ 4, ಬಿಎಸ್​ಪಿ 133 ಹಾಗೂ ಎನ್​​ಸಿಪಿ ಇಬ್ಬರು ಅಭ್ಯರ್ಥಿಗಳನ್ನು ಕದನಕ್ಕೆ ಇಳಿಸಿದೆ.

ಮತ್ತಷ್ಟು ಓದು ...
13 May 2023 23:00 (IST)

Karnataka District Wise Election Results 2023 Live: ರೇಣುಕಾಚಾರ್ಯ ಕಣ್ಣೀರು!

ಹೊನ್ನಾಳಿಯಲ್ಲಿ ಹೀನಾಯವಾಗಿ ಸೋತ ಎಂ.ಪಿ. ರೇಣುಕಾಚಾರ್ಯ ಕಣ್ಣೀರು ಹಾಕಿದ್ದಾರೆ. ತಮ್ಮ ಮನೆಗೆ ಆಗಮಿಸಿದ ಕಾರ್ಯಕರ್ತರ ಮುಂದೆ ಕಣ್ಣೀರಿಟ್ಟ ರೇಣುಕಾಚಾರ್ಯ, ಕ್ಷೇತ್ರದ ಜನರಿಗೆ ಸಾಕಷ್ಟು ಕೆಲಸ ಮಾಡಿ ಕೊಟ್ಟರು ಗೆಲ್ಲಲಿಲ್ಲ ಅಂತ ಕಣ್ಣೀರು ಹಾಕಿದ್ದಾರೆ.

13 May 2023 21:45 (IST)

Karnataka District Wise Election Results 2023 Live: ನನಗೂ ಸಿಎಂ ಆಗುವ ಆಸೆ ಇದೆ!

ಸಿಎಂ ಆಗಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ ಅಂತ ಯಾದಗಿರಿಯಲ್ಲಿ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಶರಣಬಸಪ್ಪಗೌಡ ದರ್ಶನಾಪುರ ಹೇಳಿದ್ದಾರೆ. ನಾನು ಐದು ಬಾರಿ ಗೆದ್ದಿದ್ದೆನೆ ನನಗು ಸಿಎಂ ಆಗುವ ಆಸೆ ಇದೆ, ಆದ್ರೆ ಪಕ್ಷ ಈ ಬಗ್ಗೆ ನಿರ್ಧಾರ ಮಾಡುತ್ತದೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತಿರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ.

13 May 2023 20:32 (IST)

Karnataka District Wise Election Results 2023 Live: ಸೋಲಿನ ಹೊಣೆ ನನ್ನದೇ –ಬೊಮ್ಮಾಯಿ

ಬಿಜೆಪಿ ಸೋಲಿನ ಸಂಪೂರ್ಣ ಜವಾಬ್ದಾರಿ ನನ್ನದೇ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸೋಲಿಗೆ ಹಲವಾರು ಕಾರಣಗಳಿವೆ, ಸೋಲಿನ‌ ಪರಾಮರ್ಶೆ ಮಾಡಿಕೊಳ್ತೇವೆ. ಹಿರಿಯ ನಾಯಕರ ಜೊತೆ ಕುಳಿತು ಚರ್ಚಿಸ್ತೇವೆ ಎಂದಿದ್ದಾರೆ.

13 May 2023 19:59 (IST)

Karnataka District Wise Election Results 2023 Live: ಮಾಲೂರಲ್ಲಿ ಕೈಗೆ ಗೆಲುವು

ಕೋಲಾರದ ಮಾಲೂರು ಕ್ಷೇತ್ರದ ಫಲಿತಾಂಶದಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಕೆವೈ ನಂಜೇಗೌಡ ಗೆಲುವು ಅಂತ ಘೋಷಿಸಲಾಗಿದೆ. ವಿವಿ ಪ್ಯಾಟ್ ಮತ ಎಣಿಕೆಯಲ್ಲಿ EVM ಮತಗಳ ಹೊಂದಾಣಿಕೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡಗೆ ಸೋಲಾಗಿದೆ.

13 May 2023 18:55 (IST)

Basavaraj Bommai: ಸೋಲಿನ ನೈತಿಕ ಹೊಣೆ ಹೊತ್ತ ಬೊಮ್ಮಾಯಿ, ಕಟೀಲ್

ಶಿಗ್ಗಾವಿಯಿಂದ ಬೆಂಗಳೂರಿನತ್ತ ಬಸವರಾಜ್ ಬೊಮ್ಮಾಯಿ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನಲ್ಲಿ ಗವರ್ನರ್ ಭೇಟಿಯಾಗಿ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ.

karnataka-election-results-basavaraj-bommai-bs-yediyurappa-nalin-kumar-kateel-reaction-mrq

ಚುನಾವಣೆಯಲ್ಲಿ ಸೋಲು ಕಂಡಿದ್ದಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆಗೆ ಮುಂದಾಗಿದ್ದಾರೆ ಬಸವರಾಜ ಬೊಮ್ಮಾಯಿ. ಬಹುತೇಕ ಇಂದು ರಾತ್ರಿಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಬೊಮ್ಮಾಯಿ.

13 May 2023 18:48 (IST)

Lost Ministers: ಸೋತ ಸಚಿವರರ ಪಟ್ಟಿ ಹೀಗಿದೆ

ಸೋತ ಸಚಿವರರ ಪಟ್ಟಿ ಹೀಗಿದೆ

1- ಗೋವಿಂದ ಕಾರಜೋಳ

2- ಜೆ. ಸಿ. ಮಾಧುಸ್ವಾಮಿ

3 ಬಿ. ಸಿ. ಪಾಟೀಲ

4- ಶಂಕರ ಪಾಟೀಲ
ಮುನೇನಕೊಪ್ಪ

5 -ಹಾಲಪ್ಪ ಆಚಾರ್

6- ಬಿ. ಶ್ರೀರಾಮುಲು

7 -ಡಾ. ಕೆ. ಸುಧಾಕರ್‌

8- ವಿ. ಸೋಮಣ್ಣ (ಎರಡೂ ಕಡೆ)

9- ನಾರಾಯಣಗೌಡ

10- ಬಿ. ಸಿ. ನಾಗೇಶ್‌

11- ಮುರುಗೇಶ ನಿರಾಣಿ

12 -ಎಂ. ಟಿ. ಬಿ. ನಾಗರಾಜ್

13 May 2023 18:38 (IST)

Ramanagar Election Results 2023: ರಾಮನಗರದ ಜನತೆಯ ತೀರ್ಪು ಹೀಗಿದೆ

ರಾಮನಗರ ವಿಧಾನಸಭಾ ಕ್ಷೇತ್ರಗಳ ಸಂಪೂರ್ಣ ವಿವರ ಹೀಗಿದೆ

ರಾಮನಗರ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್-87690
ಜೆಡಿಎಸ್-76975
ಬಿಜೆಪಿ-12912

ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಗೆಲುವು
ಲೀಡ್-10715
***

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್-15374
ಜೆಡಿಎಸ್-965922
ಬಿಜೆಪಿ-80677

ಜೆಡಿಎಸ್ ಮಾಜಿ ಸಿಎಂ ಕುಮಾರಸ್ವಾಮಿ ಗೆಲುವು
ಲೀಡ್-15915
**

ಕನಕಪುರ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್-143023
ಜೆಡಿಎಸ್-20631
ಬಿಜೆಪಿ-19753

ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ್ ಗೆಲುವು.
ಲೀಡ್-122392
****

ಮಾಗಡಿ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್-94650
ಜೆಡಿಎಸ್-82811
ಬಿಜೆಪಿ-20197

ಕಾಂಗ್ರೆಸ್ ನ ಹೆಚ್.ಸಿ.ಬಾಲಕೃಷ್ಣ ಗೆಲುವು
ಲೀಡ್-11839

13 May 2023 18:24 (IST)

Bidar Election Results 2023: ಬೀದರ್​ನಲ್ಲಿ ಗೆದ್ದು ಬೀಗಿದವರ ಲಿಸ್ಟ್

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ ಶರಣು ಸಲಗರ ಗೆಲುವು.

ಶರಣು ಸಲಗರ (ಬಿಜೆಪಿ) : 92920

ವಿಜಯಸಿಂಗ್ (ಕಾಂಗ್ರೆಸ್) : 78505

ಸಂಜಯ್ ವಾಡೇಕರ್ (ಜೆಡಿಎಸ್) : 1526

ಶರಣು ಸಲಗರ ಗೆಲುವಿನ ಅಂತರ 14415

—————-

ಹುಮನಬಾದ್ ವಿಧಾನಸಭಾ ಕ್ಷೇತ್ರ
ಬಿಜೆಪಿ ಅಭ್ಯರ್ಥಿ ಸಿದ್ದು ಪಾಟೀಲ ಗೆಲುವು.

ಸಿದ್ದು‌ ಪಾಟೀಲ (ಬಿಜೆಪಿ) : 75515

ರಾಜಶೇಖರ ಪಾಟೀಲ (ಕಾಂಗ್ರೆಸ್) : 73921

ಸಿಎಂ ಫೈಜ್ (ಜೆಡಿಎಸ್) : 25900

ಗೆಲುವಿನ ಅಂತರ 1594

…………………………………………….

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ

ಬಿಜೆಪಿ ಅಭ್ಯರ್ಥಿ ಶೈಲೇಂದ್ರ ಬೇಲ್ದಾಳೆ ಗೆಲುವು.

ಶೈಲೇಂದ್ರ ಬೇಲ್ದಾಳೆ (ಬಿಜೆಪಿ) : 49872

ಅಶೋಕ‌ ಖೇಣಿ (ಕಾಂಗ್ರೆಸ್) : 48609

ಬಂಡೆಪ್ಪ ಖಾಶೆಂಪೂರ (ಜೆಡಿಎಸ್) : 31374

ಗೆಲುವಿನ ಅಂತರ 1263

——————————–

ಬೀದರ್ ಉತ್ತರ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್ ಗೆಲುವು.

ರಹೀಂ ಖಾನ್ (ಕಾಂಗ್ರೆಸ್) : 69165

ಸೂರ್ಯಕಾಂತ ‌ನಾಗಮಾರಪಳ್ಳಿ (ಜೆಡಿಎಸ್) : 58385

ಈಶ್ವರ ಸಿಂಗ್ ಠಾಕೂರ್ (ಬಿಜೆಪಿ) : 17779

ಗೆಲುವಿನ 10780 ಅಂತರ

————————————-

ಭಾಲ್ಕಿ ವಿಧಾನಸಭಾ ಕ್ಷೇತ್ರ…
ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಗೆಲುವು.

ಈಶ್ವರ ಖಂಡ್ರೆ (ಕಾಂಗ್ರೆಸ್) : 99451

ಪ್ರಕಾಶ ಖಂಡ್ರೆ (ಬಿಜೆಪಿ) : 71745

ರೌಫ್ ಪಟೇಲ್ (ಜೆಡಿಎಸ್) : 636

ಗೆಲುವಿನ ಅಂತರ 27706

————————————————-

ಔರಾದ್ ವಿಧಾನಸಭಾ ಕ್ಷೇತ್ರ
ಬಿಜೆಪಿ ಅಭ್ಯರ್ಥಿ ಪ್ರಭು ಚೌಹಾಣ್ ಗೆಲುವು.

ಪ್ರಭು ಚೌಹಾಣ್ (ಬಿಜೆಪಿ) : 81382

ಭೀಮಶೇನರಾವ್ ಶಿಂಧೆ (ಕಾಂಗ್ರೆಸ್) : 71813

ಜೈಸಿಂಗ್ ರಾಠೋಡ್ (ಜೆಡಿಎಸ್) : 1506

ಗೆಲುವಿನ ಅಂತರ 9569

13 May 2023 17:40 (IST)

Puttur Election Results 2023: ಪುತ್ತೂರಲ್ಲಿ ಸೋತು ಗೆದ್ದ ಪುತ್ತಿಲ!

ಪುತ್ತೂರಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರೋಚಕ ಸೋಲನುಭವಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಗೆಲುವು ಕಂಡಿದ್ದು, ಬಿಜೆಪಿ ಅಭ್ಯರ್ಥಿ ಆಶಾ ಗೌಡ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಬಿಜೆಪಿ ಪುತ್ತಿಲಗೆ ಟಿಕೆಟ್ ಕೊಟ್ಟರೆ ಭರ್ಜರಿ ಜಯ ಗಳಿಸುತ್ತಿದ್ದರು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

13 May 2023 17:35 (IST)

Dakshina Kannada Election Results 2023: ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗೆದ್ದದ್ದು 2ರಲ್ಲಿ ಮಾತ್ರ!

ದಕ್ಷಿಣ ಕನ್ನಡದ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 6 ರಲ್ಲಿ ಜಯಗಳಿಸಿದೆ. ಕಾಂಗ್ರೆಸ್ 2  ರಲ್ಲಿ ಗೆದ್ದಿದೆ.

ಬಂಟ್ವಾಳ ಕ್ಷೇತ್ರ

BJP ರಾಜೇಶ್ ನಾಯ್ಕ್ 93,324

CONG ರಮಾನಾಥ್ ರೈ

85,042

SDPI ಇಲ್ಯಾಸ್ ತುಂಬೆ 5436

ಗೆಲುವು-ರಾಜೇಶ್ ನಾಯ್ಕ್

ಗೆಲುವಿನ ಅಂತರ- 8,282

—————————————

ಮಂಗಳೂರು ಉತ್ತರ ಕ್ಷೇತ್ರ

BJP ಡಾ.ವೈ.ಭರತ್ ಶೆಟ್ಟಿ 1,03,531

CONG ಇನಾಯತ್ ಅಲಿ 70,609

JDS ಮೊಯಿದ್ದೀನ್ ಬಾವಾ 5,256

ಗೆಲುವು: ಡಾ.ವೈ.ಭರತ್ ಶೆಟ್ಟಿ

ಗೆಲುವಿನ ಅಂತರ- 32,922

————————————————

ಬೆಳ್ತಂಗಡಿ ಕ್ಷೇತ್ರ

BJP ಹರೀಶ್ ಪೂಂಜಾ 1,01,004

CONG ರಕ್ಷಿತ್ ಶಿವರಾಂ 82,788

ಗೆಲುವು: ಹರೀಶ್ ಪೂಂಜಾ, ಬಿಜೆಪಿ

ಗೆಲುವಿನ ಅಂತರ- 18,216

—————————————————-

ಪುತ್ತೂರು

CONG ಅಶೋಕ್ ರೈ 66,607

INDEPENDENT ಅರುಣ್ ಪುತ್ತಿಲ 62,458

BJP ಆಶಾ ತಿಮ್ಮಪ್ಪ 37,558

ಗೆಲುವು: ಅಶೋಕ್ ರೈ, ಕಾಂಗ್ರೆಸ್

ಗೆಲುವಿನ ಅಂತರ- 4149

————————————————————-

ಮಂಗಳೂರು ದಕ್ಷಿಣ ಕ್ಷೇತ್ರ

BJP ವೇದವ್ಯಾಸ ಕಾಮತ್ 91,437

CONG ಜೆ.ಆರ್.ಲೋಬೋ 67,475

ಗೆಲುವು: ವೇದವ್ಯಾಸ ಕಾಮತ್,

ಗೆಲುವಿನ ಅಂತರ- 23,962

——————————————–

ಸುಳ್ಯ ಕ್ಷೇತ್ರ

BJP_ಭಾಗೀರಥಿ ಮುರುಳ್ಯ 93,911

CONG ಕೃಷ್ಣಪ್ಪ 63,037

ಗೆಲುವು: ಭಾಗೀರಥಿ ಮುರುಳ್ಯ

ಗೆಲುವಿನ ಅಂತರ- 30,874

—————————————-

ಮೂಡಬಿದರಿ ಕ್ಷೇತ್ರ

BJP ಉಮಾನಾಥ್ ಕೋಟ್ಯಾನ್, ಬಿಜೆಪಿ- 86,925

CONG ಮಿಥುನ್ ರೈ,

ಕಾಂಗ್ರೆಸ್- 64,457

ಗೆಲುವು:ಉಮಾನಾಥ್ ಕೋಟ್ಯಾನ್

ಗೆಲುವಿನ ಅಂತರ- 22,468

——————————————

ಮಂಗಳೂರು ಕ್ಷೇತ್ರ

CONG ಯು.ಟಿ.ಖಾದರ್, ಕಾಂಗ್ರೆಸ್- 83,219

BJP ಸತೀಶ್ ಕುಂಪಲ

60,429

SDPI ರಿಯಾಜ್ ಪರಂಗೀಪೇಟೆ, 15,054

ಗೆಲುವು: ಯು.ಟಿ.ಖಾದರ್

ಗೆಲುವಿನ ಅಂತರ- 22790

13 May 2023 17:21 (IST)

Bangalore Election Results 2023: ಬೆಂಗಳೂರು: ಕಾಂಗ್ರೆಸ್​ ಬಿಜೆಪಿಗೆ 14, ​ದಳಕ್ಕೆ 1

ರಾಜ್ಯ ರಾಜಧಾನಿ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 14 ಸ್ಥಾನಗಳನ್ನು ಗೆದ್ದಿದೆ, ಇನ್ನು ಜೆಡಿಎಸ್‌ಗೆ ಕೇವಲ ಒಂದೇ ಒಂದು ಸ್ಥಾನದಲ್ಲೂ ಗೆದ್ದಿಲ್ಲ.

13 May 2023 17:19 (IST)

Dharwad Election Records 2023: ಧಾರವಾಡ ಪೇಡೆ ಸಿಹಿ ಇವರಿಗೆ ಸಿಕ್ತು!

ಧಾರವಾಡ: ಧಾರವಾಡ ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಗೆದ್ದಿದ್ದಾರೆ? ಯಾರು ಸೋತಿದ್ದಾರೆ? ಮತ ಗಳಿಕೆಯ ವಿವರ ಇಲ್ಲಿದೆ.

  1. ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರ

ಪಡೆದ ಮತಗಳು

ಪ್ರಸಾದ ಅಬ್ಬಯ್ಯ, ಕಾಂಗ್ರೆಸ್-85,426

ಡಾ. ಕ್ರಾಂತಿಕಿರಣ, ಬಿಜೆಪಿ-53056

ವೀರಭದ್ರಪ್ಪ ಹಾಲಹರವಿ, ಜೆಡಿಎಸ್-900

ದುರ್ಗಪ್ಪ‌ ಬಿಜವಾಡ, ಎಐಎಂಐಎಂ-5644

ಗೆಲುವು-ಪ್ರಸಾದ ಅಬ್ಬಯ್ಯ, ಅಂತರ- 32,370


 

  1. ಕಲಘಟಗಿ ವಿಧಾನಸಭಾ ಕ್ಷೇತ್ರ

ಸಂತೋಷ ಲಾಡ್, ಕಾಂಗ್ರೆಸ್-  85,761

ನಾಗರಾಜ ಛಬ್ಬಿ, ಬಿಜೆಪಿ 71,404

ವೀರಪ್ಪ ಶೀಗಿಗಟ್ಟಿ, ಜೆಡಿಎಸ್-891

ಗೆಲುವು-ಸಂತೋಷ ಲಾಡ್, ಅಂತರ – 14357

———————–

  1. ನವಲಗುಂದ ವಿಧಾನಸಭಾ ಕ್ಷೇತ್ರ

ಎನ್.ಎಚ್.ಕೋನರಡ್ಡಿ, ಕಾಂಗ್ರೆಸ್- 86081

ಶಂಕರ ಪಾಟೀಲ‌ ಮುನೇನಕೊಪ್ಪ, ಬಿಜೆಪಿ- 63882

ಕೆ.ಎನ್. ಗಡ್ಡಿ, ಜೆಡಿಎಸ್-6914

ಗೆಲುವು-ಎನ್‌.ಎಚ್. ಕೋನರಡ್ಡಿ, ಕಾಂಗ್ರೆಸ್, ಅಂತರ-22199

—————————————

 

  1. ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರ

ಮಹೇಶ ಟೆಂಗಿನಕಾಯಿ, ಬಿಜೆಪಿ- 95064

ಜಗದೀಶ ಶೆಟ್ಟರ್, ಕಾಂಗ್ರೆಸ್-60775

ಸಿದ್ಧಲಿಂಗೇಶಗೌಡ, ಜೆಡಿಎಸ್-513

ಗೆಲುವು-ಮಹೇಶ ಟೆಂಗಿನಕಾಯಿ, ಅಂತರ 34289

—————–

 

  1. ಕುಂದಗೋಳ ವಿಧಾನಸಭಾ ಕ್ಷೇತ್ರ

ಎಂ.ಆರ್. ಪಾಟೀಲ, ಬಿಜೆಪಿ-76105

ಕುಸುಮಾ ಶಿವಳ್ಳಿ, ಕಾಂಗ್ರೆಸ್-40748

ಎಸ್.ಐ. ಚಿಕ್ಕನಗೌಡರ, ಪಕ್ಷೇತರ- 30425

ಗೆಲುವು-ಎ.ಆರ್. ಪಾಟೀಲ, ಅಂತರ- 35357

—————————————-

 

  1. ಧಾರವಾಡ ಗ್ರಾಮೀಣ ಕ್ಷೇತ್ರ

ವಿನಯ ಕುಲಕರ್ಣಿ, ಕಾಂಗ್ರೆಸ್ -89,333

ಅಮೃತ ದೇಸಾಯಿ, ಬಿಜೆಪಿ-71,296

ಮಂಜುನಾಥ ಹಗೇದಾರ, ಜೆಡಿಎಸ್ – 921

ಗೆಲುವು-ವಿನಯ ಕುಲಕರ್ಣಿ, ಗೆಲುವಿನ ಅಂತರ- 18037

——————————————————————

 

  1. ಹುಬ್ಬಳ್ಳಿ – ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ

ಅರವಿಂದ ಬೆಲ್ಲದ್, ಬಿಜೆಪಿ- 71640

ದೀಪಕ ಚಿಂಚೋರೆ,ಕಾಂಗ್ರೆಸ್- 45006

ಗುರುರಾಜ್ ಹುಣಸೀಮರದ,

ಜೆಡಿಎಸ್- 947

ಗೆಲುವು-ಅರವಿಂದ ಬೆಲ್ಲದ್, ಅಂತರ 26,634

13 May 2023 17:10 (IST)

Bangalore Election Results 2023: ಬೆಂಗಳೂರಿನ 4 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲಿ ಏನಾಯ್ತು?

ಬೆಂಗಳೂರು ಗ್ರಾಮಾಂತರದ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತಗಳಿಕೆ ವಿವರ ಹೀಗಿದೆ.

ಫಲಿತಾಂಶ
ಕಾಂಗ್ರೆಸ್- 3
ಬಿಜೆಪಿ – 1

1. ದೇವನಹಳ್ಳಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ ಗೆಲುವು- ಕೆ ಹೆಚ್ ಮುನಿಯಪ್ಪ,
ಪಡೆದ ಮತ- 73058

ಗೆಲುವಿನ ಅಂತರ- 4631

ಜೆಡಿಎಸ್- ನಿಸರ್ಗ ನಾರಾಯಣಸ್ವಾಮಿ
ಪಡೆದ ಮತ- 68427

ಬಿಜೆಪಿ- ಪಿಳ್ಳ ಮುನಿಶಾಮಪ್ಪ
ಪಡೆದ ಮರ- 34404

—————————–
2. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ

ಬಿಜೆಪಿ – ಧೀರಜ್ ಮುನಿರಾಜು
ಪಡೆದ ಮತ- 85144 ( ಗೆಲುವು)

ಗೆಲುವಿನ ಅಂತರ- 31753

ಕಾಂಗ್ರೆಸ್- ವೆಂಕರಮಣಯ್ಯ
ಪಡೆದ ಮತ- 53391

ಜೆಡಿಎಸ್ – ಬಿ ಮುನೇಗೌಡ
ಪಡೆದ ಮತ- 39280

—————————–
3. ನೆಲಮಂಗಲ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ – ಎನ್ ಶ್ರೀನಿವಾಸ್
ಪಡೆದ ಮತ- 84229
(ಕಾಂಗ್ರೆಸ್ ಗೆಲುವು)

ಗೆಲುವಿನ ಅಂತರ- 31978

ಜೆಡಿಎಸ್- ಶ್ರೀನಿವಾಸಮೂರ್ತಿ
ಪಡೆದ ಮತ- 52251

ಬಿಜೆಪಿ- ಸಪ್ತಗಿರಿ ಶಂಕರ್ ನಾಯಕ್
ಪಡೆದ ಮತ- 30582

—————————–

4. ಹೊಸಕೋಟೆ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ ಪಕ್ಷದ ಶರತ್ ಬಚ್ಚೇಗೌಡ ಗೆಲುವು

ಶರತ್ ಪಡೆದ ಮತ – 106769

ಗೆಲುವಿನ ಅಂತರ 5075

ಬಿಜೆಪಿ ಪಕ್ಷದ ಎಂಟಿಬಿ ನಾಗರಾಜ್ ಪಡೆದ ಮತ–101597..

13 May 2023 16:59 (IST)

Bangalore Election Results 2023: ಆನೇಕಲ್, ಬ್ಯಾಟರಾಯನಪುರ, ಯಲಹಂಕ ಕ್ಷೇತ್ರಗಳ ಬಗ್ಗೆ ತಿಳಿಯಿರಿ

ಕ್ಷೇತ್ರ- ಆನೇಕಲ್

ಬಿಜೆಪಿ- ಹುಲ್ಲಳ್ಳಿ ಶ್ರೀನಿವಾಸ್- 103031
ಕಾಂಗ್ರೆಸ್- ಬಿ. ಶಿವಣ್ಣ- 134435
ಗೆಲುವು- ಬಿ. ಶಿವಣ್ಣ
ಅಂತರ – 31404
———–

ಕ್ಷೇತ್ರ- ಮಹದೇವಪುರ

ಬಿಜೆಪಿ- ಮಂಜುಳಾ ಲಿಂಬಾವಳಿ- 181731
ಕಾಂಗ್ರೆಸ್- ಹೆಚ್ ನಾಗೇಶ್- 137230
ಗೆಲುವು- ಮಂಜುಳಾ ಲಿಂಬಾವಳಿ
ಅಂತರ- 44501
————

ಕ್ಷೇತ್ರ- ಬ್ಯಾಟರಾಯನಪುರ

ಬಿಜೆಪಿ- ತಮ್ಮೇಶ್ ಗೌಡ- 121531
ಕಾಂಗ್ರೆಸ್- ಕೃಷ್ಣ ಬೈರೇಗೌಡ- 159781
ಗೆಲುವು- ಕೃಷ್ಣ ಬೈರೇಗೌಡ
ಅಂತರ – 38250
———–

ಕ್ಷೇತ್ರ- ಯಲಹಂಕ

ಬಿಜೆಪಿ- ಎಸ್ ಆರ್ ವಿಶ್ವನಾಥ್ -138565
ಕಾಂಗ್ರೆಸ್- 76337
ಗೆಲುವು- ಎಸ್ ಆರ್ ವಿಶ್ವನಾಥ್
ಅಂತರ – 62228
————

13 May 2023 16:55 (IST)

Bangalore Election Results 2023: ಬೆಂಗಳೂರು ಗ್ರಾಮಾಂತರದಲ್ಲಿ ಗೆಲುವು, ಸೋಲಿನ ವಿವರ ಇಲ್ಲಿದೆ

ಬೆಂಗಳೂರು ಗ್ರಾಮಾಂತರ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಗೆದ್ದಿದ್ದಾರೆ? ಯಾರು ಸೋತಿದ್ದಾರೆ? ಮತಗಳಿಕೆ ವಿವರ ಇಲ್ಲಿದೆ.

ಫಲಿತಾಂಶ: ಕಾಂಗ್ರೆಸ್- 3, ಬಿಜೆಪಿ – 1

1. ದೇವನಹಳ್ಳಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ ಗೆಲುವು- ಕೆಹೆಚ್ ಮುನಿಯಪ್ಪ,

ಪಡೆದ ಮತ- 73058

ಗೆಲುವಿನ ಅಂತರ- 4631

ಜೆಡಿಎಸ್- ನಿಸರ್ಗ ನಾರಾಯಣಸ್ವಾಮಿ

ಪಡೆದ ಮತ- 68427

ಬಿಜೆಪಿ- ಪಿಳ್ಳ ಮುನಿಶಾಮಪ್ಪ

ಪಡೆದ ಮರ- 34404

—————————–

2. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ

ಬಿಜೆಪಿ – ಧೀರಜ್ ಮುನಿರಾಜು

ಪಡೆದ ಮತ- 85144 ( ಗೆಲುವು)

ಗೆಲುವಿನ ಅಂತರ- 31753

ಕಾಂಗ್ರೆಸ್- ವೆಂಕರಮಣಯ್ಯ

ಪಡೆದ ಮತ- 53391

ಜೆಡಿಎಸ್ – ಬಿ ಮುನೇಗೌಡ

ಪಡೆದ ಮತ- 39280

—————————–

3. ನೆಲಮಂಗಲ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಎನ್ ಶ್ರೀನಿವಾಸ್

ಪಡೆದ ಮತ- 84229

(ಕಾಂಗ್ರೆಸ್ ಗೆಲುವು)

ಗೆಲುವಿನ ಅಂತರ- 31978

ಜೆಡಿಎಸ್-  ಶ್ರೀನಿವಾಸಮೂರ್ತಿ

ಪಡೆದ ಮತ- 52251

ಬಿಜೆಪಿ- ಸಪ್ತಗಿರಿ ಶಂಕರ್ ನಾಯಕ್

ಪಡೆದ ಮತ- 30582

13 May 2023 16:49 (IST)

Mandya Election Results 2023: ಮಂಡ್ಯದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವಿವರ

ಮಂಡ್ಯ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಗೆಲುವು? ಯಾರು ಸೋಲು? ಇಲ್ಲಿದೆ ವಿವರ

ಮಂಡ್ಯ ವಿಧಾನಸಭಾ ಕ್ಷೇತ್ರ.

ಕಾಂಗ್ರೆಸ್ – ಗಣಿಗ ರವಿಕುಮಾರ್ ಗೌಡ – 60845.

ಜೆಡಿಎಸ್ – ಬಿಆರ್ ರಾಮಚಂದ್ರು – 58996.

ಬಿಜೆಪಿ – ಅಶೋಕ್ ಜಯರಾಂ – 30240.

ಗಣಿಗ ರವಿಕುಮಾರ್ 1849 ಮತಗಳ ಅಂತರದಲ್ಲಿ ಗೆಲುವು.

ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ – ಬಿಎಲ್ ದೇವರಾಜು – 57939.

ಜೆಡಿಎಸ್ – ಹೆಚ್‌ಟಿ ಮಂಜು – 79844

ಬಿಜೆಪಿ – ಕೆಸಿ ನಾರಾಯಣ್ ಗೌಡ – 37793

21905 ಮತಗಳ ಅಂತರದಲ್ಲಿ ಹೆಚ್ ಟಿ ಮಂಜು ಗೆಲುವು.

ನಾಗಮಂಗಲ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ – ಚಲುವರಾಯಸ್ವಾಮಿ – 89801.

ಜೆಡಿಎಸ್ – ಸುರೇಶ್ ಗೌಡ – 85688.

ಬಿಜೆಪಿ – ಸುಧಾ ಶಿವರಾಮ್ – 7683

4113 ಮತಗಳ ಅಂತರದಲ್ಲಿ ಚೆಲುವರಾಯಸ್ವಾಮಿ ಗೆಲುವು.

 

ಮೇಲುಕೋಟೆ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ ಬೆಂಬಲಿತ ರೈತ ಸಂಘ – ದರ್ಶನ್ ಪುಟ್ಟಣ್ಣಯ್ಯ – 90387.

ಜೆಡಿಎಸ್ – ಸಿಎಸ್ ಪುಟ್ಟರಾಜು – 79424

ಬಿಜೆಪಿ – ಡಾ ಇಂದ್ರೇಶ್ – 6378

10963 ಮತಗಳ ಅಂತರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಗೆಲುವು.

ಮಳವಳ್ಳಿ ಮೀಸಲು ಕ್ಷೇತ್ರ

ಕಾಂಗ್ರೆಸ್ – ಪಿಎಂ ನರೇಂದ್ರ ಸ್ವಾಮಿ – 105413

ಜೆಡಿಎಸ್‌ – ಕೆ. ಅನ್ನದಾನಿ – 59078

ಬಿಜೆಪಿ – ಮುನಿರಾಜು – 24910

ಕಾಂಗ್ರೆಸ್ ಗೆಲುವಿನ ಅಂತರ 46335

ಮದ್ದೂರು ಕ್ಷೇತ್ರ

ಕಾಂಗ್ರೆಸ್ – ಕೆಎಂ ಉದಯ್ – 86325

ಜೆಡಿಎಸ್‌ – ಡಿಸಿ ತಮ್ಮಣ್ಣ – 62227

ಬಿಜೆಪಿ – ಎಸ್.ಪಿ.ಸ್ವಾಮಿ – 28650

ಕಾಂಗ್ರೆಸ್ ಗೆಲುವಿನ ಅಂತರ 24098

 

ಶ್ರೀರಂಗಪಟ್ಟಣ

ಕಾಂಗ್ರೆಸ್ – ರಮೇಶ್ ಬಂಡಿಸಿದ್ದೇಗೌಡ – 72234

ಜೆಡಿಎಸ್‌ – ರವೀಂದ್ರ ಶ್ರೀಕಂಠಯ್ಯ – 61273

ಬಿಜೆಪಿ – ಸಚ್ಚಿದಾನಂದ – 42079

ಕಾಂಗ್ರೆಸ್ ಗೆಲುವಿನ ಅಂತರ 10961

13 May 2023 16:43 (IST)

Vijayanagara Election Results 2023: ವಿಜಯನಗರದಲ್ಲಿ ಜಯಗಳಿಸಿದವರು ಇವರು!

ವಿಜಯನಗರ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಇಲ್ಲಿದೆ ನೋಡಿ

1. ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ

* ಜೆಡಿಎಸ್- 84, 023

ಜೆಡಿಎಸ್ ಅಭ್ಯರ್ಥಿ ನೇಮಿರಾಜ್ ನಾಯ್ಕ್ ಗೆಲುವು

ಕಾಂಗ್ರೆಸ್ – ಎಲ್.ಬಿ.ಪಿ ಭೀಮಾನಾಯ್ಕ್ – 72,679

ಬಿಜೆಪಿ – ರಾಮಣ್ಣ.ಬಿ – 27,026

ಗೆಲುವಿನ ಅಂತರ 11344

 

2. ಹೂವಿನಹಡಗಲಿವಿಧಾನಸಭಾ ಕ್ಷೇತ್ರ

ಬಿಜೆಪಿ -73,200*

ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ

ಕಾಂಗ್ರೆಸ್- ಪಿ.ಟಿ ಪರಮೇಶ್ವರ್ ನಾಯ್ಕ -71,756

ಜೆಡಿಎಸ್ -ಪುತ್ರೇಶ್ –  1847

ಗೆಲುವಿನ ಅಂತರ-  1444

ಕೂಡ್ಲಿಗಿ ವಿಧಾನಸಭಾ ಕ್ಷೇತ್ರ

 

* ಕಾಂಗ್ರೆಸ್ – 1,40,753*

 

ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಎನ್.ಟಿ

 

ಬಿಜೆಪಿ – ಲೋಕೆಶ್ ಎನ್ ವಿ ನಾಯ್ಕ್ – 50,403

 

ಜೆಡಿಎಸ್- ಪೂಜಾರ್ ಭೀಮಪ್ಪ-  3,138

 

ಗೆಲುವಿನ ಅಂತರ -54350

 

 

ವಿಜಯನಗರ

 

* ಕಾಂಗ್ರೆಸ್ – 1,04,863*

 

ಕಾಂಗ್ರೆಸ್ ಅಭ್ಯರ್ಥಿ – ಹೆಚ್ ಆರ್ ಗವಿಯಪ್ಪ

 

ಬಿಜೆಪಿ-ಸಿದ್ದಾರ್ಥ ಸಿಂಗ್-  71,140

 

ಗೆಲುವಿನ ಅಂತರ -33723

 

ಹರಪ್ಪನಹಳ್ಳಿ ವಿಧಾನಸಭಾ ಕ್ಷೇತ್ರ

 

ಗೆಲುವು ಪಕ್ಷೇತರ ಅಭ್ಯರ್ಥಿ – 70,194

 

ಪಕ್ಷೇತರ ಅಭ್ಯರ್ಥಿ – ಲತಾ ಮಲ್ಲಿಕಾರ್ಜುನ್

 

 

ಬಿಜೆಪಿ- ಜಿ.ಕರುಣಾಕರ ರೆಡ್ಡಿ 56,349

ಕಾಂಗ್ರೆಸ್ – ಎನ್. ಕೊಟ್ರೇಶಿ – 44,988

 

ಗೆಲುವಿನ ಅಂತರ- 13,845

13 May 2023 16:31 (IST)

Chikkamagaluru Election Results 2023: ಚಿಕ್ಕಮಗಳೂರು ಜಿಲ್ಲೆಯ ಐದಕ್ಕೆ ಐದು ಕ್ಷೇತ್ರ ಕಾಂಗ್ರೆಸ್​ಗೆ!

ಚಿಕ್ಕಮಗಳೂರು: ಬಿಜೆಪಿ ಭದ್ರ ಕೋಟೆಯನ್ನು ನುಚ್ಚು ನೂರು ಮಾಡಿದ ಕಾಂಗ್ರೆಸ್ ಚಿಕ್ಕಮಗಳೂರು ಜಿಲ್ಲೆಯ ಐದಕ್ಕೆ ಐದು ಕ್ಷೇತ್ರಗಳನ್ನು ವಶಪಡಿಸಿಕೊಂಡಿದೆ.

ಚಿಕ್ಕಮಗಳೂರು: ಎಚ್ ಡಿ ತಮ್ಮಯ್ಯಗೆ ಗೆಲುವು, ಸಿಟಿ ರವಿಗೆ ಸೋಲು

ಸಿ.ಟಿ ರವಿ/ ಡಿಕೆ ಶಿವಕುಮಾರ್

ಮೂಡಿಗೆರೆ: ನಯನ ಮೋಟಮ್ಮ

ಶೃಂಗೇರಿ: ಟಿ ಡಿ ರಾಜೇಗೌಡ

ತರೀಕೆರೆ: ಜಿ ಎಚ್ ಶ್ರೀನಿವಾಸ್

ಕಡೂರು:  ಕೆ ಎಸ್ ಆನಂದ್ ಗೆಲುವು ಸೋಲಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಿಂದಲೇ ಬಿಜೆಪಿ ವಾಷ್ ಔಟ್ ಆಗಿದೆ. 2004 ರ ಇತಿಹಾಸ ಮರುಸೃಷ್ಟಿಯಾಗಿದೆ.

13 May 2023 16:27 (IST)

Dharwad Election Results 2023: ಪ್ರಚಾರ ಮಾಡದೇ ಗೆದ್ದ ಅಭ್ಯರ್ಥಿ!

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಭಾರೀ ಚರ್ಚೆಗೆ ಕಾರಣವಾಗಿದ್ದ ಧಾರವಾಡ (Dharwad) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿ ವಿನಯ್ ಕುಲಕರ್ಣಿ (Vinay Kulkarni) ಗೆಲುವು ಸಾಧಿಸಿದ್ದಾರೆ. ಎದುರಾಳಿ ಬಿಜೆಪಿ ಅಭ್ಯರ್ಥಿ ಅಮೃತ್ ಅಯ್ಯಪ್ಪ ದೇಸಾಯಿ ವಿರುದ್ಧ 18,114 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ.
ಧಾರವಾಡ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ವಿನಯ್​ ಕುಲಕರ್ಣಿ ಅವರು, ಕೋರ್ಟ್ ನಿರ್ಬಂಧ ವಿಧಿಸಿದ್ದ ಕಾರಣ ಚುನಾವಣೆಗೆ ನಾಮಪತ್ರ ಸಲ್ಲಿಕೆ ಹಾಗೂ ಪ್ರಚಾರಕ್ಕೂ ಹೋಗಲು ಸಾಧ್ಯವಾಗದೆ ಸಮಸ್ಯೆ ಎದುರಿಸಿದ್ದರು. ಆದರೆ ವಿನಯ್​​​ ಕುಲಕರ್ಣಿ ಪರ ಕುಟುಂಬ ಸದಸ್ಯರು ಅವರ ಪ್ರಚಾರ ನಡೆಸಿದ್ದರು.

 

13 May 2023 16:22 (IST)

Tumkuru Election Results 2023: ದಲಿತ ನಾಯಕ ಸಿಎಂ ಆಗ್ತಾರಾ?

ತುಮಕೂರು: ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ನಾಯಕ ಜಿ.ಪರಮೇಶ್ವರ್ ಗೆಲುವು ಪಡೆದಿದ್ದಾರೆ. ಅವರು 79999 ಮತಗಳನ್ನು ಪಡೆದಿದ್ದಾರೆ. ಗೆಲುವಿನ ಅಂತರ – 14347 ಮತಗಳು.

G parameshwara retorts to r ashok s that the cup is ours statement mrq
ಜಿ ಪರಮೇಶ್ವರ, ಮಾಜಿ ಡಿಸಿಎಂ

ಜೆಡಿಎಸ್ -64752, ಬಿಜೆಪಿ – 24091 ಮತಗಳನ್ನು ಪಡೆದಿವೆ.